Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಯ್ಯಂಗರ್‌ ಎಂಬಲ್ಲಿ ನಿರ್ಮಾಣಗೊಂಡಿರುವ ಬಿಎಸ್‌ಎನ್‌ಎಲ್‌ ಟವರ್‌ನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು. ಈ ಟವರ್ ಆರಂಭದಿಂದ ಹಯ್ಯಂಗರ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಮೊಬೈಲ್ ಸಂಪರ್ಕ ಹಾಗೂ ಡಿಜಿಟಲ್ ಸೇವೆಗಳ ಸುಲಭ ಲಭ್ಯತೆ ಸಿಗಲಿದೆ. ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ಅನಿತಾ ಆರ್.‌ ಕೆ., ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳಿಗೆ ಸ್ಟ್ರೆಸ್‌ ಮ್ಯಾನೇಜ್ಮೆಂಟ್ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಗಾರದಲ್ಲಿ ಜೀವನ ಕೌಶಲ್ಯ ತರಬೇತುದಾರ ಜೈಕಿಶನ್ ಭಟ್ ಅವರು ಮಾತನಾಡಿ, “ಒತ್ತಡರಹಿತ ಮನಸ್ಥಿತಿಯಿಂದಷ್ಟೇ ಉತ್ತಮ ಗುಣಮಟ್ಟದ ಫಲಿತಾಂಶ ಸಾಧ್ಯ.” ಎಂದು ಹೇಳುವುದರೊಂದಿಗೆ ಒತ್ತಡದ ಕಾರಣಗಳು, ಸಮಯ ನಿರ್ವಹಣೆ ಮತ್ತು ಧನಾತ್ಮಕ ಚಿಂತನೆಯ ಮಹತ್ವ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದದ ಜೊತೆಗೆ ಪ್ರಾಯೋಗಿಕ ಸಲಹೆಗಳನ್ನು ನೀಡಿದರು. ಅಂತಿಮ ಬಿಸಿಎ 120 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮತ್ತು ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ತಿಕ್ ಅತಿಥಿಗಳನ್ನು ಪರಿಚಯಿಸಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳಾದ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ, ನಿರೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿ, ಸಿಂಚನಾ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ವಚ್ಛ ಹಾಗೂ ಹಸಿರು ಪರಿಸರಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ಕೆ. ರಮೇಶ್ ಪ್ರಭು ಹೇಳಿದರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಮಣೂರು ಸಹಯೋಗದೊಂದಿಗೆ ದೇಗುಲದ ಆಡಳಿತ ಮಂಡಳಿಯ ಸಂಯೋಜನೆಯೊಂದಿಗೆ 280ನೇ ವಾರದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಮಣೂರು ಶ್ರೀ ಚಿತ್ತಾರಿ ನಾಗಬ್ರಹ್ಮ ದೇಗುಲದ ವಾರ್ಷಿಕ ದೀಪೋತ್ಸವ ಸಲುವಾಗಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು. ಕಸ ವಿಲೇವಾರಿಯಲ್ಲಿ ಜನಸಾಮಾನ್ಯರು ಅರಿತು ಎಲ್ಲಂದರಲ್ಲಿ ಎಸೆಯದೆ ಸ್ಥಳೀಯಾಡಳಿತ ಘಟಕಕ್ಕೆ ನೀಡಬೇಕು, ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಿ ಪರಿಸರಕ್ಕೆ ಪೂರಕ ವಾತಾವರಣ ಕಲ್ಪಿಸಿ ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಚಿತ್ತಾರಿ ದೇಗುಲ ಆಡಳಿತ ಮಂಡಳಿಯ ಗೋಪಾಲ್ ಪೈ, ನಿತ್ಯಾನಂದ ಪೈ, ಪಂಚವರ್ಣ ಪೂರ್ವಾಧ್ಯಕ್ಷ ಗಿರೀಶ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೆನರಾ ಬ್ಯಾಂಕ್‌ನ ಸ್ಥಾಪಕರಾದ ಅಮ್ಮೆಂಬಲ್  ಸುಬ್ಬ ರಾವ್ ಪೈ ಅವರ 173ನೇ ಜನ್ಮದಿನವನ್ನು ಆಚರಿಸಿಕೊಂಡು ಹಾಗೂ ಮೋಟಾರ್ ರಿವೈಂಡಿಂಗ್ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಉಡುಪಿ ಕೆನರಾ ಬ್ಯಾಂಕ್ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಭಾರತ ದೇಶದಲ್ಲಿ ಕೆನರಾ ಬ್ಯಾಂಕ್ ಮೂರನೇ ಸ್ಥಾನ ಪಡೆದುಕೊಂಡಿದೆ. ಸ್ವಉದ್ಯೋಗ ಮಾಡುವಂತ ಎಲ್ಲಾ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕು ಬೆನ್ನೆಲುಬಾಗಿ ಸಾಲ ಸೌಲಭ್ಯಗಳನ್ನು ಕೊಡುತ್ತದೆ. ಜೊತೆಗೆ ತೆಗೆದುಕೊಂಡ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದರೆ ಯಾವುದೇ ರೀತಿಯ ತೊಂದರೆಗಳು ಉದ್ಯಮದಲ್ಲಿ ಬರುವುದಿಲ್ಲ ಎಂದರು. ಅದೇ ರೀತಿ ಕೆನರಾ ಬ್ಯಾಂಕ್‌ನ ಸ್ಥಾಪಕರಾದ ಅಮ್ಮೆಂಬಲ್ ಸುಬ್ಬ ರಾವ್ ಪೈ ಅವರ ಸಾಮಾಜಿಕ ಕಳಕಳಿಯನ್ನು ಹಾಗೂ ಬ್ಯಾಂಕಿನ ಸ್ಥಾಪನೆಯಿಂದಾಗಿ ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಅಸಾಧಾರಣ ಸಾಧನೆಯನ್ನು ಕೊಂಡಾಡಿದರು. ಹಾಗೆಯೇ ಬ್ಯಾಂಕಿನ ಹೆಚ್ಚಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಆಲೂರು ಗ್ರಾಮದ ಮಾವಿನಗುಳಿ ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಮನೋರಂಜನೆ ಹಾಗೂ ಹಣ ಪಣವಾಗಿ ಕಟ್ಟಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಪವನ್‌ ನಾಯಕ್ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ದಿವಕರ (56), ಗಣೇಶ್‌ (40), ಗಣೇಶ್‌ (29), ಪ್ರಶಾಂತ್‌ (37), ಎಚ್‌. ಬಾಬು (55) ಎಂಬುವರನ್ನು ಬಂಧಿಸಿದ್ದಾರೆ. ಜಯಶೀಲ ಶೆಟ್ಟಿ ಹಾಗೂ ಇತರರು ಸ್ಥಳದಿಂದ ಓಟಿ ಹೋಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕೋಳಿ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 7 ,ಕತ್ತಿ – 05 (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದು ನಗದು ಹಣ 2400/- ರೂಪಾಯಿ ಹಾಗೂ ಮೋಟಾರು ಸೈಕಲ್‌ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ಸಚಿನ್ ಕಲ್ಲಪ್ಪ ಸಂಕ್ರಟ್ಟಿ (28) ಅವರು ನ. 22ರ ರಾತ್ರಿ ಸ್ನೇಹಿತನನ್ನು ಕುಂದಾಪುರಕ್ಕೆ ಬಿಡಲು ಎರಡು ಬೈಕ್‌ಗಳಲ್ಲಿ ತೆರಳುತ್ತಿದ್ದ ವೇಳೆ ಶಂಕರನಾರಾಯಣ ಗ್ರಾಮದ ಕಲ್ಲದ್ದೆ ಬಳಿ ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ. ಸಿದ್ದಾಪುರ ಮೆಸ್ಕಾಂ ಶಾಖೆಯ ಸಿದ್ದಾಪುರ ಕಡ್ರಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಚಿನ್ ನ. 22ರಂದು ಕರ್ತವ್ಯ ಮುಗಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಬೆಳಗಾವಿಗೆ ತೆರಳುವ ಸ್ನೇಹಿತ ಬಸವ ಕಿರಣ ಅವರನ್ನು ಬಿಡಲು ಕುಂದಾಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಚಿನ್ ಅವರು ಒಬ್ಬರೇ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಸ್ನೇಹಿತ ಚಿಂತಾಮಣಿಯ ರಾಹುಲ್ ಆ‌ರ್. ಮಾದರ್‌ ಮತ್ತು ಬಸವ ಕಿರಣ ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದರು. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯವಾಗಿದ್ದ ಅವರನ್ನು 108 ವಾಹನದ ಮೂಲಕ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಳ್ಳಿ ಇವರ ಸಹಯೋಗದಲ್ಲಿ ನಡೆದ 2025 -26ನೇ ಸಾಲಿನ ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ  ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಥಮ ಸ್ಥಾನ ಪಡೆದ 21 ಮಂದಿ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ ಆಗಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗ ( 1ರಿಂದ 4ನೇ ತರಗತಿ) 1. ಪ್ರಣತಿ ಜೆ. ಶೆಟ್ಟಿ,- ೪ನೇ ತರಗತಿ (ಕಥೆ ಹೇಳುವುದು) 2. ರಕ್ಷತ್ ಆರ್.