Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪೌರಾಣಿಕ ಪ್ರಜ್ಞೆ – ವೈಚಾರಿಕ ಧೋರಣೆ – ವ್ಯವಸ್ಥಿತ ನಿರೂಪಣೆ – ಪರಿಸರ ಜಾಗೃತಿಗಳ ಸಮಷ್ಟಿ ಚಿಂತನೆಯ ಫಲವಾಗಿ ಮೂಡಿ ಬಂದ ಅಪೂರ್ವ ಕೃತಿ ’ಆದರ್ಶ ಮಾನವʼ. ಕೃಷ್ಣನನ್ನು ಈ ರೀತಿ ಕಂಡವರು ಕೌನ್ಜೂರು ಚಂದ್ರಶೇಖರ ಅಡಿಗರು ಎಂದೆನ್ನುತ್ತಾ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ.ಪಿ. ಭಟ್ಟರು ಕೌನ್ಜೂರು ಚಂದ್ರಶೇಖರ ಅಡಿಗರ ಕೃತಿ ಲೋಕಾರ್ಪಣೆಗೈದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೋಟದ ಮಿತ್ರ ಮಂಡಳಿ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ’ಕಥೆ ಹೇಳುವುದಕ್ಕಿಂತ ಲೇಖಕರದ್ದು ಧಾರ್ಮಿಕ ದತ್ತ ಚಿತ್ತ’ದ ಬಗೆಗೆ ಸುಮನ ಆರ್. ಹೇರಳೆ, ಜಾಣ್ಮೆ’ಯ ಕುರಿತು ಡಾ. ಸರಿತಾ ಸಾಲಿಗ್ರಾಮ, ’ಕೃಷ್ಣನ ಆದರ್ಶ ಮಾನವತ್ವ’ದ ಬಗೆಗೆ ಮಹಾಲಕ್ಷ್ಮಿ ಸೋಮಯಾಜಿ ಅವರು ಮಾತನಾಡಿ, ಕೃತಿಯನ್ನು ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಾವರ ಸುರೇಂದ್ರ ಅಡಿಗ ವಹಿಸಿ ಸ್ವಾಗತಿಸಿ, ಕ.ಸಾ.ಪ. ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ ಅದ್ಭುತ ಕಾರ್ಯಕ್ಷಮತೆಯನ್ನು ಕೊಂಡಾಡಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಉಡುಪಿ: ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ನಲ್ಲಿ ಜೂನ್ 12ರಂದು ಬೆಳಗ್ಗೆ 10.30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಡಿಪ್ಲೋಮಾ, ಐ.ಟಿ.ಐ. ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಚೇರಿ ಪ್ರಕಟಣೆ ತಿಳಿಸಿದೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ವತಿಯಿಂದ  ಜರಗಿದ ಸುರಕ್ಷಾ ಮಾಸಾಚರಣೆ ಅಭಿಯಾನದಲ್ಲಿ ಬಿದ್ಕಲ್ಕಟ್ಟೆ ಸರಕಾರಿ ಐಟಿಐಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಲಭಿಸಿದೆ. 2026ನೇ ಸಾಲಿನ ಈ ಅಭಿಯಾನದಲ್ಲಿ ರಾಜ್ಯಾದ್ಯಂತ ಸರಕಾರಿ ಹಾಗೂ ಖಾಸಗಿ ಐಟಿಐಗಳು ಪಾಲ್ಗೊಂಡಿದ್ದವು. ಈ  ಬಗ್ಗೆ ವಿವಿಧ ಮೌಲ್ಯಯುತ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪೂರ್ಣಿಮಾ ಶೇಟ್ ಆರೋಗ್ಯ ಕೇಂದ್ರ ಬಿದ್ಕಲ್ ಕಟ್ಟೆ, ಶ್ರೇಯಸ್ ಕುಮಾರ್ ಪ್ರಾದೇಶಿಕ ಸಾರಿಗೆ ಕಚೇರಿ ಉಡುಪಿ, ಬಾಲಕೃಷ್ಣ ಅಗ್ನಿಶಾಮಕ ಠಾಣೆ ಕುಂದಾಪುರ, ನಿಲೇಶ್ ಸೈಬರ್ ಕ್ರೈಂ ಸ್ಟೇಷನ್ ಉಡುಪಿ ಭಾಗವಹಿಸಿದ್ದರು. ಬಿದ್ಕಲ್ಕಟ್ಟೆ ಸಂಸ್ಥೆಯ ಗಣೇಶ್ ಹೆಚ್., ಪ್ರಸನ್ನ ಆಚಾರ್ಯ, ಪ್ರಫುಲ್ಲ ಕೆ.ಎನ್. , ಬಸವ ನಾಯ್ಕ್, ಸುಮಂಗಲ, ರೂಪದೇವಿ, ಸುಮಾರಾಣಿ, ಮನೋಜ್ ಕುಮಾರ್ ಕೆ.ಸಿ., ಅಜಿತ್ ಆಚಾರ್ಯ ಕಾರ್ಯಕ್ರಮಗಳ  ಆಯೋಜನೆಯಲ್ಲಿ ಸಹಕರಿಸಿದ್ದರು. ಪ್ರಭಾರೆ ಪ್ಲೇಸ್ ಮೆಂಟ್ ಅಧಿಕಾರಿ ಮನೋಹರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದು ಪ್ರಾಚಾರ್ಯ ಹರೀಶ್  ಮಾರ್ಗದರ್ಶನ ನೀಡಿದ್ದರು. ಸರಕಾರಿ ವಿಭಾಗದಲ್ಲಿ ಕಿತ್ತೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಮೆಸ್ಕಾಂ ಕಂಪನಿ ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ವಲಯದಲ್ಲಿರುವ ಹಲವಾರು ವಿದ್ಯುತ್ ಜಾಲಗಳನ್ನು ಟಾಟಾ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ನವರು ನಡೆಸುವುದಾಗಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಜಾಲಗಳು ಖಾಸಗಿಕರಣದತ್ತ ತಿರುಗುವ ಸಂಶಯ ಎದುರಾಗಿದೆ. ಈ ಖಾಸಗೀಕರಣದ ವಿರುದ್ಧ ಕುಂದಾಪುರ ವಿಭಾಗದ ಕೋಟ ಉಪವಿಭಾಗದಲ್ಲಿ ಕ.ವಿ.ಪ್ರ.ನಿ ನೌಕರರ ಸಂಘ, ಕೋಟ ಉಪವಿಭಾಗ ಕೋಟ ಶಾಖಾ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಂಪನಿಯ 50ಕ್ಕೂ ಹೆಚ್ಚು ನೌಕರರು ಮತ್ತು ಗುತ್ತಿಗೆದಾರರು, ಗ್ರಾಹಕರು ಸೇರಿ ಖಾಸಗೀಕರಣದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನೆಯಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಕಂಪನಿಗೆ ಆಗುವ ನಷ್ಟಗಳನ್ನು ತಿಳಿಸಿದರು ಜೊತೆಗೆ ಇದರ ವಿರುದ್ಧ ಮುಂದಿನ ಹೋರಾಟಕ್ಕೆ ಅಣಿಯಾಗುವಂತೆ ನೌಕರರಿಗೆ ಕರೆಕೊಟ್ಟರು. ಈ ವೇಳೆ ಕೋಟ ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ, ಶಿರಿಯಾರ ಶಾಖಾಧಿಕಾರಿಗಳಾದ ವೈಭವ ಶೆಟ್ಟಿ, ಸಾಸ್ತಾನ ಶಾಖಾಧಿಕಾರಿ ಮಹೇಶ ಕೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಪ್ರಕೃತಿಯ ಸಂಪನ್ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿರುವ ಮಾನವ, ಅವುಗಳನ್ನು ನಿರಂತರವಾಗಿ ಬಳಸುತ್ತಿದ್ದರೂ ಪ್ರಕೃತಿಗೆ ತನ್ನ ಋಣವನ್ನು ತೀರಿಸುವ ಕಿಂಚಿತ್ತು ಪ್ರಯತ್ನ ಮಾಡುತ್ತಿಲ್ಲ ಎಂದು ‘ಗ್ರೀನ್ ಹೀರೋ ಆಫ್ ಇಂಡಿಯಾ’ ಖ್ಯಾತಿಯ ಆರ್.ಕೆ. ನಾಯರ್ ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ “ಮೈ ಪ್ಲಾನೆಟ್, ಮೈ ಪ್ರೈಡ್” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಭಾಷಾ ವೈವಿಧ್ಯತೆ ಮತ್ತು ಜೀವ ವೈವಿಧ್ಯತೆಯನ್ನು ಹೋಲಿಕೆ ಮಾಡಿದ ನಾಯರ್, ವಿವಿಧ ಭಾಷೆಗಳು ಹೇಗೆ ಪರಸ್ಪರ ಸಹಬಾಳ್ವೆಯಿಂದ ಬೆಳೆಯುತ್ತವೆಯೋ, ಅದೇ ರೀತಿ ಪರಿಸರ ವ್ಯವಸ್ಥೆಯೂ ವೈವಿಧ್ಯತೆ ಮತ್ತು ಪರಸ್ಪರ ಅವಲಂಬನೆಯ ಮೇಲೆ ನಿಂತಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಟ್ಟಗಳು, ನದಿಗಳು, ಕಾಡುಗಳು ಹಾಗೂ ಜೀವಜಗತ್ತು ಯಾವುದನ್ನೂ ಮಾನವ ಸೃಷ್ಟಿಸಿಲ್ಲ. ಇವೆಲ್ಲವೂ ಪ್ರಕೃತಿಯ ಕೊಡುಗೆಗಳು ಎಂದರು.