Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ. ಎಸ್. ನಂಜಯ್ಯನ ಮಠ ಸಮಿತಿ ಶಿಫಾರಸ್ಸಿನಂತೆ ೪೩೯ ಗ್ರಾಮ ಪಂಚಾಯತ್ ರಚಿಸಿದ ನಂತರ ಜನಪ್ರತಿನಿಧಿಗಳ ಬೇಡಿಕೆ ಆಧರಿಸಿ ಹೊಸ ಗ್ರಾಮ ಪಂಚಾಯತ್‌ಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೋಸ್ಕರ ೨೦ ಲಕ್ಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದರೂ, ಆದೇಶ ಭರವಸೆಯಾಗಿಯೇ ಉಳಿದಿದೆಯೇ ಹೊರತು ಯಾವ ಚಿಕ್ಕಾಸು ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆಯಾಗದಿರಲು ಕಾರಣವೇನು ಎಂದು ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದರು. ಇನ್ನೂ ೩೯೨ ಗ್ರಾಮ ಪಂಚಾಯತ್‌ಗಳಿಗೆ ಸ್ವಂತ ಕಟ್ಟಡವಿಲ್ಲ, ಸರ್ಕಾರಿ ನಿವೇಶನವು ಮಂಜೂರಾಗದೇ ಶಾಲೆಯ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‌ಗಳ ದೈನಂದಿನ ಕೆಲಸ ಕಾರ್ಯ ನಡೆಯುತ್ತಿದ್ದು ಇದರಿಂದ ಶಾಲಾ ಮಕ್ಕಳಿಗೂ ಮತ್ತು ಶಿಕ್ಷಕರಿಗೂ ತೊಂದರೆಯಾಗುತ್ತಿರುವ ಬಗ್ಗೆ ಅವರು ಉಲ್ಲೇಖಿಸಿದರು. ಗ್ರಾಮ ಪಂಚಾಯತ್‌ಗಳ ಕಾರ್ಯ ನಿರ್ವಹಣೆಗೆ ಪಿ.ಡಿ.ಓ, ಕಾರ್ಯದರ್ಶಿ, ಲೆಕ್ಕ ಸಹಾಯಕರು ಸೇರಿದಂತೆ ಗ್ರಾಮ ಪಂಚಾಯತ್‌ಗಳಿಗೆ ಬೇಕಾದ ಸಿಬ್ಬಂದಿಗಳ ವ್ಯವಸ್ಥೆ ಸಹ ಸರಿಯಾಗಿ ಮಾಡಿಲ್ಲ. ೪೬೦ ಗ್ರಾಮ ಪಂಚಾಯತ್‌ಗಳಿಗೆ ಹೊಸ ಕಟ್ಟಡ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಗಾಂಧಿ ಮೈದಾನದ ಎದುರು ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ವಾಣಿಜ್ಯ ಮಳಿಗೆ ‘ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್’ ಲೋಕಾರ್ಪಣೆಗೊಂಡಿತು. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆ ದಿಸೆಯಲ್ಲಿ ಇಂದಿನ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದರು. ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದುಡಿಮೆಯ ಒಂದು ಭಾಗವನ್ನು ತನ್ನೂರಿನ ಅಭಿವೃದ್ಧಿಗಾಗಿ ತೊಡಗಿಸಿಕೊಂಡ ಮಂಜುನಾಥ ಎಸ್. ಪಡುವರಿಯವರ ಕಾರ್ಯ ಅನುಕರಣೀಯ ಎಂದರು. ಉದ್ಯಮಿಗಳಾದ ಬಿ. ಜಗನ್ನಾಥ ಶೆಟ್ಟಿ, ಪಿ. ಸೂಲಿಯಣ್ಣ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂರು ಮುತ್ತು ಖ್ಯಾತಿಯ ಕುಂದಾಪುರದ ರೂಪಕಲಾ ಸಂಸ್ಥೆಯ ನಿರ್ದೇಶಕ, ಪ್ರಸಿದ್ಧ ಕಲಾವಿದ ಸತೀಶ ಪೈ ಅವರನ್ನು ಬೆಂಗಳೂರಿನ ಗೋಕುಲ್ ಮಿತ್ರ ಬಳಗ ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳಾದ ಹೊಟೇಲ್ ಉದ್ಯಮಿ ಎಂ.