ಸಿ.- ೪ನೇ ತರಗತಿ (ಆಶುಭಾಷಣ) 3.ಮಹಮ್ಮದ್ ಇಲಾಪ್- ೩ ನೇ ತರಗತಿ (ಅರೇಬಿಕ್ ಧಾರ್ಮಿಕ ಪಠಣ) 4.ಸನ್ವಿತ ಯು- 4 ನೇ ತರಗತಿ (ಭಕ್ತಿಗೀತೆ) ಹಿರಿಯ ಪ್ರಾಥಮಿಕ ವಿಭಾಗ (5 ರಿಂದ 7ನೇ ತರಗತಿ)  1.ಮಹಮ್ಮದ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಪ್ರಸಿದ್ಧ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಕಂಬಳದ ಅಭಿಮಾನಿಗಳನ್ನು ರಂಜಿಸುವುದರ ಮೂಲಕ ಸಂಪನ್ನಗೊಂಡಿತು. ಮಣೂರು ಕಂಬಳಗದ್ದೆ ಬೆಟ್ಟುವಿನ ಕಂಬಳಗದ್ದೆಯಲ್ಲಿ ಸಾವಿರಾರು ಕಂಬಳ ಅಭಿಮಾನಿಗಳು ಕೋಣಗಳ ಸರತಿ ಓಟಗಳನ್ನು ಕಣ್ತುಂಬಿಕೊಂಡರು. ಪ್ರಸಿದ್ಧ ಮನೆತನವಾದ ಗಿಳಿಯಾರು ಹಂಡಿಕೆರೆ ಮನೆ, ಮಣೂರು ಶೀನ ಪೂಜಾರಿ, ಭೋಜ ಪೂಜಾರಿ ಹೀಗೆ ಅನೇಕ ಕಂಬಳ ಮನೆತನದ ಮನೆಗಳ ಕೋಣಗಳು ಕಂಬಳ ಗದ್ದೆಯಲ್ಲಿ ಮೇಳೈಸಿತು. ಡೋಲು ಸದ್ದು, ಶೃಂಗರಿಸಿದ ಕೋಣಗಳು ವಿಶೇಷವಾಗಿ ಗಮನ ಸೆಳೆದವು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಜಿಲ್ಲಾ ಪಂಚಾಯತ್ ಹಾಸನ ಹಾಗೂ ಶಾಲಾ ಶಿಕ್ಷಣ ಇಲಾಖೆ, ಹಾಸನ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 12 ಚಿನ್ನ ಮತ್ತು 02 ಬೆಳ್ಳಿ ಪದಕಗಳೊಂದಿಗೆ ಒಟ್ಟು 14 ಪದಕಗಳನ್ನು ಗಳಿಸಿ, ದಕ್ಷಿಣ ಕನ್ನಡ ಜಿಲ್ಲೆ, ಬಾಲಕ ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿಯ ಜೊತೆಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಾಲಕರ ವಿಭಾಗದ 4*100ಮೀ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಫಲಿತಾಂಶ :14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಫಲಿತಾಂಶ: ಆದರ್ಶ್ ಆರ್ – 200ಮೀ (ಪ್ರಥಮ), 100ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಪ್ರಣವ್ ಎಸ್ – ಉದ್ದ ಜಿಗಿತ (ಪ್ರಥಮ), ಸುಭಾಷ್ ಆರ್ – 80ಮೀ ಹರ್ಡಲ್ಸ್ (ಪ್ರಥಮ), 400ಮೀ (ದ್ವಿತೀಯ),…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉತ್ತಮ ಕಲಾವಿದರನ್ನು ಒಳಗೊಂಡಂತಹ ಹಿಂದಿನ ವರ್ಷ 125ಕ್ಕೂ ಹೆಚ್ಚಿನ ಪ್ರದರ್ಶನವನ್ನು ನೀಡಿದ ಕಳವಾಡಿ ಮೇಳವು ಈ ಒಂದು ಸುಸಂದರ್ಭದಲ್ಲಿ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಶ್ರೀ ಈಶ್ವರ ಮಾರಿಕಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ಅಲ್ಲಿ ನಡೆದ ಪ್ರಥಮ ದೇವರ ಸೇವೆ ಆಟದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನೂತನ ರಂಗಸ್ಥಳ ಉದ್ಘಾಟಿಸಿರುವವರು ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಗೋಕುಲ್ ಶೆಟ್ಟಿ  ಹಾಗೂ ಪ್ರಸಂಗ ಕರ್ತರಾದ ಡಾಕ್ಟರ್ ಬಸವರಾಜ್ ಶೆಟ್ಟಿಗಾರ್ ಅವರು ಮಾತನಾಡಿ, ಈ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿ ಮತ್ತು ಮುಂದಿನ ತಲೆಮಾರಿಗೆ ಅರ್ಪಿಸಬೇಕು ಎನ್ನುವುದರೊಂದಿಗೆ ಶುಭಶಂಸನೆಯನ್ನು ನೀಡಿದರು. ಮುಂಬೈ ಹೋಟೆಲ್ ಉದ್ಯಮಿ  ಸಂತೋಷ್ ಕುಮಾರ್ ಶೆಟ್ಟಿ ಅವರು ಎಲ್ಲಾ ಅತಿಥಿ ಗಣ್ಯರೊಂದಿಗೆ ಸೇರಿ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿಯಲ್ಲಿ ಉಪ್ಪುಂದ…

Read More