ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಎತ್ತಿಕೊಂಡು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ತಮ್ಮ ಸಮುದಾಯಕ್ಕೆ ಅನ್ವಯಿಸಿಕೊಂಡ ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ಅವಮಾನಿಸಿ, ನಿಂದಿಸಿದ್ದು ವ್ಯವಸ್ಥಿತ ಷಡ್ಯಂತ್ರವಾಗಿದೆ.ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯನ್ನೂ ಕೇಳಿಲ್ಲ, ಕೇಳುವುದು ಇಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದ್ದಾರೆ. ಅವರು ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಎಲ್ಲಾ ವಿದ್ಯಮಾನಗಳನ್ನು ವಿಶ್ಲೇಷಿಸಿ ನೋಡುವಾಗ ಹಳದಿ ಕನ್ನಡಕ ಹಾಕಿಕೊಂಡ ಕೆಲವೊಂದು ಜನಗಳಿಂದ ಘಟನೆ ಆಗಿದೆ ಎನ್ನುವುದು ಸ್ಪಷ್ಟ. ಹಿಂದೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿದ ವ್ಯಕ್ತಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಂದು ನಾನು ನನ್ನ ಕಕ್ಷಿದಾರನ ಪರವಾಗಿ ನನ್ನ ವೃತ್ತಿಧರ್ಮವನ್ನು ಪಾಲಿಸಿದ್ದೆ. ಅದರಿಂದ ಆ ವ್ಯಕ್ತಿಗೆ ಹಿನ್ನೆಡೆಯಾಗಿತ್ತು. ಇದರ ದ್ವೇಷವನ್ನು ಈಗ ತೀರಿಸಿಕೊಳ್ಳಲು ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾನೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಅ.11ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನಾವರಣಗೊಳಿಸಲಾಯಿತು. ಬೈಂದೂರು ರಾಮಕ್ಷತ್ರಿಯ ಸಮಾಜ ಇದರ ಉಪಾಧ್ಯಕ್ಷ ಹಾಗೂ ರಾಮಕ್ಷತ್ರಿಯ ಉಡುಪಿ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷರಾದ ಸದಾಶಿವ ಡಿ. ಪಡುವರಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಶೆರ್ವೆಗಾರ್ ಹೆಬ್ರಿ, ರಾಮಕ್ಷತ್ರಿಯ ಒಕ್ಕೂಟದ ಜಿಲ್ಲಾ ಸಂಚಾಲಕ ಸುರೇಶ್ ಬಟವಾಡಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಆಡಳಿತ ಕಾರ್ಯದರ್ಶಿ ಮಂಜುನಾಥ ಎನ್. ಬೈಂದೂರು, ಮಾತೃ ಮಂಡಳಿ ಬೈಂದೂರು ಅಧ್ಯಕ್ಷರಾದ ಸೀತಾ ಭಾಸ್ಕರ್, ಕಾರ್ಯದರ್ಶಿ ಭಾಗಿರಥಿ ನರಸಿಂಹ, ಯುವಕ ಸಮಾಜದ ಅಧ್ಯಕ್ಷ ಕೆ. ರಾಜೇಶ್, ಕಾರ್ಯದರ್ಶಿ ನಿತ್ಯಾನಂದ ಡಿ., ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು. ಅಕ್ಟೋಬರ್ 11ನೇ ತಾರೀಕು ಭಾನುವಾರ ಜೆಎನ್ಆರ್ ಕಲಾಮಂದಿರ ಬೈಂದೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಲಾಯಿತು. ಇದನ್ನೂ ಓದಿ ► ಅ.11ರಂದು ಬೈಂದೂರಿನಲ್ಲಿ ಉಡುಪಿ ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್, ವೀಲ್ ಚೇರ್ ಮುಂತಾದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಆರೋಗ್ಯ ಸಲಕರಣೆಗಳ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು. ರೋಟರಿ ಮಾಜಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಆರೋಗ್ಯ ಸಲಕರಣೆಗಳನ್ನು ನೀಡಿರುವ ರೋಟರಿ ಕೋಟ ಬ್ರಿಗೇಡ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ಈ ಸಲಕರಣೆಗಳನ್ನು ಸಮರ್ಪಕವಾಗಿ ಬಳಸುವಂತೆ ಕರೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ ಕೊಡುಗೆಗಳನ್ನು ಸ್ವೀಕರಿಸಿ, ಕ್ಲಬ್‌ನ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ರೋಟರಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ, ವಲಯ ತರಬೇತುದಾರ ಸುರೇಶ್ ಬೇಳೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ ಆಗಿರುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಸರಕಾರದಿಂದ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಗೆ 2,814 ಮೇವಿನ ಬಿತ್ತನೆ ಬೀಜಗಳ ಕಿರುಪೊಟ್ಟಣಗಳು ಪೂರೈಕೆಯಾಗಲಿದ್ದು, ಜಮೀನು ಮತ್ತು ನೀರಿನ ಮೂಲ ಹೊಂದಿರುವ ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವ ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಗಳಾದ ಉಡುಪಿ ಮೊ.