Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ:  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಿ., ಮೂಡುಬಿದಿರೆ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬುಧವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ನಾರಾವಿಯ ಪ್ರಸಿದ್ಧ ಆಯುರ್ವೇದ ವೈದ್ಯ, ಡಾ. ಎನ್ ಶೀತಲ್‌ಕುಮಾರ್, ಬೆಂಗಳೂರಿನ ಭಾರತೀಯ ಆಯುರ್ವೇದ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ರಸಶಾಸ್ರ್ತ ಮತ್ತು ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಜಗದೀಶ್ ಕೋನರೆಡ್ಡಿ, ಕೇರಳದ ಕೊಟ್ಟಕ್ಕಲ್, ವೈಧ್ಯ ಶಾಲೆಯ ಗುಣಮಟ್ಟ ಭರವಸೆ ವಿಭಾಗದ ವೈದ್ಯಾಧಿಕಾರಿ ಮತ್ತು ವಿಭಾಗ ಮುಖ್ಯಸ್ಥ ಡಾ. ಜಿತೇಶ್ ಎಂಕೆರಿಗೆ ಶಾಲು, ಹಾರ, ಪ್ರಶಸ್ತಿ ಫಲಕ ಹಾಗೂ ನಗದು ಹಣ ಹತ್ತು ಸಾವಿರದೊಂದಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಯಾವುದೇ ವೃತ್ತಿಯಾದರೂ ಅದರ ಬಗ್ಗೆ ಗೌರವ ಇರಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು. ಪರಿಸರ ರಕ್ಷಣೆ ಮುಖ್ಯವಾಗಿದ್ದು, ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಮಹತ್ಕಾರ್ಯದಲ್ಲಿ ಮಕ್ಕಳು ಕೈಜೋಡಿಸಿದರೆ ದೇಶ ಉದ್ಧಾರವಾಗಲು ಸಾಧ್ಯ ಎಂದು ರೋಟರಿ ಡಿಸ್ಟ್ರಿಕ್ ಚೇರ್ಮನ್ ವೊಕೇಶನಲ್ ಸರ್ವಿಸ್ ಪ್ರಭಾಕರ ಕುಂಭಾಶಿ ಹೇಳಿದರು. ಅವರು ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಶಾಲೆಯ ದಿ. ಕೊಂಚಾಡಿ ಗಣಪತಿ ಶೆಣೈ ವೇದಿಕೆಯಲ್ಲಿ ಜರಗಿದ ಪರಿಸರ ಹಾಗೂ ಕಡಲಾಮೆ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಸರಕಾರಿ ಶಾಲೆ ಎಂಬ ಕೀಳರಿಮೆ ಇರಬಾರದು. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಮಾಜದ ಕಟ್ಟ ಕಡೆಯ ಸಹಸ್ರಾರು ಮಂದಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಶುಚಿತ್ವ, ಪಾಠೇತರ ಚಟುವಟಿಕೆಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಟವಾಡಲು ತೆರಳಿದ್ದ ಬಾಲಕ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದ ಘಟನೆ ಬುಧವಾರ ಸಂಜೆ ನಡೆದಿದ್ದು, ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗಂಗೊಳ್ಳಿ ಪಿಎಸ್‌ಐ ಪವನ್‌ ನಾಯಕ್‌ ನೇತೃತ್ವದ ಪೊಲೀಸರ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಬಾಲಕನ್ನು ಪತ್ತೆ ಮಾಡಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆಗಿದ್ದಿಷ್ಟು:ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕನೋರ್ವ ಶಾಲೆ ಮಗಿಸಿ ಮನೆಗೆ ಹಿಂದಿರುಗಿದ್ದ. ಅಲ್ಲಿಂದ ಬೆಣ್ಗೇರೆ ನಾಗ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ಆಡವಾಡಲು ತೆರಳಿದ್ದ. ಸಂಜೆ 06:30ರ ತನಕವೂ ಬಾಲಕ ಅದೇ ಪರಿಸರದಲ್ಲಿ ಆಟವಾಡುತ್ತಿರುವುದನ್ನು ಆತನ ಪಕ್ಕದ ಮನೆಯವರೂ ಗಮನಿಸಿದ್ದರು. ಆದರೆ ರಾತ್ರಿ 07:00 ಗಂಟೆ ಆದರೂ ಆತ ಮನೆಗೆ ಹಿಂದಿರುಗದೇ ಇರುವುದನ್ನು ಗಮನಿಸಿದ ಬಾಲಕನ ಮಾವ ಪಕ್ಕದ ಮನೆ ಹಾಗೂ ಸುತ್ತಮುತ್ತಲು ವಿಚಾರಿಸಿದ್ದಾರೆ. ಎಲ್ಲಿಯೂ ಬಾಲಕನ ಸುಳಿವು ಸಿಗದಿದ್ದಾಗ ಊರವರು ಸೇರಿ ಹುಡುಕಾಟ ನಡೆಸಿದ್ದಾರೆ. ಬಾಲಕ ಆಡವಾಡುತ್ತಿದ್ದ ಸುತ್ತಲಿನ ಪರಿಸರದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಹುಡುಕಾಟ ನಡೆಸಿದರೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಗೋವಾದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಂಕುಕೈ ಕಪ್ 2026 ಕರಾಟೆ ಚಾಂಪಿಯನ್‌ಶಿಷ್‌ನಲ್ಲಿ ಮುಕೆಂಕೈ ಕರಾಟೆ ಡೂ ಫೆಡರೇಷನ್ ಆಫ್ ಇಂಡಿಯಾಗೆ ಸೇರಿದ ವಿದ್ಯಾರ್ಥಿಗಳು ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ವಿವಿಧ ವಿಭಾಗಳಾದ ಕಟಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ಆರು ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು. ಕುಮಿಟೆ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ, ಐವರು ದ್ವಿತೀಯ ಸ್ಥಾನ, ಒರ್ವ ತೃತೀಯ ಸ್ಥಾನ ಪಡೆದು ನಮ್ಮ ಫೆಡರೇಷನ್‌ಗೆ ಹೆಮ್ಮೆ ತಂದಿದ್ದಾರೆ. ಈ ಸಾಧನೆಗೆ ಮಕ್ಕಳ ಶಿಸ್ತುಬದ್ಧ ತರಬೇತಿ, ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಗುರುಗಳ ಸಮರ್ಪಿತ ಮಾರ್ಗದರ್ಶನವೇ ಮುಖ್ಯ ಕಾರಣವಾಗಿದೆ ಎಂದು ತರಬೇತುದಾರ ಮಂಜುನಾಥ್ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆಲವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು. ಅವರು ಇಲ್ಲಿನ ಪುರಸಭೆಯಲ್ಲಿ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀಪತಿ ಕಲ್ಕೂರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪುರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಫಲಪುಷ್ಪ ಹಾಗೂ ಸ್ಮರಣಿಕೆಗಳನ್ನು ನೀಡಿ ನೆನಪುಗಳನ್ನು ಹಂಚಿಕೊಂಡರು. ಮಾಜಿ ಪುರಸಭಾ ಸದಸ್ಯರು, ಗುತ್ತಿಗೆದಾರರು ಭಾಗವಹಿಸಿ ನಿವೃತ್ತರಿಗೆ ನೆನಪಿನ ಕಾಣಿಕೆ ನೀಡಿ ಅವರ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು. ಕಛೇರಿ ವ್ಯವಸ್ಥಾಪಕ ಜಿ. ಸೂರ್ಯಕಾಂತ ಖಾರ್ವಿ ನಿರೂಪಿಸಿ, ಸಹಾಯಕ ಗಣೇಶ್ ಪಿ. ವಂದಿಸಿದರು. ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಕಲ್ಕೂರ್ ಅವರಿಗೆ ಶುಭಕೋರಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತೀಯ ಪರಂಪರೆಗಳ ಅರಿವು ನೀಡುತ್ತಾ ಬಂದ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಜರ್ಮನಿ ಮೂಲದ ಜೂಡಿತ್ ಹೆರ್ಮನ್ ತಮ್ಮ ಮಗನ ಜೊತೆಗೆ ಇತ್ತೀಚಿಗೆ ಭೇಟಿ ನೀಡಿದರು. ಹೃಷಿಕೇಶದ ಪ್ರಸಿದ್ಧ ವೈದ್ಯರಾದ ಡಾ| ತನು ವರ್ಮ, ಮಂಗಳೂರಿನ ಶ್ರೀ ಕಿಶೋರ್ ಕೂಡ ಅವರ ಜೊತೆಗಿದ್ದರು. ಶಾಲೆಯ ಮತಂಗವನ, ಶೃಂಗವನ, ಕಣಾದವನ, ಘಟೋತ್ಕಚ, ವ್ಯಾಯಾಮಸ್ಥಳ, ಶಿಬಿವನ, ತರಗತಿ, ವಸತಿ ನಿಲಯವೇ ಮೊದಲಾದ ಪ್ರದೇಶಗಳಿಗೆ ಹೋಗಿ ಮಾಹಿತಿಗಳನ್ನು ಪಡೆದುಕೊಂಡರು. ಅಧ್ಯಯನ, ಅಧ್ಯಾಪನದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ಸಂತಸವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಜರ್ಮನಿ ಮತ್ತು ಭಾರತದ ನಡುವಿನ ಭಿನ್ನತೆಯ ಜೊತೆಗೆ ಸಾಮಾನ್ಯ ಅಂಶಗಳನ್ನು ಮಗನಾದ ಆಲ್ಬರ್ಟೊ ಡೆಸ್ಕಾನಿಯೋವಿಗೆ ಪರಿಚಯಿಸಲು ಭಾರತದ ಬೇರೆ ಬೇರೆ ಸ್ಥಳಗಳನ್ನು ಪ್ರವಾಸ ಮಾಡುತ್ತಿದ್ದೇವೆ. ಇದರಿಂದ ಜಗತ್ತನ್ನು, ಜನರನ್ನು  ಹಾಗೂ ಶಾಲೆಗಳ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು. ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣದ ಅಧ್ಯಕ್ಷರಾಗಿ ಯಾದವ ಕರ್ಕೇರ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪುನೀತ್ ಪೂಜಾರಿ, ಅಧ್ಯಕ್ಷರಾಗಿ ಯಾದವ್ ಕರ್ಕೇರ, ಉಪಾಧ್ಯಕ್ಷರಾಗಿ ಶಬರೀಷ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಅಕ್ಷಿತ್ ಪೂಜಾರಿ, ಕೋಶಾಧಿಕಾರಿಯಾಗಿ ಕಾರ್ತಿಕ್ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಖಿಲ್ ಖಾರ್ವಿ, ಜೊತೆ ಕಾರ್ಯದರ್ಶಿ ಪ್ರತಾಪ್ ಸುವರ್ಣ, ಶ್ರೇಯಸ್ ಕರ್ಕೇರ ಜೊತೆ ಕೋಶಾಧಿಕಾರಿ ವಿವೇಕ್ ಖಾರ್ವಿ, ಭುವನ್ ಬಂಗೇರ,ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ದರ್ಶನ್ ಕಾಂಚನ್, ಅಂಕಿತ್ ಕುಮಾರ್, ಪ್ರಚಾರ ಸಮಿತಿ ಸದಸ್ಯರಾಗಿ ಕಾರ್ತಿಕ್ ಪಾಲನ್, ರೋಹಿತ್ ಕುಂದರ್, ಸೌರವ್ ಪೂಜಾರಿ,ಸಮಿತಿ ಸದಸ್ಯರಾಗಿ ಅಭಿಷೇಕ್ ಪೂಜಾರಿ, ಚೇತನ್ ಕುಂದರ್, ಸಾಗರ್ ಹೊಸಬೆಂಗ್ರೆ, ತರುಣ್ ಕುಂದರ್, ವಿಲಾಸ್ ಖಾರ್ವಿ, ಆಕಾಶ್ ಕುಂದರ್, ಧನುಷ್ ಕುಂದರ್, ಸಾತ್ವಿಕ್ ಕುಂದರ್, ಪ್ರಜ್ವಲ್ ಖಾರ್ವಿ, ಮಾಧವ ಕುಂದರ್, ಶರಣ್ ಪೂಜಾರಿ, ಯೋಗೇಶ್ ಕರ್ಕೇರ, ಕಾರ್ತಿಕ್ ಪೂಜಾರಿ, ಪ್ರಜ್ವಲ್ ಪೂಜಾರಿ, ಸುಶಾಂತ್ ಪೂಜಾರಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026ರ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್‌ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜಿಲ್ಲಾದ್ಯಂತ ಇಲಾಖೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರಿಸಲಾದ ಪೊಲೀಸ್‌ ಟೆಂಟ್‌ ಹೌಸ್‌ ಮಾತ್ರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದಲ್ಲಿ ಸಡಕ್‌ ಸುರಕ್ಷಾ ಜೀವನ್‌ ರಕ್ಷಾ ಎಂಬ ಘೋಷಣೆ ಅಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂತೆಕಟ್ಟೆಯಲ್ಲಿ ಪಿಎಸ್‌ಐ ಅನಿಲ್‌ ಹಾಗೂ ಪೊಲೀಸ್‌ ಸಿಬ್ಬಂದಿಗಳು ವಾಹನ ಚಾಲಕರುಗಳನ್ನು  ಹೂ ಗುಚ್ಚ ನೀಡಿ ಆಹ್ವಾನಿಸಿ, ಅವರ ಆದ್ಯತೆಗೆ ತಕ್ಕಂತೆ ಚಹಾ, ತಿಂಡಿ, ತಂಪುಪಾನೀಯಗಳನ್ನು ನೀಡಿ ಬಳಿಕ ಅವರಿಗೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಏಳು ದಿನಗಳ ಕಾಲ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯೊಳಗೆ ಗಣಿ ಮತ್ತು ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ವಾಹನಗಳು 60 ಕಿ.ಮೀ ಮಿತಿಯೊಂದಿಗೆ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ಧರಿಸಿದೆ‌. ಈ ಹಿಂದೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಟಿಪ್ಪರ್ ವಾಹನಗಳನ್ನು ವೇಗವಾಗಿ ಓಡಿಸುವುದಕ್ಕೆ ಕಡಿವಾಣ ಹಾಕುವುದು ಒಂದು ಕಾರ್ಯಸೂಚಿಯಾಗಿತ್ತು. ಅದರಂತೆ ಗಣಿ ಮತ್ತು ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ವಾಹನಗಳು 60 ಕಿ.ಮೀ ಮಿತಿಯೊಂದಿಗೆ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಎಲ್ಲಾ ಲಾರಿ ಚಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗುವುದು. ಕುಂದಾಪ್ರ ಡಾಟ್ ಕಾಂ. ಮುಂದಿನ ದಿನಗಳಲ್ಲಿ ಮಾಹಿತಿ ಹಂಚುವ ಉದ್ದೇಶದಿಂದ ಎಲ್ಲಾ ಲಾರಿ ಚಾಲಕರಿಗೆ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ. ಬಸ್‌ಗಳಿಗೆ ಬಾಗಿಲು ಕಡ್ಡಾಯ:ಜನವರಿ 20ರ ಒಳಗಡ ಬಸ್‌ಗಳಲ್ಲಿ ಬಾಗಿಲುಗಳನ್ನು ಅಳವಡಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಂಗಳೂರು ರಾಷ್ಟ್ರೀಯ ಹೆದ್ದಾರಿ-66ರ ಡಿವೈಡರ್ ಬಳಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕೋಟೇಶ್ವರದ ಅಂಕದಕಟ್ಟೆ ಬಳಿ ವಾಸವಿದ್ದ ಕೃಷ್ಣಮೂರ್ತಿ ಅಡಿಗ (57) ಅವರು ಮೃತ ವ್ಯಕ್ತಿ. ಕೃಷ್ಣಮೂರ್ತಿ ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ತಮ್ಮ ಹೊಸ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟವರು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆದಾಗ, ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಟಿಪ್ಪರ್ ಗುದ್ದಿದ್ದು ರಸ್ತೆಗೆಸೆಯಲ್ಪಟ್ಟ ಅವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆರೋಪಿ ಟಿಪ್ಪರ್ ಚಾಲಕ ಶಶಾಂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಕೃಷ್ಣಮೂರ್ತಿ ಅವರು ಮೂಲತಃ ಆಲೂರಿನವರಾಗಿದ್ದು, ಕೋಟೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕುಂದಾಪುರ ನಗರ ಠಾಣೆ ಪೊಲೀಸ್, ಸಂಚಾರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More