Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ ಡಾ.ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ಕುಂದಾಪುರದಲ್ಲಿ ನಡೆದ ಕಸಾಪ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬೈಂದೂರು ಹೋಬಳಿ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಡಾ.ಸುಬ್ರಹ್ಮಣ್ಯ ಭಟ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಬೈಂದೂರಿನ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕತೆ, ಕವನ, ಲೇಖನ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರ ಹಲವು ಪುಸ್ತಕಗಳು ಪ್ರಕಟಗೊಂಡಿವೆ. ಇವರು ಬರೆದ ಕತೆ ‘ವಿಷದ ಮಳೆ’ ತುಳುಭಾಷೆಯಲ್ಲಿ ಚಲನಚಿತ್ರವಾಗಿದ್ದು, 2005ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನವಾಚನಗೈದಿರುವ ಇವರು ಹಲವು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಉಡುಪಿ ಜಿಲ್ಲಾ ಆರ್ಟಿಐ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಜನಸ್ಪಂದನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಇಲ್ಲಿನ ಬಂದರು ರಸ್ತೆಯ ಶ್ರೀ ಚೌಡೇಶ್ವರಿ ಯುತ್ ಕ್ಲಬ್‌ನ ಯುಗಾದಿ ಹಬ್ಬ ಆಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಗುರುವಾರ ಗಂಗೊಳ್ಳಿಯ ಬಂದರಿನ ದೊಡ್ಡಹಿತ್ಲು ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪುಂದದ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಂತೆ ಯುಗಾದಿ ಹಬ್ಬವು ಹಿಂದುಗಳಿಗೆ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಆಚರಣೆಯ ಮಹತ್ವ ಹಾಗೂ ಉದ್ದೇಶವನ್ನು ಎಲ್ಲರೂ ಅರಿತುಕೊಂಡು ಸಂಭ್ರಮದಿಂದ ಯುಗಾದಿ ಆಚರಣೆ ಮಾಡಬೇಕು. ಕಳೆದ ಸಂವತ್ಸರದ ಕಹಿಯನ್ನು ಮರೆದು ಈ ಹೊಸ ಸಂವತ್ಸರವು ಎಲ್ಲರಿಗೂ ಸಂತೋಷ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತರುವಂತಾಗಲಿ ಎಂದು ಶುಭ ಹಾರೈಸಿದರು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಪ್ರಭು, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ, ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಶುಭಾಶಂಸನೆಗೈದರು. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮಡಿ ಹರೀಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ. ಎಸ್. ಯಡಿಯೂರಪ್ಪನವರು ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ ಸುಕುಮಾರ್ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ ನೂತನ ರಾಜ್ಯಾಧ್ಯಕ್ಷರಿಗೆ ಶುಭಕೋರಿದ್ದಾರೆ. ಬೈಂದೂರು ಬೈಪಾಸ್ ಬಳಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿಕೊಂಡು ಬಿಎಸ್‌ವೈಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಾಂತ್ಯದ ಅಧ್ಯಕ್ಷ ಬಾಲಕೃಷ್ಣ ಬೈಂದೂರು, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಗೋಪಾಲ ಕಾಂಚನ್, ತಾಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಸದಾಶಿವ ಡಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಕಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟರಿಗೆ ಕುಂದಾಪುರದ ಜನಪರ, ಪ್ರಗತಿಪರ ವೇದಿಕೆ ಸಂಚಾಲಕ ಮಾಣಿ ಗೋಪಾಲ ಅಭಿನಂದನೆ ಸಲ್ಲಿಸಿದರು. ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಪುರಸಭಾ ಸದಸ್ಯರಾದ ಶಕುಂತಲಾ ಗುಲ್ವಾಡಿ, ಪುಷ್ಪ ಶೇಟ್, ಜ್ಯೋತಿ ಕೋಡಿ, ವೇದಿಕೆ ಸಹಸಂಚಾಲಕ ರಾಮಕೃಷ್ಣ ಹೇರ್ಳೆ, ಗಿರೀಶ್ ಕುಂದಾಪುರ, ಶ್ರೀಧರ ಆಚಾರ್ಯ, ಶೈಲೇಶ್, ಸದಸ್ಯರಾದ ಕಾಳಪ್ಪ ಪೂಜಾರಿ, ಗೋಪಾಲ ಬಂಗೇರ, ಕಾರ್ತಿಕ್ ಮಧ್ಯಸ್ಥ, ರಂಜಿತ್ ಕುಮಾರ್ ಶೆಟ್ಟಿ, ಸತೀಶ್ ಹೆಗ್ಡೆ, ದೀಪಕ್ ನಾವುಂದ, ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ, ಸ್ಟೀವನ್ ಡಿ’ಕೋಸ್ಟ, ಶ್ರೀಧರ ಪಿ.ಎಸ್., ನಾಗರಾಜ ಪುತ್ರನ್, ಕೋಡಿ ಸುನೀಲ್ ಪೂಜಾರಿ, ಅಶೋಕ ಸಾರಂಗ, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ: ಬಿಲಿಂಡರ್ ಕುಂದಾಪ್ರ ಕನ್ನಡ ಚಿತ್ರದ ಟ್ರೇಲರ್ ನೋಡಿ. ಎಪ್ರಿಲ್ 22ರಂದು ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಸಿನೆಮಾ ಬಿಡುಗಡೆಗೊಳ್ಳಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಓದುಗನ ಮನಸ್ಸಿನ ಕಣ್ಣಿಗೆ ಕಟ್ಟುವ ಪ್ರತಿಮೆಗಳನ್ನು ರೂಪಿಸುವ ಭಾಷೆ, ಹೃದಯ ಸಂಸ್ಪರ್ಷಿಯಾಗುವ ಭಾವ, ಚಿಂತನೆಗೆ ಹಚ್ಚುವ ಬುದ್ಧಿಪ್ರಧಾನವೆನಿಸುವ ವಿಷಯಗಳಿಂದ ಕೂಡಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಹಲವು ಕವನಗಳು ಸಾವಯವ ಶಿಲ್ಪದಂತೆ ಕಂಡುಬರುತ್ತವೆ. ಅವು ಒಂದು ಓದಿಗೆ ದಕ್ಕುವವುಗಳಲ್ಲ ಎಂದು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಮೊಗೇರಿ ಗೋಪಾಲಕೃಷ್ಣ ಅಡಿಗರ ಭಾವಗೀತೆಗಳನ್ನು ಹಾಡುವ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಅಡಿಗರ ಕಾವ್ಯದ ಕ್ಲಿಷ್ಟತೆಯ ಕಾರಣದಿಂದ ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಪಾಯದ ಕುರಿತು ಅವರು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಎ. ಎಸ್.