ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ವತಿಯಿಂದ ಜರಗಿದ ಸುರಕ್ಷಾ ಮಾಸಾಚರಣೆ ಅಭಿಯಾನದಲ್ಲಿ ಬಿದ್ಕಲ್ಕಟ್ಟೆ ಸರಕಾರಿ ಐಟಿಐಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಲಭಿಸಿದೆ.
2026ನೇ ಸಾಲಿನ ಈ ಅಭಿಯಾನದಲ್ಲಿ ರಾಜ್ಯಾದ್ಯಂತ ಸರಕಾರಿ ಹಾಗೂ ಖಾಸಗಿ ಐಟಿಐಗಳು ಪಾಲ್ಗೊಂಡಿದ್ದವು. ಈ ಬಗ್ಗೆ ವಿವಿಧ ಮೌಲ್ಯಯುತ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪೂರ್ಣಿಮಾ ಶೇಟ್ ಆರೋಗ್ಯ ಕೇಂದ್ರ ಬಿದ್ಕಲ್ ಕಟ್ಟೆ, ಶ್ರೇಯಸ್ ಕುಮಾರ್ ಪ್ರಾದೇಶಿಕ ಸಾರಿಗೆ ಕಚೇರಿ ಉಡುಪಿ, ಬಾಲಕೃಷ್ಣ ಅಗ್ನಿಶಾಮಕ ಠಾಣೆ ಕುಂದಾಪುರ, ನಿಲೇಶ್ ಸೈಬರ್ ಕ್ರೈಂ ಸ್ಟೇಷನ್ ಉಡುಪಿ ಭಾಗವಹಿಸಿದ್ದರು. ಬಿದ್ಕಲ್ಕಟ್ಟೆ ಸಂಸ್ಥೆಯ ಗಣೇಶ್ ಹೆಚ್., ಪ್ರಸನ್ನ ಆಚಾರ್ಯ, ಪ್ರಫುಲ್ಲ ಕೆ.ಎನ್. , ಬಸವ ನಾಯ್ಕ್, ಸುಮಂಗಲ, ರೂಪದೇವಿ, ಸುಮಾರಾಣಿ, ಮನೋಜ್ ಕುಮಾರ್ ಕೆ.ಸಿ., ಅಜಿತ್ ಆಚಾರ್ಯ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಹಕರಿಸಿದ್ದರು.
ಪ್ರಭಾರೆ ಪ್ಲೇಸ್ ಮೆಂಟ್ ಅಧಿಕಾರಿ ಮನೋಹರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದು ಪ್ರಾಚಾರ್ಯ ಹರೀಶ್ ಮಾರ್ಗದರ್ಶನ ನೀಡಿದ್ದರು. ಸರಕಾರಿ ವಿಭಾಗದಲ್ಲಿ ಕಿತ್ತೂರು ಐಟಿಐ ಪ್ರಥಮ ಬೆಂಗಳೂರಿನ ಪೀಣ್ಯ ಐಟಿಐ ದ್ವಿತೀಯ ಸ್ಥಾನ ಪಡೆದವು. ಮೈಸೂರು, ತಿಪಟೂರ್ ಹೊಳೆನರಸೀಪುರ ಮತ್ತು ಬಳ್ಳಾರಿ ಐಟಿಐಗಳು ಬೆಸ್ಟ್ ಪಾರ್ಟಿಸಿಪೇಟ್ ಗೌರವ ಪಡೆದಿವೆ.
ಖಾಸಗಿ ವಿಭಾಗದಲ್ಲಿ ಹುಬ್ಬಳ್ಳಿ, ಹಳಿಯಾಳ, ಗದಗ್, ಚಡಚಣ ಹಾಗೂ ಮೊರಟಗಿ ಐಟಿಐಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

















