ಟ್ಯೂಷನ್ಗೆ ಹೋಗಿಲ್ಲ. ಸರಕಾರಿ ಶಾಲೆಯಲ್ಲಿಯೇ ಸಾಧಿಸಿದ ಛಲ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತಾಲೂಕಿನ ಬಸ್ರೂರು ಸರಕಾರಿ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ 625ರಲ್ಲಿ 622 ಅಂಕ ಗಳಿಸಿ ತಾಲೂಕಿಗೆ ಮಾದರಿ ಸಾಧನೆಗೈದಿದ್ದಾನೆ. ಚುರುಕಿನ ವಿದ್ಯಾರ್ಥಿಯಾದ ವೆಂಕಟೇಶ್ ಯಾವುದೇ ಟ್ಯೂಷನ್ ಪಡೆಯದೇ ಶಾಲೆಯಲ್ಲಿ ಕಲಿಸಿದ್ದಷ್ಟನ್ನೇ ಓದಿಕೊಂಡು ಅತ್ಯಧಿಕ ಅಂಕ ಗಳಿಸಿದ್ದಾನೆ. ಈತ ಬಸ್ರೂರು ಪುರಾಣಿವಳಾಲ್ ನಿವಾಸಿಯಾಗಿರುವ ಸುಬ್ರಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ದಂಪತಿಗಳ ಪುತ್ರ. ಕುಂದಾಪ್ರ ಡಾಟ್ ಕಾಂ ‘ಕುಂದಾಪ್ರ ಡಾಟ್ ಕಾಂ’ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ಪೋಷಕರ ಪ್ರೋತ್ಸಾಹ, ಶಿಕ್ಷಕರುಗಳ ಮಾರ್ಗದರ್ಶನ ತನ್ನೀ ಯಶಸ್ಸಿಗೆ ಕಾರಣವಾಗಿದೆ. ಮುಂದೆ ಕಾಮರ್ಸ್ ವಿಭಾಗವನ್ನು ತೆಗೆದುಕೊಂಡು ಚಾರ್ಟೆಡ್ ಅಕೌಂಟೆಂಟ್ ಆಗುವ ಬಯಕೆ ಇದೆ ಎಂದು ಹೇಳಿಕೊಂಡಿದ್ದಾನೆ. / ಕುಂದಾಪ್ರ ಡಾಟ್ ಕಾಂ ವರದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಪ್ರವರ್ತಿತ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಎಚ್. ವಿವೇಕ್ ಗಿರಿಧರ ಪೈ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಯಾಗಿರುವ ಹೆಚ್. ಗಿರಿಧರ ಪೈ ಹಾಗೂ ಕುಂದಾಪುರ ಭಂಡಾರ್ಕಾರ್ಸ್ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಗಾಯತ್ರಿ ಗಿರಿಧರ್ ಪೈ ಅವರ ಮಗನಾದ ವಿವೇಕ್ ಅತ್ಯಧಿಕ ಅಂಕಗಳ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವೇಕ್, ತಾನು ನಿರೀಕ್ಷಿಸಿದ್ದಕ್ಕಿಂತ ಅಂಕಗಳು ದೊರೆತಿದೆ. ನನ್ನ ವಿದ್ಯಾಭ್ಯಾಸದಲ್ಲಿ ತಂದೆ-ತಾಯಿಯರ ಬೆಂಬಲ ಹಾಗೂ ಎಸ್ಎಸ್ಎಲ್ಸಿಯಲ್ಲಿ ವಿ.ಕೆ.ಆರ್. ಆಚಾರ್ಯ ಶಾಲೆ ಶಿಕ್ಷಕರುಗಳ ಮಾರ್ಗದರ್ಶನದಿಂದ ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದಿದ್ದಾರೆ. ಟುಟೋರಿಯಲ್ಸ್ಗೆ ತೆರಳದೇ, ಆಟ-ಪಾಠಗಳಲ್ಲಿ ಸಮಾನವಾಗಿ ತೊಡಗಿಸಿಕೊಂಡಿದ್ದು ಯಶಸ್ಸಿಗೆ ಕಾರಣವಾಗಿದೆ. ಮೆಡಿಕಲ್ ಓದುವ ಹಂಬಲವಿದ್ದು, ಹೆಬ್ರಿಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರಿಕೊಳ್ಳುವುದಾಗಿ ತಿಳಿಸಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಗನ ಯಶಸ್ಸು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನ ಅನುವಂಶಿಕ ಅರ್ಚಕ- ಮೊಕ್ತೇಸರ ಬಿ. ಕೃಷ್ಠಮೂರ್ತಿ ನಾವಡರಿಗೆ ನಾಗೂರು ಒಡೆಯರ ಮಠ ಕಲಾಮಂದಿರದಲ್ಲಿ ನಡೆದ ಶ್ರೀ ಶಂಕರ ಜಯಂತಿ -ತತ್ವಜ್ಙಾನಿಗಳ ದಿನಾಚರಣೆ ಸಮಾಂಭದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಶ್ರೀ ಶಂಕರ ತತ್ತ ಪ್ರಸರಣಾ ಸಮಿತಿಯ ಪರವಾಗಿ ವಿದ್ವತ್ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸರಾಫ್ ರಮಾನಂದ ಪೈ, ಶಂಕರರ ಭಕ್ತಿ ಸಾಹಿತ್ಯದ ’ಭಜ ಗೋವಿಂದಂ’ ಕುರಿತು ಉಪನ್ಯಾಸ ನೀಡಿದರು. ಯು. ವರಲಕ್ಮ್ಷೀ ಹೊಳ್ಳ ಮತ್ತು ಬಳಗದವರು ಶಂಕರಚಾರ್ಯರು ರಚಿಸಿದ ಸೋತ್ರಗಳನ್ನು ಹಾಡಿದರು. ಶ್ರೀ ಅಗಸ್ತೇಶ್ವರ ದೇವಸ್ಥಾನ ಕೇಂದ್ರದಿಂದ ಶ್ರೀ ಶಂಕರ ಅಷ್ಟೋತ್ತರ ಶತನಾಮ ಜಪ ವೃತ ಕೈಗೊಂಡ ಶ್ರದ್ಧಾಳುಗಳು ಪಾರಾಯಣವನ್ನು ಶ್ರೀ ಗುರುಗಳ ಸನ್ನಿಧಿಯಲ್ಲಿ ಸಮರ್ಪಣೆ ಗೈದರು. ರಾಮಕೃಷ್ಡ ಜೋಷಿಯವರು ಶಂಕರಾರ್ಚಾರ ಭಾವಚಿತ್ರಕ್ಕೆ ಶಾಸ್ತ್ರೊಪ ಪೂಜೆಗೈದು ಆಶೀರ್ವದಿಸಿದರು. ಕೂಟ ಮಹಾ ಜಗತ್ತಿನ ಕಾರ್ಯದರ್ಶಿ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು. ದ್ರಾವಿಡ ಬ್ರಾಹಣ ಪರಿಷತ್ತು ಉಪ್ಪುಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದು, ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಸ್ವಸಸಹಾಯ ಸಂಘಗಳ ಸ್ಥಾಪನೆಯಿಂದ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಬೆಳೆಯಲು ಸಹಕಾರಿಯಾಗಿದೆ. ಒಕ್ಕೂಟದ ಸದಸ್ಯರು ಒಗ್ಗಟ್ಟಿನಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸದರೆ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಗಂಗೊಳ್ಳಿ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಎಂ.ಜಿ.ರೋಡ್ ಮತ್ತು ಬಂದರು ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ತ್ರಾಸಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಮ್ಮ ಸರ್ವತೋಮುಖ ಬೆಳವಣಿಗೆಗೆ ಅವಶ್ಯವಿರುವ ಅನೇಕ ಕಾರ್ಯಕ್ರಮಗಳಿವೆ. ಮಹಿಳೆ ಸ್ವಾವಲಂಬಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವೃಕ್ಷ, ನದಿತಟ, ಬನ, ಗುಡ್ಡ-ಬೆಟ್ಟಗಳಲ್ಲಿ ದೈವ-ದೇವರುಗಳು ನೆಲೆಸಿರುವ ಕಾರಣ ನಮ್ಮ ಹಿಂದಿನವರು ಪ್ರಕೃತಿಯನ್ನು ದೇವರೆಂದು ನಂಬಿ ಆರಾಧಿಸುಕೊಂಡು ಬಂದರು. ಮುಂದಿನ ಪೀಳಿಗೆಗೆ ಅನುಕೂಲವಾಗಲೆಂದು ಹಾಗೂ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ದೈವ, ದೇವರ ಆಲಯಗಳನ್ನು ಇಂತಹ ಪರಿಸರದಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ಇಂದು ಮಾನವನ ಸ್ವಯಂಕೃತ ಅಪರಾಧಗಳಿಂದ ಪ್ರಕೃತಿ ಮುನಿದು ಕಾಲಕಾಲಕ್ಕೆ ಆಗಬೇಕಿದ್ದ ಮಳೆ-ಬೆಳೆ ಕೂಡಾ ವೈಪರಿತ್ಯಕ್ಕೆ ಮುಟ್ಟುವ ಸ್ಥಿತಿ ಬಂದೊದಗಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಉಪ್ಪುಂದ ಜನತಾ ಕಾಲೋನಿಯ ಶ್ರೀ ಜೈನ ಬೊಬ್ಬರ್ಯ ಮತ್ತು ಪರಿವಾರ ದೈವಗಳ ದೈವಸ್ಥಾನದ ನೂತನ ಹೆಬ್ಬಾಗಿಲು ಉದ್ಘಾಟಿಸಿ ಅನಂತರ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ವೈಜ್ಞಾನಿಕವಾಗಿ ಜಗತ್ತು ಮುಂದುವರಿದಿದ್ದು, ನಾವುಗಳು ಅದನ್ನು ಅಂಗೈಯಲ್ಲಿ ನೋಡಬಹುದಾಗಿದೆ. ದುರದೃಷ್ಟವಶಾತ್ ಹಿಂದಿನ ಗುಲಾಮಗಿರಿಯ ವ್ಯಾಮೋಹ ನಮ್ಮಲ್ಲಿ ಇನ್ನೂ ಹೋಗಲಿಲ್ಲ. ಈ ಗುಂಗಿನಿಂದ ಹೊರಬಂದು ನಮ್ಮ ಕರ್ತವ್ಯ, ಸುತ್ತಮುತ್ತಲಿನವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ದೇಶ ಚನ್ನ… ಈ ಮಣ್ಣು ಚಿನ್ನ…. ಕಣ್ಣು ಕಣ್ಣು ಒಂದಾಯಿತು, ನನ್ನ ನಿನ್ನ ಮನಸೇರಿತು… ನಿಲ್ಲು ನಿಲ್ಲೆ ಪತಂಗ… ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ… ಆಚಾರವಿಲ್ಲದ ನಾಲಿಗೆ… ಮುಂತಾದ ಹಳೆಯ ಹಾಡುಗಳು ಹೊಸಬರ ಕಂಠದಲ್ಲಿ ಮೂಡಿಬಂದು ನೆರೆದಿದ್ದ ಶೋತ್ರುಗಳನ್ನು ದಶಕಗಳ ಹಿಂದಕ್ಕೆ ಕೊಂಡ್ಯೊಯ್ದರೇ, ಹಾಡುಗಳ ನಡು ನಡುವೆ ನಡೆದ ನೃತ್ಯರೂಪಕಗಳು ಪ್ರೇಕ್ಷಕರಿಗೆ ಮನೊಲ್ಲಾಸ ನೀಡುತ್ತಿದ್ದವು. ದೂರದರ್ಶನ ಕೇಂದ್ರ ಬೆಂಗಳೂರು, ಬೈಲೂರು ಎಜುಕೇಶನ್ ಟ್ರಸ್ಟ್ ಕುಂದಾಪುರ, ಆಕಾಶವಾಣಿ ಮಂಗಳೂರು, ಇಸಿಆರ್ ಎವಿಯೇಶನ್ ಅಕಾಡೆಮಿ ಕೋಟೇಶ್ವರ, ಯುವ ಇನ್ಫ್ರಾಸ್ಟ್ರಕ್ಟರ್ ಕುಂದಾಪುರದ ಸಂಯೋಜನೆಯಲ್ಲಿ ವಿಜಯವಾಣಿ ದಿನಪತ್ರಿಕೆಯ ಮಾಧ್ಯಮ ಸಹಭಾಗಿತ್ವದಲ್ಲಿ ಕೋಟೇಶ್ವರ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗಿದ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಹಳೆಯ ಕನ್ನಡ ಚಲನಚಿತ್ರಗೀತೆಗಳ ಸಂಗೀತ -ನೃತ್ಯಾವಳಿಗಳು ಮಧುರ ಮಧುರವೀ ಮಂಜುಳಗಾನ ಹಾಡಿನ ಮೂಲಕವೇ ಆರಂಭಗೊಂಡು ನೆರೆದಿದ್ದ ನೂರಾರು ಪ್ರೇಕ್ಷಕರ ಮನತುಂಬಿದವು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಆಸುಪಾಸಿನ ಪ್ರತಿಭೆಗಳಾದ ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕು ಕಸಾಪ ಘಟಕದಡಿಯಲ್ಲಿ ಬರುವ ಕೋಟೇಶ್ವರ ವಲಯ ಕಸಾಪ ಅಧ್ಯಕ್ಷರಾಗಿ ಅಶೋಕ ತೆಕ್ಕಟ್ಟೆಯವರನ್ನು ನೇಮಿಸಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅಶೋಕ ತೆಕ್ಕಟ್ಟೆಯವರು ಬಹುಮುಖ ಪ್ರತಿಭೆಯಾಗಿದ್ದು ಸ್ನಾತಕೋತ್ತರ ಪದವಿಧರರು. ಕತೆ, ಕವನ, ಲೇಖನ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರು ಕಳೆದ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದೀಗ ಅವರನ್ನು 2016-19ರ ಅವಧಿಗೆ ಕಸಾಪ ಕೋಟೇಶ್ವರ ಘಟಕಕ್ಕೆ ಅಧ್ಯಕ್ಷರಾಗಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇಮಕ ಮಾಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಅಲ್ಲಲ್ಲಿ ನಷ್ಟ ಸಂಭವಿಸಿದ್ದರೇ, ಚಂದ್ರ ಎಂಬುವವರಿಗೆ ಸಿಡಿಲು ಎರಗಿ ಗಾಯಗಳಾಗಿದ್ದು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರೂರು ಗ್ರಾಪಂ ವ್ಯಾಪ್ತಿಯ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಗೋಪಾಡಿ ಗ್ರಾಪಂ ವ್ಯಾಪ್ತಿಯ ಮನೆಯೊಂದರ ಎದುರಿನ ಬಾವಿಯ ಮೇಲೆ ತೆಂಗಿನ ಮರ ಬಿದ್ದು ದಂಡೆ ಕುಸಿದಿದೆ. ಎರಡು ಮನೆಗಳ ಹೆಂಚು ಹಾರಿ ಹೋಗಿದೆ. ಕುಂದಾಪುರ ತಾಲೂಕಿನಾದ್ಯಂತ ಭಾರಿ ಗುಡುಗು ಸಹಿತ ಮಳೆ ಬಿದ್ದಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕುಂದಾಪುರ, ಕೊಲ್ಲೂರು, ಜಡ್ಕಲ್, ವಂಡ್ಸೆ, ತಲ್ಲೂರು, ಹೆಮ್ಮಾಡಿ, ಕೋಡಿ, ಗಂಗೊಳ್ಳಿ, ಮರವಂತೆ, ಗಂಗೊಳ್ಳಿ, ಬೈಂದೂರು, ಶಿರೂರು ತೆಕ್ಕಟ್ಟೆ, ಶಂಕರನಾರಾಯಣ, ಸಿದ್ಧಾಪುರ, ಅಮಾಸೆಬೈಲು, ಹಾಲಾಡಿ ಮುಂತಾದೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ತಾಲೂಕಿನಾದ್ಯಂತ ಸುರಿದ ಮಳೆಗೆ ಸುಮಾರು ೨೫,೦೦೦ರೂ ನಷ್ಟ ಸಂಭವಿಸಿರಬಹುದೆಂದು ತಹಶೀಲ್ದಾರ್ ಗಾಯತ್ರಿ ನಾಯಕ್ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ,ಮೇ15: ತಾಲೂಕಿನ ಪ್ರಸಿದ್ಧ ಪ್ರಸಿದ್ಧ ಕೈಗಾರಿಕೋದ್ಯಮಿ ಕೋಟೇಶ್ವರ ಚಂದ್ರಶೇಖರ ಶೆಟ್ಟಿ (70) ಭಾನುವಾರ ಸ್ವಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಹೆಂಚು ಮತ್ತು ಗೇರು ಬೇಜ ಕಾರ್ಖಾನೆ, ಆರ್ಥಿಕ ಸಂಸ್ಥೆ ಸ್ಥಾಪಿಸುವ ಮೂಲಕ ಕುಂದಾಪುರದಲ್ಲಿ ಕೈಗಾರಿಕೋದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯುಲ್ಲಿ ತಮ್ಮ ವ್ಯವಹಾರ ಹೊಂದಿದ್ದರು. ಚಂದ್ರಶೇಖರ ಶೆಟ್ಟಿ ಅವರು ಕಾಲೇಜು ದಿನಗಳಲ್ಲಿ ಯುನಿವರ್ಸಿಟಿ ಶೆಟಲ್ ಬ್ಯಾಡ್ಮಿಂಟನ್ ಆಟಗಾರರಾಗಿ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳ ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಕಲ್ಚರಲ್ ಆರ್ಗನೈಜೇಷನ್ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಬೈಂದೂರು ಮಯ್ಯಾಡಿಯ ಬಾಲಕೃಷ್ಣ ಮದ್ದೋಡಿ ಅವರಿಗೆ ಲಭಿಸಿದೆ. ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಅವರ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಈ ಪ್ರಶಸ್ತಿ ದೊರೆತಿದೆ. ಮಣಿಪಾಲದ ಎಂ.ಐ.ಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತಿರುವ ರೊಟೇರಿಯನ್ ಪಿಹೆಚ್ಎಫ್ ಬಾಲಕೃಷ್ಣ ಮದ್ದೋಡಿ ಅವರು ರೊಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ರೋಟರಿ ಜಿಲ್ಲೆ 3180 ಇದರ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಂಘಟಕ, ವಾಗ್ಮಿ, ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಶೇಷ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಮೇ 18ರ ಸಾಯಂಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮದ್ದೋಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
