Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು 98.68% ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 76 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 33 ವಿಶಿಷ್ಟ ಶ್ರೇಣಿ, 41 ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕುಮಾರಿ ಸಹನಾ ಭಟ್ ಕೆ (581) ಹಾಗೂ ವಿಜ್ಞಾನ ವಿಭಾಗದಲ್ಲಿ ಕುಮಾರಿ ಚೈತನ್ಯಲಕ್ಷ್ಮಿ (572) ಪ್ರಥಮ ಸ್ಥಾನ ಗಳಿಸಿರುತ್ತಾರೆ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರತಿಶತ 100 ಫಲಿತಾಂಶ ಪಡೆದಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, 85% ಫತಿತಾಂಶ ದಾಖಲಾಗಿದೆ. ಪರಿಕ್ಷೇಗೆ ಹಾಜರಾದ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಒಟ್ಟು 475 ವಿದ್ಯಾರ್ಥಿಗಳ ಪೈಕಿ, 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 256 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 87 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.  ವಿಶಿಷ್ಟ ಸಾಧನೆಗೈದ ಕಾಲೇಜಿಗೆ ಅಗ್ರಸ್ಥಾನಿ ವಿದ್ಯಾರ್ಥಿಗಳಾದ ಶರತ್ ಪಿ. 570 ರಮ್ಯಾ 568, ಎ. ನವ್ಯ 561, ದೇವರಾಜ್ 561 ರಾಜೇಶ್ ಪೂಜಾರಿ 560 ಅಂಕ ಪಡೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಜಿಎಸ್‌ವಿಎಸ್ ಅಸೋಶಿಯೇಶನ್ ಆಡಳಿತಕ್ಕೆ ಒಳಪಟ್ಟಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಇತ್ತೀಚಿಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಶೇ.88 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 176 ವಿದ್ಯಾರ್ಥಿಗಳ ಪೈಕಿ 155 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 97 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಕೃತದಲ್ಲಿ ಏಳು ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನದಲ್ಲಿ ಮೂವರು ವಿದ್ಯಾರ್ಥಿಗಳು ಮತ್ತು ರಸಾಯನಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಶಿಷ್ಟ ಶ್ರೇಣೀಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ : ಅಖಿಲೇಶ್ ಖಾರ್ವಿ – 573, ಕಾರ್ತಿಕೇಯ – 554, ದೀಕ್ಷಿತ್ ಎಸ್ – 553, ಕಾರ್ತಿಕ್ ಕುಮಾರ್ – 541, ದೀಪಿಕಾ ಕೆ – 542, ಅಭಿಷೇಕ್ – 535, ಶಾಝಿಯಾ – 511 ವಾಣಿಜ್ಯ ವಿಭಾಗ : ಅಶ್ವಿನಿ ನಾಯಕ್ – 565, ಪ್ರಸಾದ್ – 539, ಗಣೇಶ ಶೆಣೈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಜ್ಯದಲ್ಲೇ ಗರಿಷ್ಠ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಹೊಂದಿರುವ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.99.20 ಫಲಿತಾಂಶ ಪಡೆದಿದೆ. ಇದರೊಂದಿಗೆ ಪಡೆದಿದ್ದು ಕಳೆದ 8 ವರ್ಷಗಳಿಂದ 99 ಶೇ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲೇಜಿನಿಂದ ಒಟ್ಟು 4,285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 4,251 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಶೇ 99.20 ಫಲಿತಾಂಶ ಕಾಮರ್ಸ್ ‘ಡಬಲ್’ರ್ಯಾಂಕ್ ಸಾಧನೆವಿಜ್ಞಾನ ವಿಭಾಗದಲ್ಲಿ 3,409 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3,386 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.33 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 815 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 806 ವಿದ್ಯಾರ್ಥಿಗಳು ಉತ್ರ್ತೀಣರಾಗುವುದರೊಂದಿಗೆ ಶೇ.98.90 ಫಲಿತಾಂಶ ಲಭಿಸಿದೆ. 61 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಹಾಜರಾಗಿದ್ದು, 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ 96.72 ಫಲಿತಾಂಶ ಗಳಿಸಿದೆ. ವಾಣಿಜ್ಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 98.33% ಅಂಕಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾಳೆ. ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ, ಸಳ್ವಾಡಿಯ ಶಹರಿ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 590 ಅಂಕಗಳಿಸಿದ ಪ್ರತಿಭಾನ್ವಿತೆ. ತಾಲೂಕಿನ ಕಾಳವಾರ ಗ್ರಾಮದ ಸಳ್ವಾಡಿ ನಡುಮನೆಯಲ್ಲಿ ನೆಲೆಸಿರುವ ಬಿ. ಸದಾನಂದ ಶೆಟ್ಟಿ ಆಲೂರು ಹಾಗೂ ಶಾಂತಾ ಎಸ್. ಶೆಟ್ಟಿ ದಂಪತಿಗಳ ಏಕೈಕ ಪುತ್ರಿಯಾದ ಶಹರಿ ಶೆಟ್ಟಿ ಬಾಲ್ಯದಿಂದಲ್ಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈಯುತ್ತಲೇ ಬಂದಿದ್ದಾಳೆ. ಎಸ್.ಎಸ್.ಎಲ್‌ಸಿಯಲ್ಲಿ 98.54% ಅಂಕದೊಂದಿಗೆ ರ‍್ಯಾಂಕ್ ಪಡೆದಿದ್ದ ಶಹರಿ, ಪ್ರಥಮ ಪಿಯುಸಿಯಲ್ಲಿಯೂ 98.56% ಅಂಕಗಳಿಸಿ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಸಾಧನೆಗೈಯುವ ಸೂಚನೆ ನೀಡಿದ್ದಳು. ಕಾಳಾವರದ ಸಳ್ವಾಡಿ ಗ್ರಾಮದಿಂದ ಕಾಲೇಜಿಗೆ ತೆರಳಿದರೂ, ಯಾವುದೇ ಟ್ಯೂಷನ್ ಪಡೆಯದೇ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಳೆ. ಪಠ್ಯಪುಸ್ತಕ ಓದಿನ ಜೊತೆಗೆ ಕಥೆ, ಕಾದಂಬರಿಗಳನ್ನು ಓದುವುದರಲ್ಲಿಯೂ ಆಕೆಗೆ ಅತೀವ ಆಸಕ್ತಿ ಹೊಂದಿದ್ದಾಳೆ. ರ‍್ಯಾಂಕ್ ಗಳಿಸಿರುವ ಬಗ್ಗೆ ‘ಕುಂದಾಪ್ರ ಡಾಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಗುರುಕುಲ ಪಿಯು ಕಾಲೇಜಿನಲ್ಲಿ ಪ್ರಸ್ತತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಎಲ್ಲಾ ತೇರ್ಗಡೆ ಹೊಂದುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ. ತೇರ್ಗಡೆಹೊಂದಿದವರ ಪೈಕಿ ೯ ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರೇ, ಉಳಿದವರು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ದ್ವಿತೀಯ ಪ್ರಿಯುಸಿ ವಿದ್ಯಾರ್ಥಿಗಳಾದ ರೆನ್ವಿಕ್ 93.8%, ವಿಲ್ಶಾ93.6 %, ಸಾತ್ವಿಕ್ 93.5%, ಪ್ರಜ್ವಲ್ 89.5%, ಚಂದನ್ 86.6%, ವೈಷ್ಣವಿ 86.3%, ಒಲ್ವಿಯಾ 85.8%, ಜಾಸ್ಮಿನ್ 85.3%, ಸಿದ್ದಾರ್ಥ್ 85% ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾಧನೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಅಪ್ಪಣ್ಣ ಹೆಗ್ಡೆ, ನಿರ್ದೇಶಕರುಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್. ಶೆಟ್ಟಿ ಅಭಿನಂದಿಸಿದ್ದಾರೆ.

