ಅಶ್ವಯುಜ ಮಾಸದ ಪ್ರಾರಂಭದಲ್ಲಿ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ನವರಾತ್ರಿ. ಚಾಂದ್ರಮಾನ ಪಂಚಾಂಗರೀತ್ಯ ಶರದ್ಋತುವಿನ ಮೊದಲ 9 ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವುದರಿಂದ ಇದನ್ನು ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ನವರಾತ್ರಿಯ ಈ ಒಂಭತ್ತು ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆಯಾಗಿರುತ್ತದೆ. ದೇವಿಯ ಪ್ರತಿಯೊಂದು ಸ್ವರೂಪದ ಆರಾಧನೆಯಿಂದ ವಿಶಿಷ್ಟ ಫಲಗಳನ್ನು ಪಡೆಯಬಹುದಾಗಿದೆ. ದೇವಿಯ ಸ್ವರೂಪಗಳನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಶೈಲಪುತ್ರಿನವರಾತ್ರಿಯ ಮೊದಲನೇ ದಿನ ಘಟಸ್ಥಾಪನೆಯ ಜೊತೆಗೆ ಶೈಲಪುತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಹಿಮಾಲಯ ರಾಜನ ಪುತ್ರಿಯಾದ ಕಾರಣ ಈ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಶೈಲಪುತ್ರಿಯು ವೃಷಭವನ್ನೇರಿ ಬರುತ್ತಾಳೆ ಮತ್ತು ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ. ನವರಾತ್ರಿಯ ಮೊದಲ ದಿನ ದೇವಿಯ ಆರಾಧಕರ ಮನಸ್ಸು ಮೂಲಾಧಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಬ್ರಹ್ಮಚಾರಿಣಿನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ತಪಸ್ಸನ್ನು ಕಟ್ಟುನಿಟ್ಟಾಗಿ ಆಚರಿಸಿರುವ ಕಾರಣದಿಂದ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ತೇಜೋಮಯ ಸ್ವರೂಪವುಳ್ಳ ದೇವಿಯು ಬಲಗೈಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಂತಾರ ಚಿತ್ರದ ಸಂಪೂರ್ಣ ಚಿತ್ರೀಕರಣವಾಗಿದ್ದು ಕುಂದಾಪುರದಲ್ಲಿ, ಸಿನಿಮಾ ಬಿಡುಗಡೆಯಾದ ಮೇಲೆ ಇದೀಗ ಅದರ ಯಶಸ್ಸಿನ ಪ್ರಯಾಣ ಆರಂಭವಾಗುತ್ತಿರುವುದೂ ಕೂಡ ಕುಂದಾಪುರದಲ್ಲಿಯೇ ಎಂಬ ಕಾರಣಕ್ಕೆ ಖುಷಿಯಾಗುತ್ತಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಅವರು ಸೋಮವಾರ ಕೋಟೇಶ್ವರದ ಭಾರತ್ ಸಿನಿಮಾಸ್ ಎದುರು ಆಯೋಜಿಸಲಾದ ಸಕ್ಸಸ್ ಜರ್ನಿಯಲ್ಲಿ ಕಾಂತಾರ ಚಿತ್ರತಂಡದೊಂದಿಗೆ ಭಾಗವಹಿಸಿ ಮಾತನಾಡಿ ನಮ್ಮ ಮಣ್ಣು, ಕೃಷಿ ಭೂಮಿಗೆ ಸಂಬಂಧಿಸಿದ ದೈವ ದೇವರ ಆಚರಣೆ, ಸಂಸ್ಕೃತಿ, ಸಂಪ್ರದಾಯವನ್ನು ದಂತಕಥೆಯಾಗಿರುವ ಪ್ರಯತ್ನ ಮಾಡಲಾಗಿದೆ. ನಮ್ಮ ಮಣ್ಣಿನ ಕಥೆ ಕನ್ನಡದಲ್ಲಿಯೇ ಎಲ್ಲರಿಗೂ ತಲುಪಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ಮೊದಲ ಹಂತದಲ್ಲಿ ಕನ್ನಡದಲ್ಲಿಯೇ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಮುಂದಿನ ವಾರ ಬೇರೆ ಬೇರೆ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಪಂಚದಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಕ್ಕಳಿಗೆ ಹೆಚ್ಚೆಚ್ಚು ಈ ಸಿನಿಮಾ ತೋರಿಸಿ ಅವರಿಗೂ ನಮ್ಮ ಸಂಸ್ಕೃತಿಯ ಪರಿಚಯವಾಗಲಿ ಎಂದು ಮನವಿ ಮಾಡಿಕೊಂಡರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂತಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು ಹಾಗೂ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ವಿದ್ಯಾರ್ಥಿವೇತನ ನೀಡುತ್ತಿರುವುದು ಸ್ತುತ್ಯಾರ್ಹವಾದುದು. ವಿದ್ಯಾರ್ಥಿವೇತನವನ್ನು ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಬಳಸಿಕೊಂಡು, ವಿದ್ಯಾಭ್ಯಾಸ ಮುಗಿಸಿ ಉನ್ನತ ಸ್ಥಾನಮಾನ ಪಡೆದುಕೊಂಡ ಬಳಿಕ ವಿದ್ಯಾರ್ಥಿವೇತನ ಪಡೆದುಕೊಂಡ ಸಂಸ್ಥೆಗೆ ಸಹಾಯ ಮಾಡುವ ಪ್ರವೃತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನಗರ ಕೃಷ್ಣಾನಂದ ಸುಬ್ರಾಯ ನಾಯಕ್ ಹೇಳಿದರು. ಗಂಗೊಳ್ಳಿಯ ಶ್ರೀ ಸರಸ್ವತಿ ವಿದ್ಯಾನಿಧಿ ಆಶ್ರಯದಲ್ಲಿ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜರಗಿದ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ರವೀಂದ್ರ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಯೋಧ ಟಿ.ದಿನಕರ ಶೆಣೈ ಶುಭಾಶಂಸನೆಗೈದರು. ಇದೇ ಸಂದರ್ಭ ಕಳೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕೆ.ಎಂ.ಸಿ. ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು, ಸ್ಪರ್ಶ ಸಂಪದ ಉಡುಪಿ, ಕ್ಯಾಥೋಲಿಕ್ ಸ್ತ್ರೀ ಸಂಘಟನೆ, ಆರಾಧನಾ ಮಹಾಸಂಘ ಬೈಂದೂರು, ಹೋಲಿ ಕ್ರಾಸ್ ಚರ್ಚ್ ಬೈಂದೂರು, ಇವರ ಸಹಯೋಗದೊಂದಿಗೆ ಕ್ಯಾನ್ಸರ್ ಕುರಿತು ಮಾಹಿತಿ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗರ್ಭಕಂಠದ ( ಪ್ಯಾಪ್ ಸ್ಮೆಯರ್ ) ಸ್ಥನ ಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್ ಮಧುಮೇಹ ರಕ್ತ ಪರೀಕ್ಷೆ & ರಕ್ತದೊತ್ತಡ ತಪಾಸಣಾ ಶಿಬಿರ ವೇಲ್ನೇಸ್ ಸೆಂಟರ್ ಬಿ ಇ ಒ ಕಚೇರಿ ಹತ್ತಿರ ಸಿ ಎಚ್ ಸಿ ಸಬ್ ಸೆಂಟರ್ ಯೋಜನ ನಗರದಲ್ಲಿ ನಡೆಯಿತು. ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರು ವಂ| ವಿನ್ಸೆಂಟ್ ಕುವೆಲ್ಲೊ ಶಿಬಿರ ಉದ್ಘಾಟಿಸಿದರು. ಬೈಂದೂರು ಆರೋಗ್ಯ ಕೇಂದ್ರದ ವೈದ್ಯರಾದ ಡಾ. ನಂದಿನಿ, ಡಾ. ನಿವೇದಿತಾ, ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ ಕೆ., ಸ್ಪರ್ಶ- ಸಂಪದ ಉಡುಪಿ (ಕೋ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಂಚಿಕಾನು ಸ.ಹಿ.ಪ್ರಾ.ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಪ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಂಗ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಪ್ರಥಮ ನ್ಯಾಯವಾದಿ ಉಪ್ಪುಂದದ ಯೋಗೇಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಈ ವರ್ಷ ಖೋಖೋ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದ, ಪ್ರತಿಭಾ ಕಾರಂಜಿ ಹಾಗೂ ಆಟೋಟಗಳಲ್ಲಿ ವಿಜಯಿಯಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಸಬ್ ಇನ್ಸ್ಪೆಕ್ಟರ್ ನಿರಂಜನ್, ಹಿರಿಯ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರಭಾಕರ ದೇವಾಡಿಗ, ಉದ್ಯಮಿ ಪ್ರಕಾಶ್ ಪೂಜಾರಿ, ಉಪ್ಪುಂದ ಜೇಸಿಐ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯತ್ ಸದಸ್ಯೆ ಮೂಕಾಂಬು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿತ್ತರಂಜನ್ ಮತ್ತು ಎಸ್.ಡಿ.ಎಮ್.ಸಿ ಸದಸ್ಯರು…
ವಿದ್ಯೆಯೇ ಮನುಷ್ಯನ ದೊಡ್ಡ ಸಂಪತ್ತು: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಪತ್ತು ಎಷ್ಟಿದೆ ಎನ್ನೋದು ಮುಖ್ಯವಲ್ಲ ಅದನ್ನು ಬಳಸುವುದು ಗೇಗೆ ಎನ್ನುವುದು ಗೊತ್ತಿತಬೇಕು. ವಿದ್ಯೆ ಇದ್ದವರಿಗೆ ಸಂಪತ್ತು ಅಲ್ಲದೆ ಇನ್ನಿತರ ಎಲ್ಲಾ ವ್ಯವಸ್ಥೆಗಳ ಹೇಗೆ ಬಳಸಿಕೊಳ್ಳಬೇಕು ಎನ್ನೋದು ಗೊತ್ತಿರುತ್ತದೆ. ವಿದ್ಯೆಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದು ಅದಮಾರು ಮಠ ಕಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು. ಕೋಟೇಶ್ವರ ವಕ್ವಾಡಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಟ್ರಸ್ಟ್ ವತಿಯಿಂದ ನಿರ್ಮಿಸಿದ ಶ್ರೀ ಶಾರದಾ ದೇವಿ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು. ವಿದ್ಯೆಯಿದ್ದವನಿಗೆ ಅದನ್ನು ಹೇಗೆ ಬಳಸಬೇಕು ಎಂಬುದರ ಅರಿವು ಇರಬೇಕು. ವಿದ್ಯೆ ಸಾತ್ವಿಕ ಮಾರ್ಗದಿಂದ ಪಡೆಯಬೇಕು. ಸಹನೆ, ಏಕಾಗ್ರತೆ ನಿರಂತರ ಪ್ರಯತ್ನ ಇದ್ದರೆ ವಿದ್ಯೆ ಒಲಿಯುತ್ತದೆ. ವಿದ್ಯೆ,ಬುದ್ದಿ ಸಂಪತ್ತು ಎಲ್ಲವೂ ಇದ್ದ ಅದನ್ನು ಸದ್ವಿನಿಯೋಗ ಮಾಡದಿದ್ದರೆ ನಿಷ್ಪ್ರಯೋಜಕ ಎಂದರು. ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ. ಅಪ್ಪಣ್ಣ…
ಕುಂದಾಪ್ರ ಡಾಟ್ ಕಾಂ.ಸಿನಿಮಾದೊಳಕ್ಕೆ ದೈವದ ಅಬ್ಬರ, ಗರ್ನಲ್ ಸದ್ದು ಮಾಡಿದ್ರೇ, ಹೊರಗಡೆ ಕನ್ನಡ ಚಿತ್ರರಂಗವೇ ಕಂಪಿಸುವಂತೆ ಸದ್ದು ಮಾಡುತ್ತಿದೆ ‘ಕಾಂತಾರ’. ಕಾಡಿನ ಮಕ್ಕಳಾಗಿ, ಅದರ ಜೊತೆಗೆ ಬೆಸೆದುಕೊಂಡು ಬದುಕುವ ಊರಿನ ಜನ. ಕಾಡಿನ ಒಂದಡಿ ಭೂಮಿಯನ್ನು ಒತ್ತುವರಿ ಆಗದಂತೆ ತಡೆಯಬೇಕೆಂಬ ಅರಣ್ಯಾಧಿಕಾರಿ. ಇದರ ಲಾಲಸೆಯ ಬುದ್ಧಿಯುಳ್ಳ ರಾಜಕಾರಣಿ… ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರೇ ಹೇಳುವಂತೆ ಇದು ‘ಮಾನವ ಮತ್ತು ಪ್ರಕೃತಿ ಸಂಘರ್ಷ’. ಎರಡೂವರೆ ಗಂಟೆಯಲ್ಲಿ ಈ ಎಲ್ಲೆವನ್ನೂ ಹಿಡಿದಿಟ್ಟ, ಕಟ್ಟಿಕೊಟ್ಟ ಪರಿ ಮಾತ್ರ ಬೆರಗುಮೂಡಿಸುತ್ತೆ. ಇದರಲ್ಲಿ ಆಂಗ್ರಿಯಂಗ್ಮ್ಯಾನ್ ಲುಕ್ನಲ್ಲಿರುವ ಶಿವ (ರಿಷಬ್ ಶೆಟ್ಟಿ) ಬಂಡಾಯ ರೂಪಕವಾಗಿ ಕಾಣಿಸಿಕೊಳ್ಳುತ್ತಾನೆ. ಕೊನೆಯಲ್ಲಿ ತನ್ನ ನೈಜ ಅಸ್ತಿತ್ವವನ್ನು ಗ್ರಹಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಯತ್ನಿಸುತ್ತಾನೆ. ಇದು ಹೇಗೆ ಸಫಲವಾಗುತ್ತೇ ಎಂಬುದೇ ಕಥೆ ತಿರುಳು. ಕರಾವಳಿಯ ನೆಲದ ಸಂಪ್ರದಾಯವಾದ ಕಂಬಳ ಮತ್ತು ಭೂತ ಕೋಲ ಜೀವಂತಗೊಳಿಸುವ ದೃಶ್ಯ ವೈಭವ ಕಾಂತಾರದಲ್ಲಿದೆ. ಕರಾವಳಿ ಜನರ ಧಾರ್ಮಿಕ ನಂಬಿಕೆಗಳು ಹಾಗೂ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕದ ಅಂಗವಾಗಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಇತ್ತೀಚಿಗೆ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಹರಾದ ವೀಣಾ ಎಸ್ ಶೆಟ್ಟಿ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿಯವ ಆಶಯದಂತೆ ಸೇವಾ ಪಾಕ್ಷಿಕದ ಅಂಗವಾಗಿ ಅಭಯಹಸ್ತ ಟ್ರಸ್ಟ್ ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸರಣಿ ರಕ್ತದಾನ ಶಿಬಿರ ಆಯೋಜಿಸಿ ಮೋದಿಜೀಯವರ ಆಶಯವನ್ನು ಈಡೇರಿಸಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಓಬಿಸಿ ಮೋರ್ಚಾ ಉಡುಪಿ ಜಿಲ್ಲೆ ಅಧ್ಯಕ್ಹರಾದ ಸುರೇಂದ್ರ ಪಣಿಯೂರು ಮಾತನಾಡಿ ಉಡುಪಿ ಜಿಲ್ಲೆಯಾದ್ಯಂತ ಅಭಯಹಸ್ತ ಟ್ರಸ್ಟ್ ಆಯೋಜಿಸುವ ಎಲ್ಲ ರಕ್ತದಾನ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಅಧ್ಯಕತೆ ವಹಿಸಿದ ಇಂಡಿಯನ್ ರೆಡ್…
