ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಜಲ್ಲಿ ಹಾಗೂ ಮರಳು ಸರಳವಾಗಿ ನಿಗಧಿತ ಬೆಲೆಗೆ ಜನಸಾಮಾನ್ಯರಿಗೆ ದೊರಕುವಂತೆ ಗಣಿ ಇಲಾಖೆ ಕ್ರಿಯಾಶೀಲವಾಗಿ ಕಾರ್ಯವನ್ನು ನೂತನ ಕಟ್ಟಡದಲ್ಲಿ ನಿರ್ವಹಿಸಲಿ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು. ಅವರು ಅಂದು ನಗರದ ದೊಡ್ಡಣಗುಡ್ಡೆಯಲ್ಲಿ ಹಿರಿಯ ಭೂ ವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಖನಿಜ ಭವನ-ನೂತನ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಅಭಿವೃದ್ಧಿ ಹೊಂದಲು ಹೊಸ ಹೊಸ ಬೃಹತ್ ಕಟ್ಟಡಗಳು, ರಸ್ತೆ, ಸೇತುವೆ ನಿರ್ಮಾಣವಾಗುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ. ಇವುಗಳ ನಿರ್ಮಾಣಕ್ಕೆ ಅಗತ್ಯವಿರುವ ಹೊÊಯ್ಗೆ ಹಾಗೂ ಜಲ್ಲಿ ನಿರ್ಮಾಣಕ್ಕೆ ತಕ್ಕಂತೆ ಪೂರೈಸುವ ಕಾರ್ಯ ಗಣಿ ಇಲಾಖೆಯ ಸಹಕಾರದೊಂದಿಗೆ ಆಗಬೇಕು ಎಂದರು. ಜಿಲ್ಲೆಯ ಜನರಿಗೆ ಗಣಿ ಇಲಾಖೆ ತಮ್ಮ ಸೇವೆಯನ್ನು ಮಾಡಲು ನೂತನವಾಗಿ 2 ಕೋಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ,ಉಡುಪಿ: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್‌ಪ್ರಿನೋರ್‌ಶಿಪ್ ವಿಷಯದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಗರಿಷ್ಟ 5 ಲಕ್ಷ ರೂ. ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಜಿಲ್ಲೆಯ ಪ.ಜಾತಿಗೆ ಸೇರಿದ 04 ಅಭ್ಯರ್ಥಿಗಳಿಗೆ ಹಾಗೂ ಪ.ಪಂಗಡಕ್ಕೆ ಸೇರಿದ 03 ಅಭ್ಯರ್ಥಿಗಳ ಗುರಿಯನ್ನು ನಿಗಧಿಪಡಿಸಲಾಗಿರುತ್ತದೆ. ಸದರಿ ತರಬೇತಿಯನ್ನು ವಸತಿ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಜಾರಿಗೊಳಿಸಲು ಉದ್ದೇಶಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಸದರಿ ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ 20 ರಿಂದ 45 ವರ್ಷದ ವಯೋಮಿತಿಯೊಳಗಿನ ಆಸಕ್ತಿ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಫೆಬ್ರವರಿ 5…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಂತ ಜೊಸೆಫರ ಶಾಲೆಯಲ್ಲಿ ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಶಿಕ್ಷಣದ ಬೆಳಕನ್ನು ಹುಡುಕಿಕೊಂಡು ಬಂದ ವಿದ್ಯಾರ್ಥಿನಿಯರಿದ್ದಾರೆ. ಆ ಎಲ್ಲ ಮಕ್ಕಳು, ಸುತ್ತಮುತ್ತಲಿನ ಅನೇಕ ನಾಗರೀಕರು ಮತ್ತು ಕಾನ್ವೆಂಟಿನ ಸಿಸ್ಟರ್ ಗಳು ನಮ್ಮೊಂದಿಗೆ ಅಮವಾಸ್ಯೆ ರಾತ್ರಿಯ ಆಕಾಶವನ್ನು ಕಣ್ತುಂಬಿಕೊಳ್ಳಲು ಒಟ್ಟಿಗೆ ಸೇರಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಕುಂದಾಪುರ ಘಟಕ ಹಮ್ಮಿಕೊಂಡ ʻನಕ್ಷತ್ರʼ ಆಕಾಶ ವೀಕ್ಷಣೆಯ ಈ ಕಾಯಕ್ರಮ ಆರಂಭವಾದದ್ದು ರವಿ ಕಟ್ಕೆರೆ ಮತ್ತು ಸಂಧ್ಯಾ ನಾಯಕರವರ ಹಾಡಿನೊಂದಿಗೆ. ಇವರಿಬ್ಬರ ದನಿಗೆ ಮಕ್ಕಳು ದನಿಗೂಡಿಸುತ್ತಾ ಸಚಿನ್ ಅಂಕೋಲಾರವರ ಬಾರೆ ಗೆಳತಿ ಬಾರೆ ಹಾಡಿನ ಸಾಲುಗಳನ್ನು ಹಾಡಿದ್ದು ಕಾರ್ಯಕ್ರಮಕ್ಕೆ ಉತ್ತಮ ಪ್ರವೇಶವನ್ನು ಒದಗಿಸಿತು. ಬಿ.ಜಿ.ವಿ.ಎಸ್. ಕುಂದಾಪುರ ಘಟಕದ ಅಧ್ಯಕ್ಷರಾದ ಆಶಾ ಕರ್ವಾಲೋ ಮತ್ತು ಶಾಲೆಯ ಸಂಚಾಲಕರ ಸಿಸ್ಟರ್ ಸುಪ್ರಿಯಾ ಅವರ ಶುಭಹಾರೈಕೆಗಳ ನಂತರ ಶಿಕ್ಷಕ ಉದಯ ಗಾಂವಕಾರ ಆಕಾಶ ವೀಕ್ಷಣೆಗೆ ಮಕ್ಕಳನ್ನು ಸಜ್ಜುಗೊಳಿಸುವ ತರಗತಿ ನಡೆಸಿದರು. ನಂತರ ಅವರು ಮಕ್ಕಳನ್ನು ಹೊರಗೆ ಕರೆದು ಆಕಾಶದ ಬೆರಗನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಕಲ್ಗದ್ದೆ, ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಡಿ. ಶೇಟ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಸಚ್ಚಿದಾನಂದ ವೈದ್ಯ, ಮಂಜುನಾಥ್ ಕುಲಾಲ್, ವಿಜಯ್ ಮಡಿವಾಳ, ರವಿ ಕುಲಾಲ್, ಮಮತಾ ಆರ್ ಶೆಟ್ಟಿ, ಲತಾ ಡಿ ಎಸ್, ಗಿರಿಜಾ, ರಾಜೀವ ಶೆಟ್ಟಿ, ರಾಮಚಂದ್ರ ದೇವಾಡಿಗ, ಸದಾಶಿವ ಶೆಟ್ಟಿ, ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಹಾಗೂಉಪಧ್ಯಕ್ಷ ಹುದ್ದಗಳಿಗೆ ಶನಿವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ಸುಮಿತ್ರಾ ಕುಮಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರತಿಯೊಬ್ಬ ಮನಷ್ಯನಿಗೂ ನಮ್ಮ ಸಂಸ್ಕೃತಿ ಹೊರೆಸಿರುವ ದೈವ ಋಣ, ಪಿತೃ ಋಣ, ಆಚಾರ್ಯ ಋಣ, ಸಮಾಜದ ಋಣ ಎಂಬ ನಾಲ್ಕು ಋಣಗಳನ್ನು ತೀರಿಸುವ ಹೊಣೆ ಇದೆ. ಇವು ಕೇಳಲು ಸರಳ ಎನಿಸಿದರೂ ತೀರಿಸಲು ಒಂದು ಜನ್ಮ ಸಾಲದು. ಋಣಮುಕ್ತರಾಗುವಲ್ಲಿಯೇ ಬದುಕಿನ ಸಾರ್ಥಕ್ಯವಿದೆ ಎಂದು ವೈದ್ಯ, ಸಾಹಿತಿ ಡಾ. ನಾ. ಸೋಮೇಶ್ವರ್ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಗುರುವಾರ ಸುರಭಿ ರಿ. ಬೈಂದೂರು ಸಂಸ್ಥೆಯ ಸುರಭಿ ಜೈಸಿರಿ ಹಾಗೂ ಬೆಳಿಹಬ್ಬದ ಸಂಭ್ರಮಾಚರಣೆಯಲ್ಲಿ ಸುರಭಿಯ 11ನೇ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಕೆಲವು ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಭವ್ಯ ಭಾರತದ ಭವಿಷ್ಯವನ್ನು ರೂಪಿಸುವ ಅದ್ಯುತ ಶಿಲ್ಪಿಗಳು ಅಧ್ಯಾಪಕರು. ಅವರ ಋಣವನ್ನು ನಾವು ಉತ್ತಮ ವಿಚಾರವನ್ನು ಹಂಚುವ ಮೂಲಕ ತೀರಿಸಬೇಕಾದ ಹೊಣೆ ನಮ್ಮದಾಗಿದೆ. ಚಂದನ ವಾಹಿಯ ನಿರೂಪಕನಾಗಿ ಆ ಕಾರ್ಯವನ್ನು ಆತ್ಮತೃಪ್ತಿಯೊಂದಿಗೆ ಮಾಡುತ್ತಿದ್ದೇನೆ ಎಂದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಭಾವುಕರಾಗಿದ್ದ ಅವರು ಮುಂದುವರಿದು ಮಾತನಾಡಿ, ಮಕ್ಕಳಿಗೆ ಸಂಸ್ಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಎಂ.ಬಿ.ಎ. ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿಧೀಶ್ ರಾವ್ ಪ್ರೊಫೆಸರ್ ನಿಟ್ಟೆ ಅವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು. ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ಇಒ ತಂತ್ರಗಳು, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಪೇ ಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್, ಪ್ರಾಯೋಗಿಕ ಉದಾಹರಣೆಗಳೂಂದಿಗೆ ವಿದ್ಯಾರ್ಥಿಗಳೂಂದಿಗೆ ಚರ್ಚಿಸಿದರು . ಕಾರ್ಯಕ್ರಮದಲ್ಲಿ ಎಂ.ಬಿ.