Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ.9: ಇಲ್ಲಿನ ರಾಮಕ್ಷತ್ರಿಯ ಯುವಕ ಮಂಡಳಿ ಸಾರಥ್ಯದಲ್ಲಿ ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಅಂಗವಾಗಿ ಸೀತಾರಾಮಚಂದ್ರ ಉತ್ಸವ ಮೂರ್ತಿಯನ್ನು ಕುಂದಾಪುರ ಶಾಸ್ತ್ರೀ ವೃತ್ತದಿಂದ ದೇವಸ್ಥಾನದವರೆಗೆ ರಾಮಕ್ಷತ್ರೀಯ ಸಮಾಜದವರಿಂದ ಪುರಮೆರವಣಿಗೆಯಲ್ಲಿ ಕೊಂಡೊಯ್ದರು. ಸಂಜೆ ೫:೩೦ರಿಂದ ಸೀತಾಕಲ್ಯಾಣೋತ್ಸವ ಜರುಗಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಹೆತ್ತವರು ಗಮನಿಸುತ್ತ ಇರಬೇಕು. ಶಿಕ್ಷಣ ಸಂಸ್ಥೆಯ ಜೊತೆ ಪೋಷಕರು ನಿಕಟ ಸಂಬಂಧ ಇಟ್ಟುಕೊಳ್ಳಬೇಕು. ಶಿಕ್ಷಕರು ಕೂಡಾ ಸೇವಾಧರ್ಮದಿಂದ ಕೆಲಸ ನಿರ್ವಹಿಸಿದಾಗ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿ ನಡೆದ ವಿಜಯ ಮಕ್ಕಳ ಕೂಟ ದೇವಲ್ಕುಂದ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯರಾದ ಉದಯ ಜಿ.ಪೂಜಾರಿ, ನಿವೃತ್ತ ಶಿಕ್ಷಕರಾದ ರಾಜೀವ ಶೆಟ್ಟಿ ಬಗ್ವಾಡಿ, ಗ್ರಾಮ ಸೇವಾ ಸಂಗಮದ ಅಧ್ಯಕ್ಷೆ ಅನಿತಾ ರಾಘವೇಂದ್ರ ಹೆಬ್ಬಾರ್, ಗ್ರಾಮ ಸೇವಾ ಸಂಗಮದ ಸದಸ್ಯ ಪಿ.ರಾಜಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ಆಯೋಜಿಸದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಶ್ ಶೆಟ್ಟಿ…

Read More

ಕುಂದಾಪುರ: ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮತ್ತು ಅಮಾಸೆಬೈಲು ಗ್ರಾಮ ಅಂಗವಿಕಲರ ಸಂಘದ ಅಧ್ಯಕ್ಷ- ಅಂಧ ಅಂಗವಿಕಲ ಗಣಪತಿ ಪೂಜಾರಿ ಎಂಬುವವರು ಮಾಹಿತಿ ಹಕ್ಕಿನ ಕಾಯಿದೆಯಡಿ ಅಂಗವಿಕಲರಿಗೆ ವಿವಿಧ ಸೌಲಭ್ಯ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ಕೇಳಲು ಅಮಾಸೆಬೈಲು ಗ್ರಾಮ ಪಂಚಾಯತ್ ಕಛೇರಿಗೆ ತೆರಳಿದ್ದಾಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಇತರ ಇಬ್ಬರು ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಮಿಲಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿ ತಳ್ಳಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರು ಏಪ್ರಿಲ್ 12ರಂದು ಕುಂದಾಪುರ ತಾಲೂಕು ಪಂಚಾಯತ್ ಕಛೇರಿ ಎದುರು ಅಂಗವಿಕಲರು ಭೃಹತ್ ಧರಣಿ ಸತ್ಯಾಗ್ರಹ ಹೋರಾಟ ಹಮ್ಮಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ ಡಾ.ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ಕುಂದಾಪುರದಲ್ಲಿ ನಡೆದ ಕಸಾಪ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬೈಂದೂರು ಹೋಬಳಿ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ.