Author: ನ್ಯೂಸ್ ಬ್ಯೂರೋ

ಗಂಗೊಳ್ಳಿ: ಶಾಲೆಗಳಲ್ಲಿ ಸಾಹಿತ್ಯಗಳಿಗೆ ಸಂಬಂಧಪಟ್ಟ ಶಿಕ್ಷಣ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೆಳೆಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಸಾಹಿತ್ಯಗಳು ಜೀವನವನ್ನು ಸಜ್ಜುಗೊಳಿಸುತ್ತದೆ. ಶಾಲೆಗಳಲ್ಲಿ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದ್ದು, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಕುಂದಾಪುರದ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದರು. ಅವರು ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಕ್ರೀಡೆಗಳಲ್ಲಿ ಒಂದು ಸಂದೇಶವಿದೆ. ಕ್ರೀಡೆಗಳನ್ನು ಪ್ರೋತ್ಸಾಹಿಸುವ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕು. ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್‌ನ ಕಾರ್ಯ ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲರ್ಸ್ ಕನ್ನಡವಾಹಿನಿಯ ಕಿರುತೆರೆ ನಟಿ ನೀತಾ ಅಶೋಕ್ ಶುಭ ಹಾರೈಸಿದರು. ಇದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಧಾನಪರಿಷತ್ ನ ಸ್ಥಳಿಯಾಡಳಿತ ಪ್ರತಿನಿಧಿಗಳಿಗಾಗಿ ನಡೆದ ಚುನಾವಣೆಯು ಕುಂದಾಪುರ ತಾಲೂಕಿನಲ್ಲಿ ಶಾಂತಿಯುತವಾಗಿ ನಡೆದಿದ್ದು, 97 ಪ್ರತಿಶತ ಮತದಾನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಾಲೂಕಿನಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಸದಸ್ಯರು ಇಬ್ಬರು ವಿಧಾನಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 1019ಮತಗಳಿದ್ದು ಆ ಪೈಕಿ ಒಟ್ಟು 67 ಮತಗಟ್ಟೆಯಗಳಲ್ಲಿ ಶೇ. 99.71ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆ ಹತ್ತು ಗಂಟೆಯ ವೇಳೆಗೆ ಬಿರುಸುಗೊಂಡು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಬಹುಪಾಲು ಮುಗಿದಿತ್ತು. ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. (ಕುಂದಾಪ್ರ ಡಾಟ್ ಕಾಂ) ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯಿತಿ ಮತಘಟ್ಟೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರೇ, ಬಿಜೆಪಿ…

Read More

[quote font_size=”16″ bgcolor=”#ffffff” arrow=”yes” align=”right”]ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರ ಬೆಂಬಲ: ಪ್ರತಾಪಚಂದ್ರ ಶೆಟ್ಟಿ ಅವರ ಕುರಿತು ಕಾಂಗ್ರೆಸ್ ಬೆಂಬಲಿತ ಮತದಾರರಿಂದ ಪೂರಕವಾದ ಅಭಿಪ್ರಾಯ ಮೂಡಿಬರುತ್ತಿದೆ. ಪರಿಷತ್ ಚುನಾವಣೆಯಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ನಮ್ಮ ಮತದಾರರಿಗೆ ಚುನಾವಣೆಯನ್ನು ಮತಹಾಕಲು ಕುರಿತಂತೆ ತರಬೇತಿ ನೀಡಲಾಗಿದೆ – ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸಂಸದರು.[/quote] ಬೈಂದೂರು: ಕಾಂಗ್ರೆಸ್ ಪಕ್ಷ ನಾಯಕರು ಮತ್ತು ಕಾರ್ಯಕರ್ತರು ವಿಧಾನ ಪರಿಷತ್ ಚುನಾವಣೆಯನ್ನು ಗಭೀರವಾಗಿ ಪರಿಗಣಿಸಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆ ಹೇಗಾದರು ಮಾಡಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಗಳು ಸುಳ್ಳು ಪ್ರಚಾರ ಮಾಡಿ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯ ನಡೆಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಒಬ್ಬ ಪರಿಷತ್ ಸದಸ್ಯನಿಂದ ಗ್ರಾಮ ಪಂಚಾಯತ್ ಮಸೂದೆಗಳಿಗೆ ತಿದ್ದುಪಡಿ…

Read More

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಉತ್ತರ ಕನ್ನಡ ಜಿಲ್ಲೆಯ(ಶಿರಸಿ) ಸಿದ್ದಾಪುರ ತಾಲೂಕಿನ ವ್ಯಾಪ್ತಿಯ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಅಧ್ಯಯನ ಭೇಟಿ ನೀಡಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸಂಘದ ಕಾರ್ಯಚಟುವಟಿಕೆ, ಅಭಿವೃದ್ಧಿ, ಠೇವಣಿಗಳು, ವ್ಯವಹಾರಿಕ ಸಾಲಗಳು, ವಾಹನ ಸಾಲ, ಬೆಳೆಸಾಲಗಳ, ಅಲ್ಪಾವಧಿ ದೀರ್ಘಾವಧಿ ಸಾಲಗಳ ವಿತರಣೆ ಹಾಗೂ ಮರುಪಾವತಿ ಕ್ರಮ ಮುಂತಾದುವುಗಳ ಬಗ್ಗೆ ವಿವರಿಸಿದರು. ಸಂಘದ ಎಲ್ಲಾ ಸದಸ್ಯರನ್ನು, ಗ್ರಾಹಕರನ್ನು ಗೌರವಿಸಿ, ಅತೀ ಶೀರ್ಘದಲ್ಲೇ ಸೇವೆ ನೀಡುವಲ್ಲಿ ಸೇವಾ ಸಹಕಾರಿ ಸಂಘಗಳು ಮುಂದಾಗಬೇಕು ಆಗ ಮಾತ್ರ ಸಂಘವು ಯಶಸ್ವಿಹೊಂದಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಕೆ. ಹಾವಳಿ ಬಿಲ್ಲವ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದರೂ ಜನಸಾಮಾನ್ಯನಿಗೂ ಸುಲಭವಾಗಿ ದೊರಕುವ ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ. ಮೂರ್ತೆದಾರರ ಹೋರಾಟದಲ್ಲಿ ರಾಜ್ಯದ ಗಮನ ಸೆಳೆದಿದ್ದ ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವಾಗಲೇ 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಮುಂದೆ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದ…

Read More

ಸಾಲುಮರದ ತಿಮ್ಮಕ್ಕನಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕಳೆದ ಒಂದೂವರೆ ದಶಕದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳು ಇಂದು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯೊಂದಿಗೆ ಈ ಭಾರಿ ‘ಕುಸುಮಾಂಜಲಿ – 2015’ ಆಯೋಜಿಸಲಾಗಿದೆ. ಡಿ.26ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ ನಾಡಿನ ಶ್ರೇಷ್ಠ ಸಾಧಕರೊಬ್ಬರಿಗೆ ಕುಸುಮಾಶ್ರೀ ಹಾಗೂ ಪರಿಸರದ ವಿಶೇಷ ಗಾನ ಪ್ರತಿಭೆಗೆ ಗಾನ ಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. (ಕುಂದಾಪ್ರ…

Read More

ಕುಂದಾಪುರ: ಹಟ್ಟಿಯಂಗಡಿ ಪುರಾಣ ಪ್ರಸಿದ್ಧ ಶ್ರೀ ಲೋಕನಾಥೇಶ್ವರ ದೇವಸ್ಥಾನವು ಸುಮಾರು ೩ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಳ್ಳುತ್ತಿದ್ದು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಡೆ ದೇವಳದ ಜಿಣೋದ್ಧಾರ ಕಾರ್ಯಕ್ಕೆ 10ಲಕ್ಷ ರೂ. ಚೆಕ್ ನೀಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರರಾಜೇಂದ್ರ ಅರಸ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧವಿನಾಯಕ ದೇವಸ್ಥಾನ ಬಾಲಚಂದ್ರ ಭಟ್, ವಲಯ ಯೋಜನಾಧಿಕಾರಿ ಸನತ್‌ಕುಮಾರ್ ರೈ, ಒಟ್ಟೂಟ ಅಧ್ಯಕ್ಷ ನಾಗರಾಜ್, ಕನ್ಯಾನ ಒಕ್ಕೂಟ ಅಧ್ಯಕ್ಷ ಜಗದೀಶ್ ಆಚಾರ್ಯ, ವಲಯ ಮೇಲ್ವೀಚಾರಕ ನಾಗರಾಜ್, ಸೇವಾ ಪ್ರತಿನಿಧಿ ಕಲಾವತಿ, ಕರುಣಾಕರ ಇದ್ದರು. 2015 ಮಾರ್ಚ್‌ನಲ್ಲಿ ದೇವಳದ ಜೀಣೋದ್ಧಾರದ ಸಲುವಾಗಿ ದೇವರ ಕಳೆ ಇಳಿಸಲಾಯಿತು. ಜೀರ್ಣೋದ್ಧಾದ್ದುರ ಕಾರ್ಯ ಪ್ರಗತಿಯಲ್ಲಿ 2016ಮಾರ್ಚ್ 23ರಂದು ನಡೆಯುವ ಹಟ್ಟಿಯಂಗಡಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಕಳೆ ಏರಿಸಿದ ಬಳಿಕ ಪುನರ್‌ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. (ಕುಂದಾಪ್ರ ಡಾಟ್ ಕಾಂ) ವರಾಹಿ ನದಿಯ ದಡದಲ್ಲಿರುವ ಹಟ್ಟಿಯಂಗಡಿ ಶ್ರೀ…

Read More

ಬೈಂದೂರು: ಜೀವನದಲ್ಲಿ ಗೆಲುವು ಉತ್ಸಾಹ ತಂದರೆ ಸೋಲು ಶಕ್ತಿ ತರುತ್ತದೆ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕವಾಗಿಯೂ ಮಕ್ಕಳು ಸಾಧನೆ ಮಾಡಬೇಕು. ಚಹ ಮಾರಿದವರು ಪ್ರಧಾನಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಹಾಗೇಯೇ ಪ್ರತಿಯೊಬ್ಬರಲ್ಲಿಯೂ ಸುಪ್ತಪ್ರತಿಭೆಗಳರುತ್ತದೆ. ಉತ್ತಮ ವೇದಿಕೆಯ ಮೂಲಕ ಅದನ್ನು ಪ್ರಕಟಿಸಿ ಸಾಧನೆಯ ಮಟ್ಟಿಲನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು ಮೊರಾರ್ಜಿ ದೇಸಾಯಿ ಅಂಗ್ಲಮಾಧ್ಯಮ ವಸತಿಶಾಲೆ ಹೇರೆಂಜಾಲು ಇಲ್ಲಿ ನಡೆದ ಶಾಲಾ ವಾಷಿಕೋತ್ಸವ ಹಾಗೂ ಚಿಣ್ಣರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವಿಶ್ವನಾಥ ಶೆಟ್ಟಿ ಮಾತನಾಡಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಸಾಮಾಜಿಕ ಕಳಕಳಿಯುಳ್ಳ ಯುವಜನಾಂಗ ಸೃಷ್ಠಿಯಾಗಬೇಕು ಎಂದು ಹಿಂದೆ ’ಗುರುವೇ ನಮಃ’ ಎನ್ನುತ್ತದ್ದ ಮಕ್ಕಳು ಇಂದಿನ ದಿನಗಳಲ್ಲಿ ’ಗುರು ಏನ್ ಮಹಾ’ ಎನ್ನುವಂತಹ ಮಟ್ಟಕ್ಕೆ ಬಂದಿರುವುದು ಗುರು-ಶಿಷ್ಯರ ಸಂಬಂಧ ಹಾಗೂ ಬಾಂಧವ್ಯಗಳಲ್ಲಿ ಬಿರುಕು ಕಾಣಿಸುತ್ತಿದೆ. ಇದು ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು ಕೇವಲ ಅಂಕ…

