ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಯೊಂದಿಗೆ ಕೌಶಲ್ಯ ಅಭಿವೃದ್ಧಿ ಇಂದಿನ ಶಿಕ್ಷಣದ ಅಗತ್ಯ. ಪದವಿ ಪಾಠಗಳ ಜೊತೆಗೆ ಹಲವು ವಿಷಯಗಳ ಕುರಿತು ಡಿಪ್ಲೋಮಾ ಮಾಡಬಹುದಾಗಿದೆ. ಈ ಸರ್ಟಿಫಿಕೇಟ್ ಜೀವನದಲ್ಲಿ ಪದವಿ ನಂತರ ಮುನ್ನಡೆಯಲು ಸಹಕಾರಿ. ವಿದ್ಯಾರ್ಥಿಗಳಿಗೆ ಉತ್ತಮ ಸಂಪನ್ಮೂಲ ತಜ್ಞರು ತರಬೇತಿ ನೀಡಲಿದ್ದು ಈ ಪ್ರಯೋಗ ಬಹಳಷ್ಟು ಕಾಲೇಜುಗಳಲ್ಲಿ ಯಶಸ್ವಿಯಾಗಿದೆ ಎಂದು ಮಣಿಪಾಲದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಛೇರ್ಮನ್ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲಾ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜು ಏರ್ಪಡಿಸಿದ “ಪದವಿಯೊಂದಿಗೆ ಕೌಶಲ್ಯಾಭಿವೃದ್ಧಿ ಡಿಪ್ಲೋಮಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಹಿತಿ ನೀಡಿದರು. ಭಾರತೀಯ ಸೇನೆಯ ಚೀಫ್ ಎಂಜಿನಿಯರ್ ಸೇವೆಯಿಂದ ನಿವೃತ್ತರಾದ ನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳ ಜೊತೆಗಿನ ಎರಡು ದಶಕಗಳ ಸೇವೆಯ ಅನುಭವವನ್ನು ವಿವರಿಸಿದ ಅವರು “ಜೈಪುರದ ಭಾರತೀಯ ಸ್ಕಿಲ್ ಡೆವಲಪ್ಮೆಂಟ್ ಯುನಿವರ್ಸಿಟಿ ಸಹಿತ ಹಲವು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೈಗೊಂಡ ಪ್ರಯೋಗಗಳು ಯಶಸ್ವಿಯಾಗಿದೆ” ಎಂದು ಹೇಳಿದರು. ಪದವಿ ಕಾಲೇಜುಗಳಲ್ಲಿ ಶಿಕ್ಷಕರು ಮೊದಲು ಪ್ರೇರಣೆ ಪಡೆಯಬೇಕು. ಅವರು ವಿದ್ಯಾರ್ಥಿಗಳಿಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಇದರ 2026 – 2027ನೇ ಸಾಲಿನ ಶಾಲಾಭಿವೃದ್ಧಿ ಹಾಗೂ ಎಸ್.ಡಿ.ಎಮ್.ಸಿ ನೂತನ ಅಧ್ಯಕ್ಷರಾಗಿ ವೆಂಕಟರಮಣ ಹೆಚ್. ದೇವಾಡಿಗ ಹೇನಬೇರು ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಅಂತರ್ಜಲ ಕಛೇರಿ, ಅಂತರ್ಜಲ ನಿರ್ದೇಶನಾಲಯ ಉಡುಪಿ, ರಜತಾದ್ರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇದರ ವತಿಯಿಂದ ಅಂತರ್ಜಲ ಸಂರಕ್ಷಣೆ ಮತ್ತು ಸದ್ಬಳಕೆ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶರಣ್ಯ ವಿ. ಕಾಮತ್ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸಹಯೋಗದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಡುಬಿದಿರೆ ವಲಯ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಏಳು ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಯಿತು. ಮೊದಲ ದಿನ ಆಳ್ವಾಸ್‌ನ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಶ್ರೇಯಾ ವೈದ್ಯ, ಸುಮಾರು 120 ತಾಯಂದಿರಿಗೆ ಝಮ್ ಮೀಟಿಂಗ್ ಮೂಲಕ ಮಾಹಿತಿ ಒದಗಿಸಿದರು. ಎರಡನೇ ದಿನ ಆಳ್ವಾಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ತನ್ಯಪಾನ ಬಗ್ಗೆ ಮಾಹಿತಿ ನೀಡುವ ದೃಶ್ಯ ಮಾಧ್ಯಮದ ವಿಡಿಯೋಗಳನ್ನು ತಯಾರಿಸಿದರು. ಮೂರನೇ ದಿನ ಗರ್ಭಿಣಿಯರ ಆಹಾರ ಪದ್ದತಿಯನ್ನು ವಿವರಿಸುವ ಸ್ಟಾಲ್‌ಗಳನ್ನು ನಿರ್ಮಿಸಿ ಮಾಹಿತಿ ನೀಡಲಾಯಿತು. ನಾಲ್ಕನೇಯ ದಿನ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಕರ‍್ಯಗಾರ ನಡೆಸಲಾಯಿತು. ಐದನೇ ದಿನ ಮಹಿಳಾ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವಾಲಯ 7ನೇ ಕರಡು ಅಧಿಸೂಚನೆ ಪ್ರಕಟಿಸಿರುವಾಗ ಇದರ ಬಗ್ಗೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕೇವಲ ಕಾಟಚಾರದ ಸಭೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರ್ಕಾರ ಇರುವಾಗ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪರಿಸರ ತಜ್ಞ ಮಾಧವ್ ಗಾಡ್ಗಿಲ್ ರವರ ನೇತೃತ್ವದ ಒಂದು ಸಮಿತಿ ರಚನೆ ಮಾಡಿ ಅವರಿಂದ ಬಂದ ವರದಿ ಅತ್ಯಂತ ಜನವಿರೋಧಿಯಾಗಿತ್ತು ಎನ್ನುವ ಕಾರಣಕ್ಕೆ ಅದನ್ನು ಕೈಬಿಟ್ಟು ಪರಿಸರ ತಜ್ಞ ಕಸ್ತೂರಿ ರಂಗನ್ ರವರ ನೇತೃತ್ವದ ಸಮಿತಿ ರಚನೆ ಮಾಡಿ ವರದಿ ಪಡೆದು ಅದು ಈಗ ಜಾರಿ ಹಂತದಲ್ಲಿದೆ. ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಕೂಡ ಪಶ್ಚಿಮ ಘಟ್ಟ ಪ್ರದೇಶದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ನಡೆಯುತ್ತಿರುವ ಅಗರಬತ್ತಿ ತಯಾರಿಕೆ ತರಬೇತಿಯನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರು ವೀಕ್ಷಿಸಿ, ತರಬೇತಿಯ ಪ್ರಗತಿಯ ಕುರಿತು ಪರಿಶೀಲಿಸಿದರು. ಜಿಲ್ಲಾಧಿಕಾರಿಯವರ ಆಶಯದಂತೆ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಹೂವುಗಳನ್ನು ಮರುಬಳಕೆ ಮಾಡಿಕೊಂಡು ಸುಗಂಧಭರಿತ ಅಗರಬತ್ತಿಯನ್ನು ತಯಾರಿಸಿ, ಸೂಕ್ತ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಸ್ವ ಉದ್ಯೋಗದ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಈ 12 ದಿನಗಳ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ನಂತರ ಅವರು ತರಬೇತಿಯಲ್ಲಿ ಭಾಗವಹಿಸುತ್ತಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ತರಬೇತಿ ಅನುಭವಗಳನ್ನು ಆಲಿಸಿದರು. ಶಿಬಿರಾರ್ಥಿಗಳು ತಯಾರಿಸಿದ ಅಗರಬತ್ತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು, ತರಬೇತಿಯ ಉದ್ದೇಶವನ್ನು ಯಶಸ್ವಿಯಾಗಿ ಸಾಕಾರಗೊಳಿಸುವ ಮೂಲಕ ಸ್ವಾವಲಂಬಿ ಉದ್ಯಮಿಗಳಾಗಿ ಬೆಳೆಯುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ದಿವಂಗತ ನಾಗರಾಜ ಹಂದೆ ಅವರು ಬಹಳಷ್ಟು ಕಾಲ ಸಾಲಿಗ್ರಾಮ ದೇಗುಲದಲ್ಲಿ ಮ್ಯಾನೆಜರ್ ಆಗಿ ದುಡಿದವರು. ಕಲಾಸಕ್ತಿಯಿಂದ ಹೆಚ್ಚು ಕಲಾ ತಂಡಗಳಿಗೆ ಸ್ಪೂರ್ತಿಯಾಗಿ ಕಾರ್ಯಕ್ರಮ ನೆರವೇರಿಸಿಕೊಡುವಲ್ಲಿ ಶ್ರಮಿಸಿದವರು. ಕಲಾ ತಂಡಗಳನ್ನು ಆಹ್ವಾನಿಸಿಕೊಂಡು ವಿಶೇಷ ಆಹ್ವಾನವೀಯುತ್ತಾ ಅತಿಥಿ ಸತ್ಕಾರದಿಂದ ಮನ ಗೆದ್ದವರು. ಅವರಿಲ್ಲ ಎಂಬುದು ಅತ್ಯಂತ ನೋವು ತಂದಿದೆ ಎಂದು ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ ಹೇಳಿದರು. ಅವರು ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಯೋಜಿಸಿಕೊಂಡ ’ಅರ್ಥಾಂಕುರ-27’ರಲ್ಲಿ ’ನಾಗರಾಜ ಹಂದೆ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಕೆ. ತಾರಾನಾಥ ಹೊಳ್ಳ ಮಾತನ್ನಾಡಿದರು. ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ ಮಾತನಾಡಿ, ಕುಟುಂಬದ ಸದಸ್ಯನಂತೆ ದೇಗುಲದ ಏಳ್ಗೆಗಾಗಿ ಶ್ರಮಿಸಿದ ನಾಗರಾಜ ಹಂದೆಯವರ ಅಕಾಲ ಮರಣ ಮನಸ್ಸಿಗೆ ಬೇಸರ ತಂದಿದೆ ಎಂದರು. ಮೃತರ ಸಹೋದರ ಭಾಸ್ಕರ ಹಂದೆ ಮಾತನ್ನಾಡಿ ಅನವರತವೂ ದೇಗುಲದ ಸಮಸ್ತ ಏಳ್ಗೆಗೆ ಶ್ರಮಿಸಿದ ಸಹೋದರನ ಸಾವಿನ ಬಾಧೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವಕ ಸಮಾಜ ಕುಂದಾಪುರ ಇದರ ವತಿಯಿಂದ ತಾಲೂಕಿನೊಳಗಿನ ಕಾಲೇಜುಗಳಲ್ಲಿ, ಪದವಿ ಪೂರ್ವ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ತರಗತಿಗಳಲ್ಲಿ ಕಲಿಯುತ್ತಿರುವ ಜಿ.ಎಸ್.ಬಿ. ಸಮಾಜದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಫಾರ್ಮ್‌ನ್ನು ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು ಅಥವಾ ಸ್ವಂತ ವಿಳಾಸ ಬರೆದ ಹಾಗೂ ಸಾಕಷ್ಟು ಅಂಚೆ ಚೀಟಿ ಹಚ್ಚಿದ ಲಕೋಟೆಯನ್ನು ಲಗತ್ತಿಸಿ ಅರ್ಜಿ ಫಾರ್ಮ್‌ಗಳಿಗಾಗಿ ಬರೆದುಕೊಳ್ಳಬೇಕಾಗಿ ಪ್ರಕಟಿಸಲಾಗಿದೆ. ಭರ್ತಿ ಮಾಡಿದ ಅರ್ಜಿ ತಲುಪಲು ಕೊನೆಯ ದಿನಾಂಕ ತಾ. 31-08-2026 ಆಗಿರುತ್ತದೆ. ವಿಳಾಸ: ಕೆ. ವಿವೇಕ ಪೈ, ಜಾಂಬಾವಲಿ ಸ್ಟೋರ‍್ಸ್, ಮುನ್ಸಿಪಾಲ್ ರಸ್ತೆ, ಕುಂದಾಪುರ-576201.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಕಾರ್ಯವು ಸಮರ್ಪಕವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯಾದ್ಯಂತ 100% ರಷ್ಟು ಏನ್ಯೂಮರೇಷನ್ ನಮೂನೆಗಳನ್ನು ವಿತರಿಸಲಾಗಿದೆ. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಈ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮಗೆ ತಲುಪಿಸಲಾಗಿರುವ ನಮೂನೆಗಳಲ್ಲಿರುವ ವಿವರಗಳನ್ನು ಪರಿಶೀಲಿಸಿ, ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ ಭರ್ತಿ ಮಾಡಿದ ನಮೂನೆಗಳನ್ನು ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಗಳಿಗೆ ಹಿಂತಿರುಗಿಸಬೇಕು. ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ, ಹತ್ತಿರದ BLO Facilitation Centre (BFC) ಮತ್ತು Voter facilitation Centre (VFC) ಗೆ ಭೇಟಿ ನೀಡಿದಲ್ಲಿ ಅಲ್ಲಿನ ಸಿಬ್ಬಂದಿಗಳು ನಮೂನೆಗಳನ್ನು ಭರ್ತಿ ಮಾಡುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಅಥವಾ ನಿಮ್ಮ ವ್ಯಾಪ್ತಿಯ BLO ಮತ್ತು BLO Facilitation Centre ಗಳ ವಿವರಗಳನ್ನು ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ https://udupi.nic.in/en/special-intensive-revision…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಅಖಂಡ ಭಾರತಕ್ಕಾಗಿ ಒಂದೆಡೆ ಹೋರಾಟಗಳು ತೀವ್ರಗೊಳ್ಳುತ್ತಿದೆ. ಇತ್ತ ಕಾಕ್ರೋಚ್ ಗಳೆಂಬ ಮುತಾಂದ ಶಕ್ತಿಗಳು ದೇಶವನ್ನು ವಿಭಜಿಸುವ ಷ್ಯಡಂತರ ಮಾಡುತ್ತಿದೆ. ಇದಕ್ಕೆ ಈ ದೇಶದ ಹಿಂದೂಗಳು ಅವಕಾಶ ನೀಡುವುದಿಲ್ಲ. ಯಾವ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್ ಈ ದೇಶವನ್ನು ಅಸ್ಥಿರಗೊಳಿಸಿ ತುಂಡಾಗಲು ಕಾರಣಿಭೂತರಾದರೋ ಅದೇ ತುಂಡಾದ ದೇಶಗಳು ಮತ್ತೆ ಅಖಂಡ ಭಾರತಕ್ಕಾಗಿ ಹಪಹಪಿಸುವ ಸನ್ನಿವೇಶವು ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ಕೆಲ ಹೇಳಿದರು. ಅವರು ಭಾನುವಾರ ಕೋಟದಲ್ಲಿ ಹಿಂದೂ ಜಾಗರಣ ವೇದಿಕೆ ಕೋಟ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ‘ಪಂಜಿನ ಮೆರವಣಿಗೆ’ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತನಾಡಿದರು. ದೇಶ ಒಡೆಯುವ ಹುನ್ನಾರಕ್ಕೆ ಈ ಹಿಂದೂ ಸಮಾಜ ಸಿಡಿದ್ದೆದ್ದು ನಿಲ್ಲಲಿದೆ ಅಲ್ಲದೆ ಯಾವ ಅಸ್ಥಿರಗೊಂಡ ವಿಚಾರಗಳು ಮತ್ತೆ ಒಂದುಗೂಡಲು ಆರಂಭಿದೆ ಇದಕ್ಕೆ ಇತ್ತೀಚಿಗಿನ ವಂದೇ ಮಾತರಂ ಗೀತೆಯೇ ಸಾಕ್ಷಿ ಎಂದು ಇನ್ನು ಕೆಲವೆ ವರ್ಷಗಳಲ್ಲಿ ತುಂಡುತುಂಡಾದ ನಮ್ಮ ಅಖಂಡತೆಯ ಕನಸು ನನಾಸಗಲಿದೆ ಬಲಿಷ್ಠ…
