ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮತ್ತು ಸ್ನೇಹಕೂಟ ಮಣೂರು ಇವುಗಳ ಸಹಯೋಗದೊಂದಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸಂಯೋಜನೆಯೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕರನ್ನು ಗುರುತಿಸುವ ’ರೈತರೆಡೆಗೆ ನಮ್ಮ ನಡೆ’ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
56ನೇ ಸರಣಿ ಕಾರ್ಯಕ್ರಮದ ಅಂಗವಾಗಿ, ಸಾಧಕ ಕೃಷಿಕರ ಮನೆಯಂಗಳಕ್ಕೇ ತೆರಳಿ ’ಕೃಷಿ ಪರಿಕರ’ವನ್ನು ನೀಡಿ ಗೌರವಿಸುವ ಕಾರ್ಯಕ್ರಮವು ಆ.26ರ ಬುಧವಾರ ಸಂಜೆ 4.45ಕ್ಕೆ ನಡೆಯಲಿದೆ.