ಸುಬ್ರಹ್ಮಣ್ಯ ಭಟ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಬೈಂದೂರಿನ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕತೆ, ಕವನ, ಲೇಖನ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರ ಹಲವು ಪುಸ್ತಕಗಳು ಪ್ರಕಟಗೊಂಡಿವೆ. ಇವರು ಬರೆದ ಕತೆ ‘ವಿಷದ ಮಳೆ’ ತುಳುಭಾಷೆಯಲ್ಲಿ ಚಲನಚಿತ್ರವಾಗಿದ್ದು, 2005ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನವಾಚನಗೈದಿರುವ ಇವರು ಹಲವು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಉಡುಪಿ ಜಿಲ್ಲಾ ಆರ್ಟಿಐ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಜನಸ್ಪಂದನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಇಲ್ಲಿನ ಬಂದರು ರಸ್ತೆಯ ಶ್ರೀ ಚೌಡೇಶ್ವರಿ ಯುತ್ ಕ್ಲಬ್‌ನ ಯುಗಾದಿ ಹಬ್ಬ ಆಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಗುರುವಾರ ಗಂಗೊಳ್ಳಿಯ ಬಂದರಿನ ದೊಡ್ಡಹಿತ್ಲು ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪುಂದದ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಂತೆ ಯುಗಾದಿ ಹಬ್ಬವು ಹಿಂದುಗಳಿಗೆ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಆಚರಣೆಯ ಮಹತ್ವ ಹಾಗೂ ಉದ್ದೇಶವನ್ನು ಎಲ್ಲರೂ ಅರಿತುಕೊಂಡು ಸಂಭ್ರಮದಿಂದ ಯುಗಾದಿ ಆಚರಣೆ ಮಾಡಬೇಕು. ಕಳೆದ ಸಂವತ್ಸರದ ಕಹಿಯನ್ನು ಮರೆದು ಈ ಹೊಸ ಸಂವತ್ಸರವು ಎಲ್ಲರಿಗೂ ಸಂತೋಷ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತರುವಂತಾಗಲಿ ಎಂದು ಶುಭ ಹಾರೈಸಿದರು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಪ್ರಭು, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ, ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಶುಭಾಶಂಸನೆಗೈದರು. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮಡಿ ಹರೀಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ. ಎಸ್. ಯಡಿಯೂರಪ್ಪನವರು ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ ಸುಕುಮಾರ್ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ ನೂತನ ರಾಜ್ಯಾಧ್ಯಕ್ಷರಿಗೆ ಶುಭಕೋರಿದ್ದಾರೆ. ಬೈಂದೂರು ಬೈಪಾಸ್ ಬಳಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿಕೊಂಡು ಬಿಎಸ್‌ವೈಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಾಂತ್ಯದ ಅಧ್ಯಕ್ಷ ಬಾಲಕೃಷ್ಣ ಬೈಂದೂರು, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಗೋಪಾಲ ಕಾಂಚನ್, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಸದಾಶಿವ ಡಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಕಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟರಿಗೆ ಕುಂದಾಪುರದ ಜನಪರ, ಪ್ರಗತಿಪರ ವೇದಿಕೆ ಸಂಚಾಲಕ ಮಾಣಿ ಗೋಪಾಲ ಅಭಿನಂದನೆ ಸಲ್ಲಿಸಿದರು. ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಪುರಸಭಾ ಸದಸ್ಯರಾದ ಶಕುಂತಲಾ ಗುಲ್ವಾಡಿ, ಪುಷ್ಪ ಶೇಟ್, ಜ್ಯೋತಿ ಕೋಡಿ, ವೇದಿಕೆ ಸಹಸಂಚಾಲಕ ರಾಮಕೃಷ್ಣ ಹೇರ್ಳೆ, ಗಿರೀಶ್ ಕುಂದಾಪುರ, ಶ್ರೀಧರ ಆಚಾರ್ಯ, ಶೈಲೇಶ್, ಸದಸ್ಯರಾದ ಕಾಳಪ್ಪ ಪೂಜಾರಿ, ಗೋಪಾಲ ಬಂಗೇರ, ಕಾರ್ತಿಕ್ ಮಧ್ಯಸ್ಥ, ರಂಜಿತ್ ಕುಮಾರ್ ಶೆಟ್ಟಿ, ಸತೀಶ್ ಹೆಗ್ಡೆ, ದೀಪಕ್ ನಾವುಂದ, ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ, ಸ್ಟೀವನ್ ಡಿ’ಕೋಸ್ಟ, ಶ್ರೀಧರ ಪಿ.ಎಸ್., ನಾಗರಾಜ ಪುತ್ರನ್, ಕೋಡಿ ಸುನೀಲ್ ಪೂಜಾರಿ, ಅಶೋಕ ಸಾರಂಗ, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ: ಬಿಲಿಂಡರ್ ಕುಂದಾಪ್ರ ಕನ್ನಡ ಚಿತ್ರದ ಟ್ರೇಲರ್ ನೋಡಿ. ಎಪ್ರಿಲ್ 22ರಂದು ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಸಿನೆಮಾ ಬಿಡುಗಡೆಗೊಳ್ಳಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಓದುಗನ ಮನಸ್ಸಿನ ಕಣ್ಣಿಗೆ ಕಟ್ಟುವ ಪ್ರತಿಮೆಗಳನ್ನು ರೂಪಿಸುವ ಭಾಷೆ, ಹೃದಯ ಸಂಸ್ಪರ್ಷಿಯಾಗುವ ಭಾವ, ಚಿಂತನೆಗೆ ಹಚ್ಚುವ ಬುದ್ಧಿಪ್ರಧಾನವೆನಿಸುವ ವಿಷಯಗಳಿಂದ ಕೂಡಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಹಲವು ಕವನಗಳು ಸಾವಯವ ಶಿಲ್ಪದಂತೆ ಕಂಡುಬರುತ್ತವೆ. ಅವು ಒಂದು ಓದಿಗೆ ದಕ್ಕುವವುಗಳಲ್ಲ ಎಂದು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಮೊಗೇರಿ ಗೋಪಾಲಕೃಷ್ಣ ಅಡಿಗರ ಭಾವಗೀತೆಗಳನ್ನು ಹಾಡುವ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಅಡಿಗರ ಕಾವ್ಯದ ಕ್ಲಿಷ್ಟತೆಯ ಕಾರಣದಿಂದ ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಪಾಯದ ಕುರಿತು ಅವರು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಎ. ಎಸ್.ಎನ್. ಹೆಬ್ಬಾರ್ ಕಾವ್ಯ ಕಾಗದದಲ್ಲಿದ್ದರೆ ಸಾಲದು. ಅದು ಜೀವ, ತೇಜಸ್ಸು ಮತ್ತು ಜೀವಂತಿಕೆಯಿಂದ ಹೊರ ಹೊಮ್ಮಬೇಕಾದರೆ ಹಾಡಾಗಿ ಪ್ರವಹಿಸಬೇಕು. ಆ ದೃಷ್ಟಿಯಿಂದ ಹಾಡುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಗಳೂರು: ಯುವ ಪತ್ರಕರ್ತ, ಪ್ರಜಾವಾಣಿಯ ಮಂಗಳೂರು ವರದಿಗಾರ ಹೈಮದ್ ಹುಸೇನ್(28) ಇಂದು ಮಧ್ಯಾಹ್ನ ಹೃದಯಾಘಾತದಿಂದ ಚಾರ್ಮಾಡಿಯಲ್ಲಿ ನಿಧನ ಹೊಂದಿದ್ದಾರೆ. ಯುಗಾದಿಯ ಪ್ರಯುಕ್ತ ಕಛೇರಿಗೆ ರಜೆ ಇದ್ದ ಕಾರಣ ಸಹ್ಯಾದ್ರಿ ಸಂಚಯ ಸಮಿತಿ ಆಯೋಜಿಸಿದ್ದ ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ಅವರಿಗೆ ಹೃದಯಾಘಾತವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೈಮದ್ ಮೂಲತಃ ರಾಯಚೂರಿನವರಾಗಿದ್ದು, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮಂಗಳೂರು ಪ್ರಜಾವಾಣಿಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುವವರಿದ್ದರಲ್ಲದೇ, ಹಾವೇರಿ ಕಛೇರಿಗೆ ವರ್ಗವಾಗುವವರಿದ್ದರು. ಹೈಮದ್ ಅವರ ನಿಧನಕ್ಕೆ ‘ಕುಂದಾಪ್ರ ಡಾಟ್ ಕಾಂ’ ಬಳಗ ಸಂತಾಪ ಸೂಚಿಸುತ್ತದೆ.

Read More