ಪಿ.ಪ್ರಭು, ಪಿ.ಸುರೇಶ, ಪಿ.ಸತ್ಯ, ಎಸ್.ಎಂ.ರಘು, ಬೆಂಗಳೂರು ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಮಣೂರು ವಾಸುದೇವ ಮಯ್ಯ ಮೊದಲಾದವರು ಕಲಾವಿದ ಕೆ.ಸತೀಶ ಪೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು. ಬೆಂಗಳೂರಿನ ಗೋಕುಲ್ ಮಿತ್ರ ಬಳಗದ ಜಯಂತ ಪೂಜಾರಿ ಹಟ್ಟಿಯಂಗಡಿ, ರಮೇಶ ಕುಮಾರ್ ಚೋರಾಡಿ, ಕಲಾವಿದರಾದ ಅಶೋಕ ಶ್ಯಾನುಭಾಗ್ ಕುಂದಾಪುರ, ಕೆ.ಸಂತೋಷ ಪೈ ಕುಂದಾಪುರ, ನಾಗೇಶ ಕಾಮತ್, ನವೀನ ಭಟ್ ಹಟ್ಟಿಯಂಗಡಿ, ಬಿ.ಗಣೇಶ ಶೆಣೈ ಗಂಗೊಳ್ಳಿ, ಮಣಿಕಂಠ, ನಾಗೇಶ ಹಾಲಾಡಿ, ಶ್ವೇತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಳೆಯ 500, 1000 ನೋಟುಗಳ ರದ್ಧತಿಯ ಬಳಿಕ ಹೊಸ ನೋಟುಗಳು ಸಮರ್ಪಕವಾಗಿ ಜನರ ಕೈಸೇರುವಲ್ಲಿ ವಿಳಂಬವಾಗುತ್ತಿರುವುದಿಂದ ಗ್ರಾಮೀಣ ಭಾಗದ ಜನಸಾಮಾನ್ಯರು ತೀರಾ ತೊಂದರೆ ಅನುಭವಿಸುವಂತಾಗಿದೆ. ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಚಿಲ್ಲರೆ ವ್ಯಾಪಾರಿಗಳು ಹಾಗೂ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಕೈಯಲ್ಲಿ ಹಣವಿಲ್ಲದೇ, ವ್ಯವಹಾರ ವಹಿವಾಟು ನಡೆಸದ ಪರಿಸ್ಥಿತಿ ಬಂದೊದಗಿದೆ. ಹಳೆಯ ನೋಟು ನಿಷೇಧಿಸಿ 22 ದಿನಗಳೇ ಕಳೆದರೂ ಹೊಸ ನೋಟುಗಳು ಗ್ರಾಮೀಣ ಭಾಗವನ್ನು ತಲುಪುತ್ತಿಲ್ಲ. ಎರಡು ಸಾವಿರದ ನೋಟುಗಳಗೆ ಚಿಲ್ಲರೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಜನರ ಬಹುಪಾಲು ವ್ಯವಹಾರ ನಡೆಯುವುದೇ ಸಹಕಾರಿ ಸಂಘಗಳು ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ. ಲಕ್ಷಾಂತರ ರೈತರು, ಕೂಲಿ ಕಾರ್ಮಿಕರ ಉಳಿತಾಯ ಖಾತೆಗಳ ಸಹಕಾರಿ ಸಂಘಗಳಲ್ಲಿವೆ. ಬ್ಯಾಂಕುಗಳಲ್ಲಿ ನೋಟು ವಿನಮಯ, ಠೇವಣಿಗೆ ಅವಕಾಶ ಮಾಡಿಕೊಟ್ಟು ಸಹಕಾರಿ ಸಂಘಗಳಲ್ಲಿ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಸಹನಾ ಕನ್‌ವೆನ್‌ಶನ್ ಸೆಂಟರ್ ಕೋಟೇಶ್ವರದಲ್ಲಿ ನಡೆಯಿತು. ಮೂರು ದಿನ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಜನರಲ್ ಸೆಕ್ರೆಟರಿ ಶಿಹಾನ್ ಭರತ್ ಶರ್ಮಾ ಡೆಲ್ಲಿ ಉದ್ಘಾಟಿಸಿದರು. ಸಹನಾ ಗ್ರೂಪ್ ಮಾಲೀಕ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಣೇಶ್ ಶೆಟ್ಟಿ ಮೊಳಹಳ್ಳಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಯೋಗಿಂದರ್ ಚಾಹಾಣ್ ಡೆಲ್ಲಿ, ಲಕ್ಷ್ಮೀಕಾಂತ ಪಿ. ಸಾರಂಗ್ ಮುಂಬಯಿ, ತಾಲೂಕ್ ಬಿಲ್ಲವ ಸಂಘ ಪ್ರಧಾನ ಕಾರ‍್ಯದರ್ಶಿ ರಾಜೀವ ಕೋಟಿಯಾನ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಉಪಸ್ಥಿತರಿದ್ದರು. ಗ್ರ್ಯಾಂಡ್ ಚಾಂಪಿಯನ್ ಫೈಟಿಂಗ್‌ನಲ್ಲಿ ಬೆಂಗಳೂರು ಶರತ್ ಕಟಾದಲ್ಲಿ ಎಂ.ಪಿ. ಜಾಗ್ರತ್ ಬೆಂಗಳೂರು ಚಾಂಪಿಯನ್ ಆದರೆ ಹುಡುಗಿಯರ ವಿಭಾಗದಲ್ಲಿ ಕಟಾದಲ್ಲಿ ಮೇಘಾ ಉಡುಪಿ, ಫೈಟಿಂಗ್‌ನಲ್ಲಿ ಸನ ಉಡುಪಿ ಗ್ರ್ಯಾಂಡ್ ಚಾಂಪಿಯನ್…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ಅದು ಅಕ್ಷರಶಃ ಹಬ್ಬದ ಸಡಗರ. ಪೇಪರ್, ಕಂಪ್ಯೂಟರ್ ಸ್ಕ್ರೀನ್ ಮೇಲೆ ಗೆರೆಗಳನ್ನು ಮೂಡಿಸಿ ನೋಡುಗರ ಮುಖ ಅರಳಿಸುವ ಮಂದಿಯೆಲ್ಲಾ ಜೊತೆಯಾದ ಸಂಭ್ರಮ. ವಿಚಾರ, ವಿನೋದ, ವಿಡಂಬನೆ, ವಿಮರ್ಷೆ, ಹರಟೆ. ಮೆದುಳಿಗೆ ಕೆಲಸ, ಮನಸ್ಸಿಗೆ ಮುದ, ಹೊರ ನಡೆಯುವಾಗ ಒಂದೊಳ್ಳೆ ಚಿಂತನೆ, ಗೆರೆ ಎಳೆಯಲೊಂದಿಷ್ಟು ಪ್ರೇರಣೆ. ಇದು ಕಾರ್ಟೂನು ಹಬ್ಬ. ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಟೂನು ಕುಂದಾಪುರ ಬಳಗದ ಆಶ್ರಯದಲ್ಲಿ ಜರುಗಿದ ಕಾರ್ಟೂನು ಹಬ್ಬ ಕಾರ್ಟೂನು ಪ್ರಿಯರಿಗಷ್ಟೇ ಅಲ್ಲದೇ ಕುಂದಾಪುರದ ನಾಗರೀಕರಿರಲ್ಲೂ ಒಂದು ಬಗೆಯ ಕಾರ್ಟೂನು ಕ್ರೇಜ್ ಹುಟ್ಟಿಸಿದೆ. ಸತತ ಮೂರನೇ ವರ್ಷ ಕುಂದೇಶ್ವರ ದೀಪೋತ್ಸವದ ಸಮಯದಲ್ಲಿ ಆಯೋಜನೆಗೊಳ್ಳುತ್ತಿರುವ ಕಾರ್ಟೂನು ಹಬ್ಬದಲ್ಲಿ ಭಾವಹಿಸಿದವರೆಲ್ಲ ಕುಂದೇಶ್ವರ ಹಬ್ಬದಂತೆ ಅವರಿಗೆ ಬೇಕಾದ ವಿಚಾರನ್ನು ಕೊಂಡು ಹೋಗಿದ್ದಾರೆ. [quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಕಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ: ಕಾರ್ಟೂನು ಹಬ್ಬದಲ್ಲಿ ಕಾರ್ಟೂನುಗಳಿಗಷ್ಟೇ ಸೀಮಿತವಾಗಿಲ್ಲ. ಕ್ಯಾರಿಕೇಚರ್ ಬಿಡಿಸಿ ಅದರಿಂದ ಬಂದ ಹಣವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಹಕಾರಿ ಸಂಘಗಳ ಏಳಿಗೆಯಲ್ಲಿ ಗ್ರಾಮೀಣ ಭಾಗದ ಜನರು, ಕೃಷಿಕರು ಹಾಗೂ ಉದ್ದಿಮೆದಾರರ ಪಾಲು ದೊಡ್ಡದಿದ್ದು ಸಂಘದೊಂದಿಗಿನ ನಿರಂತರ ವ್ಯವಹಾರದಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತಿದೆ ಎಂದು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ನಾಗೂರು ಶಾಖೆಗೆ ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಆಯೋಜಿಸಲಾಗಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಹಕರಿಗೆ ಸಕಾಲದ ಸ್ಪಂದನೆ, ಠೇವಣಿಗಳಿಗೆ ಉತ್ತಮ ಬಡ್ಡಿದರ ಹಾಗೂ ಸಕಾಲದಲ್ಲಿ ಆರ್ಥಿಕ ಅಗತ್ಯತೆಯನ್ನು ಪೂರೈಸುತ್ತಿರುವ ಸಂಘಕ್ಕೆ ಪ್ರತಿಯಾಗಿ ದೊರೆಯುತ್ತಿರುವ ಗ್ರಾಹಕರ ನೆರವು ಸಂಘದ ಯಶಸ್ಸಿಗೆ ಕಾರಣವಾಗಿದ್ದು ಪ್ರತಿಯೋರ್ವರಿಗೂ ಧನ್ಯವಾದ ಸಮರ್ಪಿಸುವುದಾಗಿ ಅವರು ಹೇಳಿದರು. ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಉಪಾಧ್ಯಕ್ಷ ವಿನಾಯಕ ರಾವ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಿ. ಯಡ್ತರೆ, ಬೈಂದೂರು ವಲಯ ನವೋದಯ ಸಂಘದ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಶಾಖಾ ವ್ಯವಸ್ಥಾಪಕ ರಾಜೇಂದ್ರ ದೇವಾಡಿಗ ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹವ್ಯಾಸಿ ಕಲಾ ತಂಡ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ಇದರ ೨೦೧೬-೧೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ಯ ಕಳವಾಡಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಸನರೈಸ್ ಮಾರ್ಕೆಟಿಂಗ್‌ನ ವಠಾರದಲ್ಲಿರುವ ಶ್ರೀ ಸುಧೀಂದ್ರ ಪ್ರಸಾದ ಕಟ್ಟಡದಲ್ಲಿ ಯುಪಿವಿಸಿಯಿಂದ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸುವ ಹೊಸ ಉದ್ಯಮವಾದ ‘ರೋಯ್ಸ ಯುಪಿವಿಸಿ ಡೋರ‍್ಸ & ವಿಂಡೋಸ್’ ಅನ್ನು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ದೀಪ ಪ್ರಜ್ವಲಿಸಿ ಹಾಗೂ ಯಂತ್ರದ ಗುಂಡಿಯನ್ನು ಒತ್ತುವುದರ ಮೂಲಕ ಘಟಕದ ಆರಂಭಕ್ಕೆ ಚಾಲನೆ ನೀಡಿದರು. ಡಿ.ಜಿ.ಕೆ. ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ದಿನೇಶ ಜಿ ಕಾಮತ್ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಯಂತ್ರಗಳ ಹಾಗೂ ತಯಾರಿಸ್ಪಡುವ ಉತ್ಪನಗಳ ಮಾಹಿತಿಯನ್ನು ಸ್ವಾಮೀಜಿಯವರಿಗೆ ರಾಜೇಂದ್ರ ಡಿ ಕಾಮತ್ ನೀಡಿದರು. ನಂತರ ಸ್ವಾಮೀಜಿಯವರಿಗೆ ಕುಟುಂಬದ ವತಿಯಿಂದ ಪಾದಪೂಜೆ ಸೇವೆ ಸಲ್ಲಿಸಲಾಯಿತು. ಈ ಸಂಸ್ಥೆಯ ವೆಬ್‌ಸೈಟನ್ನು ಹಾಗೂ ಮಾಹಿತಿ ಕೈಪಿಡಿಯನ್ನು ಗುರುವರ್ಯರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಹೊಸ ಯುರೋಪಿಯನ್ ತಂತ್ರಜ್ಞಾನದಿಂದ ಇಲ್ಲಿ ಯುಪಿವಿಸಿ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸಲಾಗುತ್ತದೆ. ಸ್ಲೈಡಿಂಗ್, ಕೇಸ್‌ಮೆಂಟ್, ಫ್ರೆಂಚ್ ಡೋರ್, ಟಿಲ್ಟ್…

Read More

ನಾಲ್ಕು ದಿನಗಳ ಕಾರ್ಟೂನು ಹಬ್ಬಕ್ಕೆ ತೆರೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯ ಪ್ರಜ್ಞೆ ಕಲಾ ಪ್ರಕಾರದಲ್ಲಿಯೇ ಶ್ರೇಷ್ಠವಾದದ್ದು. ಅದು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಹಾಸ್ಯ ಪ್ರಜ್ಞೆಯ ಜೊತೆಗೆ, ಸಮಾಜದ ಬಗೆಗೆ ಕಾಳಜಿ ಹಾಗೂ ಗೆರೆಗಳೊಂದಿಗೆ ಬೆರಳಾಡಿಸುವ ಚಾಕಚಕ್ಯತೆಯ ಸಮ್ಮಿಳಿತವಿದ್ದರೆ ಉತ್ತಮ ವ್ಯಂಗ್ಯಚಿತ್ರಕಾರರನ್ನು ರೂಪುಗೊಳ್ಳುವಂತೆ ಮಾಡುತ್ತದೆ ಎಂದು ನಟ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು. ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಕಾರ್ಟೂನು ಹಬ್ಬದ ಸಮಾರೋಪ ಹಾಗೂ ವಿವಿಧ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಕ್ಷರ ಬರುವ ಮೊದಲೇ ಇತಿಹಾಸ ಸೃಷ್ಟಿಯಾದದ್ದು ಚಿತ್ರ ಕಲಾವಿದರಿಂದ. ನಮ್ಮ ನಾಗರಿಕತೆನ್ನೂ ಅವಲೋಕಿಸಿದಾಗಲೂ ಗೆರೆಗಳೂ ಸಂವಹನ ಮಾಧ್ಯಮವಾಗಿದ್ದನ್ನು ಕಾಣಬಹುದು. ಮಾತಿನಲ್ಲಿ ಹೇಳಬೇಕಾದ್ದನ್ನು, ಪುಟಗಟ್ಟಲೆ ಬರೆಯಬೇಕಾದ್ದನ್ನು ಸಣ್ಣ ಚಿತ್ರ ಸಂಕೇತಿಕರಿಸುತ್ತದೆ ಎಂದರೆ ಅದರ ಪ್ರಭಾವ ಅಂತಾದ್ದು ಎಂದರು. ಫ್ಯಾಶನ್ ಕೋರ್ಟ್ ಕುಂದಾಪುರದ ಮಾಲಿಕ ಕೆ. ಕಾರ್ತಿಕೇಯ ಮಧ್ಯಸ್ಥ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್…

Read More