ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿದ್ಯಾರ್ಥಿಗಳು ಕಲಿಯುವಿಕೆಯನ್ನು ಒಂದೇ ವಿಷಯದಲ್ಲಿ ತೊಡಗಿಸಿಕೊಳ್ಳದೇ, ಎಲ್ಲಾ ವಿಷಯದ ಜ್ಞಾನವನ್ನು ಹೊಂದಿರಬೇಕು. ಕಲಿಯುವಿಕೆಗೆ ಕೊನೆಯಿಲ್ಲ, ಅದು ನಿರಂತರವಾಗಿರುತ್ತದೆ. ಕಾರ್ಯಗಾರದ ನಂತರವು ವಿದ್ಯಾರ್ಥಿಗಳು ಹೆಚ್ಚಿನ ಸಂಶೋಧನೆಗಳ ಮೇಲೆ ಗಮನ ಹರಿಸಬೇಕು ಎಂದು ಪ್ರಮುಖ ಸಂಪನ್ಮೂಲ ವ್ಯಕ್ತಿ, ಆರ್. ವಿ. ಇಂಜಿನಿರಿಂಗ್ ಕಾಲೇಜಿನ ಪ್ರೊಫೆಸರ್ ಡಾ| ರೇಣುಕಾ ಪ್ರಸಾದ್, ಹೇಳಿದರು. ಅವರು ಕಂಪ್ಯೂಟರ್ ಸೈನ್ಸ್ ವಿಭಾಗದವರು ಆಯೋಜಿಸಿದ ಫ್ರೀ ಓಪನ್ ಸೋರ್ಸ್ ಸಾಫ್ಟ್ವೇರ್ ಆಂಡ್ ಆಪ್ಲಿಕೇಶನ್ಸ್ ಎನ್ನುವ ಕಾರ್ಯಗಾರದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸತೀಶ ಎಸ್. ಅಂಸಾಡಿ ಅವರು ವಹಿಸಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾವನ್ನು ಹೆಚ್ಚಿಸಿ ಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಕಂಪ್ಯೂಟರ್ ಸೈನ್ಸ್ನ ಚಟುವಟಿಕೆಗಳು ಉಳಿದ ವಿಭಾಗದವರಿಗೂ ಪ್ರೋತ್ಸಾಹ ಕೊಡುತ್ತಿದ್ದು, ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಧ್ಯಕ್ಷೀಯ ಬಾಷಣದಲ್ಲಿ ಹೇಳಿದರು. ವಿಭಾಗದ ಮುಖ್ಯಸ್ಥ ಪ್ರೊ| ಮೆಲ್ವಿನ್ ಡಿ’ಸೋಜಾರವರು ಕಾಲೇಜಿನ ಚೇರ್ಮನ್ ಶ್ರೀ ಸಿದ್ದಾರ್ಥ ಜೆ. ಶೆಟ್ಟಿಯವರು…
Author: ನ್ಯೂಸ್ ಬ್ಯೂರೋ
ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣ ನಡೆದು ಒಂದು ತಿಂಗಳಾದರೂ ಪ್ರಕರಣದ ಸಮಗ್ರ ತನಿಖೆ ನಡೆದಿಲ್ಲ. ಮಾತ್ರವಲ್ಲದೆ ತನಿಖೆಗಾಗಿ ರಚಿಸಲಾಗಿರುವ ಸಮಿತಿಯಲ್ಲಿರುವ ಓರ್ವ ಅಧಿಕಾರಿಯ ಮೇಲೆಯೇ ಆರೋಪಗಳಿವೆ ಎಂದು ದೇಗುಲದ ಮಾಜಿ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ದೇಗುಲದ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್ಪಿ ಅಣ್ಣಾಮಲೈ ಮೇಲೆ ಕಾಣದ ಕೈಗಳ ಒತ್ತಡ ಇರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಓರ್ವರು ಈ ಹಿಂದೆ ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅವರ ಮೇಲೆಯೂ ಆಪಾದನೆಗಳಿವೆ. ಹಾಗಾಗಿ ಅವರನ್ನು ಸಮಿತಿಯಿಂದ ಕೈಬಿಡಬೇಕು ಎಂದರು. ನಕಲಿ ಆಭರಣಗಳು ಇನ್ನೂ ದೇಗುಲದ ಕಪಾಟಿನಲ್ಲಿವೆ. ಹಾಗಾದರೆ ಅಸಲಿ ಆಭರಣಗಳು ಎಲ್ಲಿ ಹೋದವು ಎಂಬುದನ್ನು ಕೂಡ ಪತ್ತೆ ಹಚ್ಚಬೇಕಾಗಿದೆ. ಕಳೆದ 8 ವರ್ಷಗಳಿಂದ ದೇಗುಲದ ಲೆಕ್ಕಪರಿಶೋಧನೆ ಕೂಡ ನಡೆದಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ನೀಡುವ ಜವಾಬ್ದಾರಿ ಸರಕಾರದ ಮೇಲಿದ್ದರೇ, ಸರಕಾರಿ ಆಡಳಿತ ವ್ಯವಸ್ಥೆಯನ್ನು ಶ್ರೀಸಾಮಾನ್ಯರಿಗೂ ತಲುಪಿಸುವ ಜವಾಬ್ದಾರಿ ಸರಕಾರಿ ನೌಕರರದ್ದು ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮೈಸೂರು ವಿಭಾಗೀಯ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯ ಬರಗಾಲ ಮುಂತಾದ ಸಂಕಷ್ಟ ಎದುರಿಸುತ್ತಿದ್ದರೂ, ರಾಜ್ಯ ಸರಕಾರಿ ನೌಕರರ ಖಾಲಿ ಹುದ್ದೆ ಭರ್ತಿ ಮಾಡುವ ಜೊತೆಗೆ ವೇತನ ತಾರತಮ್ಯ ಹೋಗಲಾಡಿಸಿ ಕೇಂದ್ರದ ೭ನೇ ಹಣಕಾಸು ಆಯೋಗದ ವೇತನ ರಾಜ್ಯ ಸರಕಾರಿ ನೌಕರರಿಗೆ ನೀಡುವಂತೆ ಮುಖ್ಯಮಂತ್ರಿ ಅವರ ಮನ ಒಲಿಸಲಾಗುತ್ತದೆ ಎಂಬ ಭರವಸೆ ನೀಡಿದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದು ತಪ್ಪಲ್ಲ. ಆರ್ಥಿಕ ಶಕ್ತಿ ಸಿಕ್ಕರೆ ಬದುಕಿಗೆ ಸ್ಥಿರತೆ ಸಿಕ್ಕುತ್ತದೆ. ಎಲ್ಲರಿಗೂ ಉದ್ಯೋಗ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು. ಸರಕಾರ ಆಡಳಿತ ಸುಧಾರಣಾ ಯೋಜನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮೊದಲ ದಿನ ಅಂತರ ತರಗತಿ ಪ್ರತಿಭಾ ಸ್ಫರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅಂತರ ತರಗತಿ ಪ್ರತಿಭಾ ಸ್ಫರ್ಧೆಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ಥಾನ ದ್ವಿತಿಯ ಬಿಕಾಂ, ದ್ವಿತೀಯ ಸ್ಥಾನವನ್ನು ಪ್ರಥಮ ಬಿಎಸ್.ಸಿ, ತೃತೀಯ ಸ್ಥಾನವನ್ನು ಬಿ.ಎ ವಿದ್ಯಾರ್ಥಿಗಳು ಪಡೆದುಕೊಂಡರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ನೇಶ್ ಪ್ರಭು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ರೀಸರ್ಚ್ ಫಂಡ್ನಿಂದ ಸಂಶೋಧನೆ ಪ್ರಬಂಧ ಮಂಡಿಸಿದ ಮತ್ತು ಮಾರ್ಗದರ್ಶನ ಮಾಡಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಕಾಲೇಜಿನ ರೀಸರ್ಚ್ ಆಂಡ್ ಡೆವಲಪ್ಮೆಂಟ್ ಘಟಕದಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಂತರ್ ಕಾಲೇಜು ಸ್ಫರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ಉಪಸ್ಥಿತರಿದ್ದರು. ಸಂಖಾಶಾಸ್ತ್ರ ವಿಭಾಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ಘಟಕದಿಂದ ಅವರ ವಾರ್ಷಿಕೊತೋತ್ಸವದ ಸಲುವಾಗಿ ಏರ್ಪಡಿಸಲಾಗಿದ್ದ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ವಲಯದ ಪ್ರಧಾನ ವ|ಧರ್ಮಗುರು ಅನೀಲ್ ಡಿಸೋಜಾ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ಜಾಕೋಬ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಧರ್ಮಗುರು ವ|ಪಾವ್ಲ್ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಶೈಲಾ ಆಲ್ಮೇಡಾ, ಸುನೀಲ್ ಡಿಸೋಜಾ, ಹಾಗೂ ಪಂದ್ಯಾವಳಿಯ ತೀರ್ಪುಗಾರರಾಗಿದ್ದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ವೀಕ್ಷಕ ವಿವರಣೆ ನೀಡಿದರು. ಮೂವತ್ತು ಯಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ವಾಡೆಯ ಪಂಗಡಗಳು ಭಾಗವಹಿಸಿ ಅಂತಿಮವಾಗಿ ಲೂರ್ಡ್ಸ್ ವಾಡೆಯವರು ಪ್ರಥಮ ಸ್ಥಾನ ಪಡೆದರೆ ದ್ವೀತಿಯ ಸ್ಥಾನವನ್ನು ಫಾತಿಮಾ ವಾಡೆಯವರು ಗಳಿಸಿಕೊಂಡರು. ಲುರ್ಡ್ಸ್ ವಾಡೆಯ ಅನೀಲ್ ಡಿಸೋಜಾ ಅತ್ಯಧಿಕ ರನ್ನುಗಳನ್ನು ಹಾಗೆ ವಿಕೆಟುಗಳನ್ನು ಪಡೆದು ಕೊಂಡರು. ತ್ರೋಬಾಲ್ ಪಂದ್ಯಾವಳಿಯಲ್ಲಿ 6 ವಾಡೆಯ ಪಂಗಡದವರು ಭಾಗವಹಿಸಿದ್ದು, ಫಲಿತಾಂಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಹೊಸ ಬಸ್ ನಿಲ್ದಾಣ ಪ್ರವೇಶಿಸಿದ ಬಸ್ಸನ್ನು ಯಾವುದೇ ಸೂಚನೆ ನೀಡದೇ ಚಾಲಕ ಹಿಮ್ಮುಖವಾಗಿ ಚಲಾಯಿಸಿದ ಕಾರಣ ಪ್ರಯಾಣಿಕ ಪಾದದ ಮೇಲೆ ಹಾದು ಹೋದ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಬಸ್ ನಿರ್ವಾಹಕನಿಲ್ಲದಿರುವಾಗ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಬಸ್ಸನ್ನು ರಭಸವಾಗಿ ನಿಲ್ದಾಣದೊಳಕ್ಕೆ ಚಲಾಯಿಸಿಕೊಂಡು ಬಂದ ಚಾಲ್ಲಕ ಅದೇ ವೇಗದಲ್ಲಿ ಹಿಂಬದಿಗೆ ರಿವರ್ಸ್ ತೆಗೆದು ಕೊಂಡಿದ್ದಾನೆ. ಈ ಸಂದರ್ಭದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮುದೂರು ಮೂಲದ ಯುವಕನ ಪಾದದ ಮೇಲೆ ಬಸ್ಸಿನ ಮುಂದಿನ ಚಕ್ರ ಹರಿದು ಹೋಗಿವೆ. ಯುವಕನ ಆಕ್ರಂದನಕ್ಕೆ ಬೆಚ್ಚಿದ ಚಾಲಕ ತನ್ನ ಎಡವಟ್ಟನ್ನು ಅರಿತು ಬಸ್ಸನ್ನು ಪುನ: ಮುಂದಕ್ಕೆ ಚಲಾಯಿಸಿದ್ದಾನೆ. ಅಷ್ಟರಲ್ಲಾಗಲೇ ಯುವಕನ ಪಾದವೆನ್ನುವುದು ಸಂಪೂರ್ಣವಾಗಿ ಜಜ್ಜಿ ಹೋಗಿ ನೆತ್ತರು ಚಿಮ್ಮಲಾರಂಭಿಸಿದೆ. ಯುವಕನ ಬೊಬ್ಬೆಗೆ ಕೂಡಲೇ ಸೇರಿದ ಪ್ರಯಾಣಿಕರು ಹಾಗೂ ಅಂಗಡಿಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಚಾಲಕರ ಬಗ್ಗೆ ಆಕ್ರೋಶ: ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದ ಹಾಗೆ ಯಮವೇಗದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ’ಶಿಖರ’, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2014-15ನೇ ಸಾಲಿನ ಅಂತರ್ಕಾಲೇಜು ವಾರ್ಷಿಕ ಸಂಚಿಕೆ ಸ್ವರ್ಧೆಯ ವರ್ಗ-1ರಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗ್ರಾಮೀಣ ಸೊಗಡು, ವಿಶಿಷ್ಟ ಸಮುದಾಯಗಳ ಪರಿಚಯ, ಬಹುಭಾಷಾ ವೈವಿಧ್ಯ, ಕಥೆ, ಕವನ ಸೇರಿದಂತೆ ಹತ್ತಾರು ವಿಭಾಗಗಳನ್ನೊಳಗೊಂಡ ೫೦೦ ಪುಟಗಳ ಸಂಚಿಕೆ ಶಿಖರ ಅಂದದ ಮುಖಪುಟದೊಂದಿಗೆ ಮೂಡಿಬಂದಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ವಾರ್ಷಿಕ ಸಂಚಿಕೆಯ ಗೌರವ ಸಂಪಾದಕರಾಗಿದ್ದರೇ, ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ನಿರ್ವಾಹಕ ಸಂಪಾದಕರಾಗಿದ್ದಾರೆ. ಕಳೆದ ಸಾಲಿನಲ್ಲಿ ನಿರ್ಗಮಿಸಿ ಪ್ರಾಂಶುಪಾಲೆ ಸೀಮಾ ಶೆಟ್ಟಿ ಸಂಚಿಕೆಯ ಗೌರವ ಸಂಪಾಕದರಾಗಿದ್ದಾಗ ’ಶಿಖರ’ ದ್ವಿತೀಯ ಸ್ಥಾನ ಪಡೆದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಕರ್ತರಾದ ಸಂಪಾದಕೀಯ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಊಳುವವನೇ ಹೊಲದೊಡೆಯ ಎಂಬುದನ್ನು ಪ್ರತಿಪಾದನೆ ಮಾಡಿದ್ದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಕೃಷಿ ಕಾಯಕದ ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರು. ಹಿಂದುಳಿದ ವರ್ಗದವರಲ್ಲೂ ಕೃಷಿಯಲ್ಲಿ ಆಸಕ್ತಿ ಮೂಡಿಸಿದ್ದ ಅವರು ಅಪರೂಪದ ನಾಯಕತ್ವ ಗುಣ ಬೆಳೆಸಿಕೊಂಡಿದ್ದರು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯತ್, ಕಂದಾಯ ಇಲಾಖೆ, ಕುಂದಾಪುರ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಂದಾಪುರ ತಾಪಂ ಸಭಾಂಗಣದಲ್ಲಿ ನಡೆದ ಬಾಬು ಜಗಜೀವನ್ ರಾಮ್ ಅವರ ೧೦೯ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು ಸಾಗಬಂದ ದಾರಿಯಲ್ಲಿ ನಾವು ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸುವುದಲ್ಲದೇ ಅವರ ಕನಸು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಸ್ರೂರು ಶ್ರೀ ಶಾರದಾ ಕಾಲೇಜ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಎಂಬಲ್ಲಿ ಬೈಕೊಂದಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಯರುಕೋಣೆಯ ನಿವಾಸಿ ಕಾರ್ತಿಕ್ ಶೆಟ್ಟಿ (23) ಮೃತ ದುರ್ದೈವಿ. ಮಂಗಳವಾರ ಮುಂಜಾನೆ ಯಕ್ಷಗಾನವನ್ನು ನೋಡಿಕೊಂಡು ಉಪ್ಪುಂದ ಕಡೆಯಿಂದ ಯರುಕೋಣೆಯ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಗಾಯಾಳು ಬಹಳ ಹೊತ್ತಿನವರೆಗೂ ರಸ್ತೆಯಲ್ಲಿ ಬಿದ್ದು ಒದ್ದಾಡಿ ಅಲ್ಲಿಯೇ ಅಸುನೀಗಿದರೆನ್ನಾಗಿದೆ. ಟೆಂಪೋ ಟ್ರಾವೆಲರ್ ಚಾಲಕ ಅಪಘಾತವಾದ ಬಳಿಕ ವಾಹನ ಸಹಿತ ಅಲ್ಲಿಂದ ಪರಾರಿಯಾಗಿದ್ದ.ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧಾ-16, ವ್ಯವಹಾರ ಅಧ್ಯಯನ ಉತ್ಸವದಲ್ಲಿ ಮಂಗಳೂರು ಬೆಸೆಂಟ್ ಸಂಜೆ ಕಾಲೇಜಿನ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದರೇ, ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿದ್ದಾರೆ. ಸ್ಪರ್ಧಾ – 16 ರಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ -ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು , ಉಡುಪಿ ಪಡೆಯಿತು. ಮಾರ್ಕೇಂಟಿಗ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ – ಕೆನರಾ ಕಾಲೇಜು, ಮಂಗಳೂರು ಪಡೆಯಿತು.ಫೈನಾನ್ಸ ಸ್ಫರ್ಧೆಯಲ್ಲಿ ಪ್ರಥಮ- ಕೆನರಾ ಕಾಲೇಜು, ಮಗಳೂರು, ದ್ವಿತೀಯ -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು. ಉತ್ತಮ ಸಿ.ಇ ಒ- ಪ್ರಥಮ ಪ್ರಣವ್ ಗಣೇಶ್, -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು. ಶೃಂಗೇರಿ ಜೆಸಿಬಿಎಂ ಕಾಲೇಜಿನ…
