ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ “ಸಂಸ್ಕಾರ – ಸಿಂಚನ – ಹೆತ್ತವರ ಪಾದಗಳಿಗೆ ನಮನ”- ವಿಶೇಷ ಉಪನ್ಯಾಸ ಹಾಗೂ ಮಾತೃ ಪಿತೃಗಳ ಪಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಎನ್ ಆರ್ ದಾಮೋದರ ಶರ್ಮ ರವರು ಮಾತನಾಡುತ್ತಾ – ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿಯರಿಗೆ ಪೂಜನೀಯ ಸ್ಥಾನವಿದೆ. ಇವರನ್ನು ಪ್ರತ್ಯಕ್ಷ ದೇವರೆಂದೇ ಒಪ್ಪಿ ಆಧರಿಸಿ ಗೌರವಿಸುವ ಪರಂಪರೆ ನಮ್ಮದು. ತಾಯಿಯನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡುವುದರ ಜೊತೆಗೆ ತಂದೆಯನ್ನು ಅತ್ಯಂತ ಗೌರವದಿಂದ ಕಾಣಬೇಕು.. ಹೆತ್ತ ತಾಯಿಯ ಋಣ ಹಾಗೂ ಹೊತ್ತ ನೆಲದ ಋಣ ತೀರಿಸಲಾಗದ ಸಂಪತ್ತಾಗಿದೆ. ಮಕ್ಕಳು ಸಂಸ್ಕಾರಯುತರಾಗಿ ಬೆಳೆದಾಗ ಸಮಾಜದಲ್ಲಿನ ಉನ್ನತ ಸ್ಥಾನಮಾನಗಳು ಹಾಗೂ ಗೌರವ ದೊರಕಿ ಬದುಕು ಪಾವನವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅವರವರ ತಂದೆ ತಾಯಿಯಂದಿರ ಪಾದ ಪೂಜೆ ಮಾಡಿಸಲಾಯಿತು. ಬಾಂಡ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ವಂಡ್ಸೆ ವಲಯದ ಆತ್ರಾಡಿ ಅಂಗನವಾಡಿ ಕೇಂದ್ರದಲ್ಲಿ ಫೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅಂಗನವಾಡಿ ಮೇಲ್ವಿಚಾರಕಿ ಭಾಗ್ಯವತಿ ಉದ್ಘಾಟಿಸಿ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಅಪೌಷ್ಠಕತೆ ನಿವಾರಣೆಗೆ ತಗೆದುಕೊಳ್ಳಬೇಕಾದ ಆಹಾರ ಪದ್ದತಿ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿಗಳ ಬಳಕೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗರ್ಬಿಣಿಯರಿಗೆ ಸೀಮಂತ ಮತ್ತು ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಶ್ರುತಿ, ಎಂ.ಆರ್.ಡಬ್ಲ್ಯೂ ಜಾಕ್ಲಿನ್ ವೆನಿಶಾ ಡಿಮೆಲ್ಲೊ, ಎಲ್.ಸಿ.ಆರ್.ಪಿ ನಿರ್ಮಲ ವಂಡ್ಸೆ, ಆಶಾ ಕಾರ್ಯಕರ್ತೆ ವನಿತಾ ಹಾಗೂ ತಾಯಂದಿರು, ಸ್ತ್ರೀಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಜ್ಯೋತಿ ಹೊಲಾಡು ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಜಲಜ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾನಸಿಕ ಆರೋಗ್ಯದ ಜೊತೆಗೆ ಆರ್ಥಿಕ ಸಬಲತೆ ಇದ್ದಾಗ ನಿವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಗಿರಿಧರ ಕಂಠಿ ಹೇಳಿದರು. ಅವರು ಅಕ್ಸೆಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನೆಲ್ ಸಹಯೋಗದಲ್ಲಿ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತರಾದ ನಂತರ ಮನೆ ಸೇರುವುದನ್ನು ಬಿಟ್ಟು ಜನಜಾಗ್ರತಿ, ಜನರ ಸೇವೆ ಮಾಡಿದಾಗ ಸಮಾಜಕ್ಕೆ ಒಳಿತಾಗುತ್ತದೆ. ಜನರೊಂದಿಗೆ ಬೆರೆತಾಗ ಮನಸ್ಸು ಶುದ್ದಿ ಯಾಗುತ್ತದೆ ಎಂದರು. ಈ ಶುಭ ಸಂದರ್ಭದಲ್ಲಿ ಡಾಕ್ಟರ್ ಶರೀಫ್, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನಲ್ ನ ಚಂದ್ರಕಾಂತ್ ಭಟ್, ವಿಶ್ವನಾಥ್ ಭಟ್, ಜಯದೀಪ್ ದೇವಾಡಿಗ, ಸುಬ್ರಮಣ್ಯ ಉಡುಪ, ಶ್ರೀಪತಿ ಉಪಾಧ್ಯಾಯ,ಪ್ರಕಾಶ್, ಮಧುಸೂದನ್ ಹೆಗಡೆ ಮತ್ತು ರಕ್ಷಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಏಷಿಯಾಟೆಕ್ ಕಾಲೇಜು, ಕುಂದಾಪುರದಲ್ಲಿ 2027ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗಿದೆ. ಉದ್ಯೋಗಾಧಾರಿತ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಒಂದು ವರ್ಷದ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡುತ್ತಿದ್ದು ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಲಭ್ಯವಿರುವ 1 ವರ್ಷದ ಕೋರ್ಸ್‌ಗಳು:* ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ * ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ * ಫೈರ್ ಅಂಡ್ ಸೇಫ್ಟಿ ಎಂಜಿನಿಯರಿಂಗ್* ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)* ಸೈಬರ್ ಕ್ರೈಮ್ ಅಂಡ್ ಸೈಬರ್ ಲಾ * ಟ್ರಾವೆಲ್ ಅಂಡ್ ಟೂರಿಸಂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು:100% ಉದ್ಯೋಗ ನಿಯೋಜನೆ ಸಹಾಯ (Placement Assistance)ಸರ್ಕಾರಿ ಶಿಕ್ಷಣ ಸಾಲದ ಸೌಲಭ್ಯಕ್ಕೆ ಸಹಾಯ (ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಂತೆ)ವೃತ್ತಿಪರ ಕೌಶಲ್ಯ ತರಬೇತಿಉದ್ಯೋಗಾವಕಾಶಗಳಿಗೆ ಮಾರ್ಗದರ್ಶನ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಂಡು ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕುಂದಾಪುರ ಏಷಿಯಾಟೆಕ್ ಕಾಲೇಜು ಪ್ರವೇಶಾತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಹೆಬ್ರಿ ತಾಲೂಕು ಸಂತೆಕಟ್ಟೆ ನಿವಾಸಿ ಕಾಲೇಜು ವಿಧ್ಯಾರ್ಥಿನಿ ಸಮ್ರದ್ಧಿ ನಾಯ್ಕ್ ಅವರ ಶ್ರವಣ ದೋಷಕ್ಕೆ ತಕ್ಷಣ ಸ್ಪಂದಿಸಿದ ಕೋಟ ಬ್ರಿಗೇಡ್ ರೋಟರಿ ಸಂಸ್ಥೆ ಸುಮಾರು 25,000 ಮೌಲ್ಯದ ಆಧುನಿಕ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಯಿತು. ನಿಯೋಜಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಅವರು ಸಾಧನವನ್ನು ವಿಧ್ಯಾರ್ಥಿನಿಗೆ ಹಸ್ಥಾಂತರಿಸಿ, ಮುಂದಿನ ವಿಧ್ಯಾಭ್ಯಾಸ ಹಾಗು ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಹಾಗೂ ಕೋಟ ಬ್ರಿಗೇಡ್ ರೋಟರಿ ಸಂಸ್ಥೆಯ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ವಲಯ ಎರಡರ ಮಾಜಿ ಸಹಾಯಕ ಗವರ್ನರ್ ಹಾಗು ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬನ್ನಾಡಿ, ವಲಯ ಸೇನಾನಿ ದಯನಂದ ಆಚಾರ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಆಚಾರ್, ಡಾ. ಗಣೇಶ್, ಪ್ರಕಾಶ್ ಹಂದಟ್ಟು, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಸದಸ್ಯರಾದ ಅರುಣ್ ಬಿ.ಕೆ.