Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಯುವಕರ ತಂಡ ಸೇರಿ ಒಂದು ವಿನೂತನ ಪ್ರಯತ್ನವಾಗಿ ಮೊಟ್ಟ ಮೊದಲ ಬಾರಿಗೆ ಒಂದು web series ತಯಾರಿಸಿದ್ದಾರೆ. ಮನುಷ್ಯನ ಬದುಕಿನ ಪ್ರತಿಯೊಂದು ಪ್ರತಿಫಲವು ಭೂಮಿಯ ಮೇಲೆ ಅನುಭವಿಸಿಯೇ ತೀರುವಂಥದ್ದು ಇದಕ್ಕೆ ಕರ್ಮ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಕರ್ಮ ಎಂಬ ಶೀರ್ಷಿಕೆಯನ್ನು ಇಟ್ಟು ಮನುಷ್ಯ ತಾನು ಮಾಡುವ ಪಾಪ ಕೃತ್ಯಗಳಿಗೆ ಭೂಮಿಯ ಮೇಲೆ ಅದರ ಎಲ್ಲಾ ಪ್ರಾಯಶ್ಚಿತವನ್ನು  ಅನುಭವಿಸುತ್ತಾನೆ. ಹೆಣ್ಣು ಹೊನ್ನು ಮಣ್ಣು ಇವುಗಳಿಗೆ ನಡೆಯುವ ಅತಿಯಾದ ವ್ಯಾಮೋಹ ಮನುಷ್ಯನನ್ನ ಯಾವ ಮಟ್ಟಕ್ಕೆ ಬೇಕಾದರೂ ಇಳಿಸಬಹುದು ಆದರೆ ಮುಂದಿನ ಕರ್ಮಫಲದ ಯೋಚನೆ ಆತನಿಗಿರುವುದಿಲ್ಲ ಆದರೆ ಮನುಷ್ಯನ ಪಾಪ ಪುಣ್ಯಗಳನ್ನ ದೇವರು ತನ್ನದೇ ಆದ ತಕ್ಕಡಿಯಲ್ಲಿ ಅಳೆದು ತೂಗುತ್ತಿರುತ್ತಾನೆ. ಮಿತಿಮೀರಿದ ವರ್ತನೆ ವಿಕೃತವಾದ ಮನಸ್ಸುಗಳು ಯಾವ ಮಟ್ಟಿಗೆ ಭೂಮಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುವ ಕಥೆಯನ್ನು ಬಹಳ ಸಂಕ್ಷಿಪ್ತವಾಗಿ ಎಳೆ ಎಳೆಯಾಗಿ 8 ಎಪಿಸೋಡ್ ಗಳ ಮೂಲಕ ಬರಲಿದೆ. ಕುಂದಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಅಕ್ಟೋಬರ್ 10ನೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆರೋಗ್ಯ ವಿಜ್ಞಾನ ವಿಭಾಗದ ಕೋರ್ಸುಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ B.Sc. ನರ್ಸಿಂಗ್‌ನ 7ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸಸ್‌ನ 3ನೇ ಬ್ಯಾಚ್ ಹಾಗೂ ಫಿಸಿಯೋಥೆರಪಿಯ 2ನೇ ಬ್ಯಾಚ್‌ಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡಾ ಮೆನೆಜಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಮೊಹಮ್ಮದ್ ಸುಹೈಲ್ PT ಅವರು ಉದ್ಘಾಟನಾ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರತೆ, ಮಾನವೀಯತೆ, ಸಮರ್ಪಣೆ ಹಾಗೂ ಬದ್ಧತೆಯ ಮಹತ್ವವನ್ನು ಒತ್ತಿ ಹೇಳಿದರು. ಸಮರ್ಥ ಹಾಗೂ ಮಾನವೀಯ ಗುಣಗಳನ್ನು ಹೊಂದಿರುವ ಆರೋಗ್ಯ ವೃತ್ತಿಪರರನ್ನು ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಲಿಕಾ ವಾತಾವರಣವನ್ನು ಒದಗಿಸುತ್ತಿರುವ ಐಎಂಜೆ ಸಂಸ್ಥೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿ.ಪಿ.ಟಿ) ಸಂಘದ 2026-31ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ಇತ್ತೀಚಿಗೆ ನಡೆದಿದ್ದು, ಬೈಂದೂರು ತಾಲೂಕು ಅಧ್ಯಕ್ಷರಾಗಿ ಸಂದೀಪ್ ನಾಯ್ಕ್, ಕಾರ್ಯದರ್ಶಿಯಾಗಿ ಚಂದ್ರ ಹಾಗೂ ಖಜಾಂಚಿಯಾಗಿ ರಾಜೇಶ್ವರಿ ಹೆಗ್ಡೆ ಆಯ್ಕೆಯಾದರು. ಉಡುಪಿ ಜಿಲ್ಲಾ ಶಾಖೆಗೆ 2026-31ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಚೈತ್ರ ಕೆ., ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ ಹಾಗೂ ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ ಆಯ್ಕೆಯಾದರು. ಇದನ್ನೂ ಓದಿ ► ರಾಜ್ಯ ಜಿ.ಪಿ.ಟಿ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಗೆ ಚುನಾವಣೆ. ಅಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಆಯ್ಕೆ – https://kundapraa.com/?p=103117 .