Read More

ಕುಂದಾಪುರ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ಅಕ್ಷಯ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಟ್ಯೂಷನ್‌ಗೆ ತೆರಳಿಲ್ಲ. ಓದಲು ಟೈಮ್ ಟೇಬಲ್ ಕೂಡ ಹಾಕಿಕೊಂಡಿಲ್ಲ. ಆದರೇನಂತೆ ನಿಷ್ಠೆಯಿಂದಲೇ ಓದಿ ಶೇ.98.83 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ ಕುಂದಾಪುರ ಎಜುಕೇಶ್‌ನ ಟ್ರಸ್ಟ್ ಆಡಳಿತಕ್ಕೊಳಪಟ್ಟ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಕ್ಷಯ ಜಿ. ರಾವ್ ಸಿದ್ದಾಪುರ ಜನ್ಸಾಲೆಯ ವಕೀಲಿ ವೃತ್ತಿಯಲ್ಲಿರುವ ಗುರುಮೂರ್ತಿ ರಾವ್ ಹಾಗೂ ಗೀತಾ ದಂಪತಿಗಳ ದ್ವಿತೀಯ ಪುತ್ರನಾದ ಅಕ್ಷಯ ಜಿ. ರಾವ್, 593 ಅಂಕ ಗಳಿಸಿ ರಾಜ್ಯಕ್ಕೇ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ. ಆಕ್ಷಯ್ ಅವರ ಸಹೋದರಿ ಆಶ್ರೀತಾ ರಾವ್, ಆರ್.ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಂದಲೂ ಓದಿನಲ್ಲಿ ನಿಪುಣನಾಗರುವ ಅಕ್ಷಯ ಎಸ್.ಎಸ್‌ಎಲ್.ಸಿಯಲ್ಲಿಯೂ 96% ಅಂಕಗಳಿದ್ದನು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿಯೂ 96% ಅಂಕಗಳಿಸಿ ಉತ್ತಮ ಸಾಧನೆಗೈಯುವ ಭರವಸೆ ಹುಟ್ಟುಹಾಕಿದ್ದ. ಇದೀಗ ದ್ವಿತೀಯ ಪಿಯುಸಿಯಲ್ಲಿ ಟ್ಯೂಷನ್ ಪಡೆಯದೇ, ಸ್ವಂತ ಪರಿಶ್ರಮದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕುಂದಾಪುರ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಿವೇಕ್ ಎಚ್. 85% ಅಂಕಗಳಿಸುವ ಮೂಲಕ ಪ್ರದಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿವೇಕ್ ಹೆಚ್. ಅಂಚೆ ಇಲಾಖೆಯ ನೌಕರ ಹೊಸನಗರದ ಹಿರಿಯಣ್ಣ ಹಾಗೂ ಸುವರ್ಣ ದಂಪತಿಗಳ ಪುತ್ರ. ವಿವೇಕ ಅವರನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಕುಟುಂಬಿಕರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಎಂಜಿಎಂ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಭಿಲಾಷ ಎ. 95.12% ಅಂಕಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಭಿಲಾಷ್ ಬೈಂದೂರು ತಗ್ಗರ್ಸೆ ನಿವಾಸಿ ಮಹಾಬಲೇಶ್ವರ ಹಾಗೂ ದಿ. ಜಯುಶ್ರೀ ಅವರ ಪುತ್ರ. ಉಡುಪಿಯ ಎಐಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ್ ಅವರ ಅಳಿಯ. ಅಭಿಲಾಷ್ ಅವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಕುಟುಂಬಿಕರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಬಿಲ್ಲವ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.93.33 ಅಂಕಗಳಿಸಿ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದ ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 96, ಕನ್ನಡ 92 ಹಾಗೂ ಇಂಗ್ಲಿಷ್‌ನಲ್ಲಿ 75 ಅಂಕಗಳಿಸಿದ್ದಾನೆ. ಇವರು ಯಡ್ತರೆ ಹೊಳ್ಳರಹಿತ್ಲು ಶಂಕರ ಬಿಲ್ಲವ ಮ್ತು ಯಶೋಧ ದಂಪತಿಗಳ ಪುತ್ರ.

Read More