ಎ. ವಿಭಾಗದ ಮುಖ್ಯಸ್ತೆ ಡಾ. ಸುಚಿತ್ರಾ ಪೂಜಾರಿ ಮತ್ತು ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ವಿಭಾಗದ ವಿದ್ಯಾರ್ಥಿನಿಯಾದ ರಶ್ಮಿತಾ ನಿರೂಪಿಸಿ, ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್ ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ, ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ, ಆರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೋಣಿ ಗ್ರಾಮದ ಕೇಳಕೇರಿ ಎಂಬಲ್ಲಿ ವಾಸವಿದ್ದ ರೋಸ್ ಮೇರಿ ಕೋತಾ (39) ಎಂಬ ಮಹಿಳೆಯು ತನ್ನ 11 ವರ್ಷದ ಮಗನಾದ ರಿಶೋನ ಕೋತಾ ಅವರೊಂದಿಗೆ ಜನವರಿ 18 ರಿಂದ ನಾಪತ್ತೆಯಾಗಿರುತ್ತಾರೆ. ರೋಸ್ ಮೇರಿ ಕೋತಾ 5 ಅಡಿ 6 ಇಂಚು ಎತ್ತರ ಎಣ್ಣೆಕಪ್ಪು ಮೈಬಣ್ಣ, ಸಾಧರಾಣ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ರಿಶೋನ ಕೋತಾ 4 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಪಿ.ಐ. ಕುಂದಾಪುರ ಠಾಣೆ ಮೊ.ಸಂ: 9480805455 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಎಂಟರ್‌ಪ್ರಿನೋರ್‌ಶಿಪ್ ವಿಷಯದ ಬಗ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವುದು ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಗರಿಷ್ಟ 5 ಲಕ್ಷ ರೂ. ಗಳ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಸದರಿ ತರಬೇತಿ ಹಾಗೂ ಸಹಾಯಧನಕ್ಕಾಗಿ ಜಿಲ್ಲೆಯ ಪ.ಜಾತಿಗೆ ಸೇರಿದ 04 ಅಭ್ಯರ್ಥಿಗಳಿಗೆ ಹಾಗೂ ಪ.ಪಂಗಡಕ್ಕೆ ಸೇರಿದ 03 ಅಭ್ಯರ್ಥಿಗಳ ಗುರಿಯನ್ನು ನಿಗಧಿಪಡಿಸಲಾಗಿರುತ್ತದೆ. ಸದರಿ ತರಬೇತಿಯನ್ನು ವಸತಿ ಸಹಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳ ಮೂಲಕ ಜಾರಿಗೊಳಿಸಲು ಉದ್ದೇಶಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಸದರಿ ತರಬೇತಿ ಪಡೆಯಲು 10 ನೇ ತರಗತಿ ಉತ್ತೀರ್ಣರಾಗಿರುವ 20 ರಿಂದ 45 ವರ್ಷದ ವಯೋಮಿತಿಯೊಳಗಿನ ಆಸಕ್ತಿ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಫೆಬ್ರವರಿ 3 ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕುಂದಾಪುರ ವತಿಯಿಂದ ನಡೆಸಲ್ಪಡುವ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 2024-2025ರ ರಕ್ಷಕ – ಶಿಕ್ಷಕ ಸಭೆಯು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೈಣೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಡಾ. ಎ.ವಿ.ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸೌಜನ್ಯ ಶೆಟ್ಟಿ ಅವರು” ಪ್ರಭಾವಿ ಪೋಷಕತ್ವ” ದ ಕುರಿತು ತಿಳಿಸಿದರು. ಸಭೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯಾದ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಲಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿಯರಾದ ಪುಷ್ಪಾ ಸರ್ವರನ್ನು ಸ್ವಾಗತಿಸಿ, ವಂದನಾ ಅವರು ವಂದನಾರ್ಪಣೆ ಗೈದರು.
