ಮೂಡುಬಿದಿರೆ: ಹೊಸತನದ ಹುಡುಕಾಟದಲ್ಲಿದ್ದ ಏಕೀಕರಣಪೂರ್ವ ಸಾಹಿತ್ಯ ವಿಶ್ವ ಸಾಹಿತ್ಯ ಬೆಳಕನ್ನು ಕನ್ನಡ ಸಾಹಿತ್ಯದ ಮೇಲೆ ಬೀರಿದ್ದವು. ಬರೆದದ್ದನ್ನು ಓದಬೇಕು ಮತ್ತು ಎಲ್ಲರಿಗೂ ತಲುಪಬೇಕು ಎಂಬ ಅನಿವಾರ್ಯತೆ ಅಂದಿನ ಸಾಹಿತ್ಯಕ್ಕಿತ್ತು ಎಂದು ಡಾ. ಜಿ. ಬಿ. ಹರೀಶ್ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಯಲ್ಲಿ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಏಕೀಕರಣ ಪೂರ್ವ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದರು. ಜಡ್ಡುಗಟ್ಟಿದ ಭಾಷೆಗೆ ಹೊಸ ಜೀವ ತುಂಬುವ ಕೆಲಸವನ್ನು ಕುವೆಂಪು, ಬೆಂದ್ರೆ, ಮಾಸ್ತಿ, ಕಾರಂತರಾದಿಯಾಗಿ ಅನೇಕ ಸಾಹಿತಿಗಳು ಮಾಡಿದ್ದಾರೆ. ಹೊಸ ಪದಸಂಪತ್ತನ್ನು ಕನ್ನಡದಕ್ಕೆ ತೆಗೆದುಕೊಂಡು ಬಂದಿದ್ದಾರೆ. ಕನ್ನಡ ಕೇಂದ್ರಿತ ಉದಾರತೆ, ಸಂಪರ್ಕಕ್ಕೆ ಕಷ್ಟಸಾಧ್ಯವಾದ ಕಾಲದಲ್ಲೂ ಸಾಹಿತಿಗಳು ಕನ್ನಡ ಕಟ್ಟಿದ ಕಾರ್ಯ ಅನನ್ನುವಾದುದು.
Author: ನ್ಯೂಸ್ ಬ್ಯೂರೋ
ಕುಂದಾಪುರ: ಸಮೀಪದ ಹೇರಿಕುದ್ರು ರಾಷ್ಟ್ರೀಯ ಹೆದ್ದಾರಿ ೬೬ರ ಸೇತುವೆಗೆ ಕುಂದಾಪುರ ಅಗ್ನಿ ಶಾಮಕ ದಳದ ಸಿಬ್ಬಂದಿಯೊರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದ್ದು, ಮೃತರು ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಮದ್ದುಗುಡ್ಡೆಯ ನಿವಾಸಿ ಭಾಸ್ಕರ(45) ಎಂದು ತಿಳಿದುಬಂದಿದೆ. ಗುರುವಾರ ರಾತ್ರಿಯ ಪಾಳಿಯಲ್ಲಿದ್ದ ಭಾಸ್ಕರ್ ಶುಕ್ರವಾರ ಬೆಳಿಗ್ಗೆ ಡ್ಯೂಟಿ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಬೆಳಗ್ಗಿನ ತಿಂಡಿ ತಿಂದು ಅವರ ಟಿವಿಎಸ್ ಬೈಕಿನಲ್ಲಿ ಪೇಟೆಗೆ ತೆರಳಿದ್ದರು. ಸುಮಾರು ಒಂದು ಗಂಟೆಯ ಬಳಿಕ ರಾಷ್ಷ್ರೀಯ ಹೆದ್ದಾರಿ ೬೬ರಲ್ಲಿ ಸಂಗಮ್ ಹೇರಿಕುದ್ರು ಸೇತುವೆಗೆ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಗ್ನಿಶಾಮಕ ದಳದ ನಿಷ್ಠಾವಂತ ಸಿಬ್ಬಂದಿಯಾಗಿದ್ದ ಭಾಸ್ಕರ್ ಉತ್ತಮ ಈಜುಗಾರರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಶವವನ್ನು ಮೇಲೆತ್ತಿದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಮೂಡುಬಿದಿರೆ: ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ಪಾವಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಾಸು ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆವೇಶದಲ್ಲಿ, ಪೂರ್ವಾಪರವನ್ನಿಟ್ಟುಕೊಂಡು ನಡೆಸುತ್ತಿರುವ ಪ್ರಶಸ್ತಿ ವಾಪಾಸಾತಿ ಸಮೂಹ ಸನ್ನಿಯಾಂತಾಗಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರೀಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ. ಇದು ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸ್ಪಷ್ಟ ನುಡಿ. ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮಾಜವನ್ನು ಸನ್ಯಾರ್ಗದಲ್ಲಿ ಕೊಂಡೊಯ್ಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದನ್ನು ತಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದು ಎಂದರು. ಪರಿಷತ್ ನಡೆಸುವ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಬಯಕೆ ಇತ್ತೆ ಎಂಬ ಪ್ರಶ್ನೆಗೆ, ಅಧ್ಯಕ್ಷನಾಗುವ ವಿಚಾರದಲ್ಲಿ…
ಕುಂದಾಪುರ: ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಸ್ಯಾಟಲೈಟ್ ಯುಗದ ಆಧುನಿಕ ಜೀವನದ ನಾಗಾಲೋಟದಲ್ಲಿ ತನ್ನತನವನ್ನು ಕಳೆದುಕೊಳ್ಳದೆ, ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರಬೇಕು ಎಂದು ಜೇಸಿಐ ಪೂರ್ವ ವಲಯಾಧಿಕಾರಿ ಮಂಜುಳಾ ಪ್ರಸಾದ್ ಹೇಳಿದರು. ಅವರು ಕುಂದಾಪುರ ಕೋಡಿ ಕಿನರಾ ಬೀಚ್ನ ಚಂದ್ರಕಾಂತ್ ಶೆಣೈ ರಿಸಾರ್ಟ್ನಲ್ಲಿ ನಡೆದ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ನ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಿಳೆ ಇಂದು ಪೋಷಕರಿಗೆ ಸನ್ನಡತೆಯ ಮಗಳಾಗಿ, ಗಂಡನಿಗೆ ಮನಮೆಚ್ಚಿದ ಮಡದಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ಸಮಾಜಕ್ಕೆ ಆದರ್ಶ ಮಹಿಳೆಯಾಗಿ ಬೆಳೆಯಲು ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿ ಕೊಂಡಲ್ಲಿ ಮಾತ್ರ ಸಾಧ್ಯ ಎಂದರು. ರೋಟರಿ ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ ಮಾತನಾಡಿ, ರೋಟರಿಯಂತಹ ಸಮಾಜಮುಖಿ ಸಂಘಟನೆಯಲ್ಲಿ ಮಹಿಳೆಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ಅಗತ್ಯ ಎಂದರು. ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರು ರೋಟರಿ ಸನ್ರೈಸ್ನ ಮುಂದಿನ ಬೆಳವಣಿಗೆ ಬಗ್ಗೆ ಸಲಹೆ ನೀಡಿದರು. ಕಾರ್ಯಕ್ರಮದ…
ಗಂಗೊಳ್ಳಿ : ಇಲ್ಲಿನ ಪಂಚಗಂಗಾವಳಿ ಬಳಗ ಇದರ ನೂತನ ಅಧ್ಯಕ್ಷರಾಗಿ ಸಂದೀಪ ಕೆ. ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಸಂಘದ ಅಧ್ಯಕ್ಷ ಜಿ.ಎನ್.ಸತೀಶ ಖಾರ್ವಿ ಅಧ್ಯಕ್ಷತೆಯಲ್ಲಿ ಜರಗಿದ ಸಂಘದ ೨೧ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೌಪರ್ಣಿಕ ಬಸವ ಖಾರ್ವಿ (ಗೌರವಾಧ್ಯಕ್ಷ), ಬೋರಕಾರ್ ಮಾಧವ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ಮಾಧವ ಗೋವಿಂದ ಖಾರ್ವಿ, ಜಿ.