ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಲಸೆ ಕಾರ್ಮಿಕರು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಹಾಗೂ ಜಾಗೃತಿ ವಹಿಸಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನೈರ್ಮಲ್ಯದ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳಿಂದ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಮುಖ್ಯವಾಗಿ ಸ್ವತ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಕಾರ್ಮಿಕರು ರೋಗ ವಾಹಕ ಆಶ್ರಿತ ರೋಗಗಳ ಬಗ್ಗೆ ಅರಿವು ಪಡೆದಿರಬೇಕಾದ ಆವಶ್ಯಕತೆ ಇದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಹೇಳಿದರು. ಅವರು ಕುಂದಾಪುರ ನೆಹರೂ ಮೈದಾನದಲ್ಲಿ ಜಿ.ಪಂ. ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಕುಂದಾಪುರ, ಪೊಲೀಸ್ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ ಸಿಟಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಇವರ ಸಹಭಾಗಿತ್ವದಲ್ಲಿ ವಲಸೆ ಕಾರ್ಮಿಕರಿಗೆ ರೋಗವಾಹಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರದ ಹಿಂದೆ ಒಡೆದು ಹೋಗಿದ್ದ ವಾರಾಹಿ ಕಾಲುವೆಯ ದುರಸ್ತಿ ಸಂದರ್ಭ ಅನಿರೀಕ್ಷಿತವಾಗಿ ಕಾಲುವೆಯಲ್ಲಿ ನೀರು ಹರಿದುಬಂದ ಕಾರಣ ಮತ್ತೂಮ್ಮೆ ಕೃಷಿ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊಯ್ಕಡಿ ಕೆಳಹೆಬ್ಟಾಗಿಲು ಬಳಿ ಡಿ. 17ರಂದು ವಾರಾಹಿ ಎಡದಂಡೆಯ ಕಾಲುವೆಯ ತಳಭಾಗ ಒಡೆದು ನೀರು ಪರಿಸರದ ಕೃಷಿ ಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿತ್ತು. ವಾರಾಹಿ ಎಡದಂಡೆಯ 26ನೇ ಕಿ.ಮೀ.ಯಲ್ಲಿ ಒಡೆದ ಕಾಲುವೆಯ ದುರಸ್ತಿ ಕಾಮಗಾರಿ ಹಾಗೂ 23ನೇ ಕಿ.ಮೀ. ಕಾಲುವೆಯ ಬಾಕಿ ಉಳಿದ ಕಾಮಗಾರಿಗಾಗಿ ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಕಾಲುವೆ ಯಲ್ಲಿ ನೀರು ನಿಲುಗಡೆಗೊಳಿಸಲು 22ನೇ ಕಿ.ಮೀ.ಯಲ್ಲಿ ಬಂಡನ್ನು (ತಾತ್ಕಾಲಿಕ ತಡೆಗೋಡೆ) ಹಾಕಲಾಗಿತ್ತು. ಆದರೆ ಗುರುವಾರ ರಾತ್ರಿ ಬಂಡು ಒಡೆದು ಕಾಲುವೆಯಲ್ಲಿ ನೀರು ನುಗ್ಗಿತು.ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವಾರಾಹಿ ಎಂಜಿನಿಯರುಗಳಿಗೆ ಕರೆ ಮಾಡಿ ನೀರು ನಿಲ್ಲಿಸುವಂತೆ ತಿಳಿಸಿದ ಅನಂತರ ಕಾಲುವೆಯಲ್ಲಿ ಹರಿಸುವುದನ್ನು ನಿಲ್ಲಿಸಲಾಗಿತ್ತು. ಜಮೀನಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚತುಷ್ಪಥ ಹೆದ್ದಾರಿ ಅಂಡರ್ ಪಾಸ್ಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅದರ ಕುರಿತು ಪರ-ವಿರೋಧ ಅಭಿಪ್ರಾಯ ಮೂಡಿಬಂದ ಕಾರಣ ಶುಕ್ರವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಜನರ ಅಹವಾಲು ಆಲಿಸಿದರು. ಈ ಸಂದರ್ಭ ಸೇರಿದ್ದ ನೂರಾರು ಜನರು ಪದ್ಮಾವತಿ ದೇವಸ್ಥಾನದ ಎದುರು ಅಂಡರ್ ಪಾಸ್ ಬದಲು ಯು ಟರ್ನ್ ನೀಡಬೇಕು ಎಂದು ಆಗ್ರಹಿಸಿದರು. ಸಂಸದ ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ಕಾರ್ಯದರ್ಶಿ ಪುರುಷೋತ್ತಮ ಎರಡು ವ್ಯವಸ್ಥೆಗಳ ಸಾಧಕ ಬಾಧಕ ವಿವರಿಸಿ ಜನರು ತಮ್ಮ ತೀರ್ಮಾನ ತಿಳಿಸಬೇಕು ಎಂದರು. ತಾ. ಪಂ. ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಗ್ರಾ. ಪಂ. ಅಧ್ಯಕ್ಷ ಎನ್. ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪುತ್ರನ್, ಸ್ಥಳೀಯ ಮುಖಂಡರು ಮತ್ತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಯು ಟರ್ನ್ ಪರ ಏಕಾಭಿಪ್ರಾಯ ಮುಂದಿಟ್ಟರು. ಪುರುಷೋತ್ತಮ ಜನರ ತೀರ್ಮಾನಕ್ಕೆ ಸಮ್ಮತಿ ಸೂಚಿಸಿ ವಿವಾದಕ್ಕೆ ತೆರೆ ಎಳೆದರು. ಕುಂದಾಪುರ ಉಪವಿಭಾಗಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವವ್ಯಾಪಿಯಾದ ಸಂಸ್ಕೃತ ನಮ್ಮ ನೆಲದ ಅತ್ಯಂತ ಪ್ರಾಚೀನ ಭಾಷೆ. ಸಹಸ್ರಾರು ವರ್ಷಗಳು ಸಂದರೂ ಒಂದು ಶಬ್ದವೂ ಅಪಭ್ರಂಶಗೊಳ್ಳದೆ, ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿರುವುದು ಇದರ ವೈಶಿಷ್ಟ್ಯ. ಕನ್ನಡ ಮೊದಲಾದ ರಾಜ್ಯ ಭಾಷೆಗಳ ಮೇಲೆ ಸಂಸ್ಕೃತ ಗಾಢವಾದ ಪ್ರಭಾವ ಬೀರಿದೆ. ವೇದಗಳಿಂದ ಮೊದಲ್ಗೊಂಡು ಜಾನಪದ ಸಾಹಿತ್ಯದವರೆಗೆ ವಿಪುಲವಾದ ಸಾಹಿತ್ಯವನ್ನು