ನಂ: 9448134852, ಕಾಪು ಮೊ.ನಂ: 8217389838, ಬ್ರಹ್ಮಾವರ ಮೊ.ನಂ: 9448623690, ಕುಂದಾಪುರ ಮೊ.ನಂ: 9448163237, ಬೈಂದೂರು ಮೊ.ನಂ: 9741993045, ಕಾರ್ಕಳ ಮೊ.ನಂ: 9845753062 ಹಾಗೂ ಹೆಬ್ರಿ ಮೊ.ನಂ: 9986764615 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಯುವಕರ ತಂಡ ಸೇರಿ ಒಂದು ವಿನೂತನ ಪ್ರಯತ್ನವಾಗಿ ಮೊಟ್ಟ ಮೊದಲ ಬಾರಿಗೆ ಒಂದು web series ತಯಾರಿಸಿದ್ದಾರೆ. ಮನುಷ್ಯನ ಬದುಕಿನ ಪ್ರತಿಯೊಂದು ಪ್ರತಿಫಲವು ಭೂಮಿಯ ಮೇಲೆ ಅನುಭವಿಸಿಯೇ ತೀರುವಂಥದ್ದು ಇದಕ್ಕೆ ಕರ್ಮ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಕರ್ಮ ಎಂಬ ಶೀರ್ಷಿಕೆಯನ್ನು ಇಟ್ಟು ಮನುಷ್ಯ ತಾನು ಮಾಡುವ ಪಾಪ ಕೃತ್ಯಗಳಿಗೆ ಭೂಮಿಯ ಮೇಲೆ ಅದರ ಎಲ್ಲಾ ಪ್ರಾಯಶ್ಚಿತವನ್ನು ಅನುಭವಿಸುತ್ತಾನೆ. ಹೆಣ್ಣು ಹೊನ್ನು ಮಣ್ಣು ಇವುಗಳಿಗೆ ನಡೆಯುವ ಅತಿಯಾದ ವ್ಯಾಮೋಹ ಮನುಷ್ಯನನ್ನ ಯಾವ ಮಟ್ಟಕ್ಕೆ ಬೇಕಾದರೂ ಇಳಿಸಬಹುದು ಆದರೆ ಮುಂದಿನ ಕರ್ಮಫಲದ ಯೋಚನೆ ಆತನಿಗಿರುವುದಿಲ್ಲ ಆದರೆ ಮನುಷ್ಯನ ಪಾಪ ಪುಣ್ಯಗಳನ್ನ ದೇವರು ತನ್ನದೇ ಆದ ತಕ್ಕಡಿಯಲ್ಲಿ ಅಳೆದು ತೂಗುತ್ತಿರುತ್ತಾನೆ. ಮಿತಿಮೀರಿದ ವರ್ತನೆ ವಿಕೃತವಾದ ಮನಸ್ಸುಗಳು ಯಾವ ಮಟ್ಟಿಗೆ ಭೂಮಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುವ ಕಥೆಯನ್ನು ಬಹಳ ಸಂಕ್ಷಿಪ್ತವಾಗಿ ಎಳೆ ಎಳೆಯಾಗಿ 8 ಎಪಿಸೋಡ್ ಗಳ ಮೂಲಕ ಬರಲಿದೆ. ಕುಂದಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಅಕ್ಟೋಬರ್ 10ನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆರೋಗ್ಯ ವಿಜ್ಞಾನ ವಿಭಾಗದ ಕೋರ್ಸುಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ B.Sc. ನರ್ಸಿಂಗ್‌ನ 7ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸಸ್‌ನ 3ನೇ ಬ್ಯಾಚ್ ಹಾಗೂ ಫಿಸಿಯೋಥೆರಪಿಯ 2ನೇ ಬ್ಯಾಚ್‌ಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡಾ ಮೆನೆಜಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಮೊಹಮ್ಮದ್ ಸುಹೈಲ್ PT ಅವರು ಉದ್ಘಾಟನಾ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರತೆ, ಮಾನವೀಯತೆ, ಸಮರ್ಪಣೆ ಹಾಗೂ ಬದ್ಧತೆಯ ಮಹತ್ವವನ್ನು ಒತ್ತಿ ಹೇಳಿದರು. ಸಮರ್ಥ ಹಾಗೂ ಮಾನವೀಯ ಗುಣಗಳನ್ನು ಹೊಂದಿರುವ ಆರೋಗ್ಯ ವೃತ್ತಿಪರರನ್ನು ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಲಿಕಾ ವಾತಾವರಣವನ್ನು ಒದಗಿಸುತ್ತಿರುವ ಐಎಂಜೆ ಸಂಸ್ಥೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿ.ಪಿ.ಟಿ) ಸಂಘದ 2026-31ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ಇತ್ತೀಚಿಗೆ ನಡೆದಿದ್ದು, ಬೈಂದೂರು ತಾಲೂಕು ಅಧ್ಯಕ್ಷರಾಗಿ ಸಂದೀಪ್ ನಾಯ್ಕ್, ಕಾರ್ಯದರ್ಶಿಯಾಗಿ ಚಂದ್ರ ಹಾಗೂ ಖಜಾಂಚಿಯಾಗಿ ರಾಜೇಶ್ವರಿ ಹೆಗ್ಡೆ ಆಯ್ಕೆಯಾದರು. ಉಡುಪಿ ಜಿಲ್ಲಾ ಶಾಖೆಗೆ 2026-31ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಚೈತ್ರ ಕೆ., ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ ಹಾಗೂ ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ ಆಯ್ಕೆಯಾದರು. ಇದನ್ನೂ ಓದಿ ► ರಾಜ್ಯ ಜಿ.