Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಉಪ್ಪುಂದ ಚಂದ್ರಶೇಖರ ಹೊಳ್ಳರಲ್ಲಿ ಈ ಗುಣವಿದ್ದುದರಿಂದಲೇ ಇಂದು ರಾಜ್ಯದ ಭೂಪಟದಲ್ಲಿ ಉಪ್ಪಂದ ಎಂಬ ಊರನ್ನು ಗುರುತಿಸುವಂತಾಗಿದೆ ಎಂದು ಸಿರಿ ಮೊಗೇರಿ ಸಂಸ್ಥಾಪಕ, ಬೆಂಗಳೂರು ಮಾಧ್ಯಮ ಭಾರತಿ ನಿರ್ದೇಶಕ ಜಯರಾಮ ಅಡಿಗ ಹೇಳಿದರು. ಉಪ್ಪುಂದದ ಕುಂದ ಅಧ್ಯಯನ ಕೇಂದ್ರವು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಪೂರ್ವದಲ್ಲಿ ‘ಸಹೃದಯ ಸಂವಹನ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹುಟ್ಟೂರಿನ ಮೇಲಿನ ಅಭಿಮಾನದಿಂದ ತಮ್ಮ ವೃತ್ತಿಯನ್ನು ತ್ಯಜಿಸಿ ಉಪ್ಪಂದಕ್ಕೆ ಬಂದ ನೆಲೆಸಿದ್ದ ಹೊಳ್ಳರು, ಸಾಹಿತ್ಯ ರಚನೆ, ಸಂಘಟನೆ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಈ ಪರಿಸರವನ್ನು ಸಾಂಸ್ಕೃತಿಕ, ಸಾಹಿತ್ತಿಕ ಕೇಂದ್ರವಾಗಿ ಬೆಳೆಸಿದವರು. ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೊಳ್ಳರ ಸಾಧನೆ ಅನನ್ಯವಾದ್ದು ಎಂದು ಹೇಳಿದರು. ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯ ಅಭ್ಯಾಸದಲ್ಲಿ ತೊಡಗಿಕೊಂಡು ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿಯೂ ಪರಿಪೂರ್ಣತೆಯನ್ನು ಪಡೆದು ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ ಅರಬ್ ಸಂಯುಕ್ತ ರಾಷ್ಟ್ರದ ಶಾರ್ಜಾ ಡೆಲ್ಲಿ ಪ್ರೈವೇಟ್ ಸ್ಕೂಲ್ ಗ್ರೇಡ್ 9 ವಿದ್ಯಾರ್ಥಿನಿ ಪ್ರೇರಣಾ ಪೈ. ಮಣಿಪಾಲದ ನಿವಾಸಿ ಶಾರದಾ ಮತ್ತು ಬಾಂಡ್ಯ ಸಂಜೀವ ಪೈ ಇವರ ಮೊಮ್ಮಗಳಾಗಿರುವ ಶಾರ್ಜಾ ನಿವಾಸಿ ರಾಗಿಣಿ ಪೈ ಮತ್ತು ಬಾಂಡ್ಯ ಹರೀಶ್ ಪೈ ದಂಪತಿಯ ಪುತ್ರಿಯಾಗಿರುವ ಪ್ರೇರಣಾ ಇವಳು ತನ್ನ ಐದನೆಯ ವಯಸ್ಸಿನಿಂದಲೇ ನೃತ್ಯ ಅಭ್ಯಾಸದಿಂದ ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿ ಪರಿಪೂರ್ಣತೆಯನ್ನು ಪಡೆದಿದ್ದಾಳೆ. ಪ್ರೇರಣಾ ಪೈ ತನ್ನ ಐದನೇಯ ವಯಸ್ಸಿನಲ್ಲಿ 2007ರಲ್ಲಿ ಶಾರ್ಜಾ ಕೈರಳಿ ಕಲಾ ಕೇಂದ್ರಮ್‌ನಲ್ಲಿ ಗುರು ಮುರಳಿ ಅವರಿಂದ ಪ್ರಾರಂಭವಾದ ಪ್ರಥಮ ಹಂತದ ತರಬೇತಿಯನ್ನು ಪಡೆದು ನಂತರ 2013ರಿಂದ ಶಾರ್ಜಾದ ಪ್ರಸಿದ್ಧ ಕಲಾ ಸಂಸ್ಥೆ ಕ್ಲಾಸಿಕಲ್ ರಿದಂಸ್ ಇದರ ಸ್ಥಾಪಕ ನಿರ್ದೇಶಕಿ ವಿದೂಷಿ ರೋಹಿಣಿ ಅನಂತ ಅವರ ಶಿಷ್ಯೆಯಾಗಿ ಭರತನಾಟ್ಯದಲ್ಲಿ ಐದು ಹಂತಗಳಲ್ಲಿ ಪರೀಕ್ಷೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾಗಿ ಕುಂದಾಪುರ ವ್ಯ. ಸೇ. ಸಹಕಾರಿ ಸಂಘ(ನಿ.) ವಡೇರಹೋಬಳಿ ಶಾಖೆಯ ವ್ಯವಸ್ಥಾಪಕ ಕೆ. ನರಸಿಂಹ ಹೊಳ್ಳ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾಗೇಶ ನಾವಡ, ಕ್ಲಬ್ ಸರ್ವಿಸ್‌ನ ನಿರ್ದೇಶಕರಾಗಿ ಬಿ. ಎಮ್. ಚಂದ್ರಶೇಖರ, ಒಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶಿವಾನಂದ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ದಿನೇಶ್ ಗೋಡೆ, ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕರಾಗಿ ಉಲ್ಲಾಸ್ ಕ್ರಾಸ್ತಾ, ಯೂತ್ ಸರ್ವಿಸ್ ನಿರ್ದೇಶಕರಾಗಿ ರಾಜು ಪೂಜಾರಿ, ಸತೀಶ್ ಎನ್. ಶೇರೆಗಾರ್(ಟಿಆರ್‌ಎಫ್ ಛೇರ್‌ಮೆನ್), ಅಬುಶೇಖ್ ಸಾಹೇಬ್(ಪೋಲಿಯೋ ಪ್ಲಸ್ ಛೇರ್‌ಮೆನ್), ಅಜಯ್ ಹವಲ್ದಾರ್ (ವಾಷಿಂಗ್ ಸ್ಕೂಲ್ ಛೇರ್‌ಮೆನ್), ದಿನಕರ್ ಆರ್ ಶೆಟ್ಟಿ (ಲಿಟ್ರಸಿ ಛೇರ್‌ಮೆನ್), ದಂಡಪಾಣಿಯಾಗಿ ಸದಾನಂದ ಉಡುಪ, ಕೋಶಾಧಿಕಾರಿಯಾಗಿ ಸಿ.ಎಚ್. ಗಣೇಶ್, ಬುಲೆಟಿನ್ ಎಡಿಟರ್ ಗಜಾನನ ಭಟ್, ನಿಯೋಜಿತ ಅಧ್ಯಕ್ಷರಾಗಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಜುಲೈ 3ರಂದು ಸಂಜೆ 7ಗಂಟೆಗೆ ಕೋಟೇಶ್ವರದ ಸಹನಾ ಕನ್‌ವೆನ್‌ಶನ್ ಸೆಂಟರ್‌ನಲ್ಲಿ ಪದಾಪ್ರದಾನ ಸಮಾರಂಭ ನಡೆಯಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆಸುತ್ತಿರುವ ಸಂದರ್ಭ ಮಳೆಗಾಲದಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವುದರಿಂದ ಅವಾಮತರಗಳು ಸೃಷ್ಟಿಯಾಗಿವೆ. ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಅಪಾಯ ಕಾದಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಸಂಬಂಧಿಸಿದವರನ್ನು ಎಚ್ಚರಿಸಿದ್ದಾರೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಗತ್ಯವಿರುವೆಡೆ ಚರಂಡಿ ನಿರ್ಮಿಸದಿರುವುದರಿಂದ ಹೆದ್ದಾರಿಯ ಮೇಲೆಯೇ ಮಳೆನೀರು ಹರಿಯುತ್ತಿದೆ. ಮೋರಿಗಳನ್ನು ಭೂಪ್ರದೇಶದ ಸ್ಥಿತಿಗೆ ಅನುಗುಣವಾಗಿ ನಿರ್ಮಿಸದಿರುವುದರಿಂದ ಅವುಗಳ ಮೂಲಕ ನೀರು ಸರಿಯಾಗಿ ಹರಿದುಹೋಗುತ್ತಿಲ್ಲ. ಇದರಿಂದ ಹಲವು ಕಡೆ ಕೃತಕ ನೆರೆ ಉಂಟಾಗುತ್ತಿದೆ. ಸಂಗ್ರಹವಾದ ನೀರು ಹೆದ್ದಾರಿಯ ಮೇಲೆ ಹರಿಯುವುದಲ್ಲದೆ ಪಕ್ಕದ ಮನೆ, ಅಂಗಡಿ, ರಸ್ತೆಗಳಿಗೆ ನುಗ್ಗುತ್ತಿದೆ. ಇವೆಲ್ಲದರಿಂದ ಹೆದ್ದಾರಿಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಕಾಣಿಸಿಕೊಂಡಿವೆ. ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾಮಗಾರಿಯ ಮೇಲೆ ನಿಗಾ ಇಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತಕ್ಷಣ ಗಮನ ಹರಿಸಿ, ಸುಗಮ ಸಂಚಾರಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗ೦ಗೊಳ್ಳಿ : ಎಲ್ಲರೂ ಪ್ರತಿಭೆಗಳನ್ನು ಹೊಂದಿರುತ್ತಾರೆ. ಆ ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಜೀವನದ ಶ್ರೀಮಂತಿಕೆಯ ಗುಟ್ಟು ಅಡಗಿದೆ ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ 2015-16ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾಲೇಜಿಗೆ ಮೊದಲಿಗರಾಗಿ ಅ೦ಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನ೦ದಿಸುವ ನಿಟ್ಟಿನಲ್ಲಿ ಕಾಲೇಜಿನ ವತಿಯಿ೦ದ ಇಲ್ಲಿನ ರೋಟರಿ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿಗಳ ಅಭಿನ೦ದನಾ ಸಮಾರ೦ಭದಲ್ಲಿ ಮುಖ್ಯ ಅತಿಥಿ ಸ್ಥಾನದಿ೦ದ ಮಾತನಾಡಿದರು. ಕಾಲೇಜಿನ ಪ್ರಾ೦ಶುಪಾಲ ಕವಿತಾ ಎಮ್ ಸಿ ಸಮಾರ೦ಭದ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅ೦ಕಗಳನ್ನು ಪಡೆದ ಪಿಸಿಎಮ್‌ಬಿ ವಿಭಾಗದ ಅಖಿಲೇಶ್ ಖಾರ್ವಿ, ಪಿಸಿಎಮ್‌ಸಿಯ ದೀಕ್ಷಿತ್ ಎಸ್ ಇಬಿಎಸಿಯ ಅಶ್ವಿನಿ ನಾಯಕ್, ಹೆಚ್‌ಇಬಿಎಯ ಬಬಿತಾಶ್ರೀ,ಗಣೇಶ್ ಶೆಣೈ ಮತ್ತು ಕಲಾ ವಿಭಾಗದ ನಿಖಿಲ್ ಖಾರ್ವಿ ಇವರನ್ನು ಈ ಸ೦ದರ್ಭದಲ್ಲಿ ಅಭಿನ೦ದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಜಿ.ಎಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಪುರಸಭೆ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರೋಪ ಪ್ರತ್ಯಾರೋಪ, ಗೌಜ ಗಲಾಟೆಯಲ್ಲಿ ಕಳೆದು ಹೋಯಿತು. ಮಾತಿನ ಚಕಮಕಿಯಲ್ಲಿ ಯಾರು ಏನು ಹೇಳುತ್ತಿದ್ದಾರೆ ಎನ್ನೋದು ತಿಳಿಯದಾಯ್ತು. ಅಂಡರ್ ಗ್ರೌಂಡ್ ಡ್ರೈನೇಜ್ ಸಿಷ್ಟಮ್ ಬಗ್ಗೆ ಸ್ವಲ್ಪ ಹೊತ್ತು ಅರ್ಥಪೂರ್ಣ ಚರ್ಚೆ ನಡೆದಿದ್ದು, ಬಿಟ್ಟರೆ, ಹತ್ತಾರು ಸಮಸ್ಯೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಸ್ಥಳ ವ್ಯಥಾ ಆರೋಪ ಪ್ರತ್ಯಾರೋಪದಲ್ಲಿ ಕಳದುಹೋಯಿತು. ಕುಂದಾಪುರ ಪುರಸಭೆಯಲ್ಲಿ ಆರಂಭವಾದ ಅಂಡರ್ ಗ್ರೈಂಡ್ ಡ್ರೈನೇಜ್ ಸಿಸ್ಟಮ್ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತು. ಯುಜಿಡಿ ಯೋಜನೆಗೆ ಬೃಹತ್ ಅನುದಾನ ನೀಡಲಾಗಿದ್ದು, ಕಳಪೆ ಕಾಮಗಾರಿ ಕುಂದಾಪುರ ಪುರಸಭೆಗೆ ಕೆಟ್ಟ ಹೆಸರು ತರುತ್ತಿದೆ. ಇದರಿಂದ ಪುರಸಭೆ ಸದಸ್ಯರ ಇಮೇಜ್ ಹಾಳಾಗಲಿದ್ದು, ಕಾಮಗಾರ ಬಿಡಬೇಕಾಗುತ್ತದೆ ಎಂದು ರಾಜೇಶ್ ಕಾವೇರಿ ಅಭಿಪ್ರಾಯಪಟ್ಟರು. ಯುಪಿಬಿ ಯೋಜನೆ ನಿರಾಕರಿಸಿದರೆ ಮತ್ತೆ ಯೋಜನೆ ಸಿಗೋದು ಕಷ್ಟ. ಯುಡಿಜಿ ಕಳಪೆ ಕಾಮಗಾರಿ ಮಾಡದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವ ಜೊತೆ ಸಭೆ ನಡೆಸಿ, ಅವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಪ.ಪೂ ಕಾಲೇಜಿನಲ್ಲಿ 2015-16 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಟಿ. ಆರ್. ಉಮ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರ ಸಾಧನೆಯನ್ನು ಮತ್ತು ಉಪನ್ಯಾಸಕರ ಶ್ರಮವನ್ನು ಶ್ಲಾಘಿಸಿದರು. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಶ್ರಮ ವಹಿಸಿ ಯಶಸ್ಸನ್ನು ಸಾಧಿಸಬೇಕೆಂದು ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಎಂ ಗೋವಿಂದ ನಾಯ್ಕನಕಟ್ಟೆ ಹಾಗೂ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾಲೇಜಿನ ಪ್ರಾಂಶುಪಾಲ ಎಸ್.ಅರುಣ್ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕರು, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಸುಪ್ರೀಯ ಕೆ.ಎಲ್ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಾಧಿಕಾ ನಿರೂಪಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಚನಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾಸರಗೋಡು: ಪತ್ರಕರ್ತರ ವೇದಿಕೆ ರಿ. ಬೆಂಗಳೂರು, ಉಡುಪಿ-ದ.ಕ ಜಿಲ್ಲಾ ಘಟಕ ಕಳೆದ 8 ವರ್ಷಗಳಿಂದ ಪತ್ರಿಕಾ ದಿನದ ಅಂಗವಾಗಿ ಯಾಶಸ್ವಿಯಾಗಿ ಆಯೋಜಿಸುತ್ತಿರುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಈ ವರ್ಷ ಡೆಕ್ಕನ್ ಹೆರಾಲ್ಡ್, ನವಭಾರತ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಅಪೂರ್ವ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ಕಾಸರಗೋಡು ಶಿರಿಯಾದ ಮಲಾರ್ ಜಯರಾಮ ರೈಗಳ ನಿವಾಸದಲ್ಲಿ ನಡೆದ ವಿನೂತನ ಕಾರ್ಯಕ್ರಮದಲ್ಲಿ ಸಂಘಟಕ, ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಟ ಪುನರೂರು ಅವರು ರೈಗಳಿಗೆ ಲೇಖನ ಪರಿಕರಗಳು ಹಾಗೂ ಪ್ರಶಸ್ತಿ ಫಲಕವನ್ನಿತ್ತು ಗೌರವಿಸಿದರು. ಬಳಿಕ ಹರಿಕೃಷ್ಟ ಪುನರೂರು