ಮೂಡಬಿದಿರೆ: ಪುತ್ತಿಗೆ ಸಭಾಂಗಣದಲ್ಲಿ ನುಡಿಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಅತಿಥಿಗಳನ್ನು ಕರೆದೊಯ್ಯಲು ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯ ನುಡಿಸಿರಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿತ್ತು. ಸುಮಾರು 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದ್ದವು. ಗರ್ನಲ್, ಪೋಲಿಸ್ ಬ್ಯಾಂಡ್, ನಂದಿ ಧ್ವಜ, ಪಕ್ಕಿನಿಶಾನೆ, 40 ತಟ್ಟಿರಾಯ, ಶಂಖ, 25 ಕೊಂಬು, 15 ಚೆಂಡೆ, ಆಟಿಕಳೆಂಜ, ರಮೇಶ್ ಕಲ್ಲಡ್ಕ ಅವರ ಕೀಲು ಕುದುರೆ, ಕರಗ, ಕೊಡೆಗಳು, ಪೂತನಿ, ಯಕ್ಷಗಾನ (ಬಡಗು, ತೆಂಕು), ಮಂಗಳೂರು ಡೋಲು, ಗೊರವರ ಕುಣಿತ, ಸೋಮನ ಕುಣಿತ, ಕಂಗೀಲು, ಪೂಜಾಕುಣಿತ (ದೇವರಾಜ್ ಮಂಡ್ಯ), ವೀರಭದ್ರನ ಕುಣಿತ, ಚಿತ್ರದುರ್ಗ ಬ್ಯಾಂಡ್ ಸೆಟ್, ಕೊಡಗಿನ ಉಮ್ಮತಾಟ್, ದುಡಿಕುಣಿತ, ಬೆಂಡರ ಕುಣಿತ, ತ್ರಿವರ್ಣ ಧ್ವಜ, ಕೇರಳದ ದೇವರ ವೇಷ, ಕುಂದಾಪುರ ಡೋಲು, ಭಜನಾ ತಂಡ, ಭಜನೆಗಾರರು, ಶ್ರೀಲಂಕಾ ಕಲಾವಿದರು, ಲಂಬಾಣಿ, ಬೀದಿ ಜಾದೂಗಾರರು+ಸುಡುಗಾಡು ಸಿದ್ಧರು, ಬಿಜಾಪುರ, ಬಾಗಲಕೋಟೆಯ ಉಡುಪುಗಳು, ಮೈಸೂರಿನ ಪೇಟ, ಕೋಟು, ಕಚ್ಚಾ, ಗುಮ್ಟೆ ಕುಣಿತ, ಹಗಲು ವೇಷ, ಸ್ಕೌಟ್ ಗೈಡ್ಸ್, ನಗಾರಿ(ಮಂಜು…
Author: ನ್ಯೂಸ್ ಬ್ಯೂರೋ
ಮೂಡುಬಿದಿರೆ: ಸಮಾಜದ ಇತರರಿಗೆ ತೊಂದರೆಯಾಗದಂತೆ ಬದುಕುವುದು ನಿಜವಾದ ವ್ಯಕ್ತಿ ಸ್ವಾತಂತ್ರ್ಯವೆನಿಸಕೊಳ್ಳುತ್ತದೆ. ನಮ್ಮ ಮಾತುನಂತೆ ನಡೆವಳಿಕೆ ಕಂಡುಬರುತ್ತಿದ್ದರೆ ಇದು ಸಾಧ್ಯವಾಗುತ್ತದೆ. ಅಭಿವ್ಯಕ್ತಿಯ ಸ್ವಾತಂತ್ರ್ಯವು ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎಂದು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಪ್ರಶ್ನೆಸಿದರು ಅವರು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯುವ ನಾಲ್ಕು ದಿನಗಳ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ 2015ಕ್ಕೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚಾಲನೆ ದೊರೆತ ಬಳಿಕ ನಡೆದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು. ಸಮಾಜ ಸಾಹಿತಿಗಳ ಹಿತ ಕಾಯಬೇಕು; ಸಾಹಿತಿಗಳು ಸಮಾಜದ ಹಿತ ಕಾಯಬೇಕು. ಎರಡು ಕಡೆಗೂ ತಾಳ್ಮೆ ಸಂಯಮ ಸಮಾಧಾನಗಳು ಅವಶ್ಯವಾಗಿರಬೇಕು. ಸರ್ಕಾರದ ನಾಯಕತ್ವವೂ ಸಾಮಾಜಿಕನಾಯಕತ್ವವೂ ಒಗ್ಗೂಡಿ ಶ್ರಮಿಸಬೇಕು…