ಹೊಂದಿದ ಸಂಸ್ಕೃತ ತ್ರಿಕಾಲಾಭಾಧಿತವಾದ ಸುಂದರ ಸೂಕ್ತಿಗಳ ಸಾಗರ. ಅಂತಹ ಸೂಕ್ತಿಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಉಪಯುಕ್ತ ಸೂಕ್ತಿಗಳನ್ನು ಸಂಗ್ರಹಿಸಿ, ಸರಳ ಕನ್ನಡ ಅನುವಾದದೊಂದಿಗೆ ಪ್ರಕಟಿಸಲಾದ ಈ ಕೃತಿ ಸಾಹಿತ್ಯ ಲೋಕಕ್ಕೊಂದು ವಿಶಿಷ್ಟ ಕೊಡುಗೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹಿತಿ ಶ್ರೀ ನೀಲಾವರ ಸುರೇಂದ್ರ ಅಡಿಗರು ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ| ಎಚ್.ವಿ. ನರಸಿಂಹಮೂರ್ತಿಯವರ ’ಸಂಸ್ಕೃತ ಸೂಕ್ತಿಗಳು’ ಎಂಬ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು. ಕುಂದಾಪುರ ರೋಟರಿ ಅಧ್ಯಕ್ಷ ರೊ| ಉದಯಕುಮಾರ ಶೆಟ್ಟಿ ಅಧ್ಯಕ್ಷತೆ…
ದೋಹಾ ಕತಾರ್ನಲ್ಲಿ ‘ವಿಜನ್ ಇವೆಂಟ್ಸ್’ ಸಂಸ್ಥೆ ಲೋಕಾರ್ಪಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ದೋಹಾ: ನೂತನವಾಗಿ ಆರಂಭಗೊಂಡ ವಿಜನ್ ಇವೆಂಟ್ಸ್ ಸಂಸ್ಥೆಯು ಇಲ್ಲಿನ ಎಂಇಎಸ್ ಸ್ಕೂಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ’ಮೂರು ಮುತ್ತುಗಳು’ ನಾಟಕ ಪ್ರದರ್ಶನ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಳಿಸಿತು. ಕತಾರ್ನಲ್ಲಿ ನೆಲೆಸಿರುವ ರಾಮಚಂದ್ರ ಶೆಟ್ಟಿ, ದೀಪಕ್ ಶೆಟ್ಟಿ ಹಾಗೂ ಸಮಾನ ಮನಸ್ಕ ಕನ್ನಡಿಗರು ಒಟ್ಟು ಸೇರಿ ಕಲೆ, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಹುಟ್ಟುಹಾಕಿರುವ ಸಂಸ್ಥೆ ವಿಜನ್ ಇವೆಂಟ್ಸ್ನ ಉದ್ಘಾಟನಾ ಸಮಾರಂಭ ಹಾಗೂ ಬಳಿಕ ನಾಟಕ ಪ್ರದರ್ಶನ ಯಶಸ್ವಿಯಾಗಿ ಸಮಾಪನಗೊಂಡವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಮಿಲಾನ್ ಅರುಣ್ ಮುಖ್ಯ ಅತಿಥಿಗಳಾಗಿದ್ದರು. ದುಬೈ ಫಾರ್ಚೂನ್ ಗ್ರೂಫ್ ಹೋಟೆಲ್ಸ್ನ ಮಾಲಕ ಪ್ರವೀಣಕುಮಾರ್ ಶೆಟ್ಟಿ, ಅಲ್-ಝಮಾನ್ ಎಕ್ಸ್ಚೆಂಚ್ನ ಬಿಜಿನೆಸ್ ಡೆವೆಲಪ್ಮೆಂಟ್ ಮ್ಯಾನೆಜರ್ ಫಯಾಝ್ ಸಿ.ಕೆ, ಅಡ್ವಾಸ್ ಟೆಕ್ನಿಕಲ್ ಸರ್ವಿಸ್ ಎಂ.