ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ಎ ಸ್ಪರ್ಧೆಗಳ ಅಂಗವಾಗಿ ಬೆಂಗಳೂರಿನ ಪೋಲೀಸ್ ಸ್ಪಿರಿಟ್ ಶಾಲೆಯಲ್ಲಿ ಪ್ರಾದೇಶಿಕ ಮಟ್ಟದ ಖೋ ಖೋ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳಾದ ಸಚೇತ್, ಖುಷಿ ಬಿ. ಟಿ, ಅನುಷ್ಕಾ ಹುರಳಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮತ್ತು ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಹುರಿದುಂಬಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.13: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಗುಣಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಎಲ್ಲರನ್ನೂ ಗೌರವಾದರದಿಂದ ಕಾಣಲು ಸಾಧ್ಯವಾಗುತ್ತದೆ. ಎಲ್ಲಾ ಜಾತಿ, ಧರ್ಮಗಳು ಹಾಗೂ ಸಂಸ್ಕೃತಿಯನ್ನು ಗೌರವಿಸುವ ಬಹುತ್ವ ಈ ನೆಲೆದಲ್ಲಿ ಸಾವಿರಾರು ವರ್ಷಗಳಿಂದಲೂ ಇದೆ. ಈ ಬಹುತ್ವದ ನೆಲಗಟ್ಟನ್ನು ಗಟ್ಟಿಗೊಳಿಸುವ ಕಾರ್ಯ ಮುಖ್ಯವಾದದ್ದು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಹೇಳಿದರು. ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಜಾಲ್ಗಿರಿ’ ಕೃತಿಕಾರ ತುಂಬಾಡಿ ರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಸಾಂವಿಧಾನಿಕ ಮೌಲ್ಯ, ಜಾತ್ಯಾತೀತ ಮೌಲ್ಯ ಹಾಗೂ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯ ಇಂದು ಪ್ರಾಮುಖ್ಯವಾದದ್ದು. ತುಂಬಾಡಿ ಅವರ ಕೃತಿಗಳು ಈ ಮೌಲ್ಯಗಳಿಗೆ ಒತ್ತು ನೀಡಿದೆ ಎಂದರು. ಸಾಂಸ್ಕೃತಿಕ ಚಿಂತಕ, ಪ್ರಶಸ್ತಿ ಸಮಿತಿಯ ತೀರ್ಪುಗಾರರಾದ ಡಾ. ಬಂಜೆರೆ ಜಯಪ್ರಕಾಶ್ ಅವರು ವರ್ಚುವಲ್ ವೇದಿಕೆಯಲ್ಲಿ ಮಾತನಾಡಿ, ತುಂಬಾಡಿ ಅವರ ಕಥನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಶಂಕರನಾರಾಯಣ ಕೇಂದ್ರೀಕೃತವಾಗಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಪ್ರಸ್ತುತ ಸುಮಾರು 40 ಕಿ. ಮೀ ದೂರದ ಹೋಬಳಿ ಕೇಂದ್ರಕ್ಕೆ ತೆರಳ ಬೇಕಾಗಿರುವುದರಿಂದ ಪ್ರಸ್ತುತ ಇರುವ ಬೈಂದೂರು ಹಾಗೂ ವಂಡ್ಸೆ ಹೋಬಳಿಗಳ ಜೊತೆಗೆ ಶಂಕರನಾರಾಯಣ ಗ್ರಾಮ ಕೇಂದ್ರಿತವಾಗಿ ಶಂಕರನಾರಾಯಣ ಭಾಗದ ಗ್ರಾಮಗಳನ್ನು ಸೇರಿಸಿಕೊಂಡು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ಯೇಕವಾದ ಶಂಕರನಾರಾಯಣ ಹೋಬಳಿ ರಚನೆ ಮಾಡಲು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಸದನದಲ್ಲಿ ಚುಕ್ಕೆ ರಹಿತ ಪ್ರಶ್ನೆಯ ಮೂಲಕ ಸರಕಾರದ ಗಮನ ಸೆಳೆದಿದ್ದಾರೆ. ರಾಜ್ಯ ಸರಕಾರದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಿಸಿ, ಹೊಸದಾಗಿ ಹೋಬಳಿಗಳನ್ನು ರಚಿಸುವ ವಿಷಯವು ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದಾಗಿದೆ. ನೂತನ ಹೋಬಳಿಗಳು ರಚಿಸಬೇಕಾದರೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕ್ಷಿತಿಜ್ ಪೈ (12) ಅನಾರೋಗ್ಯದಿಂದ ಮಂಗಳವಾರದಂದು ಮೃತಪಟ್ಟಿದ್ದಾನೆ. ಈತ ಕೋಟ ಹಂದಟ್ಟು ನಿವಾಸಿ ಸಾಲಿಗ್ರಾಮದಲ್ಲಿ ನಂದಿನಿ ಮಿಲ್ಕ್ ಸ್ಟಾಲ್ ಮಾಲಕ ಪುಂಡಲೀಕ ಪೈ ಅವರ ಪುತ್ರನಾಗಿದ್ದು, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈತ ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಹಳೆ ವಿದ್ಯಾರ್ಥಿ ಸಂಘದ ರಚನೆ ಶಾಲೆಯ ಸುಬ್ರಮಣ್ಯ ಮಂಜರ ಸಭಾಭವನದಲ್ಲಿ ಜರುಗಿತು. ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ವಂಡ್ಸೆ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ವಂಡಬಳ್ಳಿ ಜಯರಾಮ್ ಶೆಟ್ಟಿ, ಉಪಾಧ್ಯಕ್ಷರಾಗಿ ಮಹಮ್ಮದ್ ರಫೀಕ್ ಸಾಹೇಬ್, ಕಾರ್ಯದರ್ಶಿಯಾಗಿ ಸೋಮರಾಯ ಜನ್ನು (ಪ್ರಭಾರ ಮುಖ್ಯೋಪಾಧ್ಯಾಯರು), ಜೊತೆ ಕಾರ್ಯದರ್ಶಿಯಾಗಿ ವಸಂತರಾಜ್ ಶೆಟ್ಟಿ, ಖಜಾಂಚಿಯಾಗಿ ನಾಗರಾಜ, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ ಮೆಂಡನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗುಂಡು ಪೂಜಾರಿ, ಕ್ರೀಡಾಕಾರ್ಯದರ್ಶಿಯಾಗಿ ಚಂದ್ರ ಬಿಲ್ಲವ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಗುರುರಾಜ್ ಆಯ್ಕೆಯಾದರು. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಉದಯ ಕುಮಾರ್ ಶೆಟ್ಟಿ, ದೇವು ಮೆಂಡನ್, ಶಂಕರ ಆಚಾರ್ಯ, ಪ್ರಸಾದ್ ಆಚಾರ್ಯ, ರಾಜೀವ ನಾಯ್ಕ, ಪ್ರತಾಪ ಕುಮಾರ್ ಶೆಟ್ಟಿ, ಮೊಹಮ್ಮದ್ ಫಾರೂಕ್, ಸುಮತಿ, ಜಯರಾಮ ಶೆಟ್ಟಿ ಬೆಳ್ವಾಣ, ಅಭಿಷೇಕ್ ಮೆಂಡನ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ. ಪೂರ್ಣಿಮಾ ಹಾಗೂ ಹಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಮಣೂರು ಪಡುಕರೆ ನಿವಾಸಿ ಸಾಹಿತಿ, ಶಿಕ್ಷಕ, ಸಾಮಾಜಿಕ ಚಿಂತಕ ಸಂತೋಷ್ ಕುಮಾರ್ ಕೋಟ (44) ಮಂಗಳವಾರ ಕೆ.ಎಂ ಸಿ ಮಣಿಪಾಲ ಅಲ್ಲಿ ನಿಧನರಾದರು ಆ.8ರಂದು ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಂತೋಷ್ ಕುಮಾರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತೆಜಿಸಿದ್ದಾರೆ. ಕೋಟ ಸುತ್ತಮುತ್ತಲಿನ ಭಾಗದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾಗಿ, ನಿರೂಪಕರಗಿ ತಮ್ಮನ್ನು ಗುರುತಿಸಿಕೊಂಡು ಸಂತೋಷ್ ಮೇಷ್ಟ್ರು ಎಂದೆ ಜನಜನಿತರಾಗಿದ್ದರು. ಕರಾವಳಿಯ ಕಡಲಕಿನಾರೆಯ ಗ್ರಾಮೀಣ ಭಾಗದಲ್ಲಿ ಇಂಡಿಕಾ ಕಲಾ ಬಳಗ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸಾಂಸ್ಕೃತಿಕ ತೇರ ಎಳೆದ ಅವರು ಖ್ಯಾತ ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ ಪ್ರಶಸ್ತಿ ಹುಟ್ಟು ಹಾಕಿದರಲ್ಲದೆ, ಯಕ್ಷಗಾನ ಕ್ಷೇತ್ರದ ಅನೇಕ ಸಾಧಕರನ್ನು ಗುರುತಿಸಿದ ಹೆಗ್ಗಳಿಕೆ ಅವರದ್ದಾಗಿದೆ. ದಲಿತ ಸಂಘರ್ಷ ಸಮಿತಿ ಕೋಟ ,ಯಕ್ಷಕಲಾವಿದ ಕೋಟ ಸುರೇಶ್ ಅಭಿನಂದನಾ ಸಮಿತಿ, ಪ್ರಸಿದ್ಧ ಸ್ತ್ರೀವೇಷದಾರಿ ಮಾಧವ ನಾಗೂರು ಅಭಿನಂದನಾ ಸಮಿತಿಯ ಸಂಚಾಲಕರಾಗಿ, ಜಟ್ಟಿಗೇಶ್ವರ ಫ್ರೇಂಡ್ಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಂಕರ ನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಗಾಗಿ ‘ಬಾಲ ರಾಧೆ ಬಾಲ ಗೋಪಾಲ ‘ಸ್ಪರ್ಧೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ಕಿಶೋರ್ ಕುಮಾರ್ ಆರೂರ್ ಅವರು ಉದ್ಘಾಟಿಸಿ ಮಾತನಾಡಿ “ಇಲ್ಲಿ ಎಲ್ಲ ಮಕ್ಕಳು ಬಾಲಗೋಪಾಲ ಬಾಲರಾಧೆಯರೇ, ಇದು ಸ್ಪರ್ಧೆ ಎನ್ನುವುದಕ್ಕಿಂತ ಇದು ನಮ್ಮೆಲ್ಲರ ಮನವನ್ನು ತಣಿಸುವ ಸುಂದರ ಕಾರ್ಯಕ್ರಮ” ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥಾಪಕರು ಪುಟಾಣಿಗಳಿಗೆ ಶುಭ ಹಾರೈಸಿದರು. ಈ ಸ್ಪರ್ಧೆಗೆ ನ್ಯಾಯ ನಿರ್ಣಾಯಕರಾಗಿ ನೃತ್ಯ ಗುರುಗಳಾದ ಜಗದೀಶ್ ಬನ್ನಂಜೆ, ಹಿಂದುಸ್ತಾನಿ ಸಂಗೀತ ಪ್ರವೀಣರಾದ ಅಶ್ವತ್ ಐತಾಳ್‌ರು ಉಪಸ್ಥಿತರಿದ್ದರು. ಈ ವಿಶೇಷ ಕಾರ್ಯಕ್ರಮದ ಉದ್ದೇಶ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಬೆಳೆಸುವುದು ಅವರ ಸೃಜನಶೀಲತೆ ಮತ್ತು ಆತ್ಮ ವಿಶ್ವಾಸವನ್ನುಉತ್ತೇಜಿಸುವುದಾಗಿತ್ತು. ಪುಟಾಣಿಗಳು ಕಣ್ಮನ ತಣಿಸುವಂತೆ ಬಾಲಗೋಪಾಲ ಮತ್ತು ಬಾಲರಾಧೆಯರ ವೇಷ ಧಾರಣೆಯಲ್ಲಿ ಮಿಂಚಿ ಮಾಧುರ್ಯಮಯ ಧ್ವನಿ ಮತ್ತು ಕೃಷ್ಣ ಲೀಲೆಯ ನೃತ್ಯಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಗುರು ರಾಘವೇಂದ್ರ ಸ್ವಾಮಿಗಳ 354 ಮಹೋತ್ಸವ ಜರುಗಿತು. ಬೆಳಿಗ್ಗೆಯಿಂದ ಪಾದಪೂಜೆ, ಆಂಜನೇಯ ಸ್ವಾಮಿಗೆ ಬೆಣ್ಣೆ ಸೇವೆ, ಅರ್ಚನೆ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಹೂವಿನ ಪೂಜೆ ಮುಂತಾದ ಕಾರ್ಯಗಳು ನಡೆದವು. ಸೇವಾ ಸಂಗಮ ಶಿಶು ಮಂದಿರದ ಮಾತೆಯರಿಂದ ವಿಷ್ಣು ಸಹಸ್ರನಾಮ ಪಠಣ, ಚಂದ್ರ ಬಂಕೇಶ್ವರ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಭಕ್ತರು ರಾಯರ ದರ್ಶನ ಪಡೆದರು ಬಳಗದವರಿಂದ ಭಕ್ತಿ ಸಂಗೀತ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಸಂಜೆ ನಡೆಯಿತು. ಸುರಭಿ ಬೈಂದೂರು ತಂಡದಿಂದ ಯಕ್ಷ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮೇ 25ರಿಂದ 29ರವರೆಗೆ ವೃಂದಾವನ ಪುನಃ ಪ್ರತಿಷ್ಠೆ, ಅಂಜನೇಯ, ನವಗ್ರಹ ದೇವರ ಕಲಶಾಭಿಷೇಕ, ಶತಕಲಶಸಹಿತ, ವೃಂದಾವನಕ್ಕೆ ಶತಕಲಶ ಸಹಿತ ಬ್ರಹ್ಮಕ-ಲಶೋತ್ಸವ ಜರುಗಿದ್ದು, ಸಾನಿಧ್ಯಾಭಿವೃ-ದ್ಧಿಗಾಗಿ ಭಾನುವಾರ ದೃಢಕಲಶೋತ್ಸವ, ವಿಶೇಷ ಪೂಜೆ ನಡೆಸಲಾಗಿತ್ತು. ಸಾವಿರಾರು ಭಕ್ತರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಗ್ರಾಮೀಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಕಣ್ಮಣಿಗಳು ಸರಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸುವ ಸಲುವಾಗಿ ಕಾಂಗ್ರೆಸ್ ಕಣ್ಮಣಿಗಳು ಎನ್ನುವ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಈ ಮೂಲಕ ಪಕ್ಷ ಬಲವರ್ಧನೆ ಜತೆಗೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಬಸವ ಪೂಜಾರಿ ಹಾಗೂ ಕುಸುಮ ಬಸವ ಪೂಜಾರಿ, ರಘು ಭಂಡಾರಿ ಕಾರ್ಕಡ, ಜಿ. ಮೊಹಮ್ಮದ್ ಖಾಶಿಮ್ ಇವರುಗಳನ್ನು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಸಮ್ಮಾನಿಸಿದರು. ಪಕ್ಷದ ಪ್ರಮುಖರಾದ ಅಚ್ಯುತ್ ಪೂಜಾರಿ ಕಾರ್ಕಡ, ಅಮೃತೇಶ್ವರಿ ದೇವಸ್ಥಾನದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿಯೇ ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಅಂತರಂಗದ ಬೆಳೆವಣಿಗೆಯೊಂದಿಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ರಾವ್ ಸಿದ್ಧಾಪುರ ಹೇಳಿದರು. ಅವರು ಕಾಳಾವರ ಶ್ರೀ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ. ಎಸ್.ಆರ್. ರಂಗನಾಥನ್‌ರವರ 133 ನೇ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಓದು ಧನಾತ್ಮಕ ಚಿಂತನೆಗೆ ಕಾರಣವಾಗಿ ಸ್ಮರಣ ಶಕ್ತಿ ಹೆಚ್ಚುವುದರೊಂದಿಗೆ ವ್ಯಕ್ತಿತ್ವಕ್ಕೆ ಮೆರುಗು ತರುತ್ತದೆ. ವಿದ್ಯಾರ್ಥಿಗಳು ಗ್ರಂಥಾಲಯದ ಬಳಕೆಯಿಂದ ಸಂವಹನ ಕೌಶಲ್ಯ, ಸೃಜನ ಶೀಲತೆ ಮತ್ತು ಭಾಷಾ ಪ್ರೌಡಿಮೆ ಹೊಂದಿ ಸರ್ವತೋಮುಖ ಬೆಳವಣಿಗೆ ಹೊಂದಬಹುದು ಎಂದರು. ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ…
