Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ವಿಶ್ವನಾಥ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ನಾವುಂದದ ಸ್ವಸ್ತಿಕ್‌ ಪೂಜಾರಿ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ. ಅವರು ರಾಮ ಪೂಜಾರಿ ಹಾಗೂ ಶಾರದಾ ಪೂಜಾರಿ ಅವರ ದಂಪತಿಯ ಪುತ್ರ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ವಿಶ್ವನಾಥ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಕುಂದಾಪುರ ಇಲ್ಲಿಯ ವಿದ್ಯಾರ್ಥಿಗಳಾದ ಪ್ರಣೀತ್ ರೈ ಕಂಚಿನ ಪದಕ ಮತ್ತು ಹರ್ಷಿಣಿ ಬೆಳ್ಳಿಯ ಪದಕ ಗಳಿಸುತ್ತಾರೆ. ಇವರಿಗೆ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೊಂಕಣ ರೈಲ್ವೆ ನಿಗಮದಲ್ಲಿ ಅನುದಾನದ ಕೊರತೆಯಿದೆ. ಇದರೊಂದಿಗೆ ಆದಾಯವೂ ಇಲ್ಲದಿರುವುದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದೆ. ಆದ್ದರಿಂದ ರಾಜ್ಯ ಕೇಂದ್ರ ಸರಕಾರಗಳಿಂದ ನಿಲ್ದಾಣದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಗುರುವಾರ ಇಲ್ಲಿನ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ರೈಲು ನಿಲ್ದಾಣದ ಮೂಲಭೂತ ಸೌಕರ್ಯದ ನಿಟ್ಟಿನಲ್ಲಿ ಈ ತಂಗುದಾಣ ಅಗತ್ಯ ವಿತ್ತು. ಈ ಹಿಂದೆ ಲಯನ್ಸ್‌ನವರು ಕೂಡ ಕೊಡುಗೆ ನೀಡಿದ್ದರು. ಮುಂದಿನ ದಿನಗಳಲ್ಲಿ ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಆಗಲಿ. ಇದರೊಂದಿಗೆ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಪ್ರಯತ್ನ ನಡೆಯುತ್ತಿದೆ. ರಾಜ್ಯ- ಕೇಂದ್ರ ಸರಕಾರದ ಸಹಕಾರದಿಂದ ಇದು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂದಾಪುರ ರೈಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೆಂಗಳೂರು: ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಮಹಾತ್ಮಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ನಾಟ್ಯ ರಾಣಿ ಶಾಂತಲೆ ಸ್ವರ್ಣ ಪ್ರಶಸ್ತಿ, ಸ್ವರ್ಣಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರಾಟೆ ಪಟು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಶಿಹಾನ್ ಸುಬ್ರಹ್ಮಣ್ಯ ಪಿ. ಅವರನ್ನು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿ ಆಧ್ಯಾತ್ಮಿಕ ಕೇಂದ್ರದ ಪರಮಪೂಜ್ಯ ಸದ್ಗುರು ಶ್ರೀ ಬಸವಯೋಗಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯವಿತ್ತು. ಮುಖ್ಯ ಅತಿಥಿಗಳಾಗಿ ವೀಣಾ ಕಾಶಪ್ಪನವ‌ರ್, ಜೂನಿಯ‌ರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಮೊಹಮ್ಮದ್ ಅಲಿ ಹಾಗೂ ಖ್ಯಾತ ನಿರೂಪಕ, ಸಾಹಿತಿ ಮತ್ತು ಸಾಮಾಜಿಕ ಚಿಂತಕ ಡಾ. ವೆಂಕಟೇಶ್ ಆರ್. ಚೌಧಾಯಿ ಉಪಸ್ಥಿತರಿದ್ದರು. ನಾಟ್ಯ ಮಯೂರಿ ನೃತ್ಯ ಟ್ರಸ್ಟ್‌ನ ಪುಷ್ಪಲತಾ ಶಿವಪ್ಪ, ಸ್ಥಾಪಕ ಅಧ್ಯಕ್ಷರಾದ ಬಾಬಾ ಶಂಕರ್ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಅಕ್ಟೋಬರ್ 23 ರಿಂದ 27 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ 41ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್‌ನ 11 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ:ನಿತಿನ್ ಎಲ್ ಜಿ – ಚಕ್ರ ಎಸೆತ, ಆರಂಭಮ್ ರಾಜು – 60ಮೀ  ಸಮರ್ಥ್ ಸಂಜೀವ್ ಕುಮಾರ್ – 1000ಮೀ, ಸಾಹಿಲ್ – 100 ಮೀ, ಕೃಷ್ಣ – ಜಾವೆಲಿನ್ ಎಸೆತ, ಧನುಷ್ಚಂದ್ರ – ಚಕ್ರ ಎಸೆತ. ಬಾಲಕಿಯರ ವಿಭಾಗದಲ್ಲಿ :ಬಾನವಿ ಪಿ ಎಸ್ – 400ಮೀ, ಭಗೀರಥಿ – 3ಕಿಮೀ ನಡಿಗೆ, ಚರೀಷ್ಮಾ – 3000ಮೀ, ಪ್ರಿಯಾಂಕ – 1000ಮೀ, ನಿರ್ಮಲಾ – 400ಮೀ ಹರ್ಡಲ್ಸ್. ಆಯ್ಕೆಯಾದ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಈ ವರ್ಷದ ಶರನ್ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಕೂಡಿ ಯಶಸ್ವಿಯಾಗಿ ಜರುಗಿದವು. ಮಹಾಲಯ ಅಮಾವಾಸ್ಯೆಯಂದು ಮಹಾವಿಷ್ಣು ಪ್ರೀತ್ಯರ್ಥವಾಗಿ ಸಾಮೂಹಿಕವಾಗಿ ಸಂಪೂರ್ಣ ಭಗವದ್ಗೀತಾ ಹಾಗೂ ವಿಷ್ಣು ಸಹಸ್ರನಾಮ ಪಟಿಸಿ ಪರಮಾತ್ಮನನ್ನು ವೇದಮಂತ್ರಗಳಿಂದ ಸ್ತುತಿಸಿ, ಭಜಿಸಿ, ಪೂಜಿಸಿ ಅನ್ನಪ್ರಸಾದ ವಿತರಿಸಲಾಯಿತು. ಪ್ರಥಮ ನವರಾತ್ರಿಯಂದು ಗಣ ಹವನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ನವರಾತ್ರಿಯ ಪ್ರತೀ ದಿನವೂ ಪ್ರಾಥಕಾಲ 5 ಘಂಟೆಯಿಂದ ಸಪ್ತಶತಿಯ ಪಾರಾಯಣ ಮಾಡಿ 6:30 ರಿಂದ 7:15 ರ ತನಕ ಪ್ರಾಥ ಪೂಜೆಯನ್ನು ಮಾಡಲಾಯಿತು. ನಂತರ 8:30 ರಿಂದ ವಿದ್ಯಾರ್ಥಿಗಳು ಲಲಿತ ಸಹಸ್ರನಾಮ ಪಟಿಸಿ ಚಂಡಿಕಾ ಪಾರಾಯಣ ಮಾಡಿ 11ಘಂಟೆಯಿಂದ ಆಯಾ ದಿನದ ದೇವಿಯ ರೂಪವನ್ನು ಸ್ತುತಿಸಿ, ಭಜಿಸುತ್ತಿದ್ದರು. 12 ಘಂಟೆಗೆ ಮಹಾಪೂಜೆ ಆರಂಭಿಸಿ 1 ಘಂಟೆಗೆ ಅನ್ನಪ್ರಸಾದ ವಿತರಿಸಲಾಯಿತು. ರಾತ್ರಿ 7 ಘಂಟೆಗೆ ಮಹಾ ಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಆ ದಿನದ ಕಾರ್ಯಕ್ರಮ ಸಂಪನ್ನಗೊಳಿತು. ಪ್ರತೀ ದಿನವೂ ಮಾತೆಯರಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕೊಕ್ಕೇಶ್ವರ ಹಾಗೂ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಹಳಗೇರಿ ಶ್ರೀ ಕೋಕ್ಕೆಶ್ವರ ಹಾಗೂ ವನದುರ್ಗಾ ದೇವಿ ದೇವಸ್ಥಾನದ ಆಡಳಿತ ಮೊಕ್ತೇಶ್ವರರಾದ ವಾಸುದೇವ್‌ ಕಾರಂತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನವರಾತ್ರಿಯ ಪರ್ವ ಕಾಲದಲ್ಲಿ ದೇವಿಯನ್ನು ಆರಾಧಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ನಮ್ಮ ದೇಗುಲದಲ್ಲಿ ಊರವರ ಸಹಕಾರದೊಂದಿಗೆ ಶರನ್ನವರಾತ್ರಿ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂತಸದ ವಿಚಾರವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪ್ರ ಡಾಟ್‌ ಕಾಂನ ಸಂಪಾದಕರಾದ ಸುನಿಲ್‌ ಎಚ್‌.ಜಿ. ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು  ಒದಗಿಸುವಲ್ಲಿ ಟೀಮ್‌ ಗೆಳಯರ ಬಳಗ ಹಳಗೇರಿ ಯಶಸ್ವಿಯಾಗಿದೆ. ಯುವಕರ ಸಂಘಟನಾ ಶಕ್ತಿ ಪರಸ್ಪರ ಸೌಹಾರ್ದ ಮನೋಭಾವ ಊರಿನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ನಳಿನ್‌ಕುಮಾರ್‌ ಶೆಟ್ಟಿ, ಹಳಗೇರಿ ಶ್ರೀ ಕೋಕ್ಕೆಶ್ವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಸೆಪ್ಟೆಂಬರ್ 2026ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ರಕ್ಷಾ ರಾಮಚಂದ್ರ ನಾಯ್ಕ್ ಎರಡೂ ಗ್ರೂಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕಗಳೊಂದಿಗೆ ಉತ್ತೀರ್ಣಳಾಗಿ, ರಾಷ್ಟ್ರೀಯ ಮಟ್ಟದಲ್ಲಿ 49ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಒಟ್ಟು ಸಿಎ ಇಂಟರ್‌ಮಿಡಿಯೇಟ್ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಎ ಇಂಟರ್‌ಮೀಡಿಯೇಟ್ ಗ್ರೂಪ್-1 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.23.14ರಷ್ಟಿದ್ದರೆ, ಆಳ್ವಾಸ್ ಪದವಿ ಕಾಲೇಜಿನ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 54.54ರ ಫಲಿತಾಂಶ ದಾಖಲಿಸಿದ್ದಾರೆ. ಗ್ರೂಪ್-2ರಲ್ಲಿ ರಾಷ್ಟ್ರೀಯ ಉತ್ತೀರ್ಣತಾ ಪ್ರಮಾಣ ಶೇ.18.92ರಷ್ಟಿದ್ದರೆ, ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.31.03ರ ಫಲಿತಾಂಶ ಸಾಧಿಸಿದ್ದಾರೆ. ಎರಡೂ ಗ್ರೂಪ್‌ಗಳ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.13.21ರಷ್ಟಿದ್ದರೆ, ಆಳ್ವಾಸ್‌ನ ಆರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.23.08ರ ಫಲಿತಾಂಶ ದಾಖಲಿಸಿದ್ದಾರೆ.