Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಸೆಪ್ಟೆಂಬರ್ 17,18 ಮತ್ತು 19ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಸಿಬ್ಬಂದಿಗಳಿಗೆ ಉಡುಪಿಯ ಹಾರ್ಟ್ಫುಲ್ನೆಸ್ ಸಂಸ್ಥೆಯವರು ಧ್ಯಾನದ ಕುರಿತು ಕಾರ್ಯಗಾರ ನಡೆಸಿದರು. ಉಡುಪಿಯ ಹಾರ್ಟ್ಫುಲ್ನೆಸ್ ಸಂಸ್ಥೆಯ ತರಬೇತುದರಾದ ವಿವೇಕಾನಂದ ಪೈ ಅವರು ಮೂರು ದಿನದ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಾರ್ಟ್ಫುಲ್ನೆಸ್ ನ ತರಬೇತುದಾರ, ನಿವೃತ್ತ ಸರ್ಜನ್ ಡಾ. ಸುರೇಶ್ ಬಾಳಿಗ ಹಾಗೂ ಹಾರ್ಟ್ಫುಲ್ನೆಸ್ ನ ಸದಸ್ಯ ಪ್ರಭಾಕಿರಣ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ತನುಜಾ ಮೂರು ದಿನದ ತರಬೇತಿಯ ಕುರಿತು ಅನುಭವ ಹಂಚಿಕೊಂಡರು. ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ಮಹೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕ್ರೀಡಾಪಟುಗಳು 12 ಚಿನ್ನ, 05 ಬೆಳ್ಳಿ ಹಾಗೂ 09 ಕಂಚು ಒಟ್ಟು 26 ಪದಕದೊಂದಿಗೆ 05 ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ. ಫಲಿತಾಂಶ :ಬಾಲಕರ ವಿಭಾಗದಲ್ಲಿ:ಸುಭಾಷ್ ಆರ್ – ತ್ರಯತ್ಲಾನ್ ಸಿ (ತೃತೀಯ), ನಿತಿನ್ ಎಲ್ ಜಿ – ಚಕ್ರ ಎಸೆತ (ದ್ವಿತೀಯ), ಆರಂಭಮ್ ರಾಜು – 60ಮೀ (ಪ್ರಥಮ), 80ಮೀ ಹರ್ಡಲ್ಸ್ (ಪ್ರಥಮ) (ನೂತನ ಕೂಟ ದಾಖಲೆ), ಹೆಚ್ ಮೈಲಾರಿ – ಚಕ್ರ ಎಸೆತ (ತೃತೀಯ), ಜಸ್ವೀನ್ ಥೋಮಸ್ – ಎತ್ತರ ಜಿಗಿತ (ದ್ವಿತೀಯ), ಆಕಾಶ್ ಹುಕ್ಕೇರಿ – ಮಿಡಲ್ ರಿಲೇ (ತೃತೀಯ), ಸಮರ್ಥ್ ಸಂಜೀವ್ ಕುಮಾರ್ – 1000ಮೀ (ತೃತೀಯ), ಸಾಹಿಲ್ – 100 ಮೀ (ದ್ವಿತೀಯ), ಮಿಡಲ್ ರಿಲೇ (ತೃತೀಯ), ನೋವಲ್ ಆರ್ ಪಿ- ಉದ್ದ ಜಿಗಿತ (ತೃತೀಯ),…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ತುಪ್ಪ ಹೃದಯಕ್ಕೆ ಹಿತ ಎಂಬುದು ಪ್ರಾಚೀನ ಭಾರತದ ಅಭಿಮತವಾದರೆ, ತುಪ್ಪದಿಂದ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ತೊಂದರೆಯಾಗಬಹುದು ಎಂಬುದು ಆಧುನಿಕರ ವಾದವಾಗಿದೆ. ಜರ್ಸಿ ದನದ ತುಪ್ಪ, ವನಸ್ಪತಿ, ಕಲಬೆರೆಕೆ ತುಪ್ಪವನ್ನು ಸೇವಿಸಿ, ದೇಶಿ ಗೋವಿನ ತುಪ್ಪವನ್ನೂ ಸೇರಿಸಿಕೊಂಡು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವುದು ತಪ್ಪು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ತುಪ್ಪದ ಬಗ್ಗೆ ಅಪಪ್ರಚಾರ ಹೆಚ್ಚಾಗಿದ್ದು, ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಇದರಿಂದಾಗಿ ಕೋಟ್ಯಂತರ ಜನರು ತುಪ್ಪವನ್ನು ದೂರವಿಟ್ಟಿದ್ದಾರೆ. ತುಪ್ಪದ ಕಲಬೆರೆಕೆ, ತುಪ್ಪದ ಮೂಲವಾದ ಗೋವಿನ ವರ್ಣಸಂಕರಗಳು ಬಹುದೊಡ್ಡ ಅಪಚಾರವಾಗಿದ್ದು, ಸಮಾಜ ಎಚ್ಚೆತ್ತು ಕೊಳ್ಳಬೇಕು. ಪ್ರಕೃತಿ ನಮಗೆ ಕೊಟ್ಟಿರುವಂತದ್ದನ್ನು ನಾವು ಬಳಸದೇ ಇದ್ದರೆ ಆ ವಸ್ತುಗಳು ನಮ್ಮಿಂದ ದೂರವಾಗುತ್ತಾ ಸಾಗುತ್ತದೆ. ಬಳಸುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 21ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ–2026 ಸೆಪ್ಟೆಂಬರ್ 20ರಂದು ಕುಂದಾಪುರದ ಯುವ ಮೆರಿಡಿಯನ್‌ನಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 2,000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ B/L ವಿಭಾಗದಲ್ಲಿ ಕುಂದಾಪುರದ ಇಂಪನಾ ಆರ್. ಅವರು ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ ಕೇಂದ್ರದ ಮುಖ್ಯಸ್ಥರಾದ ಪ್ರಸನ್ನ ಕೆ. ಬಿ. ಅವರಿಂದ ತರಬೇತಿ ಪಡೆದಿದ್ದು, ಶಿಕ್ಷಕರಾದ ಮಹಾಲಕ್ಷ್ಮಿ ಹಾಗೂ ದೀಪಾ ಅವರು ಮಾರ್ಗದರ್ಶನ ನೀಡಿರುತ್ತಾರೆ.   ಈಕೆ ಕುಂದಾಪುರದ ನಿವಾಸಿಗಳಾದ ದೀಪಿಕಾ ಜಿ. ಮತ್ತು ರಾಘವೇಂದ್ರ ಶೇರೆಗಾರ್ ಅವರ ಪುತ್ರಿ. ಪ್ರಸ್ತುತ ಅವರು ಕುಂದಾಪುರದ ಶ್ರೀ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಮಟ್ಟದ  ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಶ್ಮಿ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ.    ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕುಸ್ತಿ ಪಟು ಆಗಿರುವ ಕೃಷ್ಣ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದಾರೆ.   ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗೂ ಶುಭ ಹಾರೈಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬಾಳ್ಕುದ್ರು‌ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ಸಂಘದ ಅಧ್ಯಕ್ಷ ಶ್ರೀಪತಿ ಅಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರುಗಿತು. ವರದಿ ಸಾಲಿನ ಲಾಭಾಂಶ ವಿಂಗಡನೆಯಲ್ಲಿ ಸಂಘದ ಹಾಲು ಉತ್ಪಾದಕ ಸದಸ್ಯರಿಗೆ ಶೇಕಡಾ 65 ಪರ್ಸೆಂಟ್ ಬೋನಸ್ ವಿತರಿಸಲಾಯಿತು. ಸದಸ್ಯರ ಷೇರಿಗೆ ಶೇಕಡಾ 25 ಶೇ. ಡೆವಿಡೆಂಟ್ ಘೋಷಿಸಲಾಯಿತು. ಸಂಘಕ್ಕೆ ವಾರ್ಷಿಕವಾಗಿ ಅತಿಹೆಚ್ಚು ಹಾಲು ನೀಡಿದ ಸದಸ್ಯೆ ಸಾವಿತ್ರಿ ಹಾಗೂ ಹಿರಿಯ ಹಾಲು ಉತ್ಪಾದಕ ಸದಸ್ಯೆ ಲಲಿತಾ ಇವರುಗಳನ್ನು ಗೌರವಿಸಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ ಕುಂದರ್ ಹಸು ಸಾಕಾಣಿಕೆ  ಹಾಗೂ ಪಶುಗಳ ಆರೋಗ್ಯದ ಬಗ್ಗೆ ಹಾಲು ಉತ್ಪಾದಕರಿಗೆ ವಿವರವಾಗಿ ತಿಳಿಸಿದರು. ಸಂಘದ ನಿರ್ದೇಶಕರುಗಳಾದ ಬಾಬು ರಾಜೇಂದ್ರ ಐತಾಳ, ಅನಂತಯ್ಯ ನಾಯಕ್, ಸೈಮನ್ ಡಿ ಆಲ್ಮೇಡ, ವಲೇರಿಯನ್ ಡಿಸೋಜ, ಸಾವಿತ್ರಿ , ಗೋಪಾಲ ಗಾಣಿಗ, ರೇಖಾ ಭಂಡಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ನಾಗರತ್ನ ಗಾಣಿಗ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ನಾಗರತ್ನ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಜಯರಾಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ವಚ್ಛತೆಯ ಬಗ್ಗೆ ಜಿಲ್ಲಾಡಳಿತವೇ ಕಠಿಣ ಕ್ರಮಗಳನ್ನು ಕೈಗೊಂಡರೆ ಎಸೆಯುವ ಹಾಗೂ ಮಲಿನಗೊಳಿಸುವ ಕೈಗೆ  ಮುಕ್ತಿಗಾಣಿಸಬಹುದು ಎಂದು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು. ಅವರು ಭಾನುವಾರ ಕೋಟದಿಂದ ಕೋಡಿಯವರೆಗೆ ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೋಟರಿ ಸಮುದಾಯದಳ ಮೂಡುಗಿಳಿಯಾರು, ಗೀತಾನಂದ ಫೌಂಡೇಶನ್ ಮಣೂರು ಸೇರಿದಂತೆ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೋಟತಟ್ಟು, ಕೋಡಿ ಗ್ರಾಮಪಂಚಾಯತ್, ಸಾಲಿಗ್ರಾಮ ಪಟ್ಟಣಪಂಚಾಯತ್ ಸಂಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನದಲ್ಲಿ ಮಾತನಾಡಿದರು. ಪರಿಸರಕ್ಕೆ ಹಾನಿಕರ ಆಗುವ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ,ಸ್ಥಳೀಯ ಮನೆಗಳ ಹಾಗೂ ಅಲ್ಲಿನ ಮಕ್ಕಳಿಗೆ ಕಸ ಎಸೆಯದಂತೆ ಗ್ರಾಮ ಆಡಳಿತ ಖಡಕ್ ಸೂಚನೆ ನೀಡಬೇಕು,ಪರಿಸರ ಮಲಿನಗೊಂಡರೆ ಮನುಕುಲಕ್ಕೆ ಸಂಕಷ್ಟ ತಪ್ಪಿದಲ್ಲ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ ರಾಮದಾಸ್ ಅಭಿಯಾನಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಕಾನೂನು ಪದವೀಧರರಾಗಿ ಸಹಕಾರಿ ಕ್ಷೇತ್ರದಲ್ಲಿ ಜನಸಾಮಾನ್ಯರ ನ್ಯಾಯವಾದಿಗಳಾಗಿ ಕಾನೂನು ವೃತ್ತಿಯ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಕೃಷಿ, ಸಹಕಾರಿ, ಸೊಸೈಟಿ, ಬ್ಯಾಂಕುಗಳಲ್ಲೂ ಉನ್ನತ ಸ್ಥಾನಗಳ ಜವಾಬ್ದಾರಿಯನ್ನು ಹೊಂದಿದ್ದು ಕರ್ನಾಟಕ ರಾಜ್ಯದಾದ್ಯಂತ ಸಹಕಾರಿ ಸಂಘಟನಾ ಕ್ಷೇತ್ರಗಳಲ್ಲಿ ವಿದ್ವತ್ ಭಾಷಣಗಾರರಾಗಿ ಗುರುತಿಸಿಕೊಂಡಿರುವ ನ್ಯಾಯವಾದಿ ಶ್ರೀಧರ ಪಿ. ಎಸ್. ಅವರು ಮೂಲತಃ ಸಾಸ್ತಾನದವರು. ತನ್ನ ಹುಟ್ಟೂರು ಸಾಸ್ತಾನದಿಂದ ಬೆಳೆದು ಬಂದು ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡು ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯದಾದ್ಯಂತ ತನ್ನ ಆಸಕ್ತಿಯ ಸಹಕಾರಿ ಕ್ಷೇತ್ರದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹಾಗೂ ಕಾನೂನು ಕ್ಷೇತ್ರಗಳ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಶ್ರೀಧರ ಪಿ. ಎಸ್. ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಸಾಸ್ತಾನದ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ತನ್ನ ವೃತ್ತಿಯಾದ ಕಾನೂನು ಕ್ಷೇತ್ರದ ನ್ಯಾಯವಾದಿಯಾಗಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶೈಕ್ಷಣಿಕ ಸಾಧಕರನ್ನು ಅಭಿನಂದಿಸುವ ಮೂಲಕ ಸಮಾಜದಲ್ಲಿ ಸ್ಫೂರ್ತಿ ಮತ್ತು ಪ್ರೇರಪಣೆ ನೀಡಿದಂತಾಗುತ್ತದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗುರುಗಳನ್ನು ಗೌರವಿಸುವುದು ಅತ್ಯಂತ ಯೋಗ್ಯವಾದುದು. ಧಾರ್ಮಿಕ ವೇದಿಕೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳಿಗೂ ಅವಕಾಶ ದೊರೆತಾಗ ಅರ್ಥಪೂರ್ಣವಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 24ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಈ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶೈಲಜಾ ಶೆಟ್ಟಿ ವಂಡ್ರೆ, ಹಾಗೂ ಆದರ್ಶ ಆಸ್ಪತ್ರೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಪ್ಪಯ್ಯ ಮರಾಠಿ ವಂಡ್ಡೆ ಹಾಗೂ ವಂತ್ಸೆ ಅಂಗನವಾಡಿಯಲ್ಲಿ ಸುದೀರ್ಘ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮೂಕಾಂಬು ಅವರನ್ನು ಸನ್ಮಾನಿಸಲಾಯಿತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಮೊಗವೀರ ಯುವ ಸಂಘಟನೆ ರಿ. ಹಾಲಾಡಿ – ಶಂಕರನಾರಾಯಣ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ, ರಕ್ತನಿಧಿ ವಿಭಾಗ ಕೆ.ಎಮ್.ಸಿ. ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ  ಲಯನ್ಸ್ ಕ್ಲಬ್ ಹಾಲಾಡಿ – ಬಿದ್ಕಲ್‌ಕಟ್ಟೆ, ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ –ಹುಣ್ಸೆಮಕ್ಕಿ, ನಾಗಲಕ್ಷ್ಮೀ ಭಜನಾ ಮಂಡಳಿ ಬಿದ್ಕಲ್‌ಕಟ್ಟೆ, ಹಳೆ ವಿದ್ಯಾರ್ಥಿಗಳ ಸಂಘ KPS ಬಿದ್ಕಲ್‌ಕಟ್ಟೆ,  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೊಳಹಳ್ಳಿ  ಮತ್ತು ಬಿದ್ಕಲ್‌ಕಟ್ಟೆ, ರಿಕ್ಷಾ ಮತ್ತು ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ಬಿದ್ಕಲ್‌ಕಟ್ಟೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆದಿತ್ಯವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.   ಹಾಲಾಡಿ ಶಂಕರನಾರಾಯಣ ಘಟಕದ ಅಧ್ಯಕ್ಷರು ಶರತ್ ಸೌಡ, ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ, ಲಯನ್ಸ್ ಕ್ಲಬ್ ಹಾಲಾಡಿ-ಬಿದ್ಕಲ್‌ಕಟ್ಟೆ ಅಧ್ಯಕ್ಷರಾದ ಗೌತಮ್ ಶೆಟ್ಟಿ, ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ -ಹುಣ್ಸೆಮಕ್ಕಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, …

Read More