ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮೈಸೂರಿನಲ್ಲಿ ನಡೆದ ಅಂತರ್ ಜಿಲ್ಲಾ ರೋಟರಿ ಕ್ರಿಕೆಟ್ ಕಪ್ ಪೌಲ್ ಹ್ಯಾರಿಸ್ ಟ್ರೋಫಿ ಪಂದ್ಯಾವಳಿಯಲ್ಲಿ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ತಂಡ ಅಜೇಯವಾಗಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಡೆಯಿತು. ರಾಜ್ಯದ ವಿವಿಧ ಭಾಗಗಳ ಪ್ರತಿಷ್ಠಿತ ರೋಟರಿ ಕ್ಲಬ್ಗಳ ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಕೋಟ-ಸಾಲಿಗ್ರಾಮ ತಂಡ ಆರಂಭದಿಂದಲೇ ಉತ್ತಮ ಸಂಘಟಿತ ಆಟದ ಮೂಲಕ ಗಮನ ಸೆಳೆಯಿತು. ಎದುರಾಳಿ ತಂಡಗಳ ಸವಾಲನ್ನು ಸಮರ್ಥವಾಗಿ ಎದುರಿಸಿದ ಆಟಗಾರರು ಪ್ರತಿಯೊಂದು ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಿ ಎಲ್ಲ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದರು. ಯಾವುದೇ ಪಂದ್ಯದಲ್ಲಿ ಸೋಲನುಭವಿಸದೆ ಸತತ ಗೆಲುವು ದಾಖಲಿಸಿ ಪೌಲ್ ಹ್ಯಾರಿಸ್ ಟ್ರೋಫಿಯನ್ನು ಹಾಗೂ ಜೊತೆಗೆ ರೂಪಾಯಿ 50,000 ನಗದು ಬಹುಮಾನ ಪಡೆದುಕೊಂಡರು. ಈ ಸಾಧನೆಯ ಮೂಲಕ ಕ್ಲಬ್ ರಾಜ್ಯಮಟ್ಟದಲ್ಲಿ ತನ್ನ ಕ್ರೀಡಾ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ತಂಡದ ಆಟಗಾರರಾದ ಯೋಗೀಶ್ ಕುಮಾರ್, ಕರುಣಾಕರ ಕುಂದರ್, ವೆಂಕಟೇಶ್, ಪ್ರಸಾದ್, ಪ್ರಸಾದ್ ಮೆಂಡನ್, ಯೋಗೀಶ್ ಕಾಂಚನ್, ರಾಘವೇಂದ್ರ, ವಿಘ್ನೇಶ್, ಚವನ್ ಭಂಡಾರಿ, ಆದರ್ಶ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೆನರಾ ರೋಬೆಕೊ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಆಯ್ದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕೆನರಾ ರೋಬೆಕೊ ಸಂಸ್ಥೆಯ ಹೆಡ್ ಇಂಟರ್ನಲ್ ಆಡಿಟ್ ಗುರುಚರಣ್ ಹೊಸ್ಕೋಟೆ ಅವರ ಜೊತೆಗೂಡಿ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು, ಕೆನರಾ ರೋಬೆಕೊ ಸಂಸ್ಥೆಯ ಸೈಕಲ್ ಕೊಡುಗೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಸ ಬೆಸುಗೆ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಕ್ಷೇತ್ರದ ಇನ್ನಷ್ಟು ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ನಿಟ್ಟಿನಲ್ಲಿ ಸಂಸ್ಥೆಯಯೊಂದಿಗೆ ಸಮೃದ್ಧ ಬೈಂದೂರು ತಂಡ ಸದಾ ಜೊತೆಯಾಗಿರುತ್ತೇವೆ ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುರುಚರಣ್ ಹೊಸ್ಕೋಟೆ ಅವರು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಸೈಕಲ್ಗಳು ತಲುಪುತ್ತಿರುವುದು ಸಂತಸ ತಂದಿದೆ. ಶಾಸಕರ ಮಾರ್ಗದರ್ಶನದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜಿಸಿದ ಯೋಜನೆ 300 ಟ್ರೀಸ್ ಇನ್ನಷ್ಟು ಯಶಸ್ವಿಯಾಗಲೆಂದು ಆಶಿಸಿದರು. ಕಾರ್ಯಕ್ರಮದ ನಂತರ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಮಡಂತ್ಯಾರು ತಂಡವನ್ನು 2-0 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಮಂಗಳೂರು ತಾಲೂಕನ್ನು ಪ್ರತಿನಿಧಿಸಿದ ಸರಕಾರಿ ಪದವಿಪೂರ್ವ ಕಾಲೇಜು ನಾಲ್ಯಪದವು ಮಂಗಳೂರು ತಂಡವನ್ನು 2-0 ಅಂಕಗಳಿಂದ ಸೋಲಿಸಿ 21ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಎಂ.ಕಾಂ. ವಿದ್ಯಾರ್ಥಿನಿ ಅಮೃತಾ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನಾಗರಾಜ ವೈದ್ಯ ಎಂ. ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಬ್ರಮಣ್ಯ ಎ. ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಚೆನ್ನಾಗಿ ಅರಿತುಕೊಂಡು ಜೀವನದಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಕಾರ್ಯಕ್ರಮದ ಸಂಘಟಕರಾದ ಡಾ. ಭಾಗೀರಥಿ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಉದಯ ಶೆಟ್ಟಿ ಕೆ. ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಮತ್ತು ಎಂ.ಕಾಂ.ನ ಸಂಯೋಜಕರಾದ ಕಾರ್ತಿಕ್ ಪೈ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪರಮ ಪವಿತ್ರವಾದ ತುಳಸಿಯನ್ನು ಪೂಜಿಸುವ ಸಂಸ್ಕೃತಿ ಭಾರತದ್ದು. ಅದರಂತೆ ಉತ್ಥಾನ ದ್ವಾದಶಿಯ ಪರ್ವ ಸಮಯದಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತುಳಸಿಯ ಕಟ್ಟೆಯಲ್ಲಿತುಳಸಿ ಮತ್ತು ಕಾರ್ತಿಕ ದಾಮೋದರರ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು. ಈ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರ – ನಾಮಕನಾದ ಶ್ರೀ ಹರಿಯನ್ನು ಭಜನೆಗಳ ಮೂಲಕ ಆರಾಧಿಸಿದರು. ಶಾಲಾ ಶಿಕ್ಷಕರಾದ ರಾಮಕೃಷ್ಣ ಉಡುಪ ತುಳಸಿ ಪೂಜೆಯನ್ನು ನೆರವೇರಿಸಿ, ತುಳಸಿಯನ್ನು ಪ್ರಾರ್ಥಿಸುತ್ತಾ ಶರೀರವು ದೇವರು ನಮಗೆ ಕೊಟ್ಟ ದೊಡ್ಡ ವರ. ಅದರ ಸಂರಕ್ಷಣೆಗೆ ಪ್ರಕೃತಿಯಲ್ಲಿ ಕೆಲವಷ್ಟು ಔಷಧೀಯ ಗಿಡಗಳನ್ನು ಸೃಷ್ಟಿಸಿ, ಅವುಗಳ ಪಾಲನೆ ಪೋಷಣೆ ಮತ್ತು ಆದರಭಾವಗಳನ್ನು ತೋರಿಸುವ ಸಂಸ್ಕೃತಿಯನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಅಂತಹ ಸಸ್ಯಗಳಲ್ಲಿ ಅಗ್ರಸ್ಥಾನವನ್ನು ಪಡೆವ ಗಿಡ ತುಳಸಿ. ವೃಂದಾಸ್ವರೂಪಳಾದ ತುಳಸಿದೇವಿಯು ನಮಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದರು. ಅನಂತರ ಸಿಡಿಮದ್ದುಗಳ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರಂಜಿಸಲಾಯಿತು. ಈ ಸಮಯದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸೇವೆ, ಧರ್ಮ, ಸಂಸ್ಕೃತಿ, ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಪ್ರೇರಣೆಯ ಬೆಳಕಾಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಮ್ಮ ನಾಡಿನ ಹೆಮ್ಮೆಯ ವ್ಯಕ್ತಿತ್ವ. ಧರ್ಮಸ್ಥಳದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಮಾಜದ ಅಭಿವೃದ್ಧಿ, ಗ್ರಾಮೀಣ ಸಬಲೀಕರಣ, ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಮೇಸ್ತ ಹೇಳಿದರು. ಅವರು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ವಲಯ ಆಶ್ರಯದಲ್ಲಿ ಕೊಡಪಾಡಿಯ ಹೋಲಿಕ್ರಾಸ್ ವೃದ್ಧಾಶ್ರಮದಲ್ಲಿ ಬುಧವಾರ ಜರಗಿದ ಸೇವಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಜಾಗೃತಿ ವೇದಿಕೆ ಸದಸ್ಯ ಬಿ.ರಾಘವೇಂದ್ರ ಪೈ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ, ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ, ಸೆಲ್ಕೋ ಫೌಂಡೇಶನ್ ಹಾಗೂ ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಇವರ ಆಶ್ರಯದಲ್ಲಿ ಕೋಡಿ ಕನ್ಯಾಣ ಹೊಸ ಸೇತುವೆ ಬಳಿ ಸೀ-ವೀಡ್, ಪಂಜರ ಹಾಗೂ ಪಚ್ಚಿಲೆ ಕೃಷಿಗಳ ಮಾಹಿತಿ ಕಾರ್ಯಾಗಾರ ಬುಧವಾರ ಜರಗಿತು. ಕಾರ್ಯಕ್ರಮವನ್ನು ಎಂಪಿಇಡಿಎ ಉಪನಿರ್ದೇಶಕರಾದ ಮನೋಜ್ ಮತ್ತು ಕೆ.ವಿ.ಕೆ. ಬ್ರಹ್ಮಾವರ ಮುಖ್ಯಸ್ಥರಾದ ಭೂಮಿಕಾ ಅವರು ಪಚ್ಚಿಲೆ ಮರಿಯನ್ನು ರೋಪ್ ಗೆ ಹಾಕಿ, ಬಟ್ಟೆಯಿಂದ ಸ್ಟಿಚ್ ಮಾಡಿ ರೋಪ್ ಸಿದ್ಧಗೊಳಿಸುವ ಮೂಲಕ ಉದ್ಘಾಟಿಸಿ,ಮಾತನಾಡಿ, ಉಡುಪಿ ಕಿನಾರದ ಮೀನುಗಾರರು ಈಗಾಗಲೇ ಪಚ್ಚಿಲೆ, ಪಂಜರ, ಕಲ್ಲ, ಮುತ್ತು ಕೃಷಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಕಳೆದ ವರ್ಷ ನಡೆದ ಮೀನುಗಾರರ ಸಂವಾದ ಕಾರ್ಯಕ್ರಮದಲ್ಲಿ ಸೀ-ವೀಡ್ ಬಗ್ಗೆ ಮಾಹಿತಿ ನೀಡಿದ್ದೆವು. ಅದನ್ನು ಮೀನುಗಾರರು ಅಧ್ಯಯನ ಮಾಡಿ, ಮಾರುಕಟ್ಟೆ ಲಿಂಕೇಜ್ ಪಡೆದು, ಇದೀಗ ಸೀ-ವೀಡ್ ಕೃಷಿ ಆರಂಭಿಸಿರುವುದು ನಿಜಕ್ಕೂ ಮಾದರಿ ಕಾರ್ಯ ಎಂದರು. ಕಾರವಾರದ ಸಿಎಂಎಫ್ ಆರ್ ಐ ಇಲ್ಲಿನ ವಿಜ್ಞಾನಿ ಸೋನಾಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಬಳಿಯ ಮುದ್ರಮಕ್ಕಿಯಲ್ಲಿ ಗುರುವಾರ ಮಧ್ಯಾಹ್ನ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಿವರಾಮ ಪೂಜಾರಿ ಮತ್ತು ಅರುಣ್ ಮೊಗೇರ್ ಮನೆಯಲ್ಲಿಲ್ಲದ ಸಮಯದಲ್ಲಿ ಕಳ್ಳರು ಬಾಗಿಲು ಒಡೆದು ಒಳಗೆ ನುಗ್ಗಿ 1 ಲಕ್ಷ ರೂ. ನಗದು ಮತ್ತು ಎರಡು ಪಾವನ್ ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದಾರೆ. ಗುರುವಾರ ಹಲವಾರು ಮದುವೆಗಳು ಮತ್ತು ಇತರ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ, ಘಟನೆ ನಡೆದಾಗ ಅಕ್ಕಪಕ್ಕದ ಮನೆಗಳಲ್ಲಿ ಜನರು ಇರಲಿಲ್ಲ. ಕೆಲಸ ಮುಗಿಸಿ ನಿವಾಸಿಗಳು ಮನೆಗೆ ಹಿಂತಿರುಗಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ನೂತನ ಯಕ್ಷಗಾನ ಮೇಳ, ಶ್ರೀ ಮಹಾಸತಿ ಅಮ್ಮನವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ವತ್ತಿನಕಟ್ಟೆ ಇದರ ಪ್ರಥಮ ದೇವರ ಸೇವೆಯಾಟ ದೇವಳದ ಆವರಣದಲ್ಲಿ ಗುರುವಾರ ಜರುಗಿತು. ಹಿರಿಯ ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ ಅವರು ನೂತನ ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ದೇವಳದ ಭಕ್ತರ ಪ್ರೋತ್ಸಾಹ, ಆಡಳಿತ ಮಂಡಳಿಯ ಸಹಕಾರ ಹಾಗೂ ಉತ್ತಮ ಕಲಾವಿದರ ಉಪಸ್ಥಿತಿಯಲ್ಲಿ ಯಕ್ಷಗಾನ ಮೇಳ ಯಶಸ್ವಿಯಾಗಿ ಸಾಗಲು ಸಾಧ್ಯವಿದೆ. ವತ್ತಿನಕಟ್ಟೆ ಮೇಳ ಯಶಸ್ಸು ಸಾಧಿಸುವಂತಾಗಲಿ ಎಂದು ಶುಭಹಾರೈಸಿದರು. ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರು ಪ್ರಸ್ತಾವಿಕ ಮಾತುಗಳನ್ನಾಡಿ, ವತ್ತಿನಕಟ್ಟೆ ಶ್ರೀ ಮಹಾಸತಿ ಅಮನವರು ಶಕ್ತಿಮಾತೆಯಾಗಿದ್ದು, ನಂಬಿದ ಭಕ್ತವರ್ಗವನ್ನು ಕರುಣಿಸುತ್ತಾ ಬಂದಿದ್ದಾಳೆ. ಕಳೆದ ಒಂದೂವರೆ ದಶಕದಲ್ಲಿ ದೇವಸ್ಥಾನ ವಿವಿಧ ಧಾರ್ಮಿಕ ಚಟುವಟಿಕೆಗಳ ಮೂಲಕ ಇನ್ನಷ್ಟು ಉನ್ನತಿಕಂಡಿದೆ. ನೂತನ ಯಕ್ಷಗಾನ ಮೇಳದ ಮೂಲಕ ದೇವಳದ ಐತಿಹ್ಯವನ್ನು ಸಾರುವ, ಕಲಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜೀವನದಲ್ಲಿ ಮರೆಯಲಾಗದ ಕ್ಷಣ ಎಂದರೆ ಅದು ನಮ್ಮ ಬಾಲ್ಯದ ಶಿಕ್ಷಣ ಪಡೆದ ದಿನಗಳು ಅದರಲ್ಲೂ ಬಹುಮುಖ್ಯವಾಗಿ ನಾವು ಕಲಿತ ಶಾಲೆ, ಗುರುಗಳ ಪಾತ್ರ ತಂದೆ – ತಾಯಿಯಷ್ಟೆ ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಯೆನೆಪೋಯ ವೈದ್ಯಕೀಯ ಕಾಲೇಜು ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ, ದೇರಳಕಟ್ಟೆ, ಮಂಗಳೂರು ಇದರ ಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಹೇಳಿದರು. ಅವರು ಗುರುವಾರ ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ವಿದ್ಯಾಸಂಸ್ಥೆ ಕೋಟ ಇದರ ವಾರ್ಷಿಕ ವಾರ್ಷಿಕೋತ್ಸವ ನಿನಾದ-2026ರ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ನಾನು ಇಂದು ಬಹು ಎತ್ತರಕ್ಕೆ ಬೆಳೆದಿರಬಹುದು ಅದಕ್ಕೆ ನಾನು ಕಲಿತ ಈ ವಿದ್ಯಾ ಕ್ಷೇತ್ರವೇ ಕಾರಣ ಎಂದರಲ್ಲದೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನವನ್ನು ಮೌಲ್ಯಯುತವಾಗಿ ಉಪಯೋಗಿಸಿಕೊಂಡು ಸಾಧನೆಯ ಮಜಲುಗಳನ್ನೆರಬೇಕು,ಮೌಲ್ಯಭರಿತ ಶಿಕ್ಷಣ ಅದು ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ಪಡೆಯಲು ಸಾಧ್ಯ ಎಂಬುವುದಕ್ಕೆ ನಾವುಗಳೇ ಸಾಕ್ಷಿ ಎಂದರಲ್ಲದೆ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವುದರ ಜೊತೆಗೆ ನಾವು ಕಲಿತ…