Read More

ಅಂತರಾಷ್ಟ್ರೀಯ ಮಾದರಿಯ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಸಿದ್ದತೆಗಳು ಪೂರ್ಣ ಕುಂದಾಪ್ರ ಡಾಟ್ ಕಾಂ ಕುಂದಾಪುರ: ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ. 24ರಿಂದ 27ರವರೆಗೆ ನಡೆಯಲಿರುವ 5ನೇ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟದ ಸಿದ್ಧತೆಗಳು ಪೂರ್ಣಗೊಂಡಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಗಲಿದೆ. ಪಂದ್ಯಾಟಕ್ಕಾಗಿ 43 ತಂಡಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಿದ್ದು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟ ನೀಡಲಿದೆ. ಈಗಾಗಲೇ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಕುಂದಾಪುರಕ್ಕೆ ದೌಡಾಯಿಸುತ್ತಿದ್ದಾರೆ. ನಾಲ್ಕು ದಿನಗಳ ಕಾಲ ಸುಮಾರು 600 ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 150 ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನ ಸ್ವಯಂ ಸೇವಕರ ಪಡೆ ಅವರ ಅನುಕೂಲತೆಗಾಗಿ ಸರ್ವ ಸುಸಜ್ಜಿತ ವ್ಯವಸ್ಥೆಯನ್ನು ನೀಡಲು ಸನ್ನದ್ಧವಾಗಿದೆ. ಕುಂದಾಪುರದ ಇತಿಹಾಸದಲ್ಲಿ ಪ್ರಥಮ: ಉಡುಪಿ ಮಂಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕುಂದಾಪುರದಲ್ಲಿ ಅಂತರಾಷ್ಟ್ರೀಯ ಪಂದ್ಯಕೂಟದ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿರುವುದು ಕುಂದಾಪುರದ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂಬುವುದು…

Read More

ಕುಂದಾಪುರ: ಎಲ್ಲವನ್ನೂ ಕಾನೂನಿನಿಂದ ಸರಿಪಡಿಸಲು, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಜನರು ಇಲಾಖೆಗೆ ನೀಡುವ ಸಹಕಾರ ಹಾಗೂ ಜನರ ಸಹಭಾಗಿತ್ವದ ವ್ಯವಸ್ಥೆಯಿಂದ ಅಪರಾಧಗಳನ್ನು ನಿಯಂತ್ರಿಸಲು, ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಿದೆ. ದೇಶದಲ್ಲಿ ಯುವ ಜನರ ಪ್ರೀತಿ ವಿಶ್ವಾಸ, ಬಾಂಧವ್ಯ ಹಾಗೂ ಸಾಮರಸ್ಯದ ಜೀವನ ನಡೆಸಿದಾಗ ದೇಶ ಪ್ರಗತಿಪಥದತ್ತ ಸಾಗಲು ಸಹಾಯಕವಾಗಲಿದೆ ಎಂದು ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಂಚುಗೋಡು ಭಗತ್‌ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವಕೇಂದ್ರ ಉಡುಪಿ, ಆದರ್ಶ ಯುವಕ ಮಂಡಲ ಭಗತ್ ನಗರ ಕಂಚುಗೋಡು, ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜರಗಿದ ವಿಷಯಾಧಾರಿತ ಶಿಕ್ಷಣ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ಒತ್ತು ನೀಡಿ ಕೆಲಸ…

Read More