ಕೆ.ಶ್ರೀನಿವಾಸ ಖಾರ್ವಿ, ಜಗನ್ನಾಥ ಖಾರ್ವಿ, ನಾರಾಯಣ ಖಾರ್ವಿ (ಉಪಾಧ್ಯಕ್ಷರು), ಜಿ.ಎನ್.ದಿಲೀಪ ಖಾರ್ವಿ (ಕಾರ್ಯದರ್ಶಿ), ಜಿ.ಎಂ.ರಾಘವೇಂದ್ರ ಖಾರ್ವಿ, ಚೇತನ ಖಾರ್ವಿ, ಸಜಿತ್ ಬಿ. (ಜತೆ ಕಾರ್ಯದರ್ಶಿ), ಎಂ.ಕೆ. ನಾಗರಾಜ ಖಾರ್ವಿ (ಖಜಾಂಚಿ), ಶಿಪಾ ಸಂತೋಷ ಖಾರ್ವಿ (ಲೆಕ್ಕ ಪರಿಶೋಧಕ), ಬಿ.ನಾಗರಾಜ ಖಾರ್ವಿ, ಅನಂತ ಖಾರ್ವಿ, ಸುಧಾಕರ ಖಾರ್ವಿ, ಸನತ್ ಖಾರ್ವಿ, ಬಿ.ಸಂತೋಷ ಖಾರ್ವಿ, ಬಿ.ರಾಮನಾಥ ಖಾರ್ವಿ (ಕ್ರೀಡಾ ಕಾರ್ಯದರ್ಶಿಗಳು), ಕೆ.ರಾಕ ಖಾರ್ವಿ, ಶಿಪಾ ನಾಗ ಖಾರ್ವಿ, ಜೋಗಿ ಸಂತೋಷ ಖಾರ್ವಿ, ಅಣ್ಣಪ್ಪ ಖಾರ್ವಿ, ಕೆ.ರಾಘವೇಂದ್ರ ಖಾರ್ವಿ, ಮಂಜುನಾಥ ಖಾರ್ವಿ, ಸಚಿನ್, ರೋಶನ್, ಕೀರ್ತನ (ಕಾರ್ಯಕಾರಿ ಸಮಿತಿ ಸದಸ್ಯರು), ನಾಗರತ್ನ,…
ಕುಂದಾಪುರ: ಹ್ವಾಯ್ ಈ ಸಾರ್ತಿ ಕೊಡಿ ಹಬ್ಬದಾಂಗೆ ಕಂಡಾಪಟಿ ಜನು ಇತೇ. ಬಂದ್ ಮಕ್ಳೆಲ್ಲ ಸೆಲ್ಫಿ ತೆಕ್ಕಂಬುದ್ರಲ್ ಬಿಜಿ ಕಾಣಿ. ಹೌದು. ಕುಂದಾಪುರ ಮೂಲದ ಕಾಣಿ ಸ್ಟುಡಿಯೋ ಬೆಂಗಳೂರು ಆಶ್ರಯದಲ್ಲಿ ಕೋಟೇಶ್ವರ ರೋಟರ್ಯಾಕ್ಟ್ ಕ್ಲಬ್, ರೋಟರಿ ಕ್ಲಬ್, ಕೆನರಾ ಕಿಡ್ಸ್, ಐಶ್ವರ್ಯ ಸ್ಟುಡಿಯೋ, ರಾಮನಾಥಗೋಲಿಕಟ್ಟೆ ಫ್ರೆಂಡ್ಸ್ ಸಹ ಪ್ರಾಯೋಜಕತ್ವದಲ್ಲಿ ಜರುಗಿದ ಕೋಟೇಶ್ವರ ಕೊಡಿ ಹಬ್ಬಲೊಂದು ಸೆಲ್ಫಿ ಹಬ್ಬ ಸೆಲ್ಫಿ ಜನರ ಪ್ರಶಂಸೆಗೆ ಪಾತ್ರವಾಯಿತು. ಸ್ಪರ್ಧೆಯಲ್ಲಿ ಸಾರ್ವಜನಿಕರು ಹಬ್ಬ ಮೂಲೆ ಮೂಲೆಯಲ್ಲಿಯೋ ವಯಸ್ಸಿನ ಇತಿಮಿತಿ ಇಲ್ಲದೆ ಸೆಲ್ಫಿ ತಗೆದುಕೊಳ್ಳುತ್ತಿದ್ದ ದೃಶ್ಯ ಕಾಣುತ್ತಿತ್ತು. ಈ ಸಲದ ಕೊಡಿ ಹಾಗೂ ಮಾರಟದ ಮಳಿಗೆಗಳ ಜತೆಗೆ ಮೊಬೈಲ್, ಟ್ಯಾಬ್, ಗೇಜೆಟ್ನಲ್ಲಿ ಸೆಲ್ಫಿ ಪೋಟೋ ತಗೆದುಕೊಳ್ಳತ್ತಿದ್ದ ದೃಶ್ಯ ಅಲ್ಲಲ್ಲಿ ಕಣ್ಣಿಗೆ ನೊಡಲು ಸಿಗುತ್ತಿತ್ತು.
ಮೂಡಬಿದಿರೆ: ನಮ್ಮ ವಚನಕಾರರು ತಮ್ಮ ಪ್ರಕರವಾದ ವಿಚಾರದಿಂದ, ಕೀರ್ತನಕಾರರು ನಯವಾದ ಪದಗಳಿಂದ ಸಮಾಜದ ಆಗುಹೋಗುಗಳ ಬಗ್ಗೆ ಬರೆಯುತ್ತಲೇ ಬಂದಿದ್ದಾರೆ. ಅಂದಿನಿಂದಲೂ ಜನರು ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ಹೊಸತನದ ಹುಡುಕಾಟವೆಂಬುದು ಅಂದೇ ಆರಂಭವಾಗಿದೆ ಎಂದು ಡಾ. ಕೃಷ್ಣಮೂರ್ತಿ ಹನೂರು ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಮಧ್ಯಕಾಲಿನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು. ವಚನ ಕೀರ್ತನೆಗಳ ಮೂಲಕ ಮಧ್ಯಕಾಲಿನ ಸಾಹಿತ್ಯ ಇಂದಿಗೂ ಪ್ರಸ್ತತವಾಗಿದ್ದರೇ ಅದು ಹೊಸತನದ ರೂಪಾಂತರವೇ ಆಗಿದೆ ಎಂದವರು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ರ್ತೀ, ಡಾ. ನಾ. ದಾಮೋದರ್ ಉಪಸ್ಥಿತರಿದ್ದರು.
