ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗೋಳಿಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜಿ ಸ್ವಾಮೀಜಿ ಅವರ ಚಾತುರ್ಮಾಸ ವ್ರತಾಚರಣೆ – ಬೈಂದೂರು ಚಾತುರ್ಮಾಸಕ್ಕೆ ಬುಧವಾರ ಚಾಲನೆ ದೊರೆಯಿತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಧರ್ಮ ಸಭೆಯನ್ನು ಉದ್ಘಾಟಿಸಿದರು. ವ್ರತಾಚರಣೆ ಸಮಿತಿಯ ಗೌರವಾಧ್ಯಕ್ಷ ಗೋಪಾಲ ಪೂಜಾರಿ, ಅಧ್ಯಕ್ಷ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವರಾದ ಮಂಕಾಳ ಎಸ್. ವೈದ್ಯ, ಶಿವಾನಂದ ನಾಯ್ಕ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಡಾ. ವೈ. ಭರತ್ ಕುಮಾರ್ ಶೆಟ್ಟಿ, ಹರೀಶ್ ಪೂಂಜಾ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ಸುನಿಲ್ ನಾಯ್ಕ್ ಭಟ್ಕಳ, ಸಂಜೀವ ಮಠಂದೂರು, ವೃತಚರಣೆ ಸಮಿತಿ ಸಂಚಾಲಕ ಶಿವರಾಜ್ ಪೂಜಾರಿ ಗೋಳಿಹೊಳೆ, ಪ್ರಮುಖರಾದ ಎಸ್. ರಾಜು ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ದಿನೇಶ ಅಮಿನ್ ಕುಂದಾಪುರ, ಉದ್ಯಮಿ ದಯಾನಂದ ಬಿ ಬೊಂಟ್ರ, ಸೂರಜ್ ನಾಯ್ಕ ಸೋನಿ, ಈಶ್ವರ್ ನಾಯ್ಕ ಮುರ್ಡೇಶ್ವರ, ಹರಿಕೃಷ್ಣ ಬಂಟ್ವಾಳ, ಹೆಚ್.ಆರ್.ನಾಯ್ಕ, ಚಿತ್ತರಂಜನ್, ಗುರುರಾಜ್ ಪಂಜು ಪೂಜಾರಿ, ಗಂಗಾಧರ ಬೆಂಗಳೂರು, ತಮ್ಮೆ ಗೌಡ ಬೆಂಗಳೂರು ವಿಕಾಸ ಪುತ್ತೂರು, ಕಿರಣ್ ಕುಮಾರ್ ಕೋಡಿಕಲ್, ಕೃಷ್ಣಪ್ರಸಾದ ಅಡ್ಯಂತಾಯ, ಅನಿತಾ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಬಳಿಕ ಯಡ್ತರೆಯಿಂದ ಶ್ರೀಗಳ ಪೂರ್ವ ಪ್ರವೇಶದ ಮೆರವಣಿಗೆ, ಶ್ರೀ ಬಿಳಿಶಿಲೆ ವಿನಾಯಕ ದೇವರಿಗೆ ಶ್ರೀ ಗಳಿಂದ ಪೂಜೆ, ಶ್ರೀಗಳ ವ್ಯಾಸಪೀಠದ ಪೀಠಾರೋಹಣ, ಗುರುಪಾದುಕಾ ಪೂಜೆ ನಡೆಯಿತು.
ಕೇಶವ ಬಂಗೇರ ಸ್ವಾಗತಿಸಿದರು. ಕೆ.ಸಿ.ರಾಜೇಶ ಕಾರ್ಯಕ್ರಮ ನಿರೂಪಿಸಿದರು. ಪುಣತ್ ಆರ್.ಗಾಣಿಗ ವಂದಿಸಿದರು.
















