ಲಾವಣ್ಯ ಬೈಂದೂರು ರಂಗ ಸಂಭ್ರಮ 2016ಕ್ಕೆ ಚಾಲನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಹೊಸ ಅಲೆಯ ನಾಟಕಗಳು ಬೆಂಕಿಯಂತೆ ವೇಗವಾಗಿ ಪಸರಿಸಿ ಜನರನ್ನು ತಲುಪುತ್ತಿದ್ದು ಇದಕ್ಕೆ ಹವ್ಯಾಸಿ ರಂಗತಂಡಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಹೇಳಿದರು. [quote font_size=”14″ bgcolor=”#ffffff” bcolor=”#dd9933″ arrow=”yes” align=”right”]* ನಾಟಕ ಪ್ರದರ್ಶನಕ್ಕಿಂದ ನಾಟಕ ತಯಾರಿಯ ಅಂಶವೇ ಮುಖ್ಯವಾದುದು. ಕಲಾವಿದರು ತಮ್ಮ ಕೆಲಸದೊಳ್ಳಕ್ಕೆ ನಿಷ್ಠೆಯಿಂದ, ಒಗ್ಗಟ್ಟಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಾರೆ. ನಾಟಕ ಬದುಕು ಕಲಿಸುತ್ತದೆ ಎಂಬುದಕ್ಕೆ ಹಲವಾರು ದೃಷ್ಟಾಂತವಿದೆ. ನಮ್ಮ ಮಕ್ಕಳನ್ನು ಈ ವ್ಯವಸ್ಥೆಯೊಳಕ್ಕೆ ತಂದು ನೋಡಿ. ಅವರ ಬೆಳವಣಿಗೆಯನ್ನು ನೀವೇ ಮೆಚ್ಚುತ್ತೀರಿ. – ಮೋಹನಚಂದ್ರ ಮಂಗಳೂರು, ನಾಟಕ ನಿರ್ದೇಶಕರು[/quote] ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಉದ್ಘಾಟಿಸಿ ಅವರು ಮಾತನಾಡಿದರು. ಹವ್ಯಾಸಿ ಕಲಾವಿದರು ತಮ್ಮ ಪಾತ್ರಗಳಲ್ಲಿ ಹೊಸತನ ತುಂಬುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ. ಉಡುಪಿ, ದ.ಕ,…
Author: ನ್ಯೂಸ್ ಬ್ಯೂರೋ
ಕುಂದಾಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಭೆ ಇತ್ತೀಚೆಗೆ ರೋಟರಿ ಮಿಡ್ಟೌನ್ ಸಭಾಂಗಣದಲ್ಲಿ ಜರುಗಿತು. ಕಳೆದ 2 ವರ್ಷಗಳಿಂದ ಎಲ್ಐಸಿ ಪ್ರತಿನಿಧಿಯಾಗಿ ಕುಂದಾಪುರ ತಾಲೂಕಿನಲ್ಲಿ ಜೀವ ವಿಮೆ ಪಾಲಿಸಿ ಸಂಗ್ರಹದಲ್ಲಿ ಅತ್ಯುತ್ತಮ ಸೇವೆ ನೀಡಿ ಕುಂದಾಪುರ ಶಾಖೆಯ ಏಕೈಕ ಎಂಡಿಆರ್ಟಿ ಸದಸ್ಯರಾಗಿ ಸಾಧನೆ ಮಾಡಿದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ಎಲ್.ಐ.ಸಿ ಕುಂದಾಪುರ ಶಾಖೆ ಹಿರಿಯ ಪ್ರಬಂಧಕ ಪ್ರೇಮನಾಥ ರಾವ್ ಕಾವೂರು ಸನ್ಮಾನಿಸಿದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿ, ಬೈಂದೂರು ಸೆಟಿಲೈಟ್ ಶಾಖೆ ಶಶಿಧರ ಹೆಗ್ಡೆ, ಕುಂದಾಪುರ ಶಾಖೆ ಅಸಿಸ್ಟೆಂಟ್ ಮೆನೇಜರ್ ಗುರುರಾಜ್ ಎಂ.ಎ, ಎಲ್ಐಸಿಯ ಹಿರಿಯ ಪ್ರತಿನಿಧಿ ಮಂಜುನಾಥ ಮಹಾಲೆ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ದೇಶ, ಇಲ್ಲಿನ ಜನರು ಹಾಗೂ ಸಂಸ್ಕೃತಿ ಅರಿಯುವುದರೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವಂತಾಗಬೇಕು ಎಂದು ನಾರ್ವೆ ಟ್ರ್ಯಾಂಡ್ ಹ್ಯಾಂ ನಗರದ ಪುರಸಭಾ ಸದಸ್ಯ ಕ್ಷತಿಲ್ ಉತ್ನೆ ಹೇಳಿದರು. ಶುಕ್ರವಾರ ನಮ್ಮ ಭೂಮಿ ಆವರಣದಲ್ಲಿ ನಮ್ಮ ಭೂಮಿಯಿಂದ ಬೆಂಗಳೂರಿಗೆ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ದಂಡಯಾತ್ರೆಗೆ ತೆರಳಿದ ದಿನವೇ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಚಾಲನೆ ದೊರೆತಿರುವುದು ನಮ್ಮ ಪ್ರಯತ್ನ ಸಾರ್ಥಕ್ಯ ಪಡೆಯುವಂತಾಗಿದೆ. ಕಳೆದ ಎಂಟುವರ್ಷಗಳಿಂದ ಭಾರತಕ್ಕೆ ಬಂದು ಇಲ್ಲಿನ ಮಕ್ಕಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ತನಗೆ, ಜನರಲ್ಲಿ ಒಂದಿಷ್ಟು ಅರಿವು ಮೂಡಿಸಬೇಕೆಂಬ ಹಂಬಲವಿತ್ತು. ಕುಂದಾಪುರದಿಂದ ಬೆಂಗಳೂರಿನ ವರೆಗಿನ ಈ ತಿರುಗಾಟದೊಂದಿಗೆ ನಮ್ಮನ್ನು, ನಮ್ಮ ಸ್ನೇಹಿತರನ್ನು, ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಬದಲಾವಣೆ ತರಲು ಸಾಧ್ಯವಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷ ರಾಜೀವ ಶೆಟ್ಟಿ, ಮಕ್ಕಳ ಪಂಚಾಯತ್ ಅಧ್ಯಕ್ಷ ಯಲ್ಲಮ್ಮ, ಡೇವಿಡ್, ವಾಂಖೆ,…
ಕುಂದಾಪುರ: ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀ ಮೈಲಾರೆಶ್ವರ ಯುವಕ ಮಂಡಲದ ವಾರ್ಷಿಕೋತ್ಸವವು ಇತ್ತಿಚಿಗೆ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂಪರ್ ಗ್ರೇಡ್ ಎಲೆಕ್ಟಿಕಲ್ ಕಂಟ್ರಾಕ್ಟರ್ ಕೆ.ಆರ್. ನಾಯ್ಕ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗಾಯಿತ್ರಿ ಡ್ರೆಸಸ್ ಪಾಲುದಾರರಾದ ಯು. ಅನಂತ್ ಪಡಿಯಾರ್, ಕದಂಬ ಗ್ರೂಪ್ ಆಫ್ ಹೋಟೆಲ್ಸ್ ಎನ್.ಬಿ. ದಿನೇಶ್, ರೂಪಂ ಡ್ರೆಸ್ಸ್ ಮಾಲಕರಾದ ಬಿ. ರಾಧಾಕ್ರಷ್ಣ ನಾಯಕ್, ಡಿ.ವೈ.ಎಸ.ಪಿ ಮಂಜುನಾಥ ಶೆಟ್ಟಿ, ನಿವ್ರತ್ತ ಪೋಸ್ಟ್ ಮಾಸ್ಟರ್ ರಾಮ್ ರಾವ್ ಹೊನ್ನನಕೇರಿ, ಲೇಖಕ ಕೋ ಶಿವಾನಂದ ಕಾರಂತ ಹಾಗೂ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಕೆ.ಪಿ.ಅರುಣ್ ಉಪಸ್ಹಿತರಿದ್ದರು. ಅಧ್ಯಕ್ಷ ಕೆ.ಪಿ.ಶಿವಪ್ರಸಾದ್ ಅಥಿತಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಗಣೇಶ್ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ಉಧ್ಯಮಿ ಜಿ.ದತ್ತಾನಂದ ಹಾಗೂ ಮಂಜುನಾಥ ಮಯ್ಯ ಉಪ್ಪಿನಕುದ್ರು ಇವರನ್ನು ಸನ್ಮಾನಿಸಲಾಯಿತು. ದಿ.ನಿತ್ಯಾನಂದ ಕೊತ್ವಾಲರ ಸ್ಮರಣಾರ್ಥ ಪರಿಸರದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೆ.ಎಸ್. ಮಂಜುನಾಥ ಗಾಣಿಗ ಇವರಿಗೆ ನೀಡಲಾಯಿತು. ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ…
