ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಸಾರಥ್ಯದಲ್ಲಿ ಜರುಗುತ್ತಿರುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ನಾಗೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದರು. ಎಸ್.ಡಿ.ಪಿ.ಟಿ. ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ಪ್ರಾಶುಂಪಾಲರಾದ ಎಮ್. ಬಾಲಕೃಷ್ಣ ಶೆಟ್ಟಿ ಇವರು ದಿಕ್ಸೂಚಿ ಭಾಷಣ ಮಾಡಿ ಸಂಸ್ಕೃತಿ ಹಾಗೂ ಕಲೆಯ ಉಳಿಯುವಿಕೆಗೆ ಕುಸುಮ ಫೌಂಡೇಶನ್ನ ಕೊಡುಗೆಯನ್ನು ಶ್ಲಾಘಿಸಿದರು. ಸಂಸ್ಥೆಯು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ’ ಪ್ರಶಸ್ತಿಯನ್ನು ಪ್ರೊ. ಎ.ವಿ. ನಾವಡ, ನಿವೃತ್ತ ಪ್ರಾಧ್ಯಾಪಕರು ಮತ್ತು ಡೀನ್ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಹಾಗೂ ಡಾ. ಗಾಯತ್ರಿ ನಾವಡ, ಸಂಶೋಧಕರು ಮತ್ತು ವಿಮರ್ಶಕರು, ಮಂಗಳೂರು ದಂಪತಿಗಳಿಗೆ ಇವರು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಧಾನ ಮಾಡಿದರು. ಅವರು ಮಾತನಾಡಿ ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಕುಸುಮ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುತ್ತಲಿನ ಸಮಸ್ಯೆ, ತಲ್ಲಣಗಳಿಗೆ ಸ್ಪಂದಿಸಿ ಸಮಾಜವನ್ನು ಎಚ್ಚರಿಸುವ ಜೊತೆಗೆ ವಿಘಟನೆಯ ಕಾಲಘಟ್ಟದಲ್ಲಿಯೂ ಎಲ್ಲರನ್ನೂ ಬೆಸೆಯುವ ಬಹುಮುಖ್ಯ ಮಾಧ್ಯಮವಾಗಿ ರಂಗಭೂಮಿ ಬೆಳೆದಿದೆ ಎಂದು ರಂಗ ಕಲಾವಿದೆ, ಸಾಹಿತಿ ಮಮತಾ ಅರಸಿಕೆರೆ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದ ಎರಡನೇ ದಿನ ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು. ಸಿನೆಮಾ, ಧಾರಾವಾಹಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಬಗೆಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಅಂಶಗಳು ಸಮಾಜವನ್ನು ಕಲುಷಿತಗೊಳಿಸಿರುವ ಹೊತ್ತಿನಲ್ಲಿ ಕ್ಷೇತ್ರದ ವಿಚಾರಗಳನ್ನು ಒಳಗೊಂಡಿರುವ ರಂಗಭೂಮಿ ಪರಿಹಾರ ಆಗಬಲ್ಲದು. ದಾರಿ ತಪ್ಪುತ್ತಿರುವ ಯುವಕ ಸಮುದಾಯ ರಂಗಭೂಮಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳವ ಅಗತ್ಯವೂ ಇದೆ ಎಂದರು. ಈ ಸಂದರ್ಭ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಅರಸಿಕೆರೆಯ ಡಾ| ಹೆಚ್. ಆರ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸಿದ್ಧಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ (೫೬) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾರಣ್ಣ ಅಂತಲೇ ಜನಜನಿತರಾಗಿದ್ದರು. ಹಾಲಾಡಿ ಶ್ರೀ ಮರ್ಲಚಿಕ್ಕು ದೇವಸ್ಥಾನದ ಧರ್ಮದರ್ಶಿಯಾಗಿದ್ದರು, ಹಾಲಾಡಿ ಯಕ್ಷಗಾನ ಮೇಳದ ಸಂಚಾಲಕರಾಗಿದ್ದರು. ಕಳೆದ ಭಾರಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಿದ್ಧಾಪುರ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಅವರು ಕುಟುಂಬಿಕರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಸಮಷ್ಠಿಯ ಕಲೆ. ಒಬ್ಬರಿಂದ ಅದು ಪರಿಪೂರ್ಣಗೊಳ್ಳಲು ಸಾಧ್ಯವಿಲ್ಲ. ಆಧುನಿಕ ಯುಗದಲ್ಲಿ ನಮ್ಮ ನಮ್ಮ ನಡುವೆ ಕಟ್ಟಿಕೊಂಡಿರುವ ಗೋಡೆಯನ್ನು ತೊಡೆದುಹಾಕಿ, ರಂಗ ಉತ್ಸವಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಮಹತ್ತರ ಕೆಲಸ ರಂಗಭೂಮಿಯಿಂದಾಗುತ್ತಿದೆ ಎಂದು ಬರಹಗಾರ್ತಿ, ರಂಗ ನಿರ್ದೇಶಕಿ ಅಭಿಲಾಷಾ ಹಂದೆ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿ ಇತಿಹಾಸದಲ್ಲಿ ಎದುರಾದ ಬಿಕ್ಕಟ್ಟುಗಳಿಗೆ ನಾಟಕಗಳ ಮೂಲಕ ಸಂಚಲನ ಮೂಡಿಸಿ, ಜನರನ್ನು ಜಾಗೃತಿಗೊಳಿಸಿದ ಹೆಗ್ಗಳಿಕೆ ರಂಗಭೂಮಿಯದ್ದು. ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕನ್ನು ಖುಷಿ ಹಾಗೂ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರಭಿ ರಿ. ಬೈಂದೂರು ಇದರ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಯು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಜಾತಿ, ಅಂತಸ್ತು ಅರ್ಹತೆಯ ಅಗತ್ಯವಿಲ್ಲ. ನಾಟಕಗಳ ಮೂಲಕವೇ ಉತ್ತಮ ಬದುಕು ಕಟ್ಟಿಕೊಳ್ಳುವ ಗಟ್ಟಿತನತನವನ್ನು ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಕರಗತವಾಗುವಷ್ಟು ಅಂಕಗಳ ಬೆನ್ನತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುವವರಿಗೆ ಬದುಕಿನ ಗಟ್ಟಿತನ ಕರಗತವಾಗದು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ 2017 ನಾಟಕ ಸಪ್ತಾಹವನ್ನು ಉದ್ಘಾಟಿಸಿ, ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ಸಮರ್ಪಿಸಿ ಬಳಿಕ ಮಾತನಾಡಿದರು. ನಾಟಕ ಉತ್ಸವದ ನೆಪದಲ್ಲಿ ರಂಗಾಸಕ್ತರು ಸೇರುವಂತೆ ಮಾಡುವುದೇ ದೊಡ್ಡ ಕೆಲಸ. ಒಳ್ಳೆಯ ನಾಟಕಗಳನ್ನು ನೋಡುವುದೆಂದರೆ ಉತ್ತಮ ಕೃತಿಗಳನ್ನು ಓದಿದಂತೆ. ನೈಜವಾಗಿರುವ ರಂಗಭೂಮಿ ಪ್ರೇಕ್ಷಕರಿಗೆ ಸದಾ ಆಪ್ತವಾಗುತ್ತದೆ ಎಂದವರು ಹೇಳಿದರು. ನಾಡೋಜ ಏಣಗಿ ಬಾಳಪ್ಪ ಅವರು ನಡೆದಾಡುವ ರಂಗಭೂಮಿ ಎಂದೆಸಿನಿಕೊಂಡವರು. ಬಡತನದ ಮಧ್ಯೆ ಬೆಳೆದು ಬಂದ ಅವರಿಗೆ ಅಚಾನಕವಾಗಿ ಒದಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 8 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಕ.ರಾ.ರ.ಸಾ.ನಿಗಮದ ಅಧ್ಯಕ್ಷರು ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ , ಬೈಂದೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಗೋಪಾಲ ಪೂಜಾರಿ ಅವರು, ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರಥಮ ಕಾರ್ಯಕ್ರಮ ಬೈಂದೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ಅಗತ್ಯ ಕಾರ್ಯಗಳನ್ನು, ಯಾವುದೇ ಲೋಪಗಳಿಲ್ಲದಂತೆ ಕೈಗೊಳ್ಳುವಂತೆ ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ತಮಗೆ ವಹಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟೋಪಚಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾ.ಪಂ. ಸದಸ್ಯ ರಾಜು ಪೂಜಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಕುಂದಾಪುರ ತಹಸೀಲ್ದಾರ್ ಜಿ.ಎಂ.ಬೋರ್ಕರ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ, ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೈಂದೂರು ಸೋಮೇಶ್ವರ ಬೀಚ್ನಲ್ಲಿ ಡಿಸೆಂಬರ್ ೨೮ ಹಾಗೂ ೨೯ರಂದು ಬೈಂದೂರು ಬೀಚ್ ಉತ್ಸವ ಜರುಗಲಿದ್ದು, ಉತ್ಸವದ ಸಿದ್ದತೆಗಳ ಬಗ್ಗೆ ಬೆಸುಗೆ ಫೌಂಡೇಶನ್ನ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ತಾಲೂಕು ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಬೈಂದೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರಕಾರ, ಇಲಾಖೆ, ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಹಾಗೂ ನಾಗರಿಕರ ನಡುವಿನ ಕೊಂಡಿಯಾಗಿ ನಿಂತು ಮಾದರಿ ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡ ’ಬೆಸುಗೆ ಫೌಂಡೇಶನ್ ರಿ. ಬೈಂದೂರು’ ಸಂಸ್ಥೆಯ ಸಾರಥ್ಯದಲ್ಲಿ ಪಡುವರಿ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಪ್ರಪ್ರಥಮ ಭಾರಿಗೆ ಆಯೋಜನೆಗೊಂಡಿದೆ ಬೈಂದೂರು ಬೀಚ್ ಉತ್ಸವವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ ಎಂದರು. ದಿ. ೨೮ ಡಿಸೆಂಬರ್ ೨೦೧೭ರ ಗುರುವಾರ ಬೆಳಿಗ್ಗೆ ೯ ಗಂಟೆಗೆ ಗಾಳಿಪಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಅರೆಶಿರೂರಿನಿಂದ ಮಂಗಳೂರಿಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೊಳಿಹೊಳೆ ಗ್ರಾಮದ ಅರೆಶಿರೂರಿನ ಆರನೇ ತರಗತಿ ವಿಧ್ಯಾರ್ಥಿನಿ, ಕಪ್ಪಾಡಿ ಶಾಲೆಯ ಮುಖ್ಯಶಿಕ್ಷಕ ಸಂಜೀವ ಗೌಡ ಅವರ ಮಗಳು ಅನುಷಾ ಗೌಡ (11) ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದಲ್ಲಿ ಸ್ಪಲ್ಪ ಮಟ್ಟಿನ ಸುಧಾರಣೆ ಕಂಡ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಕೆಗೆ ಮತ್ತೆ ನೋವು ಹೆಚ್ಚಾಗಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ ಕರ್ನಾಟಕ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರನ್ನು ಸಂಪರ್ಕಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರವಿ ಶೆಟ್ಟಿ ಬಾಲಕಿಯ ಚಿಕಿತ್ಸೆಯ ವಿವರಗಳನ್ನು ಬೆಂಗಳೂರಿನ ವೈದ್ಯರಿಗೆ ತಲುಪಿಸಿದಾಗ ಕೂಡಲೇ ಚಿಕಿತ್ಸೆಗೆ ಕರೆತಂದರೆ ಯಕೃತ್ತಿನ ಕಸಿ ಚಿಕಿತ್ಸೆ ನೀಡಬಹುದು. ಚಿಕಿತ್ಸೆಗೆ 25ಲಕ್ಷ ಹಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಗೂರು ಕುಸುಮ ಫೌಂಡೇಶನ್ ಇವರ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡೀನ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ವಿ ನಾವಡ ಹಾಗೂ ಜಾನಪದ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಸಂಶೋಧಕರು ವಿಮರ್ಶಕರು ಆಗಿರುವ ಡಾ. ಗಾಯತ್ರಿ ನಾವಡ ಮಂಗಳೂರು ಇವರಿಗೆ ಪ್ರದಾನ ಮಾಡಲಾಗುತ್ತಿದೆ. ಡಿ.24 ಭಾನುವಾರ ರಾತ್ರಿ 8:30ಕ್ಕೆ ನಡೆಯುವ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಕುಸುಮ ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಸಲಹೆಗಾರ ವೀಗನ್ ಶಂಕರನಾರಾಯಣ, ಕುಸುಮಾಂಜಲಿ ನಿರ್ದೇಶಕಿ ರೇಷ್ಮಾ ಉಪಸ್ಥಿತರಿದ್ದರು. ► ಡಿ.24ರಂದು ನಾಗೂರಿನಲ್ಲಿ ಸಾಂಸ್ಕೃತಿಕ ಉತ್ಸವ – ಕುಸುಮಾಂಜಲಿ 2017 -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಶಿಕ್ಷಣ ತಜ್ಞ, ಸಾಂಸ್ಕತಿಕ ಧುರೀಣ ಹಾಗೂ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಷನ್ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. 2018ರ ಜನವರಿ 12, 13 ಮತ್ತು 14 ರಂದು ಕಂಬದಕೋಣೆಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜರಗುವ ಈ ನುಡಿಹಬ್ಬದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಮೂರು ದಿನಗಳ ನುಡಿ ಜಾತ್ರೆಗೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
