ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸೇವೆಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಸಂಘದ ಅಭಿವೃದ್ಧಿಗೆ ನಿರಂತರ ಪರಿಶ್ರಮ ಜನಮಾನಸದಲ್ಲಿ ಸರಳತೆಯ ಸಾಕಾರಮೂರ್ತಿಯಾಗಿ ಗುರುತಿಸಿಕೊಂಡವರು ಎಚ್. ನಾಗರಾಜ್ ಹಂದೆ. ಇಂತಹ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಅಭಿಪ್ರಾಯಪಟ್ಟರು.

ಅವರು ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಇತ್ತೀಚಿಗೆ ನಿಧನರಾದ ಸಂಘದ ಉಪಾಧ್ಯಕ್ಷ ಎಚ್. ನಾಗರಾಜ್ ಹಂದೆ ಅವರಿಗೆ ಸಂಘದ ವತಿಯಿಂದ ಸಲ್ಲಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಭನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಬಗ್ಗೆ ಅವರಿಗಿರುವ ತುಡಿತ ಕಾಳಜಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಇಂತಹ ಶಕ್ತಿಗಳು ನಮ್ಮನ್ನಗಲಿದ್ದು ಸಂಸ್ಥೆಗೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಎಚ್ ನಾಗರಾಜ್ ಹಂದೆಯವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿದರು. ಕೋಟ ಸಹಕಾರಿ ವ್ಯವಸಾಯಕ ಸಂಘದ ಉಪಾಧ್ಯಕ್ಷ ರವೀಂದ್ರ ಕಾಮತ್, ನಿರ್ದೇಶಕರಾದ ಜಿ. ತಿಮ್ಮ ಪೂಜಾರಿ, ಟಿ. ಮಂಜುನಾಥ ಗಿಳಿಯಾರು, ಉದಯ ಕುಮಾರ್ ಶೆಟ್ಟಿ, ಶೇಖರ್ ಮರಕಾಲ ರಂಜಿತ್ ಬಾರಿಕೆರೆ, ಸಿಇಒ ಶರತ್ ಕುಮಾರ್ ಶೆಟ್ಟಿ, ಪುತ್ರ ಕೃಷ್ಣಪ್ರಸಾದ್ ಹಂದೆ, ನಾಗರಾಜ್ ಹಂದೆ ಅವರ ಸಹೋದರ ಭಾಸ್ಕರ್ ಹಂದೆ, ರಾಘವೇಂದ್ರ ಹಂದೆ ನುಡಿನಮನ ಸಲ್ಲಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು.











