ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ 2024-258ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶ್ರೀ ದೇವಿ ಮಾರಿಕಾಂಬ ನಾಲ್ಕು ಪಾದದ ಹೈಗುಳಿ ದೇವಸ್ಥಾನದ ವಠಾರದಲ್ಲಿ ಇತ್ತೀಚಿಗೆ ಜರುಗಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್.ಕೆ. ಮಾತನಾಡಿ, ಕರಾವಳಿ ಭಾಗದಲ್ಲಿ ಸಹಕಾರಿ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಸುತ್ತಿದೆ ಅದರಲ್ಲಿ ಶ್ರೀದೇವಿ ಮಾರಿಕಾಂಬ ಸಹಕಾರಿ ಸಂಘ ಜನಸ್ನೇಹಿಯಾಗಿ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಿದರು.
ಸಂಘವು ವರದಿ ವರ್ಷದಲ್ಲಿ 25,34,946 ರಷ್ಟು ಲಾಭವನ್ನು ಗಳಿಸಿ ಸದಸ್ಯರಿಗೆ ಶೇಕಡಾ 9.5 ಡಿವಿಡೆಂಡ್ ಸಂಸ್ಥೆಯ ಅಧ್ಯಕ್ಷ ಕೃಷ್ಣ ಕೆ. ಸಭೆಯ ಅಧ್ಯಕ್ಷತೆ ವಹಿಸಿ ಘೋಷಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕಿ ಸಂಪ ಟೀಚರ್ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಗಣಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ವತಿಯಿಂದ ಅಶಕ್ತರಿಗೆ ಸಹಾಯಧನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರ ಹರ್ಷರಾಜ್ ಕೆ. ಕೋಡಿ ಕನ್ಯಾಣ, ಸಹಕಾರಿಯ ಉಪಾಧ್ಯಕ್ಷ ಅರುಣ ಜಿ.ಕುಂದರ್, ನಿರ್ದೇಶಕರಾದ ಪ್ರಭಾಕರ ಬಂಗೇರ, ವಿನೋದ್ ಕುಂದರ್, ಶುಭಕರ ಕುಂದರ್, ಪುಷ್ಪಲತಾ ಸುವರ್ಣ, ಗುಲಾಬಿ, ಸುಜಾತ ಎಸ್, ಹರ್ಷ ಕೆ.ಬಿ,ಕರುಣಾಕರ ಖಾರ್ವಿ, ದಿನೇಶ್ ಪೂಜಾರಿ ಉಪಸ್ಥಿತರಿದ್ದರು.
ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ನಿತೀಶ್ ಕುಮಾರ್ ಎಸ್. ವಾರ್ಷಿಕ ವರದಿಯನ್ನು ಮಂಡಿಸಿದರು.
ಸಂಘದ ಸಿಬ್ಬಂದಿ ಸ್ವಾತಿ ಸ್ವಾಗತಿಸಿದರು. ಸಹಕಾರಿಯ ಸಿಬ್ಬಂದಿ ಮಮತಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಸಭೆಯಲ್ಲಿ ಉಪಸ್ಥಿತ ಸದಸ್ಯರಿಗೆ ಅದೃಷ್ಟ ಬಹುಮಾನವನ್ನು ನೀಡಲಾಯಿತು.