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿ.ಪಿ.ಟಿ) ಸಂಘದ ಉಡುಪಿ ಜಿಲ್ಲಾ ಶಾಖೆಗೆ 2026-31ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಚೈತ್ರ ಕೆ. ಪಿ̧. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ ಹಾಗೂ ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ ಆಯ್ಕೆಯಾದರು. ತಾಲೂಕು ಅಧ್ಯಕ್ಷರುಗಳಾಗಿ ಸಂದೀಪ್ ನಾಯ್ಕ (ಬೈಂದೂರು), ಜಯಪ್ಪ ಟಿ (ಕುಂದಾಪುರ), ರವೀಂದ್ರ ಶೆಟ್ಟಿ (ಕಾರ್ಕಳ), ವೀಣಾ (ಬ್ರಹ್ಮಾವರ), ಶಬಾನಾ ಫರ್ವಿನ್ ಶೇಕ್ (ಉಡುಪಿ) ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಪದಾಧಿಕಾರಿಗಳು ಮತ್ತು ನಿರ್ದೇಶಕರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಅವರ 25 ವರ್ಷಗಳ ಸಾರ್ವಜನಿಕ ಹಾಗೂ ರಾಜಕೀಯ ಸೇವಾ ಪಯಣದ “ಸೇವಾ ಸಂಕಲ್ಪ ಅಭಿಯಾನ”ದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ನಡೂರು ಗ್ರೀನ್ ಪ್ಯಾಲೇಸ್ ಸಭಾಂಗಣದಲ್ಲಿ “ನಡೂರು ಮತ್ತು ಕಾಡೂರು ಶಕ್ತಿ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಉತ್ಸವ” ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು, “ಸಂಘದ ಸಾಮಾನ್ಯ ಪ್ರಚಾರಕನಿಂದ ಹಿಡಿದು ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಮೋದಿಜಿ ಅವರು ಸಲ್ಲಿಸಿರುವ 25 ವರ್ಷಗಳ ನಿಷ್ಕಳಂಕ ಸೇವೆ ಇಡೀ ಜಗತ್ತಿಗೆ ಮಾದರಿ. ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ರಾಜಕಾರಣ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಂತ್ಯೋದಯದ ಮಂತ್ರದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದೇ ಈ ಅಭಿಯಾನದ ಮುಖ್ಯ ಉದ್ದೇಶ” ಎಂದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ “ಸಮಾಜದ ಕಟ್ಟಕಡೆಯ ಮಗುವಿನ ಶಿಕ್ಷಣ, ಪೋಷಣೆಗಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಬೈಂದೂರು ಮತ್ತು ಕುಂದಾಪುರ ಎರಡೂ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಂಡ್ಲೂರು ಹಳೆ ಸೇತುವೆ ವಿಚಾರದಲ್ಲಿ ಹಳೆ ಸೇತುವೆಯನ್ನು ತೆರವುಗೊಳಿಸಿದರೆ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಉಡುಪಿ ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಅವರು ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಜಂಟಿಯಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕರು ಮಾತನಾಡಿದರು. ಕಂಡ್ಲೂರು ಹಳೆ ಸೇತುವೆಯು ರಾಜ್ಯ ಹೆದ್ದಾರಿಯ ಪ್ರಮುಖ ಮಾರ್ಗವಾಗಿದ್ದು, ಈ ಮಾರ್ಗದ ಮೂಲಕ ಸಾವಿರಾರು ಜನರು ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಾರೆ. ಮೀನುಗಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ದಿನನಿತ್ಯ ಈ ಸೇತುವೆಯನ್ನು ಅವಲಂಬಿಸಿದ್ದಾರೆ. ಒಂದು ವೇಳೆ ಹಳೆ ಸೇತುವೆಯನ್ನು ಈಗಲೇ ಕೆಡವಿದರೆ, ಹೊಸ ಸೇತುವೆ ನಿರ್ಮಾಣ ಪೂರ್ಣಗೊಳ್ಳುವವರೆಗೂ ಜನರು 15-20 ಕಿ.