ಪಿ.ಟಿ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಗೆ ಚುನಾವಣೆ. ಅಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಆಯ್ಕೆ – https://kundapraa.com/?p=103117 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿ.ಪಿ.ಟಿ) ಸಂಘದ ಉಡುಪಿ ಜಿಲ್ಲಾ ಶಾಖೆಗೆ 2026-31ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಚೈತ್ರ ಕೆ. ಪಿ̧. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ ಹಾಗೂ ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ ಆಯ್ಕೆಯಾದರು. ತಾಲೂಕು ಅಧ್ಯಕ್ಷರುಗಳಾಗಿ ಸಂದೀಪ್ ನಾಯ್ಕ (ಬೈಂದೂರು), ಜಯಪ್ಪ ಟಿ (ಕುಂದಾಪುರ), ರವೀಂದ್ರ ಶೆಟ್ಟಿ (ಕಾರ್ಕಳ), ವೀಣಾ (ಬ್ರಹ್ಮಾವರ), ಶಬಾನಾ ಫರ್ವಿನ್ ಶೇಕ್ (ಉಡುಪಿ) ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಪದಾಧಿಕಾರಿಗಳು ಮತ್ತು ನಿರ್ದೇಶಕರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಅವರ 25 ವರ್ಷಗಳ ಸಾರ್ವಜನಿಕ ಹಾಗೂ ರಾಜಕೀಯ ಸೇವಾ ಪಯಣದ “ಸೇವಾ ಸಂಕಲ್ಪ ಅಭಿಯಾನ”ದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ನಡೂರು ಗ್ರೀನ್ ಪ್ಯಾಲೇಸ್ ಸಭಾಂಗಣದಲ್ಲಿ “ನಡೂರು ಮತ್ತು ಕಾಡೂರು ಶಕ್ತಿ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಉತ್ಸವ” ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು, “ಸಂಘದ ಸಾಮಾನ್ಯ ಪ್ರಚಾರಕನಿಂದ ಹಿಡಿದು ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಮೋದಿಜಿ ಅವರು ಸಲ್ಲಿಸಿರುವ 25 ವರ್ಷಗಳ ನಿಷ್ಕಳಂಕ ಸೇವೆ ಇಡೀ ಜಗತ್ತಿಗೆ ಮಾದರಿ. ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ರಾಜಕಾರಣ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಂತ್ಯೋದಯದ ಮಂತ್ರದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದೇ ಈ ಅಭಿಯಾನದ ಮುಖ್ಯ ಉದ್ದೇಶ” ಎಂದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ “ಸಮಾಜದ ಕಟ್ಟಕಡೆಯ ಮಗುವಿನ ಶಿಕ್ಷಣ, ಪೋಷಣೆಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬೈಂದೂರು ಮತ್ತು ಕುಂದಾಪುರ ಎರಡೂ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಂಡ್ಲೂರು ಹಳೆ ಸೇತುವೆ ವಿಚಾರದಲ್ಲಿ ಹಳೆ ಸೇತುವೆಯನ್ನು ತೆರವುಗೊಳಿಸಿದರೆ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉಡುಪಿ ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಅವರು ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಜಂಟಿಯಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕರು ಮಾತನಾಡಿದರು. ಕಂಡ್ಲೂರು ಹಳೆ ಸೇತುವೆಯು ರಾಜ್ಯ ಹೆದ್ದಾರಿಯ ಪ್ರಮುಖ ಮಾರ್ಗವಾಗಿದ್ದು, ಈ ಮಾರ್ಗದ ಮೂಲಕ ಸಾವಿರಾರು ಜನರು ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಾರೆ. ಮೀನುಗಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ದಿನನಿತ್ಯ ಈ ಸೇತುವೆಯನ್ನು ಅವಲಂಬಿಸಿದ್ದಾರೆ. ಒಂದು ವೇಳೆ ಹಳೆ ಸೇತುವೆಯನ್ನು ಈಗಲೇ ಕೆಡವಿದರೆ, ಹೊಸ ಸೇತುವೆ ನಿರ್ಮಾಣ ಪೂರ್ಣಗೊಳ್ಳುವವರೆಗೂ ಜನರು 15-20 ಕಿ.ಮೀ. ಸುತ್ತುವರೆದು…
