ಕುಂದಾಪ್ರ ಡಆಟ್ ಕಾಂ ಸುದ್ದಿ. ಕೋಟ: ಪತ್ರಿಕಾ ವರದಿಗಾರನ ಮೇಲೆ ಪೂರ್ವದ್ವೇಷದಿಂದ ಜಾತಿನಿಂದನೆಯ ಸುಳ್ಳು ದೂರು ದಾಖಲಿಸಿದ್ದು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ, ಮುಂದೆ ವರದಿಗಾರರಿಗೆ ನಿರ್ಭೀತಿಯಿಂದ ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಡಿವೈಎಸ್‌ಪಿಯವರಿಗೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್‌ರವರ ಮೂಲಕ ಮನವಿ ಮಾಡಲಾಯಿತು. ಶಿರಿಯಾರ ಪಂಚಾಯಿತಿ ವ್ಯಾಪ್ತಿಯ ಮದಗದಿಂದ ಅಕ್ರಮ ಮಣ್ಣು ಸಾಗಾಟವಾಗುತ್ತಿರುವ ಕುರಿತು ವರದಿಗಾರ ಗಣೇಶ್ ಈ ಹಿಂದೆ ವರದಿ ಮಾಡಿದ್ದರು. ಈ ವರದಿಯಲ್ಲಿ ಅಧ್ಯಕ್ಷರ ಹೇಳಿಕೆಯನ್ನು ಪಡೆದಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡಿದ್ದ ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರು ಮುಂದೆ ಕೇಸ್ ಹಾಕುವುದಾಗಿ ವರದಿಗಾರರಿಗೆ ಸಾರ್ವಜನಿಕವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಅವಕಾಶಕ್ಕಾಗಿ ಕಾದ ಪಂಚಾಯಿತಿ ಅಧ್ಯಕ್ಷೆ ನಡೆಯದೆ ಇರುವ ಘಟನೆಯಲ್ಲಿ ಸೃಷ್ಠಿಸಿ ವರದಿಗಾರ ಗಣೇಶ್ ಸಾಬ್ರಕಟ್ಟೆಯವರ ಮೇಲೆ ಜಾತಿನಿಂದನೆಯ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘವು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಡುಪಿ ಪೂರ್ಣಪ್ರಜ್ಞಾ ಕಾಲೇಜು ವಿದ್ಯಾರ್ಥಿನಿ ವೃಂದಾ ವಿ. ಕಿಣಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ಶೇ.97.5 ಅಂಕಗಳನ್ನು ಪಡೆದು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕನ್ನಡ, ಅಕೌಂಟೆನ್ಸಿ, ಸ್ಟಾಟ್, ಬಿಜಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಶೇ.100 ಅಂಕಪಡೆದು ಒಟ್ಟು 585 ಅಂಕ ಪಡೆದಿದ್ದಳು. ವೃಂದಾ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಮತ್ತು ನಯನ ವಿ. ಕಿಣಿ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಯಾರ ಬದುಕು ಹೇಗೆ ತಿರುವು ಪಡೆಯುತ್ತದೆ ಎನ್ನೋದಕ್ಕೆ ಬಾಲಕಿ ಬದಲಾದ ಜೀವನವೇ ಸಾಕ್ಷಿ. ಕುಂದಾಪುರ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಎಸ್ಸೆಸ್‌ಎಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಾಸ್! ಕೆದೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕಾವೇರಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿ. ಕಳೆದ ಏಳು ವರ್ಷದ ಹಿಂದೆ ತಾಯಿ ಜೊತೆ ಕುಂದಾಪುರ ಶಾಸ್ತ್ರಿ ವೃತ್ತ, ಬಸ್ ಸ್ಟ್ಯಾಂಡ್ ಬಳಿ ಭಿಕ್ಷೆ ಬೀಡುತ್ತಿದ್ದ ಈಕೆ ಕೆದೂರು ಸ್ಪೂರ್ತಿಧಾಮ ಸೇರಿದ ನಂತರ ಬದುಕೇ ಬದಲಾಯಿತು. ಕಾವೇರಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಹುಟ್ಟೂರು. ತಾಯಿ ರತ್ನಾ, ತಂದೆ ಗಂಗಣ್ಣ. ತಂದೆ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ತೀರಿಕೊಂಡಿದ್ದು, ಇಬ್ಬರ ತಮ್ಮಂದಿರ ಜೊತೆ ಸ್ಪೂರ್ತಿಯಲ್ಲಿದ್ದಾಳೆ. ಒಬ್ಬ ತಮ್ಮ 1ನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬ ತಮ್ಮ 3ನೇ ತರಗತಿ ವಿದ್ಯಾರ್ಥಿ. 2008-09ರಲ್ಲಿ ಸ್ಪೂರ್ತಿಧಾಮ ಸೇರಿದ ಕಾವೇರಿ ಕೆದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಗೆ ದಾಖಲಾದ ನಂತರ ಯಾವ ತರಗತಿಯಲ್ಲೂ ಫೇಲ್ ಆಗದೆ ಪಾಸಾಗುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೆರ್ಗಾಲು ಗ್ರಾಪಂ ವ್ಯಾಪ್ತಿಯ ನಾಯ್ಕನಕಟ್ಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್‌ನ ವಿಶೇಷ ಮಹಾಸಭೆಯು ಸಂಜೆ ಜರಗಿತು. ಸುಮಾರು 800 ನೂರು ವರ್ಷ ಇತಿಹಾಸವಿರುವ ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಿದ್ದು, ಈಗ ದೇವಸ್ಥಾನವನ್ನು ಅಂದಾಜು ವೆಚ್ಚ ರೂ. 35 ಲಕ್ಷ ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲು ಈ ಹಿಂದೆ ಸಮಾಜ ಬಾಂಧವರು ತೀರ್ಮಾನಿಸಿದಂತೆ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ನೂತನ ಶ್ರೀ ವೆಂಕಟರಮಣ ದೇವಾಲಯವನ್ನು ಜುಲೈ ಮೊದಲ ವಾರದ ಮೂರು ದಿನಗಳು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುನಃಪ್ರತಿಷ್ಟಾ ಮಹೋತ್ಸವ ಆಚರಿಸುವಂತೆ ನಿರ್ಧರಿಸಲಾಯಿತು. ಸೇವಾ ಸಮಿತಿಯ ಟ್ರಸ್ಟ್‌ನ ಅಧ್ಯಕ್ಷ ದಾಮೋದರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸವದ ಕಾಲದಲ್ಲಿ ದೇವಸ್ಥಾನದಲ್ಲಿ ಜರಗುವ ಎಲ್ಲಾ ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಗನ ಸಾವಿನಿಂದ ತೀವ್ರವಾಗಿ ನೊಂದಿದ್ದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಾಡ ಗ್ರಾಮದಲ್ಲಿ ವರದಿಯಾಗಿದೆ. ನಾಡದ ಚಿಕ್ಕು ಮಡಿವಾಳ್ತಿ (೪೮) ಸಾವಿಗೆ ಶರಣಾದವರು. ತಿಂಗಳ ಹಿಂದೆ ಮನೆಯ ಸಮೀಪದ ಹಾಡಿಯೊಂದರಲ್ಲಿ ಮಗ ಮಂಜುನಾಥ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಇರುವಾಗ ಇದ್ದ ಒಬ್ಬನೇ ಮಗ ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ಬಳಿಕ ತೀವೃ ನೊಂದುಕೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಗ ಮನೆಯಲ್ಲಿ ಇದ್ದವನು ಏಕಾಏಕಿ ನೇಣಿಗೆ ಶರಣಾಗಿದ್ದರಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕು ಅವರಿಗೆ ದಿಕ್ಕು ತೋಚದಂತಾಗಿತ್ತು. ಆತನ ಸಾವಿನ ನಂತರ ಅವರನ್ನು ಕೆಲದಿನಗಳ ಕಾಲ ಬೆಂಗಳೂರಿನ ಸಂಬಂಧಿಯೋರ್ವರ ಮನೆಗೆ ಕರೆದೊಯ್ಯಲಾಗಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ ಮರಳಿ ಕೋಟೇಶ್ವರದ ತನ್ನ ತಂಗಿಯ ಮನೆಗೆ ಬಂದ ಅವರು ಭಾನುವಾರ ಬೆಳಿಗ್ಗೆ ನಾಡದ ತನ್ನ ಮನೆಗೆ ಮರಳಿ ಬಂದಿದ್ದರು. ಆಕೆ ಮಧ್ಯಾಹ್ನದ ವೇಳೆಗೆ ಮನೆಯ ಮಾಳಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರಗತಿಪರ ಕೃಷಿಕ ಹಿರಿಯ ಕಾಂಗ್ರೇಸಿಗ ಕಕ್ಕುಂಜೆ ರಾಧಾಕೃಷ್ಣ ಅಡಿಗ (77) ರವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು ನಾಲ್ಕು ಅವಧಿಗೆ ಕುಂದಾಪುರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿಯಾಗಿ, ಎ.ಪಿ.ಯಂ.ಸಿ ಅಧ್ಯಕ್ಷರಾಗಿ, ರಿಕ್ಷಾ-ಟ್ಯಾಕ್ಸಿ-ಮೆಟಾಡೋರ್ ಯೂನಿಯನ್ ಅಧ್ಯಕ್ಷರಾಗಿ ತೆಂಗಿನ ನಾರು ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅಡಿಗರು ಉತ್ತಮ ಕ್ರೀಡಾಪಟುವಾಗಿದ್ದರು. ಮೃತರು ಪತ್ನಿ ಶ್ರೀಮತಿ ರಾಣಿ ಅಡಿಗ ಸಹಿತ ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ. ಅಡಿಗರ ನಿಧನದ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜನಾರ್ದನ್ ಪೂಜಾರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರ ಪ್ರಾಧಿಕಾರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಭಾಗದ ಜನರು ನೆಮ್ಮದಿಯ ಜೀವನ ನಡೆಸುವಂತಾಗಬೇಕು, ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕೆಂಬ ನೆಲೆಯಲ್ಲಿ ಸರಕಾರ ಯೋಜನೆ ರೂಪಿಸಿಕೊಳ್ಳುವ ಮೊದಲು ಖಾವಂದರು ಹಲವಾರು ಸಮಾಜಮುಖಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಕ್ಷೇತ್ರದ ವತಿಯಿಂದ ಚಾಲನೆ ನೀಡುತ್ತಿದ್ದಾರೆ. ಇವರ ಎಲ್ಲಾ ಕಾರ್ಯಗಳು ಇತಿಹಾಸ ಸೃಷ್ಠಿಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಖಂಬದಕೋಣೆ ನಿರ್ಮಲ ಸಭಾಭವನದಲ್ಲಿ ಖಂಬದಕೋಣೆ ವಲಯದ ಹೇರಂಜಾಲು, ಕಾಲ್ತೋಡು, ಖಂಬದಕೋಣೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾವು ಪ್ರಕೃತಿಯ ಹಾಗೂ ಸಮಾಜದ ಋಣದಲ್ಲಿದ್ದೇವೆ. ಪ್ರಕೃತಿಯ ಉಳಿವಿನಲ್ಲಿ ನಮ್ಮೆಲ್ಲರ ಬದುಕಿದೆ. ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಕುಡಿಯುವ ನೀರಿಗೂ ತಾತ್ವಾರ ಬಂದೊದಗಿದೆ. ಹೀಗಾಗಿ ನೀರಿನ ಮಿತ ಬಳಕೆ, ಮಳೆಕೊಯ್ಲು, ನೀರು ಇಂಗಿಸುವಿಕೆ ಇಂತಹ ಅಗತ್ಯ ಕಾರ್ಯಕ್ರಮಗಳಿಂದ ಜನಜಾಗೃತಿ ಮೂಡಿಸುವ ಕೆಲಸ ಒಕ್ಕೂಟಗಳಿಂದಾಗಬೇಕಿದೆ. ನಮ್ಮ ಪ್ರಗತಿ ಸಾಧನೆಗಾಗಿ ಕೃಷಿ, ಹೈನುಗಾರಿಕೆಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ. ಇದರಿಂದ ಕುಟುಂಬದ…
ಭಟ್ಕಳದಲ್ಲಿ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ಶಾಖೆ ಲೋಕಾರ್ಪಣೆ ಕುಂದಾಪ್ರ ಡಾಟ್ ಕಾಂ ಸುದ್ದಿ ಭಟ್ಕಳ: ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಭಿಗಳಾಗುವತ್ತ ಗಮನ ಹರಿಸುವಂತಾಗಬೇಕು. ಸಂಘಗಳ ಮೂಲಕ ಪಡೆಯುವ ಸಾಲ ಶಿಕ್ಷಣ ಆಥವಾ ಇನ್ನಿತರೇ ನಿರ್ದಿಷ್ಟ ಉದ್ದೇಶಗಳಿಗೆ ವಿನಿಯೋಗವಾಗಿ ಆ ಉದ್ದೇಶ ಈಡೇರಿದರೇ ಸಾಲ ನೀಡುವುದು ಸದ್ವಿನಿಯೋಗವಾದಂತಾಗುವುದು ಎಂದು ಕಾರಾವಾರ ಜಿಪಂ ಅಧ್ಯಕ್ಷ ಜಯಶ್ರೀ ಮೊಗೇರ ಹೇಳಿದರು. ಅವರು ಭಟ್ಕಳದಲ್ಲಿ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ಶಾಖೆ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಕಮಲಾವತಿ ಮತ್ತು ರಾಮನಾಥ ಶ್ಯಾನುಭಾಗ ಸಭಾಗೃಹದಲ್ಲಿ ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ 1999ರಲ್ಲಿ ಸ್ವಾವಲಂಭಿ ಬದುಕಿಗೆ ಅಗತ್ಯವಾದ ಆರ್ಥಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಗೊಂಡ ನವೋದಯ ಸೌಹಾರ್ದ ಸಹಕಾರಿಯು ಯಶಸ್ವಿಯಾಗಿ ಮುನ್ನಡೆದು ಇಂದಿಗೂ ತನ್ನ ವಿಶ್ವಾಸವನ್ನು ಉಳಿಸಿಕೊಂಡು ಪ್ರಗತಿ…
