ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮಂಗಳವಾರದಂದು ಉದ್ಯಮಿ ಸ್ವಪ್ನ ಸುರೇಶ್ ಪ್ರಭು ಇವರ ವತಿಯಿಂದ ದುರ್ಗಾ ಹೋಮವನ್ನು ಆಯೋಜಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ್ ಬಾಯರಿ ನೆರವೆರಿಸಿದರು. ಪೂಜಾ ಕಾರ್ಯದಲ್ಲಿ ಸ್ವಪ್ನ ಸುರೇಶ್ ಪ್ರಭು ದಂಪತಿಗಳು ಭಾಗಿಯಾದರು.
ಕುಟುಂಬದ ಪರವಾಗಿ ಸರೋಜನಿ ಬಾಲಕೃಷ್ಣ ಪ್ರಭು .ಸಹೋದರರಾದ ಉಮೇಶ್ ಪ್ರಭು, ವೆಂಕಟೇಶ ಪ್ರಭು, ಲತಾ ರಾಘವೇಂದ್ರ ಪೈ, ಕುಟುಂಬಿಕರಾದ ರಮೇಶ್ ಪ್ರಭು, ದೇಗುಲದ ಅಧ್ಯಕ್ಷರಾದ ಆನಂದ್ ಸಿ. ಕುಂದರ್, ಸದಸ್ಯರಾದ ಸುಧಾ ಎ. ಪೂಜಾರಿ, ಸುಬ್ರಾಯ ಜೋಗಿ, ಚಂದ್ರ ಆಚಾರ್, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ಶಿವ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಮಾಜಿ ಸದಸ್ಯ ಭುಜಂಗ ಗುರಿಕಾರ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಮಧ್ಯಾಹ್ನ ದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.
