ಕರಾವಳಿ ಎಂದ ತಕ್ಷಣ ಕೇವಲ ನದಿ ಸಮುದ್ರವೆಂಬ ಪ್ರಾಕೃತಿಕ ಸೊಬಗಷ್ಟೇ ಅಲ್ಲ. ಕಾಡು ಬೆಟ್ಟ ಗುಡ್ಡ ಇಲ್ಲಿನ ಕಂಬಳ, ದೈವಾರಾಧನೆ ಇಲ್ಲಿನ ಭಾಷೆ ಇವೆಲ್ಲ ಒಮ್ಮೆ ಕಣ್ಣ ಮುಂದೆ ಹಾದು ಹೋಗುತ್ತದೆ. ದಟ್ಟಾರಣ್ಯದ ನಡುವೆ ಕರಾವಳಿಯ ಜನರ ಸಂಘರ್ಷದ ಬದುಕು, ನಂಬಿಕೆ, ದೈವಾರಾಧನೆ, ಕರಾವಳಿಯ ಸಂಸ್ಕೃತಿಯ ಒಟ್ಟಾರೆ ಚಿತ್ರಣವೇ ‘ಕಾಂತಾರ’ ಒಕ್ಕಲೆಬ್ಬಿಸುವಿಕೆ, ಅರಣ್ಯ ಭೂಮಿ ಒತ್ತುವರಿ, ಕಾಡಿನ ಲೂಟಿ, ಅರಣ್ಯಾಧಿಕಾರಿಗಳೊಂದಿಗೆ ಜನರ ಸಂಘರ್ಷದ ಬದುಕನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾರೆ, ಚಿತ್ರದ ಆರಂಭದಲ್ಲಿ ಕಂಬಳ ವೈಭವ ಕಣ್ಣಿಗೆ ಕಟ್ಟುವಂತೆ ಅದ್ಬುತವಾಗಿ ತೋರಿಸಲಾಗಿದೆ. ಇನ್ನುಳಿದಂತೆ ನಾಯಕಿಯ ಪ್ರೀತಿಯಲ್ಲಿ ಬೀಳುವ ಶಿವ ಹಾಗೂ ಅವರಿಬ್ಬರ ನಡುವೆ ನಡುವೆ ನಡೆಯುವ ಸಲ್ಲಾಪ… ಹಾಗೂ ಮದ್ಯದಲ್ಲಿ ಬರುವ ‘ಸಿಂಗಾರ ಸಿರಿಯ’ ಅದ್ಬುತ ಸಾಹಿತ್ಯ, ಸಂಗೀತದೊಂದಿಗೆ ಕಚಗುಳಿ ಇಡುವ ಹಾಡು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ. ಕರಾವಳಿ ಹುಡುಗಿಯಾಗಿ ನಾಯಕಿ ಸಪ್ತಮಿ ಗೌಡ ಸುಂದರವಾಗಿ ಅಭಿನಯಿಸಿದ್ದಾರೆ. ಹಾಗೆಯೇ ಕಾಡಿನಲ್ಲಿ ರಿಷಭ್ ಶೆಟ್ಟರ ಕಾದಾಟದ ಸಾಹಸದ ದೃಶ್ಯಗಳ ಅದ್ಬುತವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಟ್ಟಿ ಕುಸಿತ ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಗೆ ವಹಿಸಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿದೆ. ಜೆಟ್ಟಿ ಕುಸಿತದಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ ಶೀಘ್ರ ಜೆಟ್ಟಿ ಪುನರ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಎಸ್.ಅಂಗಾರ ಸ್ಪಷ್ಟಪಡಿಸಿದರು. ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು ಜೆಟ್ಟಿ ಕುಸಿತ ಪ್ರದೇಶವನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿ ಜೆಟ್ಟಿ ಕುಸಿತವನ್ನು ಲೋಕಾಯುಕ್ತ ತನಿಖೆ ನಡೆಸಬೇಕೆಂಬ ಸ್ಥಳೀಯ ಮೀನುಗಾರರ ಬೇಡಿಕೆ ಇದೆ. ಈ ಬಗ್ಗೆ ಸಭೆ ನಡೆಸಿ ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಕಾಮಗಾರಿ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕಿದ್ದು, ಕಳಪೆ ಕಾಮಗಾರಿ ನಡೆಸಿದ್ದು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಯಾವ ಯಾವ ಹಂತದಲ್ಲಿ ಎಷ್ಟೆಷ್ಟು ಬಿಲ್ಲು ಮಾಡಲಾಗಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಪಡೆದುಕೊಂಡು ಸೂಕ್ತ ಕಾನೂನು ಕ್ರಮ…
