ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಏಷಿಯಾಟೆಕ್ ಕಾಲೇಜು, ಕುಂದಾಪುರದಲ್ಲಿ 2027ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗಿದೆ. ಉದ್ಯೋಗಾಧಾರಿತ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಒಂದು ವರ್ಷದ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡುತ್ತಿದೆ. ಲಭ್ಯವಿರುವ 1 ವರ್ಷದ ಕೋರ್ಸ್‌ಗಳು: * ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ * ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ * ಫೈರ್ ಅಂಡ್ ಸೇಫ್ಟಿ ಎಂಜಿನಿಯರಿಂಗ್ * ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) * ಸೈಬರ್ ಕ್ರೈಮ್ ಅಂಡ್ ಸೈಬರ್ ಲಾ * ಟ್ರಾವೆಲ್ ಅಂಡ್ ಟೂರಿಸಂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು:100% ಉದ್ಯೋಗ ನಿಯೋಜನೆ ಸಹಾಯ (Placement Assistance)ಸರ್ಕಾರಿ ಶಿಕ್ಷಣ ಸಾಲದ ಸೌಲಭ್ಯಕ್ಕೆ ಸಹಾಯ (ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಂತೆ)ವೃತ್ತಿಪರ ಕೌಶಲ್ಯ ತರಬೇತಿಉದ್ಯೋಗಾವಕಾಶಗಳಿಗೆ ಮಾರ್ಗದರ್ಶನ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಂಡು ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕುಂದಾಪುರ ಏಷಿಯಾಟೆಕ್ ಕಾಲೇಜು ಪ್ರವೇಶಾತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಹೆಬ್ರಿ ತಾಲೂಕು ಸಂತೆಕಟ್ಟೆ ನಿವಾಸಿ ಕಾಲೇಜು ವಿಧ್ಯಾರ್ಥಿನಿ ಸಮ್ರದ್ಧಿ ನಾಯ್ಕ್ ಅವರ ಶ್ರವಣ ದೋಷಕ್ಕೆ ತಕ್ಷಣ ಸ್ಪಂದಿಸಿದ ಕೋಟ ಬ್ರಿಗೇಡ್ ರೋಟರಿ ಸಂಸ್ಥೆ ಸುಮಾರು 25,000 ಮೌಲ್ಯದ ಆಧುನಿಕ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಯಿತು. ನಿಯೋಜಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಅವರು ಸಾಧನವನ್ನು ವಿಧ್ಯಾರ್ಥಿನಿಗೆ ಹಸ್ಥಾಂತರಿಸಿ, ಮುಂದಿನ ವಿಧ್ಯಾಭ್ಯಾಸ ಹಾಗು ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಹಾಗೂ ಕೋಟ ಬ್ರಿಗೇಡ್ ರೋಟರಿ ಸಂಸ್ಥೆಯ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ವಲಯ ಎರಡರ ಮಾಜಿ ಸಹಾಯಕ ಗವರ್ನರ್ ಹಾಗು ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬನ್ನಾಡಿ, ವಲಯ ಸೇನಾನಿ ದಯನಂದ ಆಚಾರ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಆಚಾರ್, ಡಾ. ಗಣೇಶ್, ಪ್ರಕಾಶ್ ಹಂದಟ್ಟು, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಸದಸ್ಯರಾದ ಅರುಣ್ ಬಿ.ಕೆ.ಎಸ್. ಗುಂಡ್ಮಿ, ಮತ್ತು ಫಲಾನುಭವಿ ತಾಯಿ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ ►…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಡಿ ಗ್ರಾಮ ಪಂಚಾಯತ್ ಸಮನ್ವಯ ಸಂಜೀವಿನಿ ಒಕ್ಕೂಟ ಇದರ 2025-26ರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶಾಂತ ಸಿ. ಮೆಂಡನ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೀಪ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಿ ಜೆಂಡರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಜಿಲ್ಲಾ ಕಾನೂನು ಅಭಿರಕ್ಷಕರಾದ ರಜನಿ ಅವರು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ತಡೆ ಹಾಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ವಿಧಾನಗಳ ಕುರಿತು ಜಾಗೃತಿ ಮೂಡಿಸಿದರು. ಬ್ರಹ್ಮಾವರ ತಾಲೂಕು ವಲಯ ಮೇಲ್ವಿಚಾರಕರಾದ ಸ್ವಾತಿ ಅವರು ಸಂಜೀವಿನಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸಂಜೀವಿನಿ ಯೋಜನೆಯ ಮಹತ್ವದ ಕುರಿತು ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಉಮೇಶ್, ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಮೆಂಡನ್, ಮಾಜಿ ಸದಸ್ಯ ಕೃಷ್ಣ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಸಮಾಲೋಚಕರಾದ ಮೀರಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ “ರಾಷ್ಟ್ರೀಯ ರಕ್ಷಣಾ ಅಕಾಡೆಮಿ( ಎನ್ .ಡಿ.ಎ) ಗೆ ಸೇರುವ ಮಾರ್ಗ ಮತ್ತು ಪರೀಕ್ಷೆ ತಯಾರಿ ಮಾರ್ಗದರ್ಶಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಗುರುವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಜೇಶ್ವರಿ ಆನಂದನ್ ಮಾತನಾಡಿ ಎನ್.ಡಿ.ಎ ಕುರಿತ ಮಹತ್ವವನ್ನು ತಿಳಿಸಿ ಅದನ್ನು ಸೇರುವ ನಿಟ್ಟಿನಲ್ಲಿ ಹೇಗೆ ತಯಾರಿ ನಡೆಸಬೇಕು. ಅರ್ಜಿ ಸಲ್ಲಿಸುವಿಕೆ, ಪರೀಕ್ಷಾ ವಿಧಾನ ಮತ್ತು ಸೇರುವ ಮಾರ್ಗಗಳು ಮತ್ತು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಎನ್.ಡಿ.ಎ. ಸೇರುವುದರ ಮೂಲಕ ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಿ. ಮುಖ್ಯವಾಗಿ ಎನ್ ಡಿ ಎ ಸೇರುವುದರಿಂದ ದೇಶಸೇವೆಯೊಂದಿಗೆ ಗೌರವ, ಆತ್ಮವಿಶ್ವಾಸ, ಧೈರ್ಯ, ದೃಢತೆ, ಸಾಮರಸ್ಯ, ಮತ್ತು ಜ್ಞಾನ ಬೆಳೆಯುತ್ತದೆ. ವಿದ್ಯಾರ್ಥಿಗಳು ಮನಸು ಮಾಡಿದರೆ ಎಲ್ಲವೂ ಸಾಧ್ಯ. ಎನ್ ಡಿ ಎ ಸೇರುವಾಗ ಅತ್ಯಂತ ಮುಖ್ಯವಾಗಿ ಶೃದ್ಧೆ, ದೃಢಸಂಕಲ್ಪ ಬೇಕಾಗುತ್ತದೆ. ನಿಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಎತ್ತಿಕೊಂಡು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ತಮ್ಮ ಸಮುದಾಯಕ್ಕೆ ಅನ್ವಯಿಸಿಕೊಂಡ ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ಅವಮಾನಿಸಿ, ನಿಂದಿಸಿದ್ದು ವ್ಯವಸ್ಥಿತ ಷಡ್ಯಂತ್ರವಾಗಿದೆ.ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯನ್ನೂ ಕೇಳಿಲ್ಲ, ಕೇಳುವುದು ಇಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದ್ದಾರೆ. ಅವರು ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಎಲ್ಲಾ ವಿದ್ಯಮಾನಗಳನ್ನು ವಿಶ್ಲೇಷಿಸಿ ನೋಡುವಾಗ ಹಳದಿ ಕನ್ನಡಕ ಹಾಕಿಕೊಂಡ ಕೆಲವೊಂದು ಜನಗಳಿಂದ ಘಟನೆ ಆಗಿದೆ ಎನ್ನುವುದು ಸ್ಪಷ್ಟ. ಹಿಂದೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿದ ವ್ಯಕ್ತಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಂದು ನಾನು ನನ್ನ ಕಕ್ಷಿದಾರನ ಪರವಾಗಿ ನನ್ನ ವೃತ್ತಿಧರ್ಮವನ್ನು ಪಾಲಿಸಿದ್ದೆ. ಅದರಿಂದ ಆ ವ್ಯಕ್ತಿಗೆ ಹಿನ್ನೆಡೆಯಾಗಿತ್ತು. ಇದರ ದ್ವೇಷವನ್ನು ಈಗ ತೀರಿಸಿಕೊಳ್ಳಲು ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾನೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್ ಮತ್ತು ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗಳು ಈ ವರ್ಷ ಒಟ್ಟಿಗೆ ನಡೆಯಲಿದ್ದು, 06 ಜನವರಿ 2027 ರಿಂದ 10 ಜನವರಿ 2027 ರವರೆಗೆ (05 ದಿನಗಳು) ನಿಗದಿಯಾಗಿದೆ. ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ದಿನಾಂಕ 07-01-2027ನೇ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡು 09-01-2027ರ (03 ದಿನಗಳು) ಶನಿವಾರ ಸಂಜೆ ಸಮಾಪನಗೊಳ್ಳಲಿದೆ.ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆ -‘ಕನ್ನಡ ಮನಸ್ಸು: ಭವಿಷ್ಯದ ಕನಸು’.ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆ ‘ಕನ್ನಡ ಮನಸ್ಸು: ಭವಿಷ್ಯದ ಕನಸು’ಎಂದಾಗಿದ್ದು, ಇದು ಯುವ ಜನತೆಯನ್ನು ಕೇಂದ್ರವಾಗಿಸಿರುವ ಪರಿಕಲ್ಪನೆಯಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಗಳನ್ನೊಳಗೊಂಡ ಕನ್ನಡದ ಅಸ್ಮಿತೆಯಿಂದ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪ ಈ ಪರಿಕಲ್ಪನೆಯದ್ದಾಗಿದೆ.ಆಳ್ವಾಸ್ ನುಡಿಸಿರಿ-2027ರ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ:ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಅ.11ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನಾವರಣಗೊಳಿಸಲಾಯಿತು. ಬೈಂದೂರು ರಾಮಕ್ಷತ್ರಿಯ ಸಮಾಜ ಇದರ ಉಪಾಧ್ಯಕ್ಷ ಹಾಗೂ ರಾಮಕ್ಷತ್ರಿಯ ಉಡುಪಿ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷರಾದ ಸದಾಶಿವ ಡಿ. ಪಡುವರಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಶೆರ್ವೆಗಾರ್ ಹೆಬ್ರಿ, ರಾಮಕ್ಷತ್ರಿಯ ಒಕ್ಕೂಟದ ಜಿಲ್ಲಾ ಸಂಚಾಲಕ ಸುರೇಶ್ ಬಟವಾಡಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಆಡಳಿತ ಕಾರ್ಯದರ್ಶಿ ಮಂಜುನಾಥ ಎನ್. ಬೈಂದೂರು, ಮಾತೃ ಮಂಡಳಿ ಬೈಂದೂರು ಅಧ್ಯಕ್ಷರಾದ ಸೀತಾ ಭಾಸ್ಕರ್, ಕಾರ್ಯದರ್ಶಿ ಭಾಗಿರಥಿ ನರಸಿಂಹ, ಯುವಕ ಸಮಾಜದ ಅಧ್ಯಕ್ಷ ಕೆ. ರಾಜೇಶ್, ಕಾರ್ಯದರ್ಶಿ ನಿತ್ಯಾನಂದ ಡಿ., ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು. ಅಕ್ಟೋಬರ್ 11ನೇ ತಾರೀಕು ಭಾನುವಾರ ಜೆಎನ್ಆರ್ ಕಲಾಮಂದಿರ ಬೈಂದೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಲಾಯಿತು. ಇದನ್ನೂ ಓದಿ ► ಅ.11ರಂದು ಬೈಂದೂರಿನಲ್ಲಿ ಉಡುಪಿ ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್, ವೀಲ್ ಚೇರ್ ಮುಂತಾದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಆರೋಗ್ಯ ಸಲಕರಣೆಗಳ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು. ರೋಟರಿ ಮಾಜಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಸಲಕರಣೆಗಳನ್ನು ಹಸ್ತಾಂತರಿಸಿ ಮಾತನಾಡಿ, ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಆರೋಗ್ಯ ಸಲಕರಣೆಗಳನ್ನು ನೀಡಿರುವ ರೋಟರಿ ಕೋಟ ಬ್ರಿಗೇಡ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ಈ ಸಲಕರಣೆಗಳನ್ನು ಸಮರ್ಪಕವಾಗಿ ಬಳಸುವಂತೆ ಕರೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ ಕೊಡುಗೆಗಳನ್ನು ಸ್ವೀಕರಿಸಿ, ಕ್ಲಬ್‌ನ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ರೋಟರಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ, ವಲಯ ತರಬೇತುದಾರ ಸುರೇಶ್ ಬೇಳೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆ ಆಗಿರುವುದರಿಂದ ಜಾನುವಾರುಗಳಿಗೆ ಎದುರಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಸರಕಾರದಿಂದ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಗೆ 2,814 ಮೇವಿನ ಬಿತ್ತನೆ ಬೀಜಗಳ ಕಿರುಪೊಟ್ಟಣಗಳು ಪೂರೈಕೆಯಾಗಲಿದ್ದು, ಜಮೀನು ಮತ್ತು ನೀರಿನ ಮೂಲ ಹೊಂದಿರುವ ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವ ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಗಳಾದ ಉಡುಪಿ ಮೊ.ನಂ: 9448134852, ಕಾಪು ಮೊ.ನಂ: 8217389838, ಬ್ರಹ್ಮಾವರ ಮೊ.ನಂ: 9448623690, ಕುಂದಾಪುರ ಮೊ.ನಂ: 9448163237, ಬೈಂದೂರು ಮೊ.ನಂ: 9741993045, ಕಾರ್ಕಳ ಮೊ.ನಂ: 9845753062 ಹಾಗೂ ಹೆಬ್ರಿ ಮೊ.ನಂ: 9986764615 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಯುವಕರ ತಂಡ ಸೇರಿ ಒಂದು ವಿನೂತನ ಪ್ರಯತ್ನವಾಗಿ ಮೊಟ್ಟ ಮೊದಲ ಬಾರಿಗೆ ಒಂದು web series ತಯಾರಿಸಿದ್ದಾರೆ. ಮನುಷ್ಯನ ಬದುಕಿನ ಪ್ರತಿಯೊಂದು ಪ್ರತಿಫಲವು ಭೂಮಿಯ ಮೇಲೆ ಅನುಭವಿಸಿಯೇ ತೀರುವಂಥದ್ದು ಇದಕ್ಕೆ ಕರ್ಮ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಕರ್ಮ ಎಂಬ ಶೀರ್ಷಿಕೆಯನ್ನು ಇಟ್ಟು ಮನುಷ್ಯ ತಾನು ಮಾಡುವ ಪಾಪ ಕೃತ್ಯಗಳಿಗೆ ಭೂಮಿಯ ಮೇಲೆ ಅದರ ಎಲ್ಲಾ ಪ್ರಾಯಶ್ಚಿತವನ್ನು ಅನುಭವಿಸುತ್ತಾನೆ. ಹೆಣ್ಣು ಹೊನ್ನು ಮಣ್ಣು ಇವುಗಳಿಗೆ ನಡೆಯುವ ಅತಿಯಾದ ವ್ಯಾಮೋಹ ಮನುಷ್ಯನನ್ನ ಯಾವ ಮಟ್ಟಕ್ಕೆ ಬೇಕಾದರೂ ಇಳಿಸಬಹುದು ಆದರೆ ಮುಂದಿನ ಕರ್ಮಫಲದ ಯೋಚನೆ ಆತನಿಗಿರುವುದಿಲ್ಲ ಆದರೆ ಮನುಷ್ಯನ ಪಾಪ ಪುಣ್ಯಗಳನ್ನ ದೇವರು ತನ್ನದೇ ಆದ ತಕ್ಕಡಿಯಲ್ಲಿ ಅಳೆದು ತೂಗುತ್ತಿರುತ್ತಾನೆ. ಮಿತಿಮೀರಿದ ವರ್ತನೆ ವಿಕೃತವಾದ ಮನಸ್ಸುಗಳು ಯಾವ ಮಟ್ಟಿಗೆ ಭೂಮಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುವ ಕಥೆಯನ್ನು ಬಹಳ ಸಂಕ್ಷಿಪ್ತವಾಗಿ ಎಳೆ ಎಳೆಯಾಗಿ 8 ಎಪಿಸೋಡ್ ಗಳ ಮೂಲಕ ಬರಲಿದೆ. ಕುಂದಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಅಕ್ಟೋಬರ್ 10ನೇ…