ಎಸ್. ಗುಂಡ್ಮಿ, ಮತ್ತು ಫಲಾನುಭವಿ ತಾಯಿ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ ►…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಡಿ ಗ್ರಾಮ ಪಂಚಾಯತ್ ಸಮನ್ವಯ ಸಂಜೀವಿನಿ ಒಕ್ಕೂಟ ಇದರ 2025-26ರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶಾಂತ ಸಿ. ಮೆಂಡನ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೀಪ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಿ ಜೆಂಡರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಜಿಲ್ಲಾ ಕಾನೂನು ಅಭಿರಕ್ಷಕರಾದ ರಜನಿ ಅವರು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ತಡೆ ಹಾಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ವಿಧಾನಗಳ ಕುರಿತು ಜಾಗೃತಿ ಮೂಡಿಸಿದರು. ಬ್ರಹ್ಮಾವರ ತಾಲೂಕು ವಲಯ ಮೇಲ್ವಿಚಾರಕರಾದ ಸ್ವಾತಿ ಅವರು ಸಂಜೀವಿನಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸಂಜೀವಿನಿ ಯೋಜನೆಯ ಮಹತ್ವದ ಕುರಿತು ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಉಮೇಶ್, ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಮೆಂಡನ್, ಮಾಜಿ ಸದಸ್ಯ ಕೃಷ್ಣ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಸಮಾಲೋಚಕರಾದ ಮೀರಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ “ರಾಷ್ಟ್ರೀಯ ರಕ್ಷಣಾ ಅಕಾಡೆಮಿ( ಎನ್ .ಡಿ.ಎ) ಗೆ ಸೇರುವ ಮಾರ್ಗ ಮತ್ತು ಪರೀಕ್ಷೆ ತಯಾರಿ ಮಾರ್ಗದರ್ಶಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಗುರುವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಜೇಶ್ವರಿ ಆನಂದನ್ ಮಾತನಾಡಿ ಎನ್.ಡಿ.ಎ ಕುರಿತ ಮಹತ್ವವನ್ನು ತಿಳಿಸಿ ಅದನ್ನು ಸೇರುವ ನಿಟ್ಟಿನಲ್ಲಿ ಹೇಗೆ ತಯಾರಿ ನಡೆಸಬೇಕು. ಅರ್ಜಿ ಸಲ್ಲಿಸುವಿಕೆ, ಪರೀಕ್ಷಾ ವಿಧಾನ ಮತ್ತು ಸೇರುವ ಮಾರ್ಗಗಳು ಮತ್ತು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಎನ್.ಡಿ.ಎ. ಸೇರುವುದರ ಮೂಲಕ ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಿ. ಮುಖ್ಯವಾಗಿ ಎನ್ ಡಿ ಎ ಸೇರುವುದರಿಂದ ದೇಶಸೇವೆಯೊಂದಿಗೆ ಗೌರವ, ಆತ್ಮವಿಶ್ವಾಸ, ಧೈರ್ಯ, ದೃಢತೆ, ಸಾಮರಸ್ಯ, ಮತ್ತು ಜ್ಞಾನ ಬೆಳೆಯುತ್ತದೆ. ವಿದ್ಯಾರ್ಥಿಗಳು ಮನಸು ಮಾಡಿದರೆ ಎಲ್ಲವೂ ಸಾಧ್ಯ. ಎನ್ ಡಿ ಎ ಸೇರುವಾಗ ಅತ್ಯಂತ ಮುಖ್ಯವಾಗಿ ಶೃದ್ಧೆ, ದೃಢಸಂಕಲ್ಪ ಬೇಕಾಗುತ್ತದೆ. ನಿಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಎತ್ತಿಕೊಂಡು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ತಮ್ಮ ಸಮುದಾಯಕ್ಕೆ ಅನ್ವಯಿಸಿಕೊಂಡ ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ಅವಮಾನಿಸಿ, ನಿಂದಿಸಿದ್ದು ವ್ಯವಸ್ಥಿತ ಷಡ್ಯಂತ್ರವಾಗಿದೆ.ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯನ್ನೂ ಕೇಳಿಲ್ಲ, ಕೇಳುವುದು ಇಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದ್ದಾರೆ. ಅವರು ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಎಲ್ಲಾ ವಿದ್ಯಮಾನಗಳನ್ನು ವಿಶ್ಲೇಷಿಸಿ ನೋಡುವಾಗ ಹಳದಿ ಕನ್ನಡಕ ಹಾಕಿಕೊಂಡ ಕೆಲವೊಂದು ಜನಗಳಿಂದ ಘಟನೆ ಆಗಿದೆ ಎನ್ನುವುದು ಸ್ಪಷ್ಟ. ಹಿಂದೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿದ ವ್ಯಕ್ತಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಂದು ನಾನು ನನ್ನ ಕಕ್ಷಿದಾರನ ಪರವಾಗಿ ನನ್ನ ವೃತ್ತಿಧರ್ಮವನ್ನು ಪಾಲಿಸಿದ್ದೆ. ಅದರಿಂದ ಆ ವ್ಯಕ್ತಿಗೆ ಹಿನ್ನೆಡೆಯಾಗಿತ್ತು. ಇದರ ದ್ವೇಷವನ್ನು ಈಗ ತೀರಿಸಿಕೊಳ್ಳಲು ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾನೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗಳು ಈ ವರ್ಷ ಒಟ್ಟಿಗೆ ನಡೆಯಲಿದ್ದು, 06 ಜನವರಿ 2027 ರಿಂದ 10 ಜನವರಿ 2027 ರವರೆಗೆ (05 ದಿನಗಳು) ನಿಗದಿಯಾಗಿದೆ. ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ದಿನಾಂಕ 07-01-2027ನೇ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು 09-01-2027ರ (03 ದಿನಗಳು) ಶನಿವಾರ ಸಂಜೆ ಸಮಾಪನಗೊಳ್ಳಲಿದೆ.ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆ -‘ಕನ್ನಡ ಮನಸ್ಸು: ಭವಿಷ್ಯದ ಕನಸು’.ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆ ‘ಕನ್ನಡ ಮನಸ್ಸು: ಭವಿಷ್ಯದ ಕನಸು’ಎಂದಾಗಿದ್ದು, ಇದು ಯುವ ಜನತೆಯನ್ನು ಕೇಂದ್ರವಾಗಿಸಿರುವ ಪರಿಕಲ್ಪನೆಯಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಗಳನ್ನೊಳಗೊಂಡ ಕನ್ನಡದ ಅಸ್ಮಿತೆಯಿಂದ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪ ಈ ಪರಿಕಲ್ಪನೆಯದ್ದಾಗಿದೆ.ಆಳ್ವಾಸ್ ನುಡಿಸಿರಿ-2027ರ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ:ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಅ.11ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನಾವರಣಗೊಳಿಸಲಾಯಿತು. ಬೈಂದೂರು ರಾಮಕ್ಷತ್ರಿಯ ಸಮಾಜ ಇದರ ಉಪಾಧ್ಯಕ್ಷ ಹಾಗೂ ರಾಮಕ್ಷತ್ರಿಯ ಉಡುಪಿ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷರಾದ ಸದಾಶಿವ ಡಿ. ಪಡುವರಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಶೆರ್ವೆಗಾರ್ ಹೆಬ್ರಿ, ರಾಮಕ್ಷತ್ರಿಯ ಒಕ್ಕೂಟದ ಜಿಲ್ಲಾ ಸಂಚಾಲಕ ಸುರೇಶ್ ಬಟವಾಡಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಆಡಳಿತ ಕಾರ್ಯದರ್ಶಿ ಮಂಜುನಾಥ ಎನ್. ಬೈಂದೂರು, ಮಾತೃ ಮಂಡಳಿ ಬೈಂದೂರು ಅಧ್ಯಕ್ಷರಾದ ಸೀತಾ ಭಾಸ್ಕರ್, ಕಾರ್ಯದರ್ಶಿ ಭಾಗಿರಥಿ ನರಸಿಂಹ, ಯುವಕ ಸಮಾಜದ ಅಧ್ಯಕ್ಷ ಕೆ. ರಾಜೇಶ್, ಕಾರ್ಯದರ್ಶಿ ನಿತ್ಯಾನಂದ ಡಿ., ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು. ಅಕ್ಟೋಬರ್ 11ನೇ ತಾರೀಕು ಭಾನುವಾರ ಜೆಎನ್ಆರ್ ಕಲಾಮಂದಿರ ಬೈಂದೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಲಾಯಿತು. ಇದನ್ನೂ ಓದಿ ► ಅ.11ರಂದು ಬೈಂದೂರಿನಲ್ಲಿ ಉಡುಪಿ ಜಿಲ್ಲಾ…