ಬೈಂದೂರು: ಮಹಿಳೆಯರ ಹಿತರಕ್ಷಣೆ ಕಾಪಾಡುವುದೇ ಮಹಿಳಾ ಸಹಕಾರಿ ಸಂಘಗಳ ಮುಖ್ಯ ಉದ್ದೇಶವಾಗಿರಬೇಕು. ಆ ಮೂಲಕ ಪರಿಸರದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಮಾಡಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಗುರುವಾರ ಬೈಂದೂರಿನಲ್ಲಿ ನೂತನ ಮಾತೃಭೂಮಿ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೆಹಾನ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಶಂಕರ ಪೂಜಾರಿ ಸುರೇಶ ಬಟ್ವಾಡಿ, ಯಡ್ತರೆ ಗ್ರಾಪಂ ಸದಸ್ಯೆ ಆಶಾಕಿಶೋರ್, ಆನಂದ ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ರಾಮ ದೇವಾಡಿಗ ಸಂಘದ ಉಪಾಧ್ಯಕ್ಷೆ ಗೀತಾ ಎಸ್., ನಿರ್ದೇಶಕರಾದ ಲಕ್ಷ್ಮೀ ಬೈಂದೂರು, ಸೌದಾ ಅದಿಲ್, ಸಾವಿತ್ರಿ ದೇವಾಡಿಗ, ಉಮಾವತಿ, ನ್ಯಾನ್ಸಿ ಫೆರ್ನಾಂಡಿಸ್, ಶೋಭಾ, ಶ್ಯಾಮಲಾ ಶೆಟ್ಟಿ, ಗಿರಿಜಾ, ಮಹಾಲಕ್ಷ್ಮೀ ಮುಖ್ಯಕಾರ್ಯಣಿರ್ವಹಣಾಧಿಕಾರಿ ಸವಿತಾ ಪೂಜಾರಿ ಉಪಸ್ಥಿತರಿದ್ದರು. ಪತ್ರಕರ್ತ ಅಂದುಕಾ ಸ್ವಾಗತಿಸಿ ನಿರೂಪಿಸಿದರು.
ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಕನ್ಹಯ್ಯ ಕುಮಾರ್ಗೆ ಜೆಎನ್ಯುವಿನ ಹಳೆ ವಿದ್ಯಾರ್ಥಿನಿ ಹಾಗೂ ಹಾಲಿ ಪ್ರೊಫೆಸರ್ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಮಹಿಳೆಯರ ಗೌರಕ್ಕಾಗಿ ಹೋರಾಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕನ್ಹಯ್ಯನ ಅಸಲಿ ಮುಖವನ್ನು ತೆರೆದಿಡುತ್ತಾ ಒಂದಿಷ್ಟು ಪ್ರಶ್ನೆಗನ್ನು ಆತನ ಮುಂದಿಟ್ಟಿದ್ದಾರೆ. ಓಮ್ಮೆ ಓದಿ. *** ಕಮ್ಲೇಶ ನರ್ವಾನಾ : ಹೇಳಿಕೇಳಿ ಇದು ಬಹಿರಂಗ ಪತ್ರಗಳ ಕಾಲ. ಟಿವಿ ನಿರೂಪಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರೂ ತಮ್ಮ ವಿಚಾರ-ಆತಂಕಗಳನ್ನು ಹೇಳಿಕೊಳ್ಳುವುದಕ್ಕೆ ಮೋದಿ, ಸ್ಮೃತಿ ಇರಾನಿ, ರವೀಶ್ ಕುಮಾರ್ ಹೀಗೆ ಎಲ್ಲರಿಗೂ ಬಹಿರಂಗ ಪತ್ರಗಳನ್ನು ಬರೆಯುತ್ತಿದ್ದಾರೆ. ನಾನೂ ಸಹ ಇದೇ ಮಾರ್ಗವನ್ನು ಅನುಸರಿಸಿ ನನ್ನ ವ್ಯಥೆಗೊಂಡಿರುವ ಹೃದಯವನ್ನು ಸರಿಮಾಡಿಕೊಳ್ಳುವುದಕ್ಕೆ ಬಯಸುತ್ತೇನೆ. ನನ್ನ ಜೆಎನ್ಯು ಸಮುದಾಯವೆಲ್ಲ ಒಟ್ಟುಗೂಡಿ ಒಬ್ಬ ಪೊಳ್ಳು ಕ್ರಾಂತಿಕಾರಿಯನ್ನು ಸೃಷ್ಟಿಸುತ್ತಿರುವುದನ್ನು ನೋಡಿ ಈ ಪತ್ರ ಬರೆಯಲೇಬೇಕಾಗಿದೆ. ಜೆಎನ್ಯು ವಿದ್ಯಾರ್ಥಿ ಸಂಘಟನೆ ನಾಯಕ ಮಿ. ಕನ್ಹಯ್ಯ ಹಾಗೂ ಆತನನ್ನು ಈ ಶತಮಾನದ ಭಗತ್ ಸಿಂಗ್ ಅಂತ ಸಾಬೀತುಗೊಳಿಸುವುದಕ್ಕೆ…