ತಮ್ಮ ಪರಿಸರ ಯೋಜನೆಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ಕೋಟೇಶ್ವರ-ಹಾಲಾಡಿ ರಸ್ತೆಯ ಅಂಡರ್‌ಪಾಸ್‌ ಸಮೀಪದಲ್ಲಿ ನಡೆದಿದೆ. ಮೃತರನ್ನು ಕೋಟೇಶ್ವರ ಮಾರ್ಕೋಡು ನಿವಾಸಿ ಪ್ರದೀಪ್‌ ಪೂಜಾರಿ (35) ಎಂದು ಗುರುತಿಸಲಾಗಿದೆ. ಅವರು ಗಾರೆ ಕೆಲಸ ಮಾಡಿಕೊಂಡಿದ್ದರು. ಉಡುಪಿ ಕಡೆಯಿಂದ ಬಂದಿದ್ದ ಬೃಹತ್ ಕಂಟೇನರ್ ಲಾರಿಯೊಂದು ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಡರ್‌ಪಾಸ್‌ ಬಳಿ ಯು-ಟರ್ನ್ ಪಡೆಯಲು ಮುಂದಕ್ಕೆ ಸಾಗುತ್ತಿದ್ದ ವೇಳೆ, ಪೇಟೆ ಕಡೆಯಿಂದ ಹಾಲಾಡಿ ರಸ್ತೆಗೆ ತೆರಳುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ಪರಿಣಾಮ ಬೈಕ್‌ ಸಹಿತ ಕೆಳಗೆ ಬಿದ್ದ ಪ್ರದೀಪ್‌ ಪೂಜಾರಿ ಅವರ ಮೇಲೆ ಲಾರಿ ಹರಿದ ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಠಾಣೆಯ ಪೊಲೀಸ್‌ ಉಪ ನಿರೀಕ್ಷಕ ಅನೂಪ್ ನಾಯಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ., ಈ ಬಗ್ಗೆ ಕುಂದಾಪುರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಬಹುಮುಖ್ಯವಾದ ಪಾತ್ರ ವಹಿಸಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್ ಹೇಳಿದರು. ಅವರು ಸಾಸ್ತಾನದ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ಮೂಡಹಡು ಇವರ ಆಶ್ರಯದಲ್ಲಿ ನೋಟ್ ಬುಕ್ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದ ಋಣ ತಿರಿಸಲು ಹಲವು ದಾರಿಗಳಿವೆ ಅದರಲ್ಲಿ ಶೈಕ್ಷಣಿಕ ಕ್ಷೇತ್ರಗಳಿಗೆ ಒಂದಿಷ್ಟು ಸಹಾಯಹಸ್ತ ಚಾಚಿದರೆ ಆ ವಿದ್ಯಾರ್ಥಿ ಬದುಕು ಹಸನಾಗುವುದರಲ್ಲಿ ಅನುಮಾನವೇ ಇಲ ಈ ದಿಸೆಯಲ್ಲಿ ಸಮುದಾಯಗಳು ಸಾಮಾಜಿಕ ಬದ್ಧತೆ ಪ್ರದರ್ಶಿಸುವುವ ಕಾರ್ಯ ಶ್ಲಾಘನೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿಮ ಒಲವು ತೊರಬೇಕು ಎಂದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಾದ ಶ್ರೀಶಾ, ವನೀಶಾ, ಪ್ರಥಮ, ಪ್ರತ್ವೀನ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಬಿಲ್ಲವ ಸಮಯದಾಯದ 210 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಶಾಸಕರ ಜನಸಂಪರ್ಕ ಸಭೆ ಸ್ವಾಗತಾರ್ಹ ಆದರೆ ಕಳೆದ ಮೂರು ವರ್ಷಗಳಿಂದ ಶಾಸಕ ಸ್ಥಾನದಲ್ಲಿರುವ ಕಿರಣ್ ಕುಮಾರ್ ಕೊಡ್ಗಿ ಅವರು ಸ್ಥಳೀಯ ಸಂಸ್ಥೆಯ ಜನಪ್ರತಿನಿದಿನಗಳ ಅಧಿಕಾರವಧಿ ಮುಗಿದ ಮೇಲೆ ಈಗ ಗ್ರಾಮಗಳಲ್ಲಿ ಹೋಗಿ ಜನಸಂಪರ್ಕ ಸಭೆ ನಡೆಸುತ್ತಿರುವುದು ಅಧಿಕಾರ ವೀಕೆಂದ್ರಿಕರಣದ ವಿರೋಧಿ ಮನಸ್ಥಿತಿಯ ಭಾಗವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ. ನಿರಂತರ ರಾಜ್ಯ ಸರ್ಕಾರವನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಸುಮಾರು ಮೂರು ವರ್ಷಗಳ ಅಧಿಕಾರ ಕಳೆದ ಕುಂದಾಪುರದ ಮಾನ್ಯ ಶಾಸಕರು ಈಗ ಸರ್ಕಾರಿ ಅಧಿಕಾರಿಗಳನ್ನು ಇಟ್ಟುಕೊಂಡು ಗ್ರಾಮ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿರುವುದು ಕೇವಲ ರಾಜಕಾರಣದ ಒಂದು ಭಾಗವಾಗಿದೆ. ಕೇವಲ ಅನುದಾನ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರವನ್ನು ಟೀಕಿಸುವ ಶಾಸಕರು ಜನಸಾಮಾನ್ಯರಿಗೆ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ದೇವಸ್ಥಾನ ಬೆಟ್ಟು ಕೊರಗ ಕಾಲೋನಿಯಲ್ಲಿ ನಿರ್ಮಿಸಲಾದ ಮಲ್ಟಿ ಪರ್ಪಸ್ ಸೆಂಟರ್‌ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ವೀಕ್ಷಿಸಿದರು. ಬಳಿಕ ‘ತಾಯಿಗಾಗಿ ಒಂದು ಗಿಡ’ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಸಿ ನೆಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪೂರ್ವ ಮುಂಗಾರು ಆರಂಭದ ಬೆನ್ನಲ್ಲೇ ಕೃಷಿ ಆಧಾರಿತ ಬೆಳೆಗಳ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಲು ಸಂಯುಕ್ತ ರಾಸಾಯನಿಕ ರಸಗೊಬ್ಬರಗಳನ್ನು ಬಳಕೆ ಮಾಡುವಂತೆ ಕೃಷಿ ಇಲಾಖೆ ಶಿಫಾರಸ್ಸು ಮಾಡಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಕೃಷಿ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲೇ ರಸಗೊಬ್ಬರಗಳನ್ನು ರೈತರಿಗೆ ವಿತರಿಸುವುದು ಅತ್ಯವಶ್ಯಕವಾಗಿದ್ದು, ಅತಿಯಾದ ಯೂರಿಯಾ ಬಳಕೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ. ಪ್ರಮುಖ ಬೆಳೆಯಾದ ಭತ್ತ ಬೆಳೆಗೆ ನೀಡಬೇಕಾಗಿರುವ ರಸಗೊಬ್ಬರದ ಪ್ರಮಾಣವನ್ನು ಹಾಗೂ ವಿವಿಧ ಸಂಯುಕ್ತ ರಸಗೊಬ್ಬರಗಳ ಕಾಂಬಿನೇಷನ್ ಮೂಲಕ ನೀಡಬಹುದಾದ ರಸಗೊಬ್ಬರ ಪ್ರಮಾಣದ ಮಾಹಿತಿಯನ್ನು ಈಗಾಗಲೇ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡುವಾಗ ಶಿಫಾರಿತ ಪ್ರಮಾಣವನ್ನು ಮಾತ್ರ ಖರಿದೀಸಬೇಕು. ರೈತರು ಬೆಳೆಗಳಿಗೆ ಸಾರಜನಕವನ್ನು ಕೇವಲ ಯೂರಿಯಾ ಮೂಲಕ ನೀಡದೆ ಸಂಯುಕ್ತ ರಸಗೊಬ್ಬರಗಳಾದ 17:17:17, 19:19:19, 10:26:26 ಅಥವಾ ಅಮೋನಿಯಮ್ ಸಲ್ವೇಟ್ ಅನ್ನು ಮೂಲಗೊಬ್ಬರವಾಗಿ ಬಳಸಿ ಯೂರಿಯಾವನ್ನು ಮೇಲು ಗೊಬ್ಬರಕ್ಕಾಗಿ ಮಾತ್ರ ಬಳಸಬೇಕು. ಹಾಗೆಯೇ…

Read More