ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸುಮಾರು 475 ವರ್ಷಗಳ ಇತಿಹಾಸವಿರುವ ತಾಲೂಕಿನ ಬಸ್ರೂರಿನ ಮಂಡಿಕೇರಿ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 17ನೇ ವರ್ಷದ ಬ್ರಹ್ಮರಥೋತ್ಸವವು ಶುಕ್ರವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ಬ್ರಹ್ಮರಥೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞ ವಿಧಿಗಳು, ಮಹಾ ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿ ಪ್ರದಾನ, ಸಾಯಂಕಾಲ ರಥಾರೋಹಣ, ಮಹಾಸಮಾರಾಧನೆ ನಡೆಯಿತು. ರಾತ್ರಿ ರಥೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಂಜೆ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.ಆಯು ಭಟ್ ಅಂಬಲಪಾಡಿ ಮತ್ತು ವೃಂದದವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ನಡೆಯಿತು. ಶನಿವಾರ ಅವಭ್ರತ ಉತ್ಸವ ನಡೆಯಿತು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ದೇವಸ್ಥಾನದ ಪ್ರಧಾನ ಅರ್ಚಕರು, ಪುರೋಹಿತರು, ಕುಳಾವಿ ಭಜಕರು. ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉತ್ಸವಗಳು ಬದುಕಿನ ಬದಲಾವಣೆಗೆ ನಾಂದಿಯಾಗಲಿ. ಸನ್ಮಾರ್ಗದಲ್ಲಿ ಬದುಕುವ ಜತೆಗೆ ಧರ್ಮದ ಹಾದಿಯಲ್ಲಿ ಸಾಗುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಬೈಂದೂರು ಉತ್ಸವ ಸಮಿತಿ ನೇತೃತ್ವದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಆಯೋಜಿಸಲಾದ ಮೂರು ದಿನಗಳ ಕಾಲ ಬೈಂದೂರು ಉತ್ಸವ -2026 ಉದ್ಘಾಟಿಸಿ ಮಾತನಾಡಿ ಕಲೆಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬೈಂದೂರು ಬಹಳ ಹಿಂದಿನಿಂದಲೂ ಪ್ರಸಿದ್ದಿ ಪಡೆದಿದೆ. ಹತ್ತಾರು ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಸ್ಥಳಗಳು ಬೈಂದೂರಿನಲ್ಲಿದೆ ಶ್ರೀ ಕ್ಷೇತ್ರದ ವತಿಯಿಂದ ಇವುಗಳ ಅಭಿವೃದ್ಧಿಗೆ ನಿರಂತರ ಸಹಾಯ ನೀಡಲಾಗಿದೆ ಎಂದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕೊಲ್ಲೂರು ಉಪನಗರವಾಗಿ ಬೈಂದೂರು ಬೆಳೆಯಬೇಕಿದೆ. ಪ್ರತಿ ಗ್ರಾಮಗಳಲ್ಲಿ ಗ್ರಾಮೋತ್ಸವ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಘಟಿಸಿ ಬೈಂದೂರು ಉತ್ಸವದಲ್ಲಿ ಸರಕಾರದ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿದ ಕಲ್ಪನೆ ಅತ್ಯುತ್ತಮವಾಗಿದೆ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಖಾಸಗಿ ಬಸ್ಗಳನ್ನು ಓವರ್ಟೇಕ್ ಮಾಡುವ ವೇಳೆ ಬೈಕ್ ಸವಾರ ಯುವಕ ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್ಗೆ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಶೆಟ್ರಕಟ್ಟೆ ತಿರುವಿನಲ್ಲಿ ಶನಿವಾರ ನಡೆದಿದೆ. ಸೌಕೂರು ನಿವಾಸಿ ವಿಜಯ್ ದೇವಾಡಿಗ (26) ಮೃತ ಯುವಕ. ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯ್ ಶನಿವಾರ ಬೆಳಿಗ್ಗೆ ಬೈಕಿನಲ್ಲಿ ತ್ರಾಸಿಯಿಂದ ಸೌಕೂರು ಕಡೆಗೆ ತೆರಳುತ್ತಿದ್ದ ವೇಳೆ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಅನ್ನು ಓವರ್ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ವಿಜಯ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವೆ ಶೆಟ್ರಕಟ್ಟೆಯಲ್ಲಿ ನಡೆದ ಅಪಘಾತದ ಕರಾಳತೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಚಿಟ್ ಫಂಡ್ ನಲ್ಲಿ ‘ಸಾವಿರ ಪಾವತಿಸಿದರೆ ಲಕ್ಷ ಸಾಲ ನೀಡುವುದಾಗಿ ಹೇಳಿದ್ದನ್ನು ನಂಬಿದ್ದ ನಾಡ ಪಡುಕೋಣೆಯ ಒಂಬತ್ತು ಮಹಿಳೆಯರನ್ನು ಯಾಮಾರಿಸಿದ ಘಟನೆ ನಡೆದಿದೆ. ಗಂಗೊಳ್ಳಿ ಪೊಲೀಸರ ಕ್ಷೀಪ್ರ ಕಾರ್ಯಚರಣೆಯಿಂದಾಗಿ ಮೂರು ತಿಂಗಳಿಂದ ಕಾಯುತ್ತಿದ್ದ ಚಿಟ್ ಫಂಡ್ ಹಣ 10 ಗಂಟೆಯಲ್ಲಿ ಮರಳಿ ಪಡೆಯುವಂತಾಗಿದೆ. ಆಗಿದ್ದೇನು? ಪಡುಕೋಣೆಯ ಮಹಿಳೆಯರು ತಮ್ಮ ಪರಿಚಯದ ಮಹಿಳೆ ಮೂಲಕ ಯಾವುದೋ ಅನಾಮಧೇಯನನ್ನು ಚಿಟ್ ಫಂಡ್ ಸಂಸ್ಥೆಯೊಂದರ ಉಡುಪಿ ಜಿಲ್ಲಾ ಮೆನೆಜರ್ ಎಂದು ನಂಬಿ ಚಿಟ್ ಫಂಡ್ಗೆ ಹಣ ನೀಡಿದ್ದರು. ಕೆಲವು ಸಮಯದ ಬಳಿಕ ಸಂಪರ್ಕಕ್ಕೆ ಸಿಗದ ಆತ ಊರು ಬಿಟ್ಟಿದ್ದ ಮೋಸ ಹೋಗುತ್ತಿದ್ದೇವೆ ಎಂದು ಅಂದಾಜಾಗಿ ಕಟ್ಟಿದ ಹಣ ಮರಳಿ ಕೇಳಿದರು. ಸತತ ಮೂರು ತಿಂಗಳಿನಿಂದ ಹಣ ವಾಪಸು ನೀಡುವಂತೆ ದುಂಬಾಲು ಬಿದ್ದರೂ ಕಟ್ಟಿಸಿಕೊಂಡಾತ ಹಣ ನೀಡಿಲ್ಲ. ಹಾಗಾದರೆ ಒಪ್ಪಂದದಂತೆ ಸಾಲ ಕೊಡಿ ಎಂದಾಗ, ಸರಕಾರಿ ನೌಕರರ ಭದ್ರತೆ ಬೇಕು ಎಂದು ಕೇಳಿದ. ಇತ್ತ ಸಾಲವೂ ಇಲ್ಲ ಅತ್ತ ಹಣವೂ ವಾಪಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಚಾಮರಾಜನಗರ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ಬಾಲಕರ ವಿಭಾಗದಲ್ಲಿ 24 ಮತ್ತು ಬಾಲಕಿಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎರಡು ಬಾಲಕರ ಹಾಗೂ ಎರಡು ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 4 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಾಗು ನಾಕೌಟ್ ಮಾದರಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ‘ಎ’ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಆಳ್ವಾಸ್ನ ಬಾಲಕ ಹಾಗೂ ಬಾಲಕಿಯರ ‘ಬಿ’ ತಂಡಗಳು ರನ್ನರ್ಸ್ ಆಪ್ ಪ್ರಶಸ್ತಿಯನ್ನು ಪಡೆದು ಪ್ರಾಬಲ್ಯ ಮೆರೆದವು. ಸೆಮಿಫೈನಲ್ಸ್ನಲ್ಲಿ ಆಳ್ವಾಸ್ ಬಾಲಕರ ‘ಎ’ ತಂಡವು ಚಾಮರಾಜನಗರದ ಜಿಲ್ಲಾ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ಸೋಲಿಸಿತ್ತು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಎ’ ತಂಡವು ಮೂಡಿಗೆರೆ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ನೇರ ಸೆಟ್ ನಿಂದ ಸೋಲಿಸಿ ಫೈನಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಗುರುವಾರ ಸಂಭ್ರಮದ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. ಸಾಲಿಗ್ರಾಮದ ವಾಹನ ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಏರ್ಪಡಿಸಿದ ಅಯೋಧ್ಯ ಶ್ರೀ ರಾಮ ಮಂದಿರ ಮೂರನೆ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವೈಭವದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಯಿತು. ಸಂಜೆ 7ಗಂಟೆಗೆ ಶ್ರೀ ಭಗವತ್ ಭಜನಾ ಮಂಡಳಿ ಕೋಟತಟ್ಟು ಪಡುಕರೆ ಅಲ್ಲಿ ಪುಟಾಣಿಗಳಿಂದ ಕುಣಿತ ಭಜನೆ, ನಂತರ ಶ್ರೀರಾಮ ಪ್ರಸಾದ ವಿತರಣೆ, 8.ಗಂಟೆಯಿಂದ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ರಂಗ ಇವರಿಂದ ಯಕ್ಷಗಾನ ಪಂಚವಟಿ ಪ್ರದರ್ಶನಗೊಂಡಿತು. ನೂರಾರು ಶ್ರೀ ರಾಮ ಭಕ್ತರು ಬಸ್ ನಿಲ್ದಾಣದ ಆಸುಪಾಸು ನಿಂತು ರಾಮೋತ್ಸವವನ್ನು ಸಂಭ್ರಮಿಸಿಕೊಂಡರು. ಕಾರ್ಯಕ್ರಮವನ್ನು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಉದ್ಘಾಟಿಸಿ ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಶಿವರಾಮ ಉಡುಪ, ರಾಮೋತ್ಸವದ ಸಂಚಾಲಕ ಸಂತೋಷ್ ಮೆಂಡನ್ ಕೋಡಿ, ಸಮಿತಿಯ ಪ್ರಮುಖರಾದ ಸುರೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿಯ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದಲ್ಲಿ ತೃತೀಯ ವರ್ಷದ ವರ್ಧಂತ್ಯುತ್ಸವ, ಚಿತ್ರಕೂಟ ಸಹಿತ ಶ್ರೀ ನಾಗದೇವರ ಹಾಗೂ ಶಿರಸಿ ಶ್ರೀ ಮಾರಿಕಾಂಬ ದೇವಿಯ ಪುನರ್ ಪ್ರತಿಷ್ಠಾ- ವರ್ಧಂತ್ಯುತ್ಸವ -ಕಲಶೋತ್ಸವ, ಶ್ರೀ ಕಾಲಬೈರವ ಸೇವಾ ಸಂಘದ 12ನೇ ವಾರ್ಷಿಕೋತ್ಸವ, ಶ್ರೀ ಶಿವಗೋರಕ್ಷನಾಥ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವು ಜ.26 ರಿಂದ ಜ.27ರ ತನಕ ನಡೆಯಲಿದೆ. ಜ. 26ರ ಬೆಳಿಗ್ಗೆ 9.30ರಿಂದ ಚಿತ್ರಕೂಟ ಸಹಿತ ಶ್ರೀ ನಾಗದೇವರಿಗೆ ಪಂಚವಿಂಶತಿ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾ ವರ್ಧಂತ್ಯುತ್ಸವ, ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಂಜೆ 6.00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕಿರ್ತನೆ ನಡೆಯಲಿದೆ. ಜ.27ರ ಬೆಳಿಗ್ಗೆ 9.30ರಿಂದ ಶ್ರೀ ಕಾಲಭೈರವ ದೇವರಿಗೆ ತೃತೀಯ ವರ್ಧಂತ್ಯುತ್ಸವದ ಪ್ರಯುಕ್ತ ಅಷ್ಠೋತ್ತರ ಕಲಶ, ತತ್ವ ಹೋಮ, ಅಧಿವಾಸ ಹೋಮ, ವಿಶೇಷ ಪಂಚಾಮೃತಾಭಿಷೇಕ, ಕಲಾಶಭಿಷೇಕ, ರೂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಉಪ ಯೋಜನೆಯಡಿ ಯುವಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯ ಯುವಕರಿಗೆ 45 ದಿನಗಳ ಉಚಿತ ಜಿಮ್ ತರಬೇತಿ ಶಿಬಿರವನ್ನು ಫೆಬ್ರವರಿ 1 ರಿಂದ ಮಾರ್ಚ್ 17 ರ ವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 18 ರಿಂದ 35 ವರ್ಷದೊಳಗಿನ ಪರಿಶಿಷ್ಟ ಜಾತಿಯ ಅರ್ಹ ಯುವಕರು ಪ್ರಸ್ತಾವನೆಗಳನ್ನು ಸಲ್ಲಿಸಲು ಜನವರಿ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 155265 ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನದಿ ದಂಡೆಯ ಸಂರಕ್ಷಣೆ ಮತ್ತು ತೋಡು ಬದಿಕಟ್ಟು ಕಾಮಗಾರಿಗಳಿಗೆ ಅನುದಾನದ ಮಂಜೂರಾತಿಗೆ ಅದರಲ್ಲೂ ಮುಖ್ಯವಾಗಿ ಕುಂಭಾಶಿ ಪರಿಶಿಷ್ಟ ಜಾತಿಯವರ ಕಾಲೋನಿಯ ತೋಡಿನ ಬದಿಕಟ್ಟು ಕಾಮಗಾರಿಗೆ ಅನುದಾನ ಮಂಜೂರಾತಿ ಮಾಡಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವರಾದ ಎನ್.ಎಸ್ ಬೋಸರಾಜು ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಪ್ರಸ್ತಾವನೆ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಂದೂ ಸಂಗಮ ಆಯೋಜನ ಸಮಿತಿ ಕುಂದಾಪುರ ಇವರ ನೇತೃತ್ವದಲ್ಲಿ ಫೆಬ್ರವರಿ 01 ರಂದು ಕುಂದಾಪುರ ನಗರದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆಯು ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ನೆರವೇರಿತು. ಪೂರ್ವಭಾವಿ ಸಭೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹಿಂದೂ ಜಾಗೃತಿ ಸಂಗಮ ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜ ಬಾಂಧವರನ್ನು ಒಗ್ಗೂಡಿಸುವ ಜೊತೆಗೆ ಜಾಗ್ರತ ಸಮಾಜಕ್ಕೆ ಮುನ್ನಡಿ ಇಡುವ ದೃಷ್ಟಿಯಿಂದ ಎಲ್ಲರೂ ಒಂದೇ ಮನಸ್ಸಿನಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, ಪಕ್ಷದ ಹಾಗೂ ಅನನ್ಯ ಜವಾಬ್ದಾರಿಯ ಪ್ರಮುಖರು ಮತ್ತು ಕಾರ್ಯಕರ್ತರು ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ. ಹಿಂದೂ ಸಂಗಮ ಆಯೋಜನ ಸಮಿತಿ ಕುಂದಾಪುರ ತಾಲೂಕು ಸಂಯೋಜಿಕಿ ಸ್ವರ್ಣ ಕುಂದಾಪುರ…
