ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025 ನೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಅಮೂಲ್ಯ ಸಿ. ಶೆಟ್ಟಿ (ಎಂಜಿನಿಯರಿಂಗ್ ) ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 209 ನೇ ರ‍್ಯಾಂಕ್, ಎನ್ ಶ್ರೇಯಸ್ ಎಂಜಿನಿಯರಿಂಗ್ (1242) ಬಿಎಸ್ಸಿ ಅಗ್ರಿಕಲ್ಚರ್ (486), ಅನುಷ್ ನಾಯಕ್ ಎಂಜಿನಿಯರಿಂಗ್ (1795) ಬಿಎಸ್ಸಿ ಅಗ್ರಿಕಲ್ಚರ್ (1054), ಚೈತ್ರಾ ಇಂಜಿನಿಯರಿಂಗ್ (2103) ಬಿಎಸ್ಸಿ ಅಗ್ರಿಕಲ್ಚರ್ (571), ಸಾತ್ವಿಕ್ ಕೆ. ಆರ್ ಇಂಜಿನಿಯರಿಂಗ್ (2894), ಅನನ್ಯ ಇಂಜಿನಿಯರಿಂಗ್(3066), ಬಿಎಸ್ಸಿ ಅಗ್ರಿಕಲ್ಚರ್ (2348), ಸಂಜನಾ ಶ್ಯಾನು ಭಾಗ್(3603), ಕೀರ್ತನಾ ಇಂಜಿನಿಯರಿಂಗ್ (3746) ಬಿಎಸ್ಸಿ ಅಗ್ರಿಕಲ್ಚರ್ (2069), ಬಿ. ನಾಗೇಂದ್ರ ಭಟ್ ಇಂಜಿನಿಯರಿಂಗ್ (3952), ರಂಜಿತಾ ಇಂಜಿನಿಯರಿಂಗ್(4119) ಬಿಎಸ್ಸಿ ಅಗ್ರಿಕಲ್ಚರ್ (2574), ಭೂಮಿಕಾ ಇಂಜಿನಿಯರಿಂಗ್(4481), ಸುಮಿತ್ರಾ ಭಟ್ ಇಂಜಿನಿಯರಿಂಗ್ (5066), ಅಪೂರ್ವ ಎಸ್. ಇಂಜಿನಿಯರಿಂಗ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತನ್ನ ಮನೆಯಲ್ಲಿ ಸಾಕಿ ಬೆಳಸಿದ ನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯಡ್ತರೆ ಗ್ರಾಮದ ರಾ.ಹೆ 66ರ ಬೈಂದೂರು – ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕು ನಾಯಿಯೊಂದನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಪೊಲೀಸರು ಗಮನಿಸಿ, ಪರಿಶೀಲಿಸಿದಾಗ ವ್ಯಕ್ತಿಯ ಬೈಂದೂರು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಎಂಬುದಾಗಿ ತಿಳಿದು ಬಂದಿದೆ. ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅದರಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2025ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ. ಅಕ್ಷಯ್ ಎಂ. ಹೆಗ್ಡೆ ಕೆಸಿಇಟಿ-ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಅಸಾಧಾರಣ ಸಾಧನೆಯ ಜೊತೆಗೆ ಆಳ್ವಾಸ್‌ನ ಇತರ ವಿದ್ಯಾರ್ಥಿಗಳು ಸಹ ಉನ್ನತ ರ‍್ಯಾಂಕ್‌ಗಳನ್ನು ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಿಇಟಿ ಫಲಿತಾಂಶವನ್ನು ಮುಂದುವರಿಸಿದ್ದಾರೆ. ರಾಜ್ಯದ ಮೊದಲ 10 ರ‍್ಯಾಂಕ್‌ಗಳಲ್ಲಿ 02 ರ‍್ಯಾಂಕ್, ಮೊದಲ 50 ರ‍್ಯಾಂಕ್‌ಗಳಲ್ಲಿ 12 ರ‍್ಯಾಂಕ್, ಮೊದಲ 100 ರ‍್ಯಾಂಕ್‌ಗಳಲ್ಲಿ 24 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 52 ರ‍್ಯಾಂಕ್, ಮೊದಲ 500 ರ‍್ಯಾಂಕ್‌ಗಳಲ್ಲಿ 172 ರ‍್ಯಾಂಕ್, ಮೊದಲ 1,000 ರ‍್ಯಾಂಕ್‌ಗಳಲ್ಲಿ 506 ರ‍್ಯಾಂಕ್‌ಗಳನ್ನು ಪಡೆದುಕೊಂಡಿರುತ್ತಾರೆ. ಪಿಸಿಬಿಯಲ್ಲಿ 3 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 49 ವಿದ್ಯಾರ್ಥಿಗಳು 160ಕ್ಕೂ ಅಧಿಕ, 146 ವಿದ್ಯಾರ್ಥಿಗಳು 150ಕ್ಕೂ ಅಧಿಕ, 851 ವಿದ್ಯಾರ್ಥಿಗಳು 121ಕ್ಕೂ ಅಧಿಕ, 1359 ವಿದ್ಯಾರ್ಥಿಗಳು 100ಕ್ಕೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಮೇ.26: ಇಲ್ಲಿನ ಖಾರ್ವಿಕೇರಿ ನಿವಾಸಿ, ಶ್ರೀ ಮಹಾಕಾಳಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಜಯಾನಂದ ಖಾರ್ವಿ (64) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಜಯಾನಂದ ಖಾರ್ವಿ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೊಂಕಣಿ ಖಾರ್ವಿ ಸಮಾಜದ ಪ್ರತಿಷ್ಠಿತ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಹೋಳಿ ಹಬ್ಬದ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಮಾತೆಯ ಬಣ್ಣದ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ವಿಧಾನವನ್ನು ಆಳವಡಿಸಿ ಇತರೆ ಸಮಾಜಕ್ಕೆ ಖಾರ್ವಿ ಸಮುದಾಯದ ಸಂಸ್ಕೃತಿಯನ್ನು ಪರಿಚಯಿಸಿದ ಜಯಾನಂದ ಖಾರ್ವಿ ಕೊಂಕಣಿ ಖಾರ್ವಿ ಸಮಾಜದ ಆಗುಹೋಗುಗಳಿಗೆ ಜೊತೆಯಾಗಿದ್ದರು. ಕುಂದಾಪುರ ಭಂಡಾರಕಾರ್ಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಮುತ್ಸದ್ದಿ ಮಾಣಿ ಗೋಪಾಲ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯ ಪರಿಷತ್ ವತಿಯಿಂದ ಮಾಣಿ ಗೋಪಾಲ್ ಅವರನ್ನು ಸನ್ಮಾನಿಸಿದ ಬಳಿಕ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ಮೌಲ್ಯಾಧಾರಿತ, ತತ್ವಾಧರಿತ ರಾಜಕಾರಣವನ್ನು ಜೀವನುದ್ದಕ್ಕೂ ಪಾಲಿಸಿಕೊಂಡು ಬಂದ ಅಪರೂಪದ ಜನನಾಯಕ ಮಾಣಿ ಗೋಪಾಲ್, ದೇವರಾಜು ಅರಸು ಅವರ ತತ್ವಾದರ್ಶದಡಿಯಲ್ಲಿ ನಡೆದ ಮಾಣಿ ಗೋಪಾಲ್ ದೇವರಾಜು ಅರಸು ಪ್ರಶಸ್ತಿಗೆ ಅರ್ಹರು. ಈ ಬಗ್ಗೆ ಸರಕಾರದ ಗಮನ ಸೆಳೆಯುವೆ ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಾಮಾಣಿಕತೆ, ವೈಚಾರಿಕ ಸ್ಪಷ್ಟತೆ, ತಳ ವರ್ಗದ ಜನರ ಪರ ಹೋರಾಟ, ಗೇಣಿದಾರರು ಮತ್ತು ಮೂರ್ತೆದಾರರ ಪರ ಮಾಣಿಗೋಪಾಲ್ ಹೋರಾಟ ಪ್ರಶ್ನಾತೀತ. ಚುನಾವಣಾ ರಾಜಕೀಯ ಜನಸಾಮಾನ್ಯರ ಕಲ್ಯಾಣಕ್ಕಾಗಿ ಮೀಸಲಿಟ್ಟ ಧೀಮಂತ ನಾಯಕ. ಸಾಹಿತ್ಯ ಪರಿಷತ್ ಯೋಗ್ಯ ಸಂದರ್ಭ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯ ಮಟ್ಟದ 100 ರ‍್ಯಾಂಕ್‌ನೊಳಗೆ 14 ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್. ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18 ನೇ ರ‍್ಯಾಂಕ್, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್, ಬಿ/ ಡಿ – ಫಾರ್ಮ್ ವಿಭಾಗಗಳಲ್ಲಿ 25 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್ ಗಳಿಸಿದ್ದಾರೆ. ಹಾಗೂ ವಿದ್ಯಾರ್ಥಿ ಹೆಚ್. ಎ. ರಾಜೇಶ್ ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ‍್ಯಾಂಕ್, ಬಿ.ಎಸ್.ಸಿ. ನರ್ಸಿಂಗ್ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ‍್ಯಾಂಕ್, ಬಿ/ ಡಿ – ಫಾರ್ಮ್ ವಿಭಾಗಗಳಲ್ಲಿ 62…
ಕುಂದಾಫ್ರ ಡಾಟ್ ಕಾಂ ಸುದ್ದಿ.ಕೋಟ: ಕಾರ್ಕಳದಲ್ಲಿ ಸಾಹಿತ್ಯ ಸಂಘವನ್ನು ಸ್ಥಾಪಿಸಿ ನಾಡಿನ ಪ್ರಸಿದ್ಧ ಸಾಹಿತಿಗಳನ್ನು ಕಾರ್ಕಳಕ್ಕೆ ಕರೆತಂದ ಹಿರಿಮೆಯನ್ನು ಹೊಂದಿರುವ ಎಂ. ರಾಮಚಂದ್ರ ಅವರು ಕನ್ನಡದ ಪರಿಚಾರಕರಾಗಿ ಪ್ರಸಿದ್ದರಾದವರು. ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಸಹೃದಯರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಇವರ ಸವಿ ನೆನಪಿನಲ್ಲಿ ಅವರ ಮಡದಿ ಶ್ರೀಮತಿ ಶಾರದಾ ರಾಮಚಂದ್ರ ಮತ್ತು ಮಕ್ಕಳು ಕನ್ನಡ ನಾಡು – ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಓರ್ವರಿಗೆ ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ವರ್ಷದ ಪ್ರಶಸ್ತಿಗೆ ಸಾಹಿತಿ ಹಾಗೂ ಶ್ರೇಷ್ಠ ಸಾಹಿತ್ಯ ಸಂಘಟಕರಾಗಿರುವ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಆಯ್ಕೆಯಾಗಿದ್ದಾರೆ. ’ಉಸಿರು’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದವರು. ಎಳೆಯ ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಸಾಹಿತ್ಯ ರಚನೆಯ ಅಭಿರುಚಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲದೆ ಅವರು ಬರೆದಿರುವ ಅನೇಕ ಕೃತಿಗಳನ್ನು ತಮ್ಮ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.25: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಅಕಾಲಿಕ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲಾದ್ಯಂತ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಿವಿಧ ಗ್ರಾಮಗಳಲ್ಲಿ ಮರಗಳು ಉರುಳಿ ಮನೆ ಹಾಗೂ ಇನ್ನಿತರ ಕಟ್ಟಡಗಳಿಗೆ ಹಾನಿಯಾಗಿದೆ. ಮಳೆಯಾರ್ಭಟ ಮುಂದುವರಿದಿದ್ದು, ಮೇ.26ರಿಂದ ಮೇ.28ರ ತನಕ ಮತ್ತೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ರೆಡ್ ಅಲರ್ಟ್ ಬಳಿಕ ಮೂರು ದಿನ ಎಲ್ಲೋ ಅಲರ್ಟ್ ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಅಧಿಕ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇ.24ರಂದು ಕುಂದಾಪುರ ತಾಲೂಕಿನ ಕರ್ಕಂಜೆ, ಬೀಜಾಡಿ, ಸೇನಾಪುರ ಗ್ರಾಮದ ಒಂದೊಂದು ಮನೆಯು ಗಾಳಿ ಹಾಗೂ ಮರಬಿದ್ದು ಹಾನಿಯಾಗಿದ್ದರೇ, ಕುಂದಾಪುರ ಪುರಸಭಾ ವ್ಯಾಪ್ತಿಯ 2 ಮನೆಗಳು, ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿ 2 ಮನೆಗಳು ಮರ ಬಿದ್ದು ಹಾನಿಯಾಗಿದೆ. ಬೈಂದೂರು ತಾಲೂಕಿನ ಯಳಜಿತ್, ಶಿರೂರು ಗ್ರಾಮದಲ್ಲಿ ಒಂದೊಂದು ಮನೆಗಳಿಗೆ ಮರಬಿದ್ದು ಹಾನಿಯಾಗಿದೆ. ಮೇ.23ರಂದು ಕುಂದಾಪುರ ತಾಲೂಕಿನ ಗುಜ್ಜಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2025ರ ಸಾಲಿನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್‌ಗಳನ್ನು ಗಳಿಸುವುದರ ಮೂಲಕ ಎಕ್ಸಲೆಂಟ್ ಕಾಲೇಜಿನ ಕೀರ್ತಿಯನ್ನು ರಾಜ್ಯಾದ್ಯಂತ ಹೆಚ್ಚಿಸಿರುತ್ತಾರೆ. ಪ್ರಸ್ತುತಿ ಶೆಟ್ಟಿ 222, ತ್ರಿಶಾ ಪಿ. ಶೆಟ್ಟಿ 1123, ಅನನ್ಯ ಯು ಶೆಟ್ಟಿ 1195, ಸ್ಮರಣ್ ಎಂ. 1415, ರಶ್ಮಿ 1542, ಧನುಷ್ ದೇವಾಡಿಗ 1801, ಅವಿಜಿತ್ ಶೆಟ್ಟಿ 1806, ಪದ್ಮಾಶ್ರೀ ವಿ. ಎನ್. 3414, ಸುಶಾಂತ್ ಚಂದ್ರ 3446, ಪ್ರಥಮ ತಾಳಿಕೋಟೆ 3641, ಚಿತ್ರಾ ನಾಯ್ಕ 3675, ಶ್ರೀ ಹರ್ಷ ಪಿ ಎನ್ 3940, ಪ್ರಜ್ವಲ್ ಕುಮಾರ್ ಎಸ್ 3950, ಆಕಾಶ್ 4383, ತನ್ವಿ ಶೆಟ್ಟಿ 4548, ಶಬರಿ ಡಿ ಶೆಟ್ಟಿ 4675, ರ್ಯಾಂಕ್ ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025 ನೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಸಿ. ಶೆಟ್ಟಿ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 209 ನೇ ರ‍್ಯಾಂಕ್ ಪಡೆದಿದ್ದಾಳೆ. ಪ್ರತಿ ದಿನ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಅದ್ಭುತ ಸಾಧನೆ ಮೆರೆದಿದ್ದಾಳೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
