ಭಂಡಾರ್ಕಾರ್ಸ್ ಕಾಲೇಜು ’ಸ್ಪರ್ಧಾ-16’: ಮಂಗಳೂರು ಬೆಸೆಂಟ್ ಸಂಜೆ ಕಾಲೇಜಿಗೆ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧಾ-16, ವ್ಯವಹಾರ ಅಧ್ಯಯನ ಉತ್ಸವದಲ್ಲಿ ಮಂಗಳೂರು ಬೆಸೆಂಟ್ ಸಂಜೆ ಕಾಲೇಜಿನ ವಿಧ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದರೇ, ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿದ್ದಾರೆ.

Call us

Click Here

ಸ್ಪರ್ಧಾ – 16 ರಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ -ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು , ಉಡುಪಿ ಪಡೆಯಿತು. ಮಾರ್ಕೇಂಟಿಗ್ ಸ್ಫರ್ಧೆಯಲ್ಲಿ ಪ್ರಥಮ- ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು, ದ್ವಿತೀಯ – ಕೆನರಾ ಕಾಲೇಜು, ಮಂಗಳೂರು ಪಡೆಯಿತು.ಫೈನಾನ್ಸ ಸ್ಫರ್ಧೆಯಲ್ಲಿ ಪ್ರಥಮ- ಕೆನರಾ ಕಾಲೇಜು, ಮಗಳೂರು, ದ್ವಿತೀಯ -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು. ಉತ್ತಮ ಸಿ.ಇ ಒ- ಪ್ರಥಮ ಪ್ರಣವ್ ಗಣೇಶ್, -ಬೆಸೆಂಟ್ ಸಂಜೆ ಕಾಲೇಜು, ಮಂಗಳೂರು ಪಡೆಯಿತು.

ಶೃಂಗೇರಿ ಜೆಸಿಬಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ರಾಧಾಕೃಷ್ಣ ಬಹುಮಾನ ವಿತರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ ಮತ್ತು ವಿದ್ಯಾರ್ಥಿಗಳಾದ ವಿರಾಜ್ ಕಾಂಚನ್ ಮತ್ತು ಕಾರ್ತಿಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಕೆವಿನ್ ರೊಗರ್ ಡಿ ಅಲ್ಮೆಡಾ ವಂದಿಸಿದರು.

Leave a Reply