ಮೀ. ಸುತ್ತುವರೆದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014ನೇ ಬ್ಯಾಚ್‌ನ ಬಿಬಿಎ ಹಳೆ ವಿದ್ಯಾರ್ಥಿಗಳ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಜೀವನದ ಪಯಣದಲ್ಲಿ ಜ್ಞಾನದ ಬೆಳಕಾಗಿ ತಮ್ಮನ್ನು ರೂಪಿಸಿದ ಗುರುಗಳನ್ನು ಗೌರವಿಸಿ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ತಮ್ಮ ಜೀವನದಲ್ಲಿ ದೊರೆತ ಸ್ಪೂರ್ತಿಯನ್ನು ಸ್ಮರಿಸುವುದರೊಂದಿಗೆ ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡು ಕಾಲೇಜಿನೊಂದಿಗೆ ತಮ್ಮ ಬಾಂಧವ್ಯ ಮುಂದುವರಿಸುವುದಾಗಿ ತಿಳಿಸಿದರು. ಸಂಸ್ಥೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಉಪನ್ಯಾಸಕರಾದ ಪಂಜು, ಮಣಿಕಂಠ, ಸುಚಿತ್ರಾ, ಜ್ಯೋತಿ, ಮಂಜುಳ, ಭಾಸ್ಕರ ಬಿಲ್ಲವ, ಹರೀಶ್, ಉದಯ್, ದೀಪಕ, ಡಾ.ರವಿಚಂದ್ರ, ಶ್ರೀಕಾಂತರಾಜ, ಕ್ರಿಸ್ಟಿ ಶರಣ್ಯ, ನಾಗವೇಣಿ ಗೌರವವಂದನೆ ಸ್ವೀಕರಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಉಮೇಶ ಮಯ್ಯ, ಡಾ. ರಘುನಾಯ್ಕ, ಪಾಂಡುರಂಗ, ಪ್ರಾಧ್ಯಾಪಕಿ ಚಿತ್ರ ಪಡೆಯಾರ್, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕಿ ಮಮತಾ, ಕಚೇರಿ ಸಿಬ್ಬಂದಿ ವಿಜಯ ಶೆಟ್ಟಿ, ರಾಜೇಶ್ವರಿ, ಮಂಜುನಾಥ ಉಪಸ್ಥಿತರಿದ್ದರು. ಮಿತ್ರ ಸೇವಾಶ್ರಮ ಸಮಿತಿಯ ಸಾಧನೆ ಸ್ಮರಿಸಲಾಯಿತು. ಚೇತನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಬೆಂಗಳೂರು ಇವರ ವತಿಯಿಂದ ಪ್ರಸಕ್ತ ಸಾಲಿಗೆ ಪ.ಜಾತಿ/ಪ.ಪಂ/ಹಿಂದುಳಿದ ವರ್ಗ/ಸಾಮಾನ್ಯ ವರ್ಗದ ಗ್ರಾಮೀಣ ರೈತ ಮಹಿಳೆಯರಿಂದ 5 ವಾರದ 20 ದೇಶಿ/ನಾಟಿ ಕೋಳಿ ಮರಿಗಳ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ರೈತ ಮಹಿಳೆಯರು ಅಕ್ಟೋಬರ್ 31ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯ ಸಂಸ್ಥೆ, ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ  ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದುಟಾಗುವ ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಉಡುಪಿ ಕ್ರೈಂ ಡಿಪಾರ್ಟ್ಮೆಂಟ್ನ ನಿಲೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣ ಅಡಿಗ ಸರ್ವರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ರಜೆಯಲ್ಲಿ ಊರಿಗೆ ಬಂದಿರುವ ಯುವತಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿರುವ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕೆ. ಆಯಿಶಾ ಶವಾನಾ (23) ನಾಪತ್ತೆಯಾದ ಯುವತಿ. ಬೆಂಗಳೂರಿನಲ್ಲಿ ಮೊಬೈಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರು 15 ದಿನಗಳ ಹಿಂದೆ ಮನೆಗೆ ಬಂದಿದ್ದು ಮನೆಯವರು ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ಮದುವೆಯಾಗಲು ನಿರಾಕರಿಸಿದ್ದರೆನ್ನಲಾಗಿದೆ. ಅ. 5ರಂದು ಬೆಳಗ್ಗೆ 4.30ರ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದು ಎಲ್ಲೂ ಪತ್ತೆಯಾಗಿಲ್ಲ ಎಂದು ಮನೆಯವರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More