ಮೂಡುಬಿದಿರೆ: ಸಾಹಿತ್ಯ-ಸಂಗೀತ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸಿ, ಅತನಲ್ಲಿನ ದುಷ್ಟಶಕ್ತಿಗಳನ್ನು ನಾಶಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸಿ ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಎಲ್ಲೆಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಅವಶ್ಯವಿರುವ ಮಾನಸಿಕ ಸ್ಥೈರ್ಯ ಪಡೆಯಲು ಇವೇ ಪೂರಕವಾದುದು. ಈ ನಿಟ್ಟಿನಲ್ಲಿಯೂ ನುಡಿಸಿರಿಯಂತಹ ಕಾರ್ಯಕ್ರಮಗಳು ಮುಖ್ಯವೆನಿಸುತ್ತದೆ ಎಂದು ಸಾಹಿತಿ ಡಾ. ವೀಣಾ ಶಾಂತೇಶ್ವರ ಹೇಳಿದರು. ಅವರು ಮೂಡುಬಿದಿರೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೫ ಉದ್ಘಾಟಿಸಿ ಮಾತನಾಡಿದರು. ಹೊಸದಕ್ಕಾಗಿ ಹುಡಕಾಟ ಮನುಷ್ಯನ ಮೂಲಭೂತ ಸ್ವಭಾವ. ಸಾಹಿತ್ಯದಲ್ಲಷ್ಟೇ ಅಲ್ಲದೇ ವಿಜ್ಞಾನ-ಕೃಷಿ-ಕೈಗಾರಿಕೆ-ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಕ್ರಿಯಾಶೀಲ ಮನಸ್ಸುಗಳು ಹೊಸತನಕ್ಕಾಗಿ, ಭಿನ್ನತೆಗಾಗಿ, ಅನನ್ಯತೆಗಾಗಿ, ಅಸ್ಮಿತೆಗಾಗಿ, ಹುಡುಕಾಟ ನಡೆಸಿಯೇ ಇರುತ್ತವೆ. ಸಾಹಿತ್ಯದೊಳಗಂತೂ ‘ಹಳೆಯಸಾಹಿತ್ಯ’, ‘ಆಧುನಿಕ ಸಾಹಿತ್ಯ’ ಅಂತನ್ನುವುದು ವಿಶ್ಲೇಷಣೆಯ ಅನುಕೂಲಕ್ಕಾಗಿ ನಾವು ಕೊಟ್ಟಿರುವ ಕಾಲಸೂಚಕ ವಿಶೇಷಣಗಳಷ್ಟೇ. ಪ್ರತಿಯೊಂದು ಕಾಲಘಟ್ಟದ ಶ್ರೇಷ್ಠ ಸಾಹಿತ್ಯವೂ ಆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಬೆಳಗ್ಗೆ 10.45ರಿಂದ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿ ಪ್ರಸನ್ನ ಕುಮಾರ ಐತಾಳ್ ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ 5.15ಗಂಟೆಗೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಲೆವೂರು ಶ್ರೀ ವಿಷ್ಟುಪೂರ್ತಿ ಸೇವಾ ಬಳಗದವರ ಚಂಡೆ ವಾದನ, ಹಾಗೂ ಕೆರಳ ಚಂಡೆ ವಾದನ, ಉಡುಪಿಯ ಮಂಜುಷಾ ಮಹಿಳಾ ಚಂಡೆ ಬಳಗ ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ದಾವಣಗರೆಯ ಕೆ.ವಿ. ಆನಂದರಾವ್ ಮತ್ತು ಮಕ್ಕಳಿಂದ ಉಚಿತ ಪಾನಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿಗೆ ಸಮೀಪದ ನಾಗೂರು ಆಂಜನೇಯ ದೇವಸ್ಥಾನದ ಬಳಿ ಬೈಂದೂರು ಕಡೆಗೆ ಸಾಗುತ್ತಿದ್ದ ಸ್ವಿಫ್ಟ್ ಕಾರು ಎದುರಿನಿಂದ ಬರುತ್ತಿದ್ದ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ, ಸೈಕಲ್ ಸವಾರ ನಾಗೂರು ನಿವಾಸಿ ಸುರೇಶ್ ಎಂಬುವವರ ಮಗ ನಾಗೇಶ್(16) ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಸಹಸವಾರ ಅಕ್ಷಯ(16) ಗಾಯಗೊಂಡ ಘಟನೆ ಸಂಜೆ ವರದಿಯಾಗಿದೆ. ಘಟನೆಯ ವಿವರ: ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾಗಿರುವ ನಾಗೇಶ್ ಹಾಗೂ ಅಕ್ಷಯ್ ತರಗತಿ ಅವಧಿಯ ಬಳಿಕ ಗ್ರೂಫ್ ಸ್ಟಡಿ ಮುಗಿಸಿಕೊಂಡು ರಾ.ಹೆ.66ರಲ್ಲಿ ನಾಗೂರು ಆಂಜನೇಯ ದೇವಸ್ಥಾನದ ಸಮೀಪದ ತಮ್ಮ ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಮಂಗಳೂರಿನಿಂದ ಶಿವಮೊಗ್ಗ ಹೊರಟ್ಟಿದ್ದ ಸ್ವಿಫ್ಟ್ ಕಾರು ಒಂದೇ ಸಾರಿ ಬಲಕ್ಕೆ ಚಲಾಯಿಸಿದ್ದರಿಂದ ಎದುರಿಗಿದ್ದ ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ನಾಗೇಶ್ ಸ್ಥಳದಲ್ಲಿಯೇ ಮೃತಪಟ್ಟರೇ, ಹಿಂದೆ ಕುಳಿತಿದ್ದ ಅಕ್ಷಯ್‌ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.(ಕುಂದಾಪ್ರ ಡಾಟ್ ಕಾಂ ಸುದ್ದಿ) ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಬಳಿಕ ನಿಲ್ಲಿಸದೇ ಮುಂದೆ…
ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯದ ಹತ್ತನೇ ವರ್ಷದ ಸಂಭ್ರಮದ ಪ್ರಯುಕ್ತ ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್‌ನಲ್ಲಿ ದಶಾರ್ಪಣಂ ಎಂಬ ವಿನೂತನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನೀರಿನಲ್ಲಿ ಹಣತೆಯನ್ನು ತೇಲಿಸಿ ಕಾರ್ಯಕ್ರಮದ ಉಧ್ಘಾಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ ನಮ್ಮ ಪೂರ್ವಜರು ಕಲೆಯನ್ನು ನಮ್ಮ ಸಂಪ್ರದಾಯ ಹಾಗೂ ಶಿಕ್ಷಣದೊಂದಿಗೆ ಸೇರಿಸಿ ಶಾಸ್ತ್ರೀಯ ಮತ್ತು ಜಾನಪದ ಚೌಕಟ್ಟನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ. ಪ್ರದೇಶಗಳಿಗನುಗುಣವಾಗಿ, ಜನ ಸಮುದಾಯಗಳಿಗನುಗುಣವಾಗಿ ನಮ್ಮಲ್ಲಿ ಹಲವು ಸಂಸ್ಕೃತಿ ಹಾಗೂ ಕಲೆಗೆ ಬಹಳಷ್ಟು ಒತ್ತು ನೀಡಲಾಗುತ್ತಿದೆ. ನಮ್ಮೆಲ್ಲಾ ಶಿಕ್ಷಣಗಳ ಹಂತದಲ್ಲಿ ನಮ್ಮ ಕಲೆಯನ್ನು ಮುಂದೆಯೂ ಜೋಡಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ನಮ್ಮ ಬದುಕಿನ ಕಾಲಘಟ್ಟದಲ್ಲಿ ಭರತನಾಟ್ಯಕ್ಕೆ ನೂರು ವರ್ಷಗಳ ಇತಿಹಾಸದಲ್ಲಿ ಆರಂಭದಿಂದ ಇವತ್ತಿನ ವರೆಗೆ ಹಂತ ಹಂತವಾಗಿ ಬೆಳೆಯುತ್ತಾ ಹೋಗಿದೆ ಎನ್ನುವುದನ್ನು ಗಮನಿಸಿದ್ದೇವೆ. ಅಂದು ಕಲೆ ಹೇಗಿತ್ತು, ಇಂದು ಹೇಗಿದೆ ಎನ್ನುವುದನ್ನು ನಾವು ಅವಲೋಕಿಸಿದರೆ ಕಲೆಗೆ ಬಹಳಷ್ಟು ಗೌರವ ದೊರಕುತ್ತಿದೆ ಎನ್ನುವುದು ಗಮನಾರ್ಹ.…
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಕುಂದಪ್ರಭ ಕುಂದಾಪುರ, ಸಾಹಿತ್ಯ ವೇದಿಕೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗರಿ ಶೆಣೈ ಸ್ಮರಣಾರ್ಥ ಆಯೋಜಿಸಿದ್ದ ಸವಿ-ನುಡಿ ಹಬ್ಬ 2015ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉದ್ಯಮಿಗಳಾದ ದತ್ತಾನಂದ ಗಂಗೊಳ್ಳಿ, ಪ್ರಶಾಂತ ಕುಂದರ್ ಕೋಟ, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಕುಂದಪ್ರಭ ಸಂಪದಕ ಯು.ಎಸ್.ಶೆಣೈ, ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಎಸ್.ವಿ.ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ಎಂ.ಸಿ., ಪ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಪ್ರೀತಿ, ಸ್ನೇಹ, ಮಮತೆ ಎಲ್ಲವೂ ಸಿಗುತ್ತದೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ ಮಾಧ್ಯಮವಾಗಿದೆ. ಇಲ್ಲಿ ಕಲಾವಿದ ತನ್ನ ಕ್ರೀಯಾಶೀಲತೆಯನ್ನು ಬಳಸಿಕೊಂಡು ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಹುದಾಗಿದೆ ಎಂದು ಹಿರಿಯ ರಂಗಕಲಾವಿದೆ ಗೀತಾ ಸುರತ್ಕಲ್ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಬೈಂದೂರು ಸುರಭಿ ಸಂಸ್ಥೆ ಮೂರುದಿನಗಳ ಕಾಲ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಆಯೋಜಿಸಿದ ರಂಗಧ್ವನಿ-2015 ನಾಟಕೋತ್ಸವದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನಗೆ ಸಿಕ್ಕಿದ ಈ ಸನ್ಮಾನ ನಮ್ಮ ತಂಡಕ್ಕೆ ಅರ್ಪಿಸುತ್ತಿದ್ದೇನೆ. ತುಂತುರು ಮಳೆಯನ್ನೂ ಲೆಕ್ಕೆಸದೇ ಪ್ರೇಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಹರ್ಷವ್ಯಕ್ತಪಡಿಸಿದರು. ನಂತರ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಮಾತನಾಡಿ, ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ…
ಕುಂದಾಪುರ: ತಾಲೂಕಿನ ಗಂಗೊಳ್ಳಿ-ಗುಜ್ಜಾಡಿ ಮೂಲದ ಯುವವೈದ್ಯ ಡಾ.ಗುರುಚರಣ್ ಖಾರ್ವಿ (34) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಯೂರೋಲೋಜಿ ವಿಭಾಗದಲ್ಲಿ ವೈದ್ಯರಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿದ್ದರು. ಮೃತರು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿವೃತ್ತ ಮ್ಯಾನೇಜರ್ ಜಿ.ಮಾಧವ ಖಾರ್ವಿ, ತಾಯಿ ಆನಂದಿ ಎಂ.ಖಾರ್ವಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಕುಂದಾಪುರ: ಖಾರ್ವಿಕೇರಿ ರಸ್ತೆಯ ಪ್ರಕಾಶ್ ಇನ್ಸಿಟ್ಯೂಟ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿನಿ ಕು.ಸೌಭಾಗ್ಯ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ನಿತ್ಯಾನಂದ ಹವಲ್ದಾರ ವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮೀ ಬಹುಮಾನ ವಿತರುಸಿದರು.. ಅಧ್ಯಾಪಕಿ ಶ್ರೀಮತಿ ಸಂಗೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಕ ಶ್ರೀಧರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಪ್ರಶಾಂತ್ ಹವಲ್ದಾರ್ ಉಪಸ್ಥಿತರಿದ್ದರು.
