ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇತ್ತೀಚಿಗೆ ಸುರಿದ ಬಾರಿ ಗಾಳಿ ಮಳೆಗೆ ಸಾಸ್ತಾನದ ಸಮೀಪ ಗುಂಡ್ಮಿ ಪಾತಾಳ ಬೆಟ್ಟು ಪರಿಸರದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ವಿದ್ಯುತ್ ಕಂಬದ ಮೇಲೆರಗಿ ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತು.
ಈ ಹಿನ್ನಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಶೌರ್ಯ ಟೀಮ್‌ನ ಸದಸ್ಯರು ಮತ್ತು ಮೆಸ್ಕಾಂ ಸಿಬ್ಬಂದಿಗಳ ಮೂಲಕ ತೆರವುಗೊಳಿಸಿ, ವಿದ್ಯುತ್ ತಂತಿ ಹಾಗೂ ರಸ್ತೆ ಸರಿಪಡಿಸಿ, ವಾಹನಗಳು ಸಂಚಾರ ಮುಕ್ತ ಅವಕಾಶ ಕಲ್ಪಿಸಲಾಯಿತು.
ಈ ಸೇವಾ ಕಾರ್ಯದಲ್ಲಿ ಶೌರ್ಯ ತಂಡದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಯೋಗೀಶ ಆಚಾರ್ಯ, ಸತೀಶ್, ರೇಣುಕಾ, ವಿಜಯಶ್ರೀ, ಘಟಕ ಪ್ರತಿನಿಧಿ ಶೋಭಾ ಮತ್ತು ಮೆಸ್ಕಾಂ ಸಿಬ್ಬಂದಿ ಅನಿಲ್, ಕುಮಾರ ಹಾಗೂ ಸ್ಥಳೀಯರಾದ ಸುಂದರ, ಸಂತೋಷ ಸಹಕರಿಸಿದರು.











