ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕಳೆದ ಡಿಸೆಂಬರ್ನಲ್ಲಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಾಲೆ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 92 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶಾಲೆ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೇಶವ್ ಮಲ್ಯ, ಅಹನಾ ಆರ್. ಶೆಟ್ಟಿ, ಅನ್ವಿತ್ ದೀಪಕ್ ತಂಡೇಲ್, ಅನ್ವಿ ಎಸ್. ಪೂಜಾರಿ, ಸೃಷ್ಟಿ ಬಾಲಪ್ಪ ಲಟ್ಟಿ, ಪ್ರತಿಜ್ಞಾ, ಅಭಿಷೇಕ್ ರಾಮಚಲ್, ರಿಷಾನ್ ಕೆ ಎಸ್, ಋತ್ವಿಕ್ ರವಿ ಕೊನ್ನೂರ್, ಸುಪ್ರೀತಾ ರಾಯಪ್ಪ ಇಡುಡ್ಡಿ, ಪ್ರಶಾಂತ್ ಭೀಮಪ್ಪ ಕೊಲ್ಕಾರ್, ಎಂ. ಅನೂಪ್ ಮಲ್ಯ, ಆದ್ಯಾ ವಿ. ಶೆಟ್ಟಿ, ಪ್ರೀತಮ್, ಪವನ್ ಎ, ನಂದೀಶ್ ಮಲ್ಲಿಕಾರ್ಜುನ್ ಕಡಲಿಗೊನ್ನವರ್, ದರ್ಶನ್ ಚೊಳಪ್ಪ ಸಮಾಜೆ, ಮಾಲಿಯಪ್ಪ ಶಣ್ಮುಖಪ್ಪ ಕಂಬಾರ್, ವಿಶ್ವ ಶಂಕ್ರಪ್ಪ ಉಂಡಿ ಸೇರಿದಂತೆ ಒಟ್ಟು 19…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತಿಯ 2025-26ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯು ಇಲ್ಲಿನ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಮಂಗಳವಾರ ನಡೆಯಿತು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಕುಂದಾಪುರದ ವಕೀಲೆ ಮಲ್ಲಿಕಾ ಜಯಂತ್ ಕಾನೂನು ಮಾಹಿತಿ ನೀಡಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿಯ ಮುಖ್ಯ ಶಿಕ್ಷಕಿ ಚಂದ್ರಕಲಾ ಅವರು ಮಕ್ಕಳ ಹಕ್ಕುಗಳ ಕಾನೂನು ಮಾಹಿತಿ ಮತ್ತು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಅವರು ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದ ಸುಶ್ಮಿತಾ, ಶೈಕ್ಷಣಿಕ ಸಾಧಕರಾದ ಮನಾಲಿ, ಸುಮಂತ್ ಖಾರ್ವಿ ಮತ್ತು ಹಿಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ನವೀನ್, ಅಂಗನವಾಡಿ ಮೇಲ್ವಿಚಾರಕಿ ರೇಖಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಜನ್ಯ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2026-27 ನೇ ಸಾಲಿಗೆ 6 ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಜನವರಿ 25 ಕೊನೆಯ ದಿನವಾಗಿದ್ದು, ಸಮೀಪದ ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರದ ಆರೂರು ದೂ.ಸಂಖ್ಯೆ: 9482625925, ಕಾಪು ತಾಲೂಕಿನ ಕಳತ್ತೂರು ದೂ.ಸಂಖ್ಯೆ: 9535225409, ಪಟ್ಲ ಹಿರೇಬೆಟ್ಟು ದೂ.ಸಂಖ್ಯೆ: 8970292710, ಹೆರಂಜಾಲು ದೂ.ಸಂಖ್ಯೆ: 8073860074, ಕಾರ್ಕಳ ಮಿಯ್ಯಾರು ದೂ.ಸಂಖ್ಯೆ: 9739790298 ಹಾಗೂ ಯಡ್ಯಾಡಿ-ಮತ್ಯಾಡಿ ದೂ.ಸಂಖ್ಯೆ: 9901519126, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ದೂ.ಸಂಖ್ಯೆ: 6363120177 ಹಾಗೂ ಅಜೆಕಾರು ದೂ.ಸಂಖ್ಯೆ: 7204909862, ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ದೂ.ಸಂಖ್ಯೆ: 9482487266 ಹಾಗೂ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ದೂ.