ಮೂಡಬಿದಿರೆ: ಹಳೆಗನ್ನಡ ಸಾಹಿತ್ಯಕ್ಕೆ ಅಸ್ತಮ ಎನ್ನುವುದಿಲ್ಲ. ಅದು ಎಲ್ಲಾ ಕಾಲದಲ್ಲೂ ಪ್ರತಿಪಲಿಸಲ್ಪಡುತ್ತದೆ. ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಎಲ್ಲಾ ಕವಿಗಳ ತಮ್ಮ ಸಾಹಿತ್ಯದಲ್ಲಿ ಹೊಸತನವನ್ನು ಕಟ್ಟಿಕೊಡುವ ಮತ್ತು ಅದು ಸದಾ ಕಾಲ ಪ್ರಸ್ತುವಾಗುವ ವಸ್ತು ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ ಡಾ. ಎನ್. ಎಸ್. ತಾರಾನಾಥ್ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು.
ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಡಾ. ವಿ. ಎಸ್. ಆಚಾರ್ಯ ವೇದಿಯಕೆಯಲ್ಲಿ ಬ್ರಹ್ಮಾವರ ರಘುನಂದನ್ ಭಟ್ ಮತ್ತು ಬಳಗದಿಂದ ಲಘು ಶಾಸ್ರ್ತೀಯ ಸಂಗೀತ ಕಾರ್ಯಕ್ರಮ ಜರುಗಿತು.
ಮೂಡುಬಿದಿರೆ: ಸಮಾಜ ಒಗ್ಗೂಡಬೇಕೆಂದಿದ್ದರೆ ಸಮಾನತೆ ಇರಬೇಕು. ಅಸಮಾನತೆಯನ್ನೇ ವಿವಿಧತೆಯಲ್ಲಿನ ಏಕತೆ ಎಂದು ನಮ್ಮನ್ನು ದಿಕ್ಕು ತಪ್ಪಿಸಲಾಗಿದೆ. ನಮ್ಮದು ಸಮಸ್ತರೂ ಸೇರದ ಸಮಾಜವಾಗಿರದೇ ಜಾತಿ, ಧರ್ಮ, ಮತ ಪಂಥದ ಆಧಾರದಲ್ಲಿ ವಿಭಜಿಸಲಾಗಿದೆ ಎಂದು ಚಿಂತಕ ನಿತ್ಯಾನಂದ ಶೆಟ್ಟಿ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಸಾಮಾಜಿಕ ನ್ಯಾಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ಭಾತರದಂತಹ ದೇಶಗಳಲ್ಲಿ ಸಾಮಾಜಿಕ ನ್ಯಾಯ ಹೊಟ್ಟೆ ಪಾಡಿನ ಪ್ರಶ್ನೆಯಾಗಿ ಉಳಿದಿಲ್ಲ. ಜಾತಿ ವ್ಯವಸ್ಥೆಯಲ್ಲಿನ ತಪ್ಪು ಕಲ್ಪನೆಯಿಂದಾಗಿ ಒಂದೊಂದು ಜಾತಿ ಒಂದೊಂದು ರಾಷ್ಟ್ರವೆಂಬ ಕಲ್ಪನೆ ಮೂಡುತ್ತಿದೆ. ಸಾಮಾಜಿಕ ನ್ಯಾಯದ ಅಂತಿಮ ಉದ್ದೇಶ ಜಾತಿ ಹಾಗೂ ಅಸಮಾನ ಸಂಬಂಧಗಳನ್ನು ತೊಡೆದುಹಾಕುವುದೇ ಆಗಿದೆ ಎಂದ ಅವರು ನಾವೆಲ್ಲರೂ ಭಾರತೀಯರು ಎಂಬುವುದಕ್ಕಿಂತ ಮೊದಲು ನಾವೆಲ್ಲರೂ ಮನುಷ್ಯರು ಎಂಬುದನ್ನು ಅರಿಯಬೇಕಾಗಿದೆ ಎಂದರು. ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ವೇದಿಕೆಯಲ್ಲಿದ್ದರು.
