ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ರಾಮ ನವಮಿಯ ಪ್ರಯುಕ್ತ ನಡೆದ ಹಗಲೋತ್ಸ, ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ ಬೆಳ್ಳಿಯ ಪುಷ್ಪ ರಥ ಉತ್ಸವ ಜರಗಿತು. ನಂತರ ದೇವಳದಲ್ಲಿ ಅಷ್ಟಾವಧಾನ, ವಿಶೇಷ ವಸಂತ ಪೂಜೆ ನಡೆಯಿತು ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರು, ಸಮಾಜ ಭಾಂದವರು ಉಪಸ್ಥಿತರಿದ್ದರು. ವರದಿ: ರಮೇಶ್ ಭಟ್
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಸುರೇಶ್ ಗೋಪಿ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 25ವರ್ಷಗಳಿಂದ ಮಳಯಾಳಂ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಸುರೇಶ್ ಗೋಪಿ, ಪೊಲೀಸ್ ಪಾತ್ರಗಳಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಾ ಬಂದವರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸುತ್ತಾ ಬಂದಿದ್ದ ಅವರು ಇತ್ತಿಚಿಗಷ್ಟೇ ಕೇರಳದಲ್ಲಿ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸುರೇಶ್ ಗೋಪಿ ಕೊಲ್ಲೂರಿಗೆ ಭೇಟಿ ನೀಡಿದ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಬರಮಾಡಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆಗೆ ಲವಲವಿಕೆಯಿಂದ ತಿರುಗಾಡುತ್ತಿದ್ದ ತಂದೆಯ ಜೀವ ಸಂಜೆಯ ವೇಳೆಗೆ ದುರಂತ ಅಂತ್ಯ ಕಂಡಿದೆ. ಕೊಲ್ಲೂರಿಗೆ ಸಮೀಪದ ಮಹಾಸತಿ ಕಟ್ಟೆಗೆ ದೀಪ ಹಚ್ಚಿ ಹಿಂತಿರುತ್ತಿದ್ದ ಕೆ. ಭಾಸ್ಕರ ಗಾಣಿಗ (54) ಅವರ ಬೈಕಿಗೆ ಕಾಡುಕೋಣ ಢಿಕ್ಕಿ ಹೊಡೆದು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊಲ್ಲೂರು ಹೊರವಲಯದಲ್ಲಿರುವ ಶ್ರೀ ಮಹಾಸತಿ ಕಟ್ಟೆಗೆ ಸಾಯಂಕಾಲ ಎಂದಿನಂತೆ ದೀಪಹಚ್ಚಿ ತಮ್ಮ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಎದುರಾದ ಕಾಡುಕೋಣ ಇವರ ಬೈಕಿಗೆ ಢಿಕ್ಕಿಹೊಡೆದು ಕಾಡಿನಲ್ಲಿ ಮರೆಯಾಗಿತ್ತು. ಬೈಕಿನೊಂದಿಗೆ ನೆಲಕ್ಕುರುಳಿ ತೀವ್ರ ಗಾಯಗೊಂಡ ಇವರನ್ನು ರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಎ.27ರ ಮಗಳ ಮದುವೆಗೆ ತಯಾರಿಯಲ್ಲಿದ್ದ ಕುಟುಂಬವನ್ನು ಇವರ ಅನಿರೀಕ್ಷಿತ ಸಾವು ಕಂಗೆಡಿಸಿದೆ. ಮೃತರು ಸಹೋದರ, ತಾಪಂ ಮಾಜಿ ಸದಸ್ಯ ಕೆ. ರಮೇಶ್ ಗಾಣಿಗ ಸೇರಿದಂತೆ ಪತ್ನಿ, ಪುತ್ರ, ಹಾಗೂ…
ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಗರ ಪ್ರದೇಶಗಳಲ್ಲಿ ಭಾಷೆ, ಸಂಸ್ಕೃತಿಯ ಉಳಿವು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇದನ್ನು ನಿರೀಕ್ಷಿಸಬಹುದು. ಯುವಕರ ಸಂಘಟನೆಗಳು ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೇ ತಮ್ಮೂರಿನ ಅಭಿವೃದ್ಧಿಯ ಜತೆಗೆ ಸಂಸ್ಕೃತಿ-ಸಂಪ್ರದಾಯಗಳ ಉಳಿವಿಗೂ ಪಣತೊಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಇಪ್ಪತ್ತು ಸಾವಿರಕ್ಕೂ ಅಧಿಕ ಇತಿಹಾಸವಿರುವ ಸುಂದರ ದೇಶ ನಮ್ಮದು. ಎಲ್ಲಾ ವೈರುಧ್ಯಗಳ ನಡುವೆ ನಮ್ಮ ಹಿರಿಕರು ದೇಶವನ್ನು ಸದೃಡವಾಗಿ ಕಟ್ಟಿ ಹೋಗಿದ್ದಾರೆ. ಆದರೆ ನಾವು ಸ್ವಾತಂತ್ರ್ಯವನ್ನು ಕಂಡು ಇಷ್ಟು ವರ್ಷಗಳಾದರೂ ಜನಾಂಗ, ವಿದ್ಯೆ, ಐಶ್ವರ್ಯ ಮುಂತಾದವುಗಳಲ್ಲಿ ಅಂತರವನ್ನು ಕಾಣುತ್ತಿದ್ದೇವೆ. ನಮ್ಮನ್ನಾಳುವವರಿಂದಲೂ ಈ ಅಂತರವನ್ನು ದೂರಮಾಡಲು ಸಾಧ್ಯವಾಗಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಕೊಡೇರಿ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ದೇಹದ ಭಾಗವೊಂದು ಪತ್ತೆಯಾಗಿದ್ದು ಗುರುತು ಪತ್ತೆಗಾಗಿ ಬೈಂದೂರು ಶವಾಗಾರದಲ್ಲಿರಿಸಲಾಗಿದೆ. ಕೊಡೇರಿಯ ಸಮುದ್ರ ತೀರದಲ್ಲಿ ವ್ಯಕ್ತಿಯ ದೇಹದ ಸೊಂಟದ ಕೆಳಗಿನ ೨ ಫೀಟ್ ಉದ್ದದ ಭಾಗವೊಂದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಗಂಗೊಳ್ಳಿ ಎಂಎಚ್‌ಐ ಹೆಲ್ಪ್ ಲೈನ್ ಸ್ವಯಂಸೇವಕರಾದ ಇಬ್ರಾಹಿಂ ಹಾಗೂ ಆದಿಲ್ ಅವರ ನೆರವಿನಿಂದ ದೇಹದ ಭಾಗವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ಕ್ರೀಡೋತ್ಸವ-2016 ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡಾ ಮನೋಭಾವ ಹೊಂದಿರುವ ವ್ಯಕ್ತಿ ಬದುಕಿನಲ್ಲಿ ಸುಲಭವಾಗಿ ಸೋಲದೇ ಗೆಲುವಿವನ್ನೇ ಅಪೇಕ್ಷಿಸುವರು. ಸೋತಾಗ ಧೃತಿಗೆಡದೇ, ಗೆದ್ದಾಗ ಹಿಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಜಾಗೃತಾ ಸ್ಥಿತಿ ಕ್ರೀಡಾಪಟುವಿನಲ್ಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜರುಗಿದ ಬಂಟರ ಕ್ರೀಡೋತ್ಸವ-2016 ಚಾಲನೆ ನೀಡಿ ಮಾತನಾಡಿದರು. ಬಂಟ ಸಮುದಾಯ ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಬಾಳಿಬದುಕಿದ್ದರೂ ಕಾಲಾಂತರದಲ್ಲಿ ವಿವಿಧ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಆದಾಗ್ಯೂ ಕೃಷಿ ಸಂಸ್ಕೃತಿ ಹಾಗೂ ಹೋರಾಟ ಮನೋಭಾವವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶಾಲವಾದ ಕ್ರೀಡಾ ಮನೋಭಾವ, ಮನೋಧರ್ಮ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಯುವ ಸಮುದಾಯ ಜಾಗೃತಿಯಿಂದ ಹೆಜ್ಜೆಯಿಡಬೇಕಿದೆ ಎಂದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೃತ ಮಹೋತ್ಸವ ಆಚರಿಸುತ್ತಿರುವ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ತಮ್ಮ ತಂದೆ ಎಸ್. ರಾಮ ಪೂಜಾರಿ ನೆನಪಿಗೆ ನಿರ್ಮಿಸಿಕೊಟ್ಟ ಧ್ವಜಸ್ತಂಭವನ್ನು ಉದ್ಘಾಟಿಸಿದರು. ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ, ಕಾರ್ಯದರ್ಶಿ ಎಂ. ಅಣ್ಣಪ್ಪ ಬಿಲ್ಲವ, ಕೋಶಾಧಿಕಾರಿ ಅಣ್ಣಪ್ಪ ಖಾರ್ವಿ, ಆರ್ಥಿಕ ಸಮಿತಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಇತರರು ಇದ್ದರು.