ಗಂಗೊಳ್ಳಿ : ವಿದ್ಯಾ ಸಂಸ್ಥೆಗಳು ಒಂದು ಊರಿನ ಪ್ರಗತಿಯ ಸಂಕೇತ.ಅವುಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಹಕರಿಸಲು ಪ್ರತೀ ನಾಗರಿಕರು ಪ್ರಯತ್ನಿಸಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಅವರು ಅಭಿಪ್ರಾಯಪಟ್ಟರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಶಾಸಕರ ಅನುದಾನ ನಿಧಿಬಳಕೆಯೊಂದಿಗೆ 3.5ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಿದ ಇಂಟರ್ಲಾಕ್ ಆಳವಡಿಕೆಯ ಕಾಮಗಾರಿ ಪೂರ್ಣಗೊಂಡ ಪ್ರಯುಕ್ತ ಸಂಬಂಧಿತರನ್ನು ಅಭಿನಂದಿಸುವ ಸಲುವಾಗಿ ಅಲ್ಲಿನ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಇಧೇ ಸಂಧರ್ಭದಲ್ಲಿ ಕಾಮಗಾರಿಗೆ ಸಹಕರಿಸಿದ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ಅವರನ್ನು ಕೂಡ ಅಭಿನಂದಿಸಿ ಸನ್ಮಾನಿಸಲಾಯಿತು. ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ್ಯದರ್ಶಿ ಹೆಚ್.ಗಣೇಶ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯದ ಮಾಜಿ ಪ್ರಾಂಶುಪಾಲ ಆರ್ ಎನ್ ರೇವಣ್ಕರ್, ಕನ್ನಡ ಮಾಧ್ಯಮ ಫ್ರೌಢಶಾಲೆಯ ಉಪ ಪ್ರಾಂಶುಪಲ ವಾಮನದಾಸ ಭಟ್, ಆಂಗ್ಲ ಮಾಧ್ಯಮ ಫ್ರೌಢ ಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಶೇರುಗಾರ್,ಗ್ರಾಮ ಪಂಚಾಯತ್ ಸದಸ್ಯ ದುರ್ಗಾರಾಜ್ ಉಪಸ್ಥಿತರಿದ್ದರು. ಸರಸ್ವತಿ ವಿದ್ಯಾಲಯ…
ದೇಶ ಕಾಯೋ ಸೈನಿಕರಿಗೆ ಬಗ್ಗೆ ಕನ್ಹಯ್ಯಾ ಆರೋಪಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಎನ್ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಜೆಎನ್ಯು ಹಳೆ ವಿದ್ಯಾರ್ಥಿನಿ ಪ್ರಸ್ತುತ ಅದೇ ಕಾಲೇಜಿನ ಪ್ರಾಧ್ಯಾಪಕಿ ಇದನ್ನು ಸಾಕ್ಷೀಕರಿಸಿದ್ದಾರೆ. ಕನ್ಹಯ್ಯಾ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ (ಈಗ ಹಳೆ ವಿದ್ಯಾರ್ಥಿನಿ) ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ೨೦೧೫ ರ ಜೂನ್ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕನ್ಹಯ್ಯಾ ಕುಮಾರ್ನನ್ನು ವಿದ್ಯಾರ್ಥಿನಿಯೋರ್ವಳು ಪ್ರಶ್ನಿಸಿದ್ದಳು. ಆಗ ಕನ್ಹಯ್ಯಾ ’ಇದು ನನ್ನ ಹಾಸ್ಟೇಲ್, ನೀನು ಹುಚ್ಚಿ’ ಎಂದು ನಿಂದಿಸಿದ್ದಲ್ಲದೇ ’ನಿನ್ನನ್ನು ನೋಡಿಕೊಳ್ಳುತ್ತೇನೆ. ನನ್ನ ವಿರುದ್ದ ಅದೇನು ಮಾಡುತ್ತೀಯಾ ಮಾಡು’ ಎಂದಿದ್ದರು ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಜೆಎನ್ಯು ಆಡಳಿತ ಮಂಡಳಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಳು. (ದೂರು ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.) ಆದರೆ ಕನ್ಹಯ್ಯಾ…
