Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವೀಲ್‌ಚೇರ್ ವಿತರಣೆ ಕಾರ್ಯಕ್ರಮ ಕೋಟೇಶ್ವರದ ಮಾರ್ಕೊಡಿನಲ್ಲಿ ನಡೆಯಿತು. ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ ಅವರು ಮಾರ್ಕೊಡಿನ ನಿವಾಸಿ ಭಾಸ್ಕರ ವೀಲ್‌ಚೇರ್ ಹಸ್ತಾಂತರಿಸಿ ಮಾತನಾಡಿ, ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸಮಾಜಮುಖಿ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ವೀಲ್‌ಚೇರ್‌ಗಳಂತಹ ಅಗತ್ಯ ಸಾಧನಗಳನ್ನು ಒದಗಿಸುವುದು ಅವರ ಜೀವನದಲ್ಲಿ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಮಾಜದ ಅಗತ್ಯವಿರುವ ವರ್ಗಗಳಿಗೆ ನಿರಂತರವಾಗಿ ನೆರವು ನೀಡುವ ಮೂಲಕ ಮಾನವೀಯ ಸೇವೆಯನ್ನು ಮುಂದುವರಿಸುವುದು ರೋಟರಿ ಕ್ಲಬ್ ಕೋಟ ಬ್ರಿಗೇಡ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ತಿಳಿಸಿದರು. ಕಾರ್ಯಕ್ರಮದಲ್ಲಿ ವಲಯ ೨ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಹಾಗೂ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರಾದ ಡಾ. ಗಣೇಶ್ ಯು., ಸುರೇಶ್ ಆಚಾರ್ಯ, ವಿಷ್ಣುಮೂರ್ತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಪಡುಕರೆಯಲ್ಲಿ 6ರಿಂದ 7ಕಿಲೋ ಮೀಟರ್ ತನಕ  ಕೃಷಿ ಭೂಮಿ ಮಧ್ಯ ಉಪ್ಪು ನೀರಿನ ಹೊಳೆ ಹರಿಯುತ್ತಿದ್ದು ಇಲ್ಲಿ ಎಲ್ಲೆಂದರಲ್ಲಿ ಕಾಂಡ್ಲ ಗಿಡದ ಸಮಸ್ಯೆಯಿಂದ ನೀರು ಸರಾಗ ಹರಿಯದೇ ಕೃತಕ ನೆರೆ ಸೃಷ್ಠಿಯಾಗುತ್ತಿದೆ .  ಈ ಹಿನ್ನಲ್ಲೆಯಲ್ಲಿ  ಈ ಭಾಗದ ನೂರಾರು ರೈತರಿಗೆ ಕೃಷಿಗೆ ಸಂಕಷ್ಟವನ್ನು ತಂದೊಡ್ಡುತ್ತಿದ್ದು ಸರಕಾರ ಕಾಂಡ್ಲ  ಗಿಡವನ್ನು ಸರಿಯಾಗಿ ನಿರ್ವಹಣೆ ಮತ್ತು  ಹೊಸದಾಗಿ ಕಾಂಡ್ಲಾ  ಪ್ಲಾಂಟೇಶನ್ ಮಾಡದೇ ಹೊಳೆ ಹೂಳನ್ನು  ತೆರವುಗೊಳಿಸಿ ನೀರು ಸರಾಗವಾಗಿ ಸಮುದ್ರಕ್ಕೆ  ಹರಿಯುವಂತೆ ಅನುಕೂಲಕರ ವಾತಾವರಣ ನಿರ್ಮಿಸಿ ರೈತರಿಗೆ ನೆರವಾಗುವಂತೆ ಇಲ್ಲಿನ ರೈತಧ್ವನಿ ಸಂಘ  ಕೋಟ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  ಈ ವೇಳೆ ರೈತಧ್ವನಿ  ಸಂಘ  ಕೋಟ ಅಧ್ಯಕ್ಷ ಜಯರಾಮ ಶೆಟ್ಟಿ,  ಪ್ರಮುಖರಾದ ಟಿ. ಮಂಜುನಾಥ  ಗಿಳಿಯಾರು, ಭಾಸ್ಕರ ಶೆಟ್ಟಿ  ಮಣೂರು, ಜಿ. ತಿಮ್ಮ  ಕಾಂಚನ್ ಹರ್ತಟ್ಟು  ಇತರರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ  ಉಳ್ತೂರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶ್ರೀ ಚಂದ್ರಶೇಖರ್ ಶೆಟ್ಟಿ ಮಾಲಾಡಿ ಅವರನ್ನು ಲಯನ್ಸ್ ಕ್ಲಬ್ ತೆಕ್ಕಟ್ಟೆಯ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಶಿಕ್ಷಕ ಸೇವೆಯ ಬಗ್ಗೆ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸೀತಾರಾಮ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಲಯನ್ ಶಂಕರ್ ಶೆಟ್ಟಿ ಬವಲಾಡಿ ಶ್ರೀಯುತರು ಉಳ್ತೂರು ಶಾಲೆಯ ಬಗೆಗಿನ ಅವರ ಕಾಳಜಿ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿರುವ ಶಿಸ್ತಿನ ಬಗ್ಗೆ ತಿಳಿಸಿದರು. ಕ್ಲಬ್ ನ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕ್ಲಬ್ ನ ಅಧ್ಯಕ್ಷ ಸಂಪತ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಲಯನ್ ಕ್ಯಾಬಿನೆಟ್ ಸದಸ್ಯರಾದ ಧರ್ಮರಾಜ ಮೊದಲಿಯಾರ್ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಲಕ್ಷ್ಮೀ ಐತಾಳ್ ಅವರನ್ನು ಹೊಸಾಡು ಮುಳ್ಳಿಕಟ್ಟೆಯ ಶ್ರೀ ಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸದಸ್ಯೆ, ಸಂಘದ ಅಧ್ಯಕ್ಷ ಮರಳೀಧರ ಐತಾಳ್ ಮತ್ತು ಗೀತಾ ಐತಾಳ್ ದಂಪತಿಯ ಪುತ್ರಿಯಾಗಿರುವ ಡಾ. ಲಕ್ಷ್ಮೀ ಐತಾಳ್ ಅವರು ಜೋಧಪುರದ ಎಐಐಎಂಎಸ್ ಸಂಸ್ಥೆಯಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ, ಸಿಬ್ಬಂದಿಗಳಾದ ಶ್ರೀಕರ ಐತಾಳ್, ಪ್ರದೀಪ ಮಯ್ಯ, ವಸೂಲಾತಿ ಅಧಿಕಾರಿ ಬಿ.ಜಿ. ಆಚಾರ್ ಉಪಸ್ಥಿತರಿದ್ದರು. ಸಂಘದ ಸಲಹೆಗಾರ ಎಸ್. ವಿ. ಐತಾಳ್ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪದವಿಯೊಂದಿಗೆ ಕೌಶಲ್ಯ ಅಭಿವೃದ್ಧಿ ಇಂದಿನ ಶಿಕ್ಷಣದ ಅಗತ್ಯ. ಪದವಿ ಪಾಠಗಳ ಜೊತೆಗೆ ಹಲವು ವಿಷಯಗಳ ಕುರಿತು ಡಿಪ್ಲೋಮಾ ಮಾಡಬಹುದಾಗಿದೆ. ಈ ಸರ್ಟಿಫಿಕೇಟ್ ಜೀವನದಲ್ಲಿ ಪದವಿ ನಂತರ ಮುನ್ನಡೆಯಲು ಸಹಕಾರಿ. ವಿದ್ಯಾರ್ಥಿಗಳಿಗೆ ಉತ್ತಮ ಸಂಪನ್ಮೂಲ ತಜ್ಞರು ತರಬೇತಿ ನೀಡಲಿದ್ದು ಈ ಪ್ರಯೋಗ ಬಹಳಷ್ಟು ಕಾಲೇಜುಗಳಲ್ಲಿ ಯಶಸ್ವಿಯಾಗಿದೆ ಎಂದು ಮಣಿಪಾಲದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಛೇರ್ಮನ್ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜು ಏರ್ಪಡಿಸಿದ “ಪದವಿಯೊಂದಿಗೆ ಕೌಶಲ್ಯಾಭಿವೃದ್ಧಿ ಡಿಪ್ಲೋಮಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಹಿತಿ ನೀಡಿದರು. ಭಾರತೀಯ ಸೇನೆಯ ಚೀಫ್ ಎಂಜಿನಿಯರ್ ಸೇವೆಯಿಂದ ನಿವೃತ್ತರಾದ ನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳ ಜೊತೆಗಿನ ಎರಡು ದಶಕಗಳ ಸೇವೆಯ ಅನುಭವವನ್ನು ವಿವರಿಸಿದ ಅವರು “ಜೈಪುರದ ಭಾರತೀಯ ಸ್ಕಿಲ್ ಡೆವಲಪ್ಮೆಂಟ್ ಯುನಿವರ್ಸಿಟಿ ಸಹಿತ ಹಲವು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೈಗೊಂಡ ಪ್ರಯೋಗಗಳು ಯಶಸ್ವಿಯಾಗಿದೆ” ಎಂದು ಹೇಳಿದರು. ಪದವಿ ಕಾಲೇಜುಗಳಲ್ಲಿ ಶಿಕ್ಷಕರು ಮೊದಲು ಪ್ರೇರಣೆ ಪಡೆಯಬೇಕು. ಅವರು ವಿದ್ಯಾರ್ಥಿಗಳಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಇದರ 2026 – 2027ನೇ ಸಾಲಿನ ಶಾಲಾಭಿವೃದ್ಧಿ ಹಾಗೂ ಎಸ್.ಡಿ.ಎಮ್.ಸಿ ನೂತನ ಅಧ್ಯಕ್ಷರಾಗಿ ವೆಂಕಟರಮಣ ಹೆಚ್. ದೇವಾಡಿಗ ಹೇನಬೇರು ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಅಂತರ್ಜಲ ಕಛೇರಿ, ಅಂತರ್ಜಲ ನಿರ್ದೇಶನಾಲಯ ಉಡುಪಿ, ರಜತಾದ್ರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇದರ ವತಿಯಿಂದ ಅಂತರ್ಜಲ ಸಂರಕ್ಷಣೆ ಮತ್ತು ಸದ್ಬಳಕೆ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶರಣ್ಯ ವಿ. ಕಾಮತ್ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸಹಯೋಗದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಡುಬಿದಿರೆ ವಲಯ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಏಳು ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಯಿತು. ಮೊದಲ ದಿನ ಆಳ್ವಾಸ್‌ನ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಶ್ರೇಯಾ ವೈದ್ಯ, ಸುಮಾರು 120 ತಾಯಂದಿರಿಗೆ ಝಮ್ ಮೀಟಿಂಗ್ ಮೂಲಕ ಮಾಹಿತಿ ಒದಗಿಸಿದರು. ಎರಡನೇ ದಿನ ಆಳ್ವಾಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ತನ್ಯಪಾನ ಬಗ್ಗೆ ಮಾಹಿತಿ ನೀಡುವ ದೃಶ್ಯ ಮಾಧ್ಯಮದ ವಿಡಿಯೋಗಳನ್ನು ತಯಾರಿಸಿದರು. ಮೂರನೇ ದಿನ ಗರ್ಭಿಣಿಯರ ಆಹಾರ ಪದ್ದತಿಯನ್ನು ವಿವರಿಸುವ ಸ್ಟಾಲ್‌ಗಳನ್ನು ನಿರ್ಮಿಸಿ ಮಾಹಿತಿ ನೀಡಲಾಯಿತು. ನಾಲ್ಕನೇಯ ದಿನ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಕರ‍್ಯಗಾರ ನಡೆಸಲಾಯಿತು. ಐದನೇ ದಿನ ಮಹಿಳಾ ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವಾಲಯ 7ನೇ ಕರಡು ಅಧಿಸೂಚನೆ ಪ್ರಕಟಿಸಿರುವಾಗ ಇದರ ಬಗ್ಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕೇವಲ ಕಾಟಚಾರದ ಸಭೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರ್ಕಾರ ಇರುವಾಗ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪರಿಸರ ತಜ್ಞ ಮಾಧವ್ ಗಾಡ್ಗಿಲ್ ರವರ ನೇತೃತ್ವದ ಒಂದು ಸಮಿತಿ ರಚನೆ ಮಾಡಿ ಅವರಿಂದ ಬಂದ ವರದಿ ಅತ್ಯಂತ ಜನವಿರೋಧಿಯಾಗಿತ್ತು ಎನ್ನುವ ಕಾರಣಕ್ಕೆ ಅದನ್ನು ಕೈಬಿಟ್ಟು ಪರಿಸರ ತಜ್ಞ ಕಸ್ತೂರಿ ರಂಗನ್ ರವರ ನೇತೃತ್ವದ ಸಮಿತಿ ರಚನೆ ಮಾಡಿ ವರದಿ ಪಡೆದು ಅದು ಈಗ ಜಾರಿ ಹಂತದಲ್ಲಿದೆ. ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಕೂಡ ಪಶ್ಚಿಮ ಘಟ್ಟ ಪ್ರದೇಶದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ನಡೆಯುತ್ತಿರುವ ಅಗರಬತ್ತಿ ತಯಾರಿಕೆ ತರಬೇತಿಯನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರು ವೀಕ್ಷಿಸಿ, ತರಬೇತಿಯ ಪ್ರಗತಿಯ ಕುರಿತು ಪರಿಶೀಲಿಸಿದರು. ಜಿಲ್ಲಾಧಿಕಾರಿಯವರ ಆಶಯದಂತೆ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುಬಳಕೆ ಮಾಡಿಕೊಂಡು ಸುಗಂಧಭರಿತ ಅಗರಬತ್ತಿಯನ್ನು ತಯಾರಿಸಿ, ಸೂಕ್ತ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಸ್ವ ಉದ್ಯೋಗದ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಈ 12 ದಿನಗಳ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ನಂತರ ಅವರು ತರಬೇತಿಯಲ್ಲಿ ಭಾಗವಹಿಸುತ್ತಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ತರಬೇತಿ ಅನುಭವಗಳನ್ನು ಆಲಿಸಿದರು. ಶಿಬಿರಾರ್ಥಿಗಳು ತಯಾರಿಸಿದ ಅಗರಬತ್ತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು, ತರಬೇತಿಯ ಉದ್ದೇಶವನ್ನು ಯಶಸ್ವಿಯಾಗಿ ಸಾಕಾರಗೊಳಿಸುವ ಮೂಲಕ ಸ್ವಾವಲಂಬಿ ಉದ್ಯಮಿಗಳಾಗಿ ಬೆಳೆಯುವಂತೆ…

Read More