ಮಾತನಾಡಿ, ಮಲಾರು ಜಯರಾಮ ರೈ ಅವರಂತಹ ಹಿರಿಯ ಹಾಗೂ ಕರ್ತವ್ಯ ನಿಷ್ಠ ಪತ್ರಕರ್ತರನ್ನು ಗುರುತಿಸಿ ಗೌರವಿಸಿತ್ತಿರುವುದು ಶ್ಲಾಘನಾರ್ಹ. ಶೇಖರ ಅಜೆಕಾರು ಅವರು ಪತ್ರಕರ್ತರ ವೇದಿಕೆ ಮೂಲಕ ಹಲವಾರು ಹಿರಿಯ ಪತ್ರಕರ್ತರು ಹಾಗೂ ವೃತ್ತಿನಿರತ ಪತ್ರಕರ್ತರ ಮುಖಮುಖಿಯಾಗಿಸುವ ಕಾರ್ಯ ಮಾಡಿ ಕಾರ್ಯಕ್ರಮಕ್ಕೊಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳು ಬಣ್ಣಗಳ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು.ರಂಗಿ ತರಂಗದ ವಿಷಯವನ್ನಾದರಿಸಿ ಕಟ್ಟಡವನ್ನು ರಂಗುರಂಗಾಗಿ ಅಲಂಕರಿಸಲಾಗಿತ್ತು. ಮಕ್ಕಳೆಲ್ಲರೂ ಬಣ್ಣಬಣ್ಣದ ಉಡುಪುಗಳಲ್ಲಿ ರಂಜಿಸುತ್ತಿದ್ದರು.ಶಿಕ್ಷಕಿಯರು ಬಣ್ಣಗಳ ವಿಧಗಳಾದ ಪ್ರಾಥಮಿಕ,ಮಾಧ್ಯಮಿಕ ಮತ್ತು ನೈಸರ್ಗಿಕ ಬಣ್ಣಗಳ ಬಗ್ಗೆ ವಸ್ತುಸಮೇತ ಸಾದೃಶ್ಯವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮ ಎಸ್.ಶೆಟ್ಟಿ ,ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕಿಯರೂ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿಗಳ ಮಂತ್ರಿ ಮಂಡಲ ಹಾಗೂ ಪಠ್ಯ ಪೂರಕ ಚಟುವಟಿಕೆಗಳ ಕಾರ್ಯಕ್ರಮ ಸಿಸಿಎಯನ್ನು ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಉದ್ಘಾಟಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಪಂಚದಲ್ಲಿ ಅಗ್ರಸ್ಥಾನದಲಿ ಭಾರತಕ್ಕೆ ಅದೇ ಕಾರಣಕ್ಕೆ ವಿಶೇಷ ಗೌರವ ದೊರಕುತ್ತಿದೆ. ಪ್ರಜೆಗಳೇ ಪ್ರಭುಗಳು ಎನ್ನುವ ಆಶಯದಲ್ಲಿ ಸಂವಿಧಾನ ಮತ್ತು ಶಾಸನಗಳ ಜೊತೆಯಲ್ಲಿ ದೇಶವನ್ನು ಮುನ್ನಡೆಸುವಾಗ ಪ್ರತಿಯೊಬ್ಬ ಪ್ರಜೆಯೂ ನಾಯಕನಾಗುತ್ತಾನೆ. ಅದೇ ಮಾದರಿಯನ್ನು ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡಾಗ ಉತ್ತವ ಸಮಾಜ ನಿರ್ಮಾಣ ಸಾಧ್ಯ ಎಂದರು. ಶಿಕ್ಷಣದ ಜೊತೆಗೆ ನೈತಿಕ ಹಾಗೂ ಮೌಲಿಕ ಶಿಕ್ಷಣವನ್ನು ಅರಿತುಕೊಂಡು ಅನುಸರಿಸಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದು ಸಾಧ್ಯ ಎಂದರು. ನಂತರ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಎಲ್ದೋ ಪುತ್ತನ್ ಕಂಡತ್ತಿಲ್ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಆಂಗ್ಲ ಭಾಷೆ ಎನ್ನುವುದು ಪ್ರತಿಯೊಬ್ಬನ ಮುಂದಿನ ಬದುಕಿಗೆ ಅಗತ್ಯವಾಗಿದ್ದು, ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಾತನಾಡುವುದರ…

Read More