ಯಕ್ಷಗಾನದ ಮೂಲಕ ಆಶಕ್ತರ ವೈದ್ಯಕೀಯ ಚಿಕಿತ್ಸೆಗೆ 2.20ಲಕ್ಷ ಸಹಾಯಧನ ವಿತರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಆಶಕ್ತರು ಹಾಗೂ ಆಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಹಾಯಧನವನ್ನು ಹಸ್ತಾಂತರಿಸುವ ಮಾನವೀಯ ಕಾರ್ಯವನ್ನು ತ್ರಾಸಿ-ಹೊಸಪೇಟೆಯ ಮಹಿಷಮರ್ಧಿನಿ ಫ್ರೆಂಡ್ಸ್ ಮಾಡಿದೆ. ಆರ್ಥಿಕ ಅಸಹಾಯಕತೆಯಿಂದ ಬಳಲುತ್ತಿರುವ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ನಿರ್ಧಾರ ಮಾಡಿದ ಮಹಿಷಮರ್ದಿನಿ ಫ್ರೆಂಡ್ಸ್ ಜಾತಿ,ಮತ ಧರ್ಮ ಹೊರತು ಪಡಿಸಿ ಆಯ್ದ ೮ ಮಂದಿಗೆ ವೈದ್ಯಕೀಯ ಸಹಾಯಧನ ನೀಡಿತು. ಏ.13ರಂದು ತ್ರಾಸಿಯಲ್ಲಿ ನಡೆದ ಸಾಲಿಗ್ರಾಮ ಮೇಳದ ರಂಗವೇದಿಕೆಯಲ್ಲಿ ಸಹಾಯಧನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ತಾ.ಪಂ.ಸದಸ್ಯ ರಾಜು ದೇವಾಡಿಗ ಅವರು, ಮೊಗವೀರ ಯುವ ಸಂಘಟನೆ ಇಂದು ಡಾ.ಜಿ.ಶಂಕರ್ ನೇತೃತ್ವದಲ್ಲಿ ರಕ್ತದಾನದ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಮಹತ್ವದ ಅರಿವು ಮೂಡಿಸುವ ಕೆಲಸವಾಗಿದೆ. ಮಹಿಷಮರ್ದಿನಿ ಫ್ರೆಂಡ್ಸ್ ಇವತ್ತು ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮದ ಬಾಂಧವರಿಗೂ ಸಹಾಯಧನ ನೀಡುವ ಮೂಲಕ ಮಾನವೀಯ ಕಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಂಗ ರಂಗು ಮಕ್ಕಳ ರಜಾಮೇಳವನ್ನು ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯೆ ವನಿತಾ ತೋರ್ವೆ ಉದ್ಘಾಟಿಸಿದರು. ಶಿಬಿರಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ ಮಾತನಾಡಿ ಮಕ್ಕಳು ಸ್ವಭಾವತಃ ಸ್ವತಂತ್ರರು, ಅವರ ಸ್ವಾತಂತ್ಯಕ್ಕೆ ಧಕ್ಕೆ ಬಾರದ ಹಾಗೆ ಬೇಸಿಗೆ ಶಿಬಿರಗಳನ್ನು ವಿನ್ಯಾಸಗೊಳಿಸುವುದು ಸವಾಲಿನ ಕೆಲಸ. ಬಹಳ ವರ್ಷಗಳಿಂದಲೂ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮುದಾಯ ಸಂಘಟನೆ ಮಕ್ಕಳ ಮನೋವಿಕಾಸಕ್ಕೆ ರಂಗಭೂಮಿಯನ್ನು ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಚಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿ.ಡಿ.ಪಿ.ಓ ಲಕ್ಷ್ಮಿ ಟಿ ನಾಯ್ಕ ಸ್ವಾಗತಿಸಿದರು. ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವಕಾರ, ಬಾಲವಿಕಾಸ ಅಕಾಡೆಮಿ ಸದಸ್ಯ ವಿಶ್ವನಾಥ ಪೂಜಾರಿ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಮನವಮಿ ಅಂಗವಾಗಿ ತಾಲೂಕಿನ ವಿವಿಧ ದೇವಸ್ಥಾನ ಹಾಗೂ ಭಜನಾ ಮಂದಿರಗಳಲ್ಲಿ ವಿಶೇಷ ಪ್ರಜೆ ಪುನಸ್ಕರಗಳು ನಡೆದವು. ಕೋಟೇಶ್ವರ, ಕುಂದಾಪುರ, ಮರವಂತೆ, ನಾವುಂದ, ಉಪ್ಮ್ಪಂದ, ಬೈಂದೂರು, ನಾಯ್ಕನಕಟ್ಟೆ, ಸಿದ್ಧಾಪುರ ಮುಂತಾದೆಡೆಗಳಲ್ಲಿ ರಾಮನಾಮ ಸ್ತುತಿ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಮರವಂತೆ ಮೀನುಗಾರರ ಸೇವಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಾರ್ಷಿಕ ಭಜನಾ ಸಪ್ತಾಹ ಮತ್ತು ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಳೆದ ಶನಿವಾರ ದೀಪಸ್ಥಾಪನೆ ನಡೆಸಿ, ಶ್ರೀರಾಮ ಭಜನಾ ಸಪ್ತಾಹ ಆರಂಭಿಸಲಾಗಿತ್ತು. ರಾಮನವಮಿ ನಿಮಿತ್ತ ವಿಶೇಷ ಪೂಜೆ, ಹೋಮಹವನದೊಂದಿಗೆ ಅಖಂಡ ಭಜನೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಾಮಮಂದಿರದಿಂದ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವರೆಗೆ ಪುರಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮರುದಿನ ಬೆಳಿಗ್ಗೆ ಮಂಗಲೋತ್ಸವದೊಂದಿಗೆ ಭಜನಾ ಸಪ್ತಾಹ ಕೊನೆಗೊಳ್ಳುವುದು. ಈ ವಾರ್ಷಿಕ ಆಚರಣೆಯ ನಿಮಿತ್ತ ಶ್ರೀರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸಮಿತಿಯ ಅಧ್ಯಕ್ಷ ಬಿ. ವೆಂಕಟೇಶ ಖಾರ್ವಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.…
