ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರು ಗ್ರಾಮದ ಮೂಡುತಾರಿಬೇರು ಶ್ರೀ ಆದಿಶಕ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು 1ಲಕ್ಷ ರೂ. ಡಿ.ಡಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ ಅವರು ದೇವಸ್ಥಾನದ ಸಮಿತಿಯವರಿಗೆ ಡಿ.ಡಿಯನ್ನು ಇತ್ತೀಚೆಗೆ ಹಸ್ತಾಂತರಿಸಿದರು. ಚಿತ್ತೂರು ವಲಯದ ಮೇಲ್ವಿಚಾರಕ ಪ್ರಭಾಕರ ದೇವಸ್ಥಾನದ ಸಮಿತಿಯವರಾದ ನಾಗರಾಜ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಸಹಯೋಗದೊಂದಿಗೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳು ಅಭಿನಯಿಸಿದ ಧಾಂ ಧೂಂ ಸುಂಟರಗಾಳಿ ನಾಟಕ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಪ್ರದರ್ಶನಗೊಂಡಿತು. ಶೇಕ್ಸ್ಫಿಯರ್‌ನ್ ಟಿಂಪೆಸ್ಟ್ ಆಧಾರಿತ ನಾಟಕ ಧಾಂ ಧೂಂ ಸುಂಟರಗಾಳಿ ನಾಟಕವನ್ನು ಖ್ಯಾತ ಲೇಖಕಿ ವೈದೇಹಿ ರಚಿಸಿದ್ದು, ಕ್ರಿಯಾಶೀಲ ನಿರ್ದೇಶಕ ಜೀವನ್‌ರಾಂ ಸುಳ್ಯ ರಂಗದ ಮೇಲೆ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳ ನಟನೆ, ರಂಗವಿನ್ಯಾಸ, ಬೆಳಕಿನ ಸಂಯೋಜನೆ, ಸಂಗೀತ, ವಸ್ತ್ರ ವಿನ್ಯಾಸ, ರಂಗತಂತ್ರ, ಜಾದೂ ಸಂಯೋಜನೆ, ಪ್ರಸಾದನ ಎಲ್ಲಾ ವಿಭಾಗಗಳಲ್ಲಿಯೂ ನಾಟಕ ಉತ್ತಮವಾಗಿ ಮೂಡಿಬಂದಿದ್ದು, ಮಕ್ಕಳಿಗೆ ವಿಶೇಷ ಮನೋರಂಜನೆ ನೀಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದಿ. ಕೆ. ಶ್ರೀನಿವಾಸ ರಾವ್ ಮತ್ತು ಪದ್ಮಾವತಿ ಎಸ್. ರಾವ್ ಹೇರಂಜಾಲು ಇವರ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನ ಹಾಗೂ ರಾಮಕ್ಷತ್ರಿಯ ಸಮಾಜ ಕುಂದಾಪುರ, ಬೈಂದೂರು ಇದರ ಆಶ್ರಯದಲ್ಲಿ ಹೇರಂಜಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸದಾನಂದ ಸೇರ್ವೇಗಾರ್ ಅವರನ್ನು ಸನ್ಮಾನಿಸಲಾಯಿತು. ಹೆರಂಜಾಲು ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ. ಪದ್ಮನಾಭ ರಾವ್, ಸುಶೀಲ ಪಾಂಡುರಂಗ ನಾಯಕ್, ವಿಷ್ಣುಮೂರ್ತಿ ಕುಂದಾಪುರ, ರಶ್ಮಿರಾಜ್ ಕುಂದಾಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನರೇಂದ್ರ ಎಸ್ ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗುವುದರ ಮುಖೇನ ಪಿಯುಸಿ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಹೂರಣ ಮತ್ತೆ ಬಟಾಬಯಲಾಗಿದೆ. ಅಸಲಿಗೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ.ಕಳೆದ ಹಲವಾರು ವರುಷಗಳಿಂದ ಪ್ರತೀ ಬಾರಿ ಕೂಡ ದ್ವಿತೀಯ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳು ಬಯಲಾಗುವುದು ಪರೀಕ್ಷಾ ಮಂಡಳಿ ಅದನ್ನು ಅಲ್ಲಗಳೆಯುವುದು ನಡೆದೇ ಇದೆ. ಆಗೊಮ್ಮೆ ಈಗೊಮ್ಮೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆ ಮಾಡಿದ ಸಂದರ್ಭಗಳು ಬಹಳಷ್ಟು ನಡೆದಿವೆ. ಈ ಬಾರಿ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಕೂಡ ಲೀಕ್ ಆಗಿರುವುದು ಪಿಯುಸಿ ಮಂಡಳಿಯಲ್ಲಿ ಏನೊಂದೂ ಸರಿ ಇದ್ದ ಹಾಗೆ ಕಾಣುವುದಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ. ಪ್ರಾಯಶಃ ಅವತ್ತು ವಿದ್ಯಾರ್ಥಿಯೊಬ್ಬ ನಿರ್ದೇಶಕರಿಗೆ ನೇರವಾಗಿ ಪ್ರಶ್ನೆಪತ್ರಿಕೆಯನ್ನು ನೀಡಿರದಿದ್ದರೆ ರಸಾಯನಶಾಸ್ತ್ರ ಪರೀಕ್ಷೆಯೂ ಸಾಂಗವಾಗಿ ನಡೆದುಬಿಡುತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ಹಿಂದೆಯೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಗೊತ್ತಿದ್ದೂ ಸಾಕ್ಷ್ಯಗಳು ಲಭ್ಯವಿದ್ದು ಪರೀಕ್ಷೆಗಳು ಮಾಮೂಲಿನಂತೆ ನಡೆದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ2: ಇಲ್ಲಿನ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಕಾರ್ಯದರ್ಶಿಯಾಗಿ ರವಿಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರ ಎದುರು ಬನ್ನಾಡಿ ಸೋಮನಾಥ ಹೆಗ್ಡೆ 68 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು ಚಲಾವಣೆಯಾಗ 181ಮತಗಳಲ್ಲಿ ಸೋಮನಾಥ ಹೆಗ್ಡೆ128 ಮತಗಳನ್ನು ಪಡೆದಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊರದೇಶದಲ್ಲಿದ್ದರೂ ತಾಯ್ನೆಲದ ಸಂಸ್ಕೃತಿ ಪರಂಪರೆ ಭಾಷೆ ಉಳಿಸಿ ಬೆಳೆಸುವ ಉದ್ದೇಶದಿಂದ ಕುವೈಟ್ ರಾಷ್ಟ್ರದಲ್ಲಿನ ಜಿಎಸ್‌ಬಿ ಸಭಾದವರು ವರ್ಷಂಪ್ರತಿ ಆಚರಿಸುವ ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ವಿಶೇಷವಾಗಿ ಸಾಹಿತಿ ಓಂ ಗಣೇಶ್ ಭಾಷಾಂತರಿಸಿದ ’ಬಾಯ್ಲ ಬ್ಹಾಡೆ ಬಾಯ’ ಕೊಂಕಣಿ ಹಾಸ್ಯ ನಾಟಕ ಪ್ರದರ್ಶಿಸಲಿದ್ದಾರೆ. ಅಲ್ಲೇ ನೆಲೆನಿಂತ ಸಮಾಜ ಭಾಂದವರು ಮೇಳೈಸಿ ಪ್ರದರ್ಶಿಸುವ ಈ ಅಕಾಡೆಮಿ ಪುರಸ್ಕೃತ ಕೊಂಕಣಿ ಪ್ರಯೋಗದ ರಂಗ ತಾಲೀಮು ಈಗಾಗಲೆ ಆರಂಭಗೊಂಡಿದ್ದು ಡಾ. ಸುರೇಂದ್ರ ನಾಯಕ್ ಕಪಾಡಿ ಹಾಗೂ ನವೀನ್ ಪ್ರಭು ಜಂಟಿಯಾಗಿ ನಟಿಸಿ ನಿರ್ದೇಶಿಸುತ್ತಿದ್ದಾರೆ. ಸ್ಪೂರ್ತಿ ಶೆಣೈ, ವಿಶ್ವನಾಥ್ ಪ್ರಭು, ಅಂಜಲಿ ಪ್ರಭು, ಶ್ರೀನಿವಾಸ ಪ್ರಭು, ಶಶೀಧರ ಪ್ರಭು, ದಿನೇಶ್ ಪೈ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕೃತಿಕಾರ ನಟ ಓಂಗಣೇಶ್ ಸಹ ಗೌರವ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏ. 15ರ ಸಂಜೆ ನಾಲ್ಕರಿಂದ ಅಲ್ಲಿನ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ಆರಂಭಗೊಳ್ಳುವ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕ್ ಪಂಚಾಯತ್, ತ್ರಾಸಿ ಮತ್ತು ಹೊಸಾಡು ಗ್ರಾಮ ಫಂಚಾಯತ್ ಆಶ್ರಯದಲ್ಲಿ ತ್ರಾಸಿ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಸ್ವಚ್ಛತಾ ಸಪ್ತಾಹ ಮತ್ತು ಅರಿವು ಕಾರ‍್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಸ್ವಚ್ಛತಾ ಆಂದೋಲನಾ ಪ್ರತಿಯೊಬ್ಬರ ಮನೆಯಿಂದಲೇ ಆರಂಭವಾಗಬೇಕು.ಅಂv ರಂಗ ಬಹಿರಂಗ ಶುದ್ಧಿಗೆ ಕೊಡುವಷ್ಟೇ ಪ್ರಾಮುಖ್ಯತೆ ಪರಿಸರದ ಸ್ವಚ್ಛತೆಗೂ ನೀಡಿದರೆ ಸ್ವಚ್ಛತಾ ಆಂದೋಲನಕ್ಕೊಂದು ಬೆಲೆ ಬರುತ್ತದೆ ಎಂದು ಬೈಂದೂರು ಶಾಸಕ ಹೇಳಿದರು. ತ್ರಾಸಿ ಗ್ರಾಪಂ. ಅಧ್ಯಕ್ಷ ವೆಂಕಟ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿ ಜಿಪಂ. ಸದಸ್ಯೆ ಶೋಭಾ ಜಿ. ಪುತ್ರನ್, ತ್ರಾಸಿ ತಾಪಂ. ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಹೆಮ್ಮಾಡಿ ತಾಪಂ. ಸದಸ್ಯ ರಾಜು ದೇವಾಡಿಗ, ಹೊಸಾಡು ಗ್ರಾಪಂ. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಆರಾಟೆ, ತ್ರಾಸಿ ಗ್ರಾಪಂ. ಉಪಾದ್ಯಕ್ಷೆ ಜೀತಾ ಡಿಸಿಲ್ವಾ, ಹೊಸಾಡು ಗ್ರಾಪಂ. ಉಪಾಧ್ಯಕ್ಷ ವಂದನಾ ಖಾರ್ವಿ, ಹೊಸಾಡು ಗ್ರಾಪಂ. ಸದಸ್ಯ ಸೀತಾರಾಮ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವ್ರಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾಗಿ ಆಯ್ಕೆಗೊಂಡ ಜ್ಯೋತಿ ಎಮ್. ಅವರಿಗೆ ತ್ರಾಸಿಯ ಮೊವಾಡಿಯಲ್ಲಿ ಹುಟ್ಟೂರ ಸನ್ಮಾನವನ್ನು ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಂತ ಮೊವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ, ಉಪಾಧ್ಯಕ್ಷೆ ಜೀತ ಡಿ’ಸಿಲ್ವಾ, ಸದಸ್ಯರಾದ ವಿಜಯ ಪೂಜಾರಿ, ರತ್ನಾವತಿ, ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಮೊಕ್ತೆಸರ ಬಿ.