ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಎ. ೨೪ರಂದು ಮಧ್ಯಾಹ್ನ ೩ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ ಹಂದೆಯವರಿಗೆ ಪ್ರತಿಷ್ಠಿತ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಹಾಗು ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಚಿನ್ನಪ್ಪ ಗೌಡ ವಹಿಸಲಿದ್ದು ನವದೆಹಲಿಯ ಹರಿಗುರು ಸೇವಾ ಪ್ರತಿಷ್ಠಾನದ ಮುಖ್ಯಸ್ಥ ಕೆ. ಶ್ರೀನಿವಾಸ ಅನಂತ ಪ್ರಭು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ, ಹೋಟೆಲ್ ಉದ್ಯಮಿ ಆನಂದರಾಮ ಉಳ್ಳೂರು, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೆಜರ್ ಬಾಬುರಾಯ ಶೆಣೈ, ಕುಂದಾಪುರದ ಚಾರ್ಟೆಡ್ ಅಕೌಂಟೆಂಟ್ ಪಿ. ಪ್ರಭಾಕರ್ ಮಯ್ಯ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಭಾಸ್ಕರ ಕೊಗ್ಗ ಕಾಮತ್ ತಿಳಿಸಿದ್ದಾರೆ
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳ ವಾರ್ಷಿಕ ಮನ್ಮಹಾರಥೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ದೇವಳದ ಪ್ರಧಾನ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ರಥೋತ್ಸವದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಮೊದಲಾದವರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೇರಂಜಾಲು ಗ್ರಾಮದೇವತೆ ಶ್ರೀ ಗುಡೇ ಮಹಾಲಿಂಗೇಶ್ವರ ದೇವರ ವಾರ್ಷಿಕ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಕಟ್ಟೆ ಶಂಕರ ಭಟ್ಟರು ದೇವರ ಧಾರ್ಮಿಕ ವಿಧಿವಿಧಾನ ಪೂರೈಸಿದರು. ಮಧ್ಯಾಹ್ನ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ದೇವಳದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಎಚ್. ಜಯಶೀಲ ಶೆಟ್ಟಿ, ಖಜಾಂಚಿ ಎಚ್. ವಿಜಯ್ ಶೆಟ್ಟಿ, ಆಡಳಿತ ಮೊಕ್ತೇಸರ ಎಚ್. ಪದ್ಮನಾಭ ಮೇರ್ಟ, ಆಡಳಿತ ಸಹ ಮೊಕ್ತೇಸರ ಯು. ಎಸ್. ಗೋಪಾಲಕೃಷ್ಣ ರಾವ್, ಕಾಲ್ತೋಡು ಗ್ರಾಪಂ ಅಧ್ಯಕ್ಷ ಮಾದಯ್ಯ ಶೆಟ್ಟಿ, ಉಪಾಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ, ಜಿಪಂ, ತಾಪಂ, ಗ್ರಾಪಂ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ರಾತ್ರಿ ಹೇರಂಜಾಲು ಮತ್ತು ಕಾಲ್ತೋಡು ಗೆಳೆಯರ ಬಳಗ ಪ್ರಾಯೋಜಕತ್ವದ ಕುಂದಾಪುರ ಮೂರು ಮುತ್ತು ಕಲಾತಂಡದವರಿಂದ ರಾಮ-ಕೃಷ್ಣ-ಗೋವಿಂದ ಎಂಬ ನಾಟಕ ಪ್ರದರ್ಶನಗೊಂಡಿತು. – ಜನನಿ ಉಪ್ಪುಂದ
ಜ್ಞಾನದ ದೀಪ ಹಚ್ಚಿ ಬದುಕಿನ ದಾರಿ ತೋರುವ ಜವಾಬ್ದಾರಿ ಗುರುವಿನದ್ದು ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿ ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನದ ದೀಪ ಹಚ್ಚಿ ಬದುಕಿನ ದಾರಿ ತೋರುವ ಜವಾಬ್ದಾರಿ ಗುರುವಿನ ಮೇಲಿದೆ. ಗುರುವು ತೋರಿದ ದಾರಿಯಲ್ಲಿ ಮುನ್ನಡೆದರೇ ಯಶಸ್ಸು ಕಾದಿದೆ. ಅಧಿಕ ಅಂಕ ಗಳಿಕೆಯ ಹೊರತಾಗಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಶಿಕ್ಷಣದಲ್ಲಿ ಮೂಲಕ ಹೊರಹಾಕಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ರಾಜಶೇಖರ ವೆಂಕಣಗೌಡ ಪಾಟೀಲ ಹೇಳಿದರು. ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕುಂದಾಪುರದಂತಹ ತಾಲೂಕು ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಎಲ್ಲರಿಗೂ ಸಮಾನವಾದ ಶಿಕ್ಷಣ ದೊರೆಯುವಂತಾಗಬೇಕು ಎಂಬ ಆಶಯದೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯ. ಅಂತಹ ಮನಸ್ಥಿತಿಯನ್ನು ಕೆಲವರಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಿದೆ ಎಂದರು. ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್. ಶೆಣೈ, ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ವಿಷ್ಣುದಾಸ ಭಟ್, ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಸದಸ್ಯ ಅನಿಲ್ ಚಾತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೇಸಿಗೆ ಶಿಬಿರಗಳು ಮಕ್ಕಳ ಕೌಶಲ್ಯ ಅಭಿವೃದ್ದಿ ಹಾಗೂ ಸೃಜನಶೀಲತೆಯ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ಕೆ.ಎಸ್. ಮೆಡಿಕಲ್ ಕಾಲೇಜಿನ ಪ್ರೊ. ಡಾ. ರಶ್ಮಿ ಹೇಳಿದರು. ಕೋಟೇಶ್ವರ ಕೆನರಾ ಕಿಡ್ಸ್ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೇಂದ್ರ ಕುಮಾರ್ ಕೋಟ, ಸವಿತಾ ಐತಾಳ್ ಹಾಗೂ ಕೆನರಾ ಕಿಡ್ಸ್ ಸಂಚಾಲಕಿ ವಿನಂತಿ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವವನ್ನು ವಿಕಸಿಸಿ, ಅವರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ಹೊಮ್ಮಿಸುತ್ತದೆ. ಇಲ್ಲಿ ಕಲಿಯುವ ಅನೇಕ ಸಂಗತಿಗಳು ವಿದ್ಯಾರ್ಥಿ ಜೀವನದಲ್ಲಿ ಬಹಳ ಉಪಯುಕ್ತವಾಗುತ್ತದೆ ಎಂದು ಕುಂದಾಪುರ ಚಿನ್ಮಯ್ ಆಸ್ಪತ್ರೆಯ ಡಾ. ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ, ತ್ರಿವರ್ಣ ಆರ್ಟ್ ಕ್ಲಾಸ್ ಕುಂದಾಪುರ ಹಾಗೂ ಕೋಣಿಯ ಮಾತಾ ಮಾಂಟೆಸ್ಸೊರಿ ಶಾಲೆಯ ಆಶ್ರಯದಲ್ಲಿ ಕುಂದಾಪುರದ ರೋಟರಿ ನರ್ಸರಿ ಸ್ಕೂಲ್ನಲ್ಲಿ ನಡೆದ ೧೦ ದಿನಗಳ ಆರ್ಟ್ ಫೆಸ್ಟ್-2016 ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ.ಆರ್.ನಾಯ್ಕ್, ರೋಟರಿ ಕಾರ್ಯದರ್ಶಿ ಸಂತೋಷ್ ಕೋಣಿ ಉಪಸ್ಥಿತರಿದ್ದರು. ಶಿಬಿರ ನಿರ್ದೇಶಕ ಹರೀಶ್ ಸಾಗಾ ಸ್ವಾಗತಿಸಿದರು. ಮಾತಾ ಮಾಂಟೆಸ್ಸೊರಿ ಶಾಲೆಯ ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವೈಷ್ಣವಿ ಭಟ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕ್ಯಾಂಪಸ್ನಲ್ಲಿ ನಿತೀಶ್ ಪಿ ಬೈಂದೂರು ಇವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ.ಭೈರಪ್ಪ ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ತುಳು ಚಿತ್ರನಟ ದೇವಿದಾಸ್ ಕಾಪಿಕಾಡ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಾರುಕೂರು ಉದಯ, ಛಾಯಾಗ್ರಾಹಕ ನಿತೀಶ್ ಪಿ ಬೈಂದೂರು ಉಪಸ್ಥಿತರಿದ್ದರು. ಛಾಯಾಚಿತ್ರ ಪ್ರದರ್ಶನವು ದಿನಾಂಕ ೨೨ರವರೆಗೂ ನಡೆಯಲಿರುವುದು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಗನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ ಅಪ್ಪಳಿಸಲು ಸಿದ್ದಗೊಂಡಿದೆ. ಎಪ್ರಿಲ್ 22ರಿಂದ ಕುಂದಾಪುರ ವಿನಾಯಕ ಚಿತ್ರಮಂದಿರ ಹಾಗೂ ಉಡುಪಿಯ ಕಲ್ಪನಾ ಚಿತ್ರಮಂದಿರಗಳಲ್ಲಿ ಬಿಲಿಂಡರ್ ತೆರೆ ಕಾಣಲಿದೆ. ಖ್ಯಾತ ಸಂಗೀತ ನಿರ್ದೇಶಕ, ಕುಂದಾಪುರ ಕನ್ನಡದ ಚಿತ್ರ ನಿರ್ದೇಶಕ ರವಿ ಬಸ್ರೂರ್ ಅವರು ಈ ಭಾರಿ ಸ್ವತಃ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಜಾ ಶೆಟ್ಟಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಘು ಪಾಂಡೇಶ್ವರ್ ಸೇರಿದಂತೆ ಬಹುಪಾಲು ಕುಂದಾಪುರ ತಾಲೂಕಿನ ಪ್ರತಿಭೆಗಳೇ ನಟಿಸಿದ್ದಾರೆ. ಚಿತ್ರವನ್ನು ಸ್ವತಃ ರವಿ ಬಸ್ರೂರ್ ನಿರ್ದೇಶಿಸಿದ್ದರೇ, ಸಚಿನ್ ಬಸ್ರೂರ್ ಮೊದಲ ಭಾರಿಗೆ ಕ್ಯಾಮರ್ ಹಿಡಿದ್ದಾರೆ. ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಲಿಂಡರ್ ಚಿತ್ರದ ಎರಡು ಹಾಡುಗಳಿಗೆ ಧ್ವನಿಯಾಗಿರುವುದು ಸಾಮಾಜಿಕ ತಾಣಗಳನ್ನು ವೈರಲ್ ಆಗಿ ಚಿತ್ರದ ಬಗ್ಗೆ ಭಾರಿ ನೀರಿಕ್ಷೆ ಹುಟ್ಟಿಸಿತ್ತು. ಟ್ರೇಲರ್ ಹಾಗೂ ಹಾಡುಗಳು ಸೋಗಸಾಗಿ ಮುಡಿಬಂದಿದ್ದು ಚಿತ್ರಕಥೆ ಹೇಗಿರಲಿದೆ ಎಂಬುದನ್ನು ತೆರೆಯ ಮುಂದೆ ಕುಳಿತೇ ನೋಡಬೇಕಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬೈಂದೂರು ಪಡುವರಿಯ ಭರವಸೆಯ ಹವ್ಯಾಸಿ ಯುವ ಛಾಯಾಗ್ರಾಹಕ ನಿತೀಶ್ ಪಿ. ಬೈಂದೂರು ಅವರ ಛಾಯಾಚಿತ್ರ ಪ್ರದರ್ಶನ ಎ.21, 22 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲಿ ಜರುಗಲಿದೆ. ಮಂಗಳೂರು ವಿವಿ ಕುಲಾಧಿಪತಿ ಟಿ.ಡಿ.ಕೆಂಪರಾಜು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ನಿತೀಶ್ ಅವರ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಅವರ ಕ್ಲಿಕ್ಕಿಸಿದ ಈವರೆಗೆನ ಅತ್ಯುತ್ತಮ ಛಾಯಾಚಿತ್ರಗಳು ಪ್ರದರ್ಶನ ಕಾಣಲಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಿತೀಶ್ ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವಾಲೇ ‘ದಿ ಹಿಂದೂ’, ‘ಕರ್ನಾಟಕ ಪೋಟೋ ನ್ಯೂಸ್’ ಮುಂತಾದ ಪ್ರತಿಷ್ಠಿತ ಪತ್ರಿಕಾ ಸಂಸ್ಥೆಗಳಲ್ಲಿ ಟ್ರೇನಿ ಛಾಯಾಗ್ರಾಹಕರಾಗಿ ದುಡಿದ ಹೆಗ್ಗಳಿಕೆ ಅವರದ್ದು. ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ನಿತೀಶ್ ಅವರ ಛಾಯಾಚಿತ್ರಗಳು ಆಗಾಗ್ಗೇ ಪ್ರಕಟಗೊಳ್ಳುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಈವರೆಗೆ ನಿತೀಶ್ ಅವರು ಛಾಯಾಚಿತ್ರ ಸ್ವರ್ಧೆಯಲ್ಲಿ ರಾಷ್ಟ್ರ, ರಾಜ್ಯ ಸ್ಭೆರಿದಂತೆ ವಿವಿಧ ಪ್ರಶಸ್ತಿಗಳನ್ನು…
ಕುಂದಾಪ್ರ ಡಾಟ್ ಕಾಂ ವಿಡಿಯೋ ನೋಡಿ ► ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ► ಬಿಸಿಲ ಬೇಗೆಯಲ್ಲಿ ರಸ್ತೆ ಮಧ್ಯೆ ಸಿಲುಕಿ ಬಸವಳಿದ ಜನ. ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು – http://kundapraa.com/?p=13403 .