ಸಂಖ್ಯೆ: 8867415291 ಅನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಸಿಎಸ್ಐ ಬೋರ್ಡ್ನಿಂದ ನಡೆಸಲ್ಪಡುವ ದೇಶದ ಅತಿ ಕ್ಲಿಷ್ಟಕರ ಪರೀಕ್ಷೆಗಳಲ್ಲಿ ಒಂದಾದ ಸಿಎಸ್ಇಇಟಿ ಜನವರಿ ಆವೃತ್ತಿಯ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ. ದೇಶದಲ್ಲಿ ಕಂಪನಿ ಸೆಕ್ರೆಟರಿ ಪರೀಕ್ಷೆಯ ಅರ್ಹತೆಗಾಗಿ ನಡೆಯುವ ಸಿಎಸ್ಇಇಟಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 60 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಗೊಂಡು ಮುಂದಿನ ಸಿಎಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 200ಕ್ಕೆ ಅತಿ ಹೆಚ್ಚು 169 ಅಂಕವನ್ನು ಪಡೆದ ಸಾಯಿ ಪ್ರಸಾದ್ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ, ಕಿಶನ್ ಎನ್. 157, ಮಂಗಿಲಾಲ್ 157 ಅಂಕವನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಜತಿನ್ ಹರೀಶ್ 144, ಸ್ಪೂರ್ತಿ ಯು.ಎ. 143, ಭೂಮಿಕಾ ಸುಬ್ರಾಯ ಹೆಗ್ಡೆ 137, ಚಿನ್ಮಯ್ ಆರ್. 134, ವರುಣ್ ಚಂದ್ರಶೇಖರ್ 130 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ 120 ಕ್ಕಿಂತ ಅಧಿಕ ಅಂಕಗಳನ್ನು 15 ವಿದ್ಯಾರ್ಥಿಗಳು, 110ಕ್ಕಿಂತ ಅಧಿಕ ಅಂಕಗಳನ್ನು 21 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ ಸಂಸ್ಥೆ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯದಲ್ಲಿ ತೊಡಗಿದೆ. ಕಲೆ ಉಳಿಯಬೇಕಾದರೆ ಅದರ ಬಗ್ಗೆ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಸಾಂಸ್ಕೃತಿಕ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಸುರಭಿಯ ರಜತ ವರ್ಷದ ಪ್ರಯುಕ್ತ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣವು ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರಿಯಾಶೀಲನಾಗುತ್ತಾನೆ ಎಂದರು. ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ ಶುಭಾಶಂಸನೆ ಮಾಡಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗೋವಿಂದ ಎಂ. ಆಶಯ ನುಡಿಗಳನ್ನಾಡಿದರು. ಉದ್ಯಮಿ ರಾಜು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಅರ್ಹತಾ ಪರೀಕ್ಷೆ CSEET)ಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆಯುದರ ಮೂಲಕ CS ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಸಹನಾ(168), ಅಮೂಲ್ಯ ಆರ್ ಶೆಟ್ಟಿ (166), ಧನುಷ್ ಆರ್ ಹೆಬ್ಬಾರ್( 164) ಪ್ರಥಮ್ ಜಿ ಕಾಂಚನ್(159), ಶಮ್ಯ(156) ಶಿವಮ್(155), ಶಯನ್(154), ಶ್ರೀಶಾ ಆರ್ ಶೆಟ್ಟಿ (154), ದ್ರಶ್ಯ ಜಿ ದೇವಾಡಿಗ(153), ಸಂಕೇತ್ ಎಸ್ ಬಿಲ್ಲವ (153), ಆದಿತ್ಯ ಆರ್ ಶೆಟ್ಟಿ (151), ಪ್ರಜ್ವಲ್(148), ಶಮಿತ್ ಬಿ ಪೂಜಾರಿ(145), ಪ್ರೀಥನ್ (142),ಸಂಜಯ್(142), ಶ್ರೀಶಾ ಕೆ.ಎಸ್ (136), ವೈಭವ್(134), ಮೋಹಿತ್(133), ಸ್ಪಂದನ (130),ನಿಶ್ಚಿತ್ (130), ಪೂಜಾರಿ ತನ್ವಿ ಲವ (126), ಶ್ರೇಷ್ಠ ಆರ್ ನಾಯಕ್(125), ಪಲ್ಲವಿ ಆರ್ ಪೂಜಾರಿ (123), ಪ್ರಥಮ್ ಮಯ್ಯ(122), ಹಿರಣ್ಮಯಿ(120), ಸತ್ಯನಾರಾಯಣ (118), ಸಾನಿಕ(116),…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾಗರಾಜ ಗಿಳಿಯಾರು ಅವರು ಮಂಡಿಸಿದ “ಕಮ್ಯೂನಿಟಿ ಇನ್ವೊಲ್ವ್ಮೆಂಟ್ ಅಂಡ್ ಪಾರ್ಟಿಸಿಪೇಷನ್ ಇನ್ ದಿ ಡೆವಲಪ್ಮೆಂಟ್ ಆಫ್ ಟೂರಿಸಮ್ ಇಂಡಸ್ಟ್ರಿ – ಅ ಸ್ಟಡಿ ಇನ್ ದಿ ಕೋಸ್ಟಲ್ ಡಿಸ್ಟ್ರಿಕ್ಟ್ಸ್ ಆಫ್ ಕರ್ನಾಟಕ” (Community Involvement and Participation in the Development of Tourism Industry – A Study in the Coastal Districts of Karnataka) ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್. ಡಿ. ಪದವಿಯನ್ನು ಪ್ರದಾನಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಅಬೂಬಕ್ಕರ್ ಸಿದ್ದೀಕ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮಂಡಿಸಿದ್ದರು. ಅವರು ಗಿಳಿಯಾರು ಗೋಪಾಲ ಆಚಾರ್ಯ ಮತ್ತು ವಿಜಯಲಕ್ಷ್ಮಿ ಆಚಾರ್ಯ ದಂಪತಿಯ ಪುತ್ರ. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಪದವಿ ಪಠ್ಯಪುಸ್ತಕದ ಲೇಖಕರಾಗಿದ್ದು, ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಪಠ್ಯಕ್ರಮ ತಯಾರಿ ಸಮಿತಿಯ ಸದಸ್ಯರಾಗಿ ಸೇವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಶಿ ಗ್ರಾಮದ ಕೊರವಡಿಯ ಪಡಿಯನ ಮನೆಯ ನಿವಾಸಿ ಶೀನ ಮರಕಾಲ ಅವರ ಪುತ್ರ ಸಂತೋಷ್ (38) ಪಂಚಗಂಗಾವಳಿ ನದಿಗೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ. ಸಂತೋಷ್ ಅವರು ಗಂಗೊಳ್ಳಿಯ ಗುರು ಜಟ್ಟಿಗೇಶ್ವರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಜ.19ರ ಬೆಳಗ್ಗೆ ಮೀನುಗಾರಿಕೆ ಮುಗಿಸಿ, ವಾಪಾಸು ಬಂದರಿಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ಬೋಟಿನಲ್ಲಿದ್ದವರೆಲ್ಲ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸಂತೋಷ್ ಅವರ ಸಂಬಂಧಿ ರಾಘವೇಂದ್ರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪರಿಸರದ ಬಗ್ಗೆ ಕಾಳಜಿ ಅತ್ಯಗತ್ಯ ಆದರೆ ಪ್ರಸ್ತುತ ನಿರ್ಲಕ್ಷ್ಯ ಅತಿಯಾಗಿ ಕಾಡುತ್ತಿದೆ. ಇದು ಸರಿಯಲ್ಲ ಮುಂದಿರುವ ದಿನಗಳು ಕ್ಲಿಷ್ಟಕರ ಎಂದು ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ಕೆ. ರಮೇಶ್ ಪ್ರಭು ಹೇಳಿದರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಹಾಗೂ ಚಿತ್ತಾರಿ ದೇಗುಲದ ಸಹಯೋಗದೊಂದಿಗೆ 287ನೇ ಭಾನುವಾರದ ಅಂಗವಾಗಿ ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು. ದಿನದಿಂದ ದಿನಕ್ಕೆ ಪರಿಸರದ ಮೇಲೆ ಮುನುಕುಲ ಹಾನಿಯುಂಟುಮಾಡುತ್ತಿದ್ದಾನೆ ಪ್ಲಾಸ್ಟಿಕ್ ತ್ಯಾಜ್ಯಗಳು ಮನುಕುಲ ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ತಂದೊಡ್ಡುತ್ತಿವೆ ಹೀಗಾದರೆ ಮುಂದಿನ ದಿನಗಳು ಆಪತ್ತು ತಪ್ಪಿದಲ್ಲ ಈಗಲೇ ಜಾಗೃತರಾಗಿ ಎಂದು ಕರೆಕೊಟ್ಟರು. ದೇಗುದ ಪ್ರಮುಖರಾದ ಗೋಪಾಲ್ ಪೈ, ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಣೂರು ಫ್ರೆಂಡ್ಸ್ ಸುರೇಶ್ ಆಚಾರ್ ಸೇರಿದಂತೆ ಹಲವರು ಇದ್ದರು. ಇದೇ ಜ.24ರ ಶನಿವಾರ ಮಣೂರು ಚಿತ್ತಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ಬೈಂದೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ನರಸಿಂಹ ದೇವಾಡಿಗ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾಯಕತ್ವ ಪ್ರತಿಭೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ. ಜೊತೆಗೆ ಉತ್ತಮ ನಾಗರೀಕರನ್ನಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತದೆ ಎಂದು ಹೇಳಿದವರು. ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾ ಶೇಖರ್ ಪೂಜಾರಿ ಅವರು ಉಪಸ್ಥಿತರಿದ್ದು ಜೀವನದಲ್ಲಿ ಕೌಶಲ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ರ್ಯಾಲಿ ಪಕ್ಷಿ ನೋಟವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಮಂಜುನಾಥ್ ಹೆಗಡೆ ಅವರು ಪ್ರಸ್ತುತ ಪಡಿಸಿದರು. ಸಭೆಯಲ್ಲಿ ಜಿಲ್ಲಾ…