ಖುದ್ದು ವಿಚಾರಣೆಗೆ ಹಾಜರಾಗುವಂತೆ ಪ್ರಾಂಶುಪಾಲರಿಗೆ ನೋಟಿಸ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಂತ್ರಿಕ ಪದವಿ ವಿದ್ಯಾರ್ಥಿನಿಯೊಬ್ಬಳು ಸೆಮಿಸ್ಟರ್ ನಲ್ಲಿ ತನಗೆ ಕಡಿಮೆ ಅಂಕ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ಪ್ರಾಂಶುಪಾಲರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಸೆಮಿಸ್ಟರ್ ನಲ್ಲಿ ತನಗೆ ಕಡಿಮೆ ಅಂಕ ನೀಡಿರುವುದನ್ನು ಪ್ರಶ್ನಿಸಿ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಎಸ್. ಮುನವರ ಸುಲ್ತಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಬಾರಿ ನೋಟಿಸ್ ನೀಡಿದ್ದರೂ ಈ ಬಗ್ಗೆ ಕಾಲೇಜಿನಿಂದ ವಿವರಣೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ಹೈಕೋರ್ಟ್ ಆದೇಶಗಳಿಗೆ ನಿರ್ಲಕ್ಷ್ಯ ತೋರುತ್ತಿರುವ ಕಾಲೇಜು ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪ್ರಾಂಶುಪಾಲರಿಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾರ್ಥಿನಿ ಎಸ್. ಮುನವರ ಸುಲ್ತಾನ್ ಮೊದಲ ಹಾಗೂ ಎರಡನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರ ಪ್ರದೇಶಗಳಲ್ಲಿ ಸರಕಾರಿ ಹಾಸ್ಟೆಲ್ ಸ್ವಂತ ಕಟ್ಟಡವಿಲ್ಲದೇ ಅವ್ಯವಸ್ಥೆಯಿಂದ ಕೂಡಿರುವಾಗ ನೆಹರೂ ಮೈದಾನದ ಬಳಿಯ ಸರಕಾರಿ ಕಟ್ಟಡದಲ್ಲಿನ ಹಾಸ್ಟೆಲನ್ನು ಕೋಟೇಶ್ವರದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಯತ್ನದ ಹಿಂದೆ ಯಾರದ್ದೂ ಲಾಭಿ ಇಲ್ಲದಿಲ್ಲ. ಅನಗತ್ಯವಾಗಿ ಹಾಸ್ಟೆಲ್ನ್ನು ಕೋಟೇಶ್ವರಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟುಮಾಡಿದರೇ ಉಗ್ರ ಹೋರಾಟವನ್ನು ಕೈಗೊಳ್ಳವುದಾಗಿ ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಎಚ್ಚರಿಸಿದ್ದಾರೆ. ಕುಂದಾಪುರದ ಹಾಸ್ಟೆಲ್ ಸ್ಥಳಾಂತರ ಹಾಗೂ ಇನ್ನಿತರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಸ್ಎಫ್ಐ ತಾಲೂಕು ಘಟಕ ಕುಂದಾಪುರದ ಮಿನಿವಿಧಾನದ ಸೌಧದ ಎದರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಸ್ಎಪ್ಐ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಕ್ಷಯ ವಡೇರಹೋಬಳಿ ಮಾತನಾಡಿ ರಾಜ್ಯ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದ ಕಾರಣ ಸರಕಾರಿ ಶಾಲಾ-ಕಾಲೇಜು, ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ರಾಜ್ಯ ಬಜೆಟ್ನಲ್ಲಿ ಶೇ.೩೦ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲಿ ಎಂದು…