ಸಿಬಿಎಸ್‌ಇ ಪಠ್ಯಕ್ರಮದ ಗುರುಕುಲದಲ್ಲಿ ಸತತ 6ನೇ ಬಾರಿ ಶತಕ ಸಾಧನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರತಿಷ್ಠಿತ ಕೋಟೆಶ್ವರ ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಶಾಲೆಯ 10ನೇ ತರಗತಿ ಸಿ.ಬಿ.ಎಸ್.ಇ ಪಠ್ಯಕ್ರಮದ ವಿದ್ಯಾರ್ಥಿಗಳು ಸತತ 6ನೇ ಬಾರಿಗೆ ಶೇ.100 ಫಲಿತಾಂಶವನ್ನು ದಾಖಲಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 64ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 13 ವಿದ್ಯಾರ್ಥಿಗಳು 10 ಸಿ.ಜಿ.ಪಿ.ಎ (ಅತ್ಯುನ್ನತ ಶ್ರೇಣಿ), 17 ವಿದ್ಯಾರ್ಥಿಗಳು 9 ಸಿ.ಜಿ.ಪಿ.ಎ ಮೇಲ್ಪಟ್ಟು ವಿಶಿಷ್ಠ ಶ್ರೇಣಿಯಲ್ಲಿ, ಹಾಗೂ ಹಾಜರಾದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ದಶಮಾನೋತ್ಸವದ ಹೊಸ್ತಿಲಲ್ಲಿರುವ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಗುರುಕುಲ ಶಾಲೆಯಲ್ಲಿ ಈ ಭಾರಿ ದಾಖಲೆಯ ಫಲಿತಾಂಶವನ್ನು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರಿಗೆ, ಸಂಸ್ಥೆಯ ಸಂಸ್ಥಾಪಕರಾದ ಬಿ. ಅಪ್ಪಣ್ಣ ಹೆಗ್ಡೆ, ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್. ಶೆಟ್ಟಿಯವರು ಅಭಿನಂದಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಅವರು ನೋಡನೋಡುತ್ತಿದ್ದಂತೆ ಚಕಚಕನೆ ಕಟ್ಟಡವನ್ನೇರಿ ನೆರೆದಿದ್ದವರಲ್ಲಿ ಬೆರಗು ಮೂಡಿಸಿದರು. ಆರು ಮಹಡಿಯ ಕಟ್ಟಡವನ್ನು ಆರು ನಿಮಿಷಗಳಲ್ಲಿ ಸರಾಗವಾಗಿ ಏರಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹೀಗೆ ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಇರುವ ಜೆ.ಕೆ ಟವರ್ಸ್ ಏರಿ ತಮ್ಮ ಸಾಹಸ ಪ್ರದರ್ಶಿಸಿದವರು ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಮ ಮತ್ತವರ ಅಣ್ಣನ ಮಗ ಮಾಸ್ಟರ್ ಅಕ್ಷಯ್. ಕುಂದಾಪುರ ಟಿಟಿ ರಸ್ತೆಯ ಶ್ರೀ ವಿಘ್ನೇಶ್ವರ ಯುವಕ ಸಂಘ ರಜತ ಸಂಭ್ರಮಕ್ಕೆ ಆಗಮಿಸಿದ ಸಂದರ್ಭ ಸಾಹಸ ಕಾರ್ಯ ನಡೆಸಿದರು. ನೆಲ ಅಂತಸ್ತಿನಿಂದ ಏರಿದ ಜ್ಯೋತಿರಾಜ್ ಹಾಗೂ ಅವರ ಅಣ್ಣನ ಮಗ ನೋಡ ನೋಡುತ್ತಿದ್ದಂತೆ ಆರು ಮಹಡಿಗಳ ಜೆ.ಕೆ. ಟವರ್ಸ್ ಏರಿ, ಕೆಳಕ್ಕಿಳಿದರು. ಸಲೀಸಾಗಿ ಕಟ್ಟಡ ಏರಿದ ಕೋತಿರಾಮ ಅದೇ ವೇಗದಲ್ಲಿ ಕೆಳಗಿಳಿದು ಅಚ್ಚರಿ ಮೂಡಿಸಿದರು. ಸಾಹಸ ಕಾರ್ಯಕ್ಕೆ ಶಾಸ್ತ್ರೀ ವೃತ್ತದ ಸುತ್ತಮುತ್ತ ಅಪಾರ ಜನಸಂದಣಿ ನೆರೆದಿತ್ತು. ಕಟ್ಟಡದಿಂದ ಕೆಳಗಿಳಿಯುತ್ತಿದ್ದಂತೆ ಜನರು ಅಭಿನಂದನೆ ಮಹಾಪೂರ ಹರಿಸಿದರು. ಜ್ಯೋತಿರಾಜ್ ಅವರ ಸಾಹಸ ಕಾರ್ಯ ವೀಕ್ಷಿಸಲೆಂದು ಬಂದ…