ಡಿ. ರವಿ ಶೆಟ್ಟಿ, ಅಲ್-ಮುಫ್ತಾಹ್ ಜನರಲ್ ಮ್ಯಾನೆಜರ್ ವೀರೇಶ್ ಮಾನಂಗಿ ಮೊದಲಾದವರು ಅತಿಥಿಗಳಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬೈಪಾಸ್ ಬಳಿ ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಸಂಸದ ಯಡಿಯೂರಪ್ಪ ಅವರಿಗೆ ಈ ಹಿಂದೆ ನೀಡಲಾಗಿದ್ದ ಮನವಿಯ ಸಂಬಂಧ ಸಂಸದರ ಖಾಸಗಿ ಆಪ್ತ ಸಹಾಯಕ ಪುರುಷೋತ್ತಮ ಅವರು ಉಡುಪಿ ಜಿಲ್ಲಾಧಿಕಾರಿಯೊಂದಿಗೆ ಬೈಂದೂರಿಗೆ ಭೇಟಿ ನೀಡಿ ಚರ್ಚಿಸಿದರು. ಮೇಲ್ಸೆತುವೆ ನಿರ್ಮಾಣಕ್ಕೆ ಸಂಸದರ ಶಿಪಾರಸ್ಸು: ಕೇಂದ್ರ ಹೆದ್ದಾರಿ ಸಚಿವರೊಂದಿಗೆ ಚರ್ಚಿಸಿರುವ ಸಂಸದರು ಗುತ್ತಿಗೆದಾರ ಕಂಪೆನಿಗೆ ಶಿಪಾರಸ್ಸು ಪತ್ರ ನೀಡಿದ್ದಾರೆ. ಈ ಸಂಬಂಧ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸುವ ಸಲುವಾಗಿ ಮೇಲ್ಸೇತುವೆ ಕಾಮಗಾರಿಗೆ ಶೀಘ್ರ ಅಂದಾಜು ಪಟ್ಟಿ ತಯಾರಿಸಿ, ಕಾಮಗಾರಿಗೆ ಅಗತ್ಯ ಕ್ರಮ ಕೈಗೆತ್ತಿಕೊಳ್ಳುವಂತೆ ಚತುಷ್ಪಥ ಹೆದ್ದಾರಿ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳಿಗೆ ಸಂಸದರ ನಿರ್ದೇಶನದಂತೆ ಅವರ ಆಪ್ತ ಸಹಾಯಕ ಸೂಚಿಸಿದರು. ಸಂತ್ರಸ್ಥ ಕುಟುಂಬದ ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ಸ್ಥಳದಲ್ಲಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರೊಂದಿಗೆ ಅಳಲು ತೋಡಿಕೊಂಡ ಸ್ಥಳೀಯರು ಚತುಷ್ಪಥ ಕಾಮಗಾರಿಯಿಂದಾಗಿ ಭೂಮಿ ಕಳೆದುಕೊಂಡ ಸಂತೃಸ್ತ ಕುಟುಂಬಗಳಿಗೆ ನೀಡಲಾದ ಪರಿಹಾದ ಮೊತ್ತದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕ ಪೂರೈಸುವ ಅವಧಿಯಲ್ಲಿದ್ದೇವೆ. ದೇಶದ ಮೂಲಭೂತ ಸೌಕರ್ಯಕ್ಕೆ ಕೇಂದ್ರ ರಾಜ್ಯ ಸರಕಾರ ಕೋಟ್ಯಾಂತರ ಹಣ ಖರ್ಚು ಮಾಡಿದೆ. ಆದಾಗ್ಯೂ ಈಗಲೂ ಬಡತನ, ನಿರುದ್ಯೋಗ ಹಸಿವು ಮಹಿಳೆಯರ ಮೇಲೆ ದೌರ್ಜನ್ಯ ಜಾತಿ ತಾರತಮ್ಯ ಅಸ್ಪೃಶ್ಯತೆ ಕಡಿಮೆಯಾಗಲಿಲ್ಲ. ಬದಲಿಗೆ ಹೆಚ್ಚುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ ಹೇಳಿದರು. ಮನೆ ನಿವೇಶನ ರಹಿತರ ಅರ್ಜಿದಾರರ ಬೃಹತ್ ಸಮಾವೇಶವನ್ನು ಗಂಗೊಳ್ಳಿ ವಿರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಂತ ೨೦ ಕೋಟಿ, ರಾಜ್ಯದಲ್ಲಿ ೧ ಕೋಟಿಗೂ ಹೆಚ್ಚು ಕೃಷಿ ಕೂಲಿಕಾರರು ಇದ್ದಾರೆ. ಪ್ರತಿಯೊಬ್ಬನ ತಲೆ ಮೇಲೊಂದು ಸೂರು ನಮ್ಮ ಮೂಲಭೂತ ಹಕ್ಕು. ನಮ್ಮ ಹಕ್ಕನ್ನು ಪಡೆಯಲು ಹೋರಾಟ ಚಳವಳಿಯನ್ನು ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಬೈಂದೂರು ಹಾಗೂ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರ ಮನೆ ಮುಂದೆ ನಿವೇಶನ ರಹಿತರಿಂದ ಭೂಮಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರ, ಪಟ್ಟಣ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಿದ್ದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಂಟ ಸಮಾಜ ಯುವಕರು ಹಿರಿಯರ ಮಾರ್ಗದರ್ಶನಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳ ತೆರೆಯುವ ಮೂಲಕ ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವಂಣh ವ್ಯವಸ್ಥೆಗೆ ಮುಂದಾಗಬೇಕು. ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಬಂಟರ ಸಂಘ ಗೌರವ ಪ್ರಧಾನ ಕಾರ್ಯದರ್ಶಿ ಜಪ್ತಿ ಸಂತೋಷ ಶೆಟ್ಟಿ ಸಲಹೆ ಮಾಡಿದ್ದಾರೆ. ಕುಂದಾಪುರ ತಾಲೂಕು ಯುವ ಬಂಟರ ಸಂಘ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಬಂಟ್ಸ್ ಕ್ರಿಕೆಟ್ ಟ್ರೋಪಿ ಉದ್ಘಾಟಿಸಿ, ಮಾತನಾಡುತ್ತಿದ್ದರು. ಬಾಂಬೆ ಹೊರತು ಹೊರತು ಪಡಿಸಿದರೆ ಬಂಟ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಧಾನ್ಯತೆ ಸಿಗುತ್ತಿಲ್ಲ. ಬಂಟ ಸಮುದಾಯದ ಹಿರಿಯರು ಯುವ ಬಂಟರನ್ನ ರಾಜಕೀಯದಲ್ಲಿ ಬೆಳಸುವ ಮೂಲಕ ರಾಜಕೀಯ ಪ್ರಧಾನತೆ ಸಿಗುವಂತೆ ಮಾರ್ಗದರ್ಶನ ನೀಡಬೇಕು ಎಂದು ಅವರು ಸಲಹೆ ಮಾಡಿದರು. ಕುಂದಾಪುರ ತಾಲೂಕು ಯುವ ಬಂಟ ಸಂಘ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಬಿಜೆಪಿ ಪಕ್ಷವನ್ನು ಸೇರಿದ ಬಳಿಕ ಮೊದಲ ಭಾರಿಗೆ ಕುಂದಾಪುರ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಕುಂದಾಪುರ ಬಿಜೆಪಿ ಪದಾಧಿಕಾರಿಗಳು ಜೆಪಿ ಹೆಗ್ಡೆ ಅವರನ್ನು ಬರಮಾಡಿಕೊಂಡು ಘೋಷಣೆಯೊಂದಿಗೆ ಪಕ್ಷದ ಕಛೇರಿಗೆ ಸ್ವಾಗತಿಸಿಕೊಂಡರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ ಹೆಗ್ಡೆ, ಕಾರ್ಯಕರ್ತರ ಬಲ ಜೊತೆಗಿದ್ದರೇ ನಾಯಕರಿಗೆ ಆನೆ ಬಲ ಬಂದಂತಾಗುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಎಲ್ಲರೂ ಒಟ್ಟು ಸೇರಿದರೆ ಪಕ್ಷಕ್ಕೆ ಶಕ್ತಿ ಬರುತ್ತದೆ. ಒಗ್ಗಟ್ಟಾಗಿ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಭಿವೃದ್ಧಿಯ ಚಿಂತನೆ: ಈ ಹಿಂದೆ ಶಾಸಕನಾಗಿದ್ದಾಗ ಬ್ರಹ್ಮಾವರ ತಾಲೂಕು ಕೇಂದ್ರವಾಗಿ ಪರಿವರ್ತಿಸುವ ಚಿಂತನೆಯನ್ನು ಗಟ್ಟಿಗೊಳಿಸಿದ್ದೆ. ಗುಲ್ವಾಡಿ ಕಿಂಡಿ ಆಣೆಕಟ್ಟು ನಿರ್ಮಾಣ ಮಾಡಿದ್ದರಿಂದ ಇಂದು ಕುಂದಾಪುರ ಪುರಸಭೆಗೆ ಶಾಶ್ವತ ಕುಡಿಯುವ ನೀರು ದೊರಕಿದೆ. ಕುಂದಾಪುರ ಪುರಸಭೆ ಒಳಚರಂಡಿ ಯೋಜನೆ ಕೂಡಾ ಸಂಸದನಾಗಿದ್ದ ಕಾಲದಲ್ಲಿ ಮಂಜೂರಾಗಿತ್ತು. ಕಾರ್ಯಕರ್ತರು ಅಭಿವೃದ್ದಿ ಹಾಗೂ ಸಮಸ್ಯೆ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಬ್ಬರು ಸರಗಳ್ಳರನ್ನು ಕೋಟ ಪೊಲೀಸ್ ಠಾಣೆಯ ಸಿಬ್ಭಂದಿಯೋರ್ವರು ಸಾಹಸ ಮೆರೆದು ಬಂಧಿಸಿದ್ದು, ಆರೋಪಿಗಳನ್ನು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಾವುಂದ ನಿವಾಸಿಗಳಾದ ನಾಗೇಶ ಖಾರ್ವಿ(22), ಮಧುಕರ ಖಾರ್ವಿ (25) ಆರೋಪಿಗಳು. ಬೈಕ್ನಲ್ಲಿ 15 ಕಿ.ಮೀ. ಬೆನ್ನಟ್ಟಿ ಬಂಧನ ಆರೋಪಿಗಳು ಸೋಮವಾರ ರಾತ್ರಿ ಪಲ್ಸರ್ ಬೈಕ್ನಲ್ಲಿ ಬಂದು ಸಾಲಿಗ್ರಾಮ ಸಮೀಪ ಕಾರ್ಕಡ ಹಿ.ಪ್ರಾ. ಶಾಲೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಸರ ಅಪಹರಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಆಕೆ ಜೋರಾಗಿ ಕೂಗಿಕೊಂಡಿದ್ದರು. ಆಗ ಸಮೀಪ ಕರ್ತವ್ಯ ನಿರತರಾಗಿದ್ದ ಕೋಟ ಠಾಣೆಯ ಹೆಡ್ ಕಾನ್ಸ್ಟೆಬಲ್ ಪ್ರದೀಪ್ ನಾಯಕ್ ಬೈಕ್ನಲ್ಲಿ ಅವರನ್ನು ಬೆನ್ನಟ್ಟಿದ್ದು, ಆರೋಪಿಧಿಗಳು ಬೈಕಿನಲ್ಲಿ ಬ್ರಹ್ಮಾವರ ಕಡೆಗೆ ವೇಗವಾಗಿ ಸಾಗಿದರು. ಅನಂತರ ಬ್ರಹ್ಮಾವರ ಆಕಾಶವಾಣಿ ಸರ್ಕಲ್ನಿಂದ ಬಾಕೂìರು ರಸ್ತೆಯ ಮೂಲಕ ಪರಾರಿಯಾಗಲು ಯತ್ನಿಸಿದಾಗ ಪ್ರದೀಪ್ ನಾಯಕ್ ಕೂಡ ಅಷ್ಟೇ ವೇಗದಲ್ಲಿ ಅವರನ್ನು ಬೆನ್ನಟ್ಟಿ ಘಟನೆ ಈ ಕುರಿತು ಸ್ಥಳೀಯರಿಗೆ ಹಾಗೂ ಉನ್ನತ ಪೊಲೀಸ್…