ಕೆ.ನಾರಾಯಣ, ಸುಧಾಕರ್ ಮೊವಾಡಿ, ಮೊವಾಡಿ ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಶೇಖರ್ ಗಾಣಿಗ, ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಉಮೇಶ್ ಹಾಗೂ ಮಂಜು ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧರ್ಮವೆಂಬುದು ಎಲ್ಲರನ್ನೂ ಒಳ್ಳೆಯತನದಲ್ಲಿ ಬದುಕುವಂತೆ ಮಾಡುವ ವ್ಯವಸ್ಥೆ. ಬೆಟ್ಟದಷ್ಟು ಆಶೋತ್ತರಗಳು ಈಡೇರಿಸಿಕೊಳ್ಳುವ ಆತುರದಲ್ಲಿ ಅನ್ಯಾಯ, ಅಧರ್ಮ ಮಿತಿಮೀರಬಾರದು ಎಂಬ ಕಾರಣಕ್ಕೆ ಧರ್ಮದ ಚೌಕಟ್ಟನ್ನು ಹಾಕಲಾಯಿತು. ಧರ್ಮದ ಹಿಂದೆ ದೈವಿಶಕ್ತಿ ಇದ್ದಾಗ ಮನುಷ್ಯ ಸನ್ಮಾರ್ಗದಲ್ಲಿ ನಡೆಯುತ್ತಾನೆ ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತ ಶಿಲಾ ದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನವಿತ್ತು. ಧರ್ಮ-ಅಧರ್ಮ, ಸುಖ-ದುಖಃಗಳ ಕಲ್ಪನೆಯೇ ಇಲ್ಲದ ಚಾರುವಾಕನ ಸಿದ್ಧಾಂತವನ್ನು ಒಪ್ಪಿ ನಡೆದರೇ ಸಮಾಜಲ್ಲಾಗುವ ಅನ್ಯಾಯಗಳನ್ನು ಸರಿ ಎನ್ನಬೇಕಾದಿತು. ಆಸ್ತಿಕನ ಬದುಕಿನ ನಡೆಯ ಹಿಂದಿನ ದೈವೀಶೃದ್ಧೆ ಹಾಗೂ ನಂಬಿಕೆ ತಪ್ಪು ಮಾಡಲು ಹಿಂಜರಿಯುವಂತೆ ಮಾಡುತ್ತದೆ. ಕೈಮೀರಿ ತಪ್ಪುಗಳಾದಗೂ ಆತ ಪಶ್ಚಾತಾಪ ಪಡುತ್ತಾನೆ. ಜೀವನದಲ್ಲಿ ಧರ್ಮ-ಅಧರ್ಮ, ಪುಣ್ಯ ಪಾಪದ ಕಲ್ಪನೆ ಇದ್ದರೆ ಮಾತ್ರ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ನಮ್ಮನ್ನು ಮೀರಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಿವೈಎಫ್‌ಐ ರಾಜ್ಯಮಟ್ಟದ ಯುವಜನ ಶಿಬಿರ ಇಲ್ಲಿನ ಕಾರ್ಮಿಕ ಭವನದಲ್ಲಿ ಜರುಗಿತು. ಚನೈ ಪತ್ರಿಕೋದ್ಯಮ ಕಾಲೇಜಿನ ಪ್ರಾಧ್ಯಾಪಕ ಕೆ. ನಾಗರಾಜ್ ಉಡುಪ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕಾರ್ಯದರ್ಶಿ ರಾಜಶೇಖರ ಮೂರ್ತಿ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಹೆಚ್ ನರಸಿಂಹ, ಸ್ವಾಗತ ಸಮಿತಿ ಅದ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ, ಸಂತೋಷ ಹೆಮ್ಮಾಡಿ, ರಾಜೇಶ್ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.