ಎನ್. ಹೆಬ್ಬಾರ್ ಕಾವ್ಯ ಕಾಗದದಲ್ಲಿದ್ದರೆ ಸಾಲದು. ಅದು ಜೀವ, ತೇಜಸ್ಸು ಮತ್ತು ಜೀವಂತಿಕೆಯಿಂದ ಹೊರ ಹೊಮ್ಮಬೇಕಾದರೆ ಹಾಡಾಗಿ ಪ್ರವಹಿಸಬೇಕು. ಆ ದೃಷ್ಟಿಯಿಂದ ಹಾಡುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಗಳೂರು: ಯುವ ಪತ್ರಕರ್ತ, ಪ್ರಜಾವಾಣಿಯ ಮಂಗಳೂರು ವರದಿಗಾರ ಹೈಮದ್ ಹುಸೇನ್(28) ಇಂದು ಮಧ್ಯಾಹ್ನ ಹೃದಯಾಘಾತದಿಂದ ಚಾರ್ಮಾಡಿಯಲ್ಲಿ ನಿಧನ ಹೊಂದಿದ್ದಾರೆ. ಯುಗಾದಿಯ ಪ್ರಯುಕ್ತ ಕಛೇರಿಗೆ ರಜೆ ಇದ್ದ ಕಾರಣ ಸಹ್ಯಾದ್ರಿ ಸಂಚಯ ಸಮಿತಿ ಆಯೋಜಿಸಿದ್ದ ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ ಅವರಿಗೆ ಹೃದಯಾಘಾತವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೈಮದ್ ಮೂಲತಃ ರಾಯಚೂರಿನವರಾಗಿದ್ದು, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮಂಗಳೂರು ಪ್ರಜಾವಾಣಿಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುವವರಿದ್ದರಲ್ಲದೇ, ಹಾವೇರಿ ಕಛೇರಿಗೆ ವರ್ಗವಾಗುವವರಿದ್ದರು. ಹೈಮದ್ ಅವರ ನಿಧನಕ್ಕೆ ‘ಕುಂದಾಪ್ರ ಡಾಟ್ ಕಾಂ’ ಬಳಗ ಸಂತಾಪ ಸೂಚಿಸುತ್ತದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದಲ್ಲಾಗುವ ವೈಪರಿತ್ಯವನ್ನು ಸರಿಪಡಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಸಂಸ್ಕಾರಯುತ ಶಿಕ್ಷಣವನ್ನು ಮೊದಲು ಮನೆಯಿಂದಲೇ ಆರಂಭಿಸಿದಾಗ ಮಾತ್ರ  ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ತ್ಯಾಗ ಬಲಿದಾನ ಇಲ್ಲದೆ ಧರ್ಮ, ದೇಶ ಉಳಿಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಸಹ ಕಾರ್ಯವಾಹ ಜನಾರ್ದನ್ ಉಪ್ಪಳ ಹೇಳಿದರು. ಬೈಂದೂರು ಜಯಾನಂದ ಹೋಬಳಿದಾರ್ ಅವರ ನಿವಾಸದಲ್ಲಿ ನಡೆದ ’ಭಾರತ್ ಮಾತಾ ಪೂಜನ’ ಕಾರ್ಯಕ್ರಮ ಉದ್ಘಾಟಿಸಿ (ಭೌದ್ದಿಕ್) ಮಾತನಾಡಿದರು. ಭಾರತೀಯರಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಶಕ್ತಿ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಸಮಾಜದಲ್ಲಿ ತಾರತಮ್ಯ ಸಲ್ಲದು. ಇಲ್ಲಿ ಜಾತಿ ಭೇಧಕ್ಕಿಂತ ರೀತಿ-ನೀತಿ ಮುಖ್ಯವಾಗಿರಬೇಕು. ಭಾರತವೇ ನಮ್ಮ ಆತ್ಮ, ಪ್ರಾಣ, ಉಸಿರು. ಹಿಂದುತ್ವ ಸ್ವಾಭಿಮಾನ ಸಂಕೇತ ಎಂದರು. ’ಜಯ ಜಯ ಹೇ ಭಗವತಿ ಸುರ ಭಾರತಿ ತವ ಚರಣೌ ಪ್ರಣಮಾಮ್ಯಹಂ’ ಸಮೂಹ ಗೀತೆಯೊಂದಿಗೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆರತಿ ಬೆಳಗಿದ ನಂತರ ಮೂರ್ತಿ ಬೈಂದೂರು ಹಾಡಿದ ದೇಶಭಕ್ತಿ ಗೀತೆಯೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಮತ್ತು ಕಲಾ ಪ್ರತಿಭೆಯನ್ನು ಆಕಾಶವಾಣಿಯ ಮೂಲಕ ಕೇಳುಗರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಆವಶ್ಯಕ ಎಂದು ಮಂಗಳೂರು ಆಕಾಶವಾಣಿ ಬಾಲವೃಂದ ವಿಭಾಗದ ನಿರ್ದೇಶಕಿ ಶುಭದಾ ಅವರು ಹೇಳಿದರು. ಮಂಗಳೂರು ಆಕಾಶವಾಣಿ ಸಹಯೋಗದೊಂದಿಗೆ ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರಗಿದ ಸಮುದಾಯದತ್ತ ಶಾಲೆ ಮತ್ತು ಆಕಾಶವಾಣಿಯಲ್ಲಿ ಪ್ರತೀ ರವಿವಾರ ಪ್ರಸಾರವಾಗುವ ಚಿಣ್ಣರ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಬಾಲವೃಂದ ಧ್ವನಿಮುದ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುಕುಮಾರ ದೇವಾಡಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರಸಾರಗೊಳಿಸುವ ಆಕಾಶವಾಣಿಯ ಕಾರ್ಯ ಪ್ರಶಂಸನೀಯ ಎಂದರು. ಮುಖ್ಯ ಅತಿಥಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಮಲತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ದೇವಾಡಿಗ, ಸುರೇಂದ್ರ, ಶಿಕ್ಷಕರ ಸಂಘದ ಸದಸ್ಯೆ ಗಿರಿಜಾ, ಸಮುದಾಯದತ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನವೋದಯದಲ್ಲಿ ಕಾವ್ಯ ರಚನೆ ಆರಂಭಿಸಿ, ನವ್ಯ ಪಂಥವನ್ನು ಹುಟ್ಟುಹಾಕಿ ನವ್ಯೋತ್ತರದಲ್ಲೂ ಪ್ರಸ್ತುತರೆನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯದ ನಡೆ ಅನನ್ಯವಾದುದು. ತಮ್ಮ ಸಮಕಾಲೀನ ಪ್ರಪಂಚಕ್ಕೆ ಅಡಿಗರಂತೆ ಸ್ಪಂದಿಸಿದ ಕವಿ ಇನ್ನೊಬ್ಬರಿಲ್ಲ. ಭಾಷೆ ಮತ್ತು ಪ್ರತಿಮೆಗಳ ಬಳಕೆಯಲ್ಲಿ ಅವರು ಏರಿದ ಔನ್ನತ್ಯ ಅಸಾಧಾರಣವಾದುದು. ಅವರ ಕಾವ್ಯ ಅವರ ಕಾಲವನ್ನೂ ಮೀರಿ ಓದು, ಚರ್ಚೆ, ವಿಮರ್ಶೆಗೆ ಒಳಗಾಗುತ್ತಿರುವುದು ಅದರ ಸಾರ್ವಕಾಲಿಕ ಮೌಲ್ಯಕ್ಕೆ ಸಾಕ್ಷಿ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಸಿರಿ ಮೊಗೇರಿ ಸಮಷ್ಟಿ ವೇದಿಕೆಯ ಆಶ್ರಯದಲ್ಲಿ ಮೊಗೇರಿ ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಆರಂಭವಾದ ಅಡಿಗರ ಪ್ರಸಿದ್ಧ ಭಾವಗೀತೆಗಳ ಹಾಡುವ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕನ್ನಡ ಕಾವ್ಯ ಪರಂಪರೆಯಲ್ಲಿ ಶಾಶ್ವತ ಸ್ಥಾನ ಪಡೆದ ಅಡಿಗರು ಮೊಗೇರಿಯ ಅಮೂಲ್ಯ ಆಸ್ತಿ. ಇಲ್ಲಿ ಅಡಿಗರ ನಿರಂತರ ಸ್ಮರಣೆ ನಡೆಸುವ ಮೂಲಕ ಈ ಹಿರಿಮೆಯನ್ನು ಮೊಗೇರಿ ತನ್ನದಾಗಿಸಿಕೊಳ್ಳಬೇಕು ಎಂದು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ…

Read More