ಎರಡೂ ಗ್ರೂಪ್‌ಗಳಲ್ಲಿ ಗಮನಾರ್ಹ ಸಾಧನೆ:ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಸಮಾರಂಭ ಇತ್ತೀಚಿಗೆ ಬೈಂದೂರಿನ ಜೆಎನ್‍ಆರ್ ಕಲಾಮಂದಿರದಲ್ಲಿ ಅದ್ಧೂರಿಯಾಗಿ ಜರುಗಿತು. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಒಕ್ಕೂಟವನ್ನು ಉದ್ಘಾಟಿಸಿ, ಸಮುದಾಯ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದರು. ಯುವ ಪೀಳಿಗೆಯನ್ನು ಅಭಿವೃದ್ಧಿ ಮತ್ತು ಕಲ್ಯಾಣದತ್ತ ಕೊಂಡೊಯ್ಯಲು ವೈಚಾರಿಕ ಬದಲಾವಣೆ ಅಗತ್ಯ ಎಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್, ವೈದ್ಯಕೀಯ ನಿರ್ದೇಶಕರು, ಪ್ರಸಾದ್ ನೇತ್ರಾಲಯ ಮಾತನಾಡಿ, ಕೋಟೆಗಾರ ಎಂದರೆ ಸತ್ಯ, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಇನ್ನೊಂದು ಹೆಸರು ಎಂದು ಅವರು ಬಣ್ಣಿಸಿದರು. ಯುವಕರು ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಅರಿತು ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು. ನೂತನ ಅಧ್ಯಕ್ಷ ಕೊತ್ತಾಲ್ ಪದ್ಮನಾಭ ಶೇರುಗಾರ್ ಗಂಗೊಳ್ಳಿ ಅವರು ಸ್ವೀಕಾರ ಭಾಷಣದಲ್ಲಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯತಂತ್ರದ ಯೋಜನೆಗಳನ್ನು ತಂಡವಾಗಿ ರೂಪಿಸುವುದಾಗಿ ತಿಳಿಸಿದರು. ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರೇಗಾರ್ ಹೆಬ್ರಿ ಸ್ವಾಗತಿಸಿದರು. ಡಾ. ರಾಜೇಂದ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೆಂಗಳೂರು: ದೇವಿಯನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದಾಗ ಆಚರಣೆಗೆ ಅರ್ಥ ಬರುತ್ತದೆ. ಭೀತಿಯಿಂದ ಮಾಡಿದಾಗ ಯಾವುದೇ ಅರ್ಥವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ‘ನವರಾತ್ರ ನಮಸ್ಯಾ’ ಮಹಾ ಸಮಾರೋಪದ ಧರ್ಮ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವಿಯನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ ಕಾಲ ಈ ನವರಾತ್ರಿ. ಹೋಮ, ಪಾರಾಯಣ, ದೀಪ ನಮಸ್ಕಾರ ಎಲ್ಲವೂ ನಮ್ಮೊಳಗಿರುವ ದೇವಿಯ ಸಾನ್ನಿಧ್ಯವನ್ನು ಕಾಣಲು ಇರುವ ಉಪಕರಣಗಳು. ಸತ್ತ್ವ – ರಜೋ – ತಮೋಗುಣಗಳಿಂದಲೇ ಪ್ರಪಂಚ ನಿರ್ಮಿತವಾಗಿದೆ. ಆ ಮೂರು ಗುಣಗಳೇ ತ್ರಿಗುಣಾತ್ಮಿಕಾ ದೇವಿಯಾಗಿದ್ದು, ಆ ಮೂರು ಗುಣಗಳ ಸಮತೋಲನವನ್ನು ಕಲಿತರೆ ನಾವು ಜೀವನವನ್ನು ಗೆಲ್ಲಬಹುದು ಎಂದರು. ನವರಾತ್ರಿಯಲ್ಲಿ ಉಪವಾಸದ ಆಚರಣೆಯು ವಿಶೇಷವಾಗಿದೆ. ಸರಿಯಾದ ಉಪವಾಸದ ಆಚರಣೆಯಿಂದ ಆರೋಗ್ಯ ವೃದ್ಧಿಯನ್ನು ಕಾಣಬಹುದಾಗಿದ್ದು, ಇದು…

Read More