Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024 ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯದ ಕ್ರೀಡಾಪಟುಗಳಿಂದ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ವೆಬ್‌ಸೈಟ್ https://sevasindhu.karnataka.gov.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಪೌಂಡೇಶನ್ ಮಣೂರು, ಪಡುಕರೆ ರೋಟರಿ ಕ್ಲಬ್, ಹಂಗ ರಕಟ್ಟೆ ಸಾಸ್ತಾನ ನೆನಪು ಮೂವೀಸ್ ಕೋಟ, ಉಸಿರು ಕೋಟ, ಕೋಟ ಸಾರಥ್ಯದಲ್ಲಿ ಜನವರಿ 26ರಂದು ಕೋಟದ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯುವ ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆ ಸಮಾಜ ಶಿಕ್ಷಕರಾದ ಸುರೇಶ್ ಮರಕಾಲ ಅವರನ್ನು ಆಯ್ಕೆ ಮಾಡಲಾಗಿದೆ. ಬಹುರೂಪಿ ಶಿಕ್ಷಕರಾಗಿರುವ ಅವರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಐದು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ. ಇಬ್ಬರು ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ, ಕೊಂಡೊಯ್ದು ಅವರ ಪ್ರತಿಭೆಗೆ ಅವಕಾಶ ನೀಡಿದವರು. ಜೀವನ ಶಿಕ್ಷಣದ ವಿಶೇಷ ಶೈಕ್ಷಣಿಕ ಪ್ರಕಾರ ಪ್ರಕಾರದ ಹರಿಕಾರರು ಕಲಿಕೆಯನ್ನು ಲವಲವಿಕೆಯಿಂದ ಮೂಡಿಸುವ ಉದ್ದೇಶದಿಂದ ಔಪಚಾರಿಕ ಕಲಿಕೆಯ ಜೊತೆಗೆ ಶಾಡೋ ಪ್ಲೇ, ನಾಟಕ, ಪೇಪರ್ ಕ್ರಾಫ್ಟ್, ತೋಟಗಾರಿಕೆ, ಚಿತ್ರಕಲೆ ಕೊಳಲು ಕಲಿಕೆ, ವಿವೇಕ ರಾತ್ರಿ ತರಗತಿಗಳು ಮೊದಲಾದ ಕಲಿಕೆಯನ್ನು ವಿದ್ಯಾರ್ಥಿಯಲ್ಲಿ ಮೂಡಿಸಿದವರು. ಪ್ರಕಟಣೆಯಲ್ಲಿ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್, ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 58ನೇ ಮಾಲಿಕೆ ಶ್ರೀ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ಇಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪ್ರಾಂಶುಪಾಲರಾದ ಸವಿತಾ ನಾರಾಯಣ್ ಅವರು ಉದ್ಘಾಟಿಸಿ ಕನ್ನಡ ನಮ್ಮ ತಾಯಿ, ನಮ್ಮ ತಾಯಿಗೆ ಬೆಲೆ ಕೊಡಿ ಎಂದು ಕೇಳುವ ಕನ್ನಡಿಗರು ನಾವಾಗಬಾರದು ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಯಕ್ಷಗಾನ ಕಲಾವಿದ ಆದಿತ್ಯ ಹೆಗಡೆ ಅವರು ಶೃತಿ ಬದ್ಧವಾದ ಮಾತು, ನಿಖರ ಪುರಾಣ ಜ್ಞಾನದೊಂದಿಗೆ ಸನ್ನಿವೇಶಕ್ಕೆ ತಕ್ಕುದಾದ ರಸ ಭಾವದೊಂದಿಗೆ ಪಾತ್ರ ಚಿತ್ರಿಸಿ ಅಭಿನಯಿಸಿ ತೋರಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರು ಕವನ ಹಾಗೂ ಕಥೆಗಳನ್ನು ಬರೆಯುವ ಹಾಗೂ ಹೇಳುವ ಕ್ರಮವನ್ನು ತಿಳಿಸಿದರು. ಭಾಗ್ಯೇಶ್ವರಿ ಮಯ್ಯ ಮತ್ತು ಶುಭ ಅಡಿಗ ಅವರು ಕನ್ನಡ ಭಾವಗೀತೆ ಹಾಗೂ…

Read More

ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು: ಡಾ. ಎಂ. ಮೋಹನ ಆಳ್ವ ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗೇರು ಕಲ್ಪವೃಕ್ಷವೇ ಆಗಿದೆ. ವಿಪುಲ ಭವಿಷ್ಯವನ್ನು ಹೊಂದಿರುವ ಗೇರು ಕೃಷಿಗೆ ಸಿಗುತ್ತಿರುವ ಉತ್ತೇಜನ ತುಂಬಾ ಕಡಿಮೆ. ಗೇರು ಕೃಷಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಗೇರು ಉದ್ಯಮದ ಮೂಲಕ ಇಂದು ಸಂಪತ್ ಕುಮಾ‌ರ್ ಶೆಟ್ಟಿ ಅವರು ಹಲವಾರು ಜನರಿಗೆ ಉದ್ಯೋಗ ನೀಡುತ್ತಿರುವುದು ಶ್ಲಾಘನಾರ್ಹವಾದ ಕೆಲಸ ಎಂದು ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಇಲ್ಲಿನ ವಂಡಾರು ಬೋರ್ಡ್‌ಲ್ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್, ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ ಇದರ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗೇರು ಕೃಷಿಯಲ್ಲಿ ಕೇವಲ ಗೇರು ಬೀಜ ಮಾತ್ರವಲ್ಲ, ಗೇರು ಹಣ್ಣು, ಗೇರು ಎಣ್ಣೆ, ಗೇರು ಸಿಪ್ಪೆಯ ಮೌಲ್ಯವರ್ಧನೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು, ಹೊಸ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೈವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮ ನಾಮ ಕೋಟಿ ಜಪ ಯಜ್ಞಕ್ಕೆ ಇತ್ತೀಚಿಗೆ ಚಾಲನೆ ನೀಡಲಾಯಿತು. ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಏಕಾಹ ಅಖಂಡ ಭಜನೋತ್ಸವ ಪ್ರಾರಂಭಿಸಿ ಐವತ್ತು ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ ಪರಿವಾರ ದೈವಗಳ, ನಾಗ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಭಜನಾ  ಸುವರ್ಣ ಮಹೋತ್ಸವದ ಅಂಗವಾಗಿ ಕೋಟಿ ಜಪ ಯಜ್ಞ ನಡೆಯಿತು. ಶ್ರೀ ನಂದಿಕೇಶ್ವರ ದೇವರಿಗೆ ಹಾಗೂ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಪ್ರಾರಂಭಿಸಲಾಯಿತು. ವೇ.ಮೂ. ಮಹಾಬಲ ಭಟ್ ಮತ್ತು ವೇ.ಮೂ. ತಿರುಮಲೇಶ್ವರ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಹಿರಿಯ ಭಜಕರಾದ ಗುಳೈ ಮಂಜಣ್ಣ ಉಪ್ಪುಂದ, ರವಿ ಖಾರ್ವಿ ಅಳ್ವಕೊಡಿ, ಗಣಪತಿ ಪೂಜಾರಿ, ಬಾಬು ದೇವಾಡಿಗ ಕಸಿನಮನೆ, ದೈವಸ್ಥಾನದ ಮಾಜಿ ಅಧ್ಯಕ್ಷ ಕ್ರಷ್ಣ ಮೂರ್ತಿ ದೇವಾಡಿಗ, ಬಿಜೂರು ಗ್ರಾಮ ಪಂಚಾಯಿತ ಸದಸ್ಯರಾದ ರಮೇಶ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಚಾರದ ನೆಲೆಯಲ್ಲಿ ಸಹಕರಿಸುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿವೃತ್ತ ಹಿರಿಯ ಕ್ರೀಡಾ ಸಂಪಾದಕ ಸ್ಟಾನ್ ರಾಯನ್ ವಿಶೇಷ ಉಪನ್ಯಾಸ ನೀಡಿದರು. ವಿಶ್ವದ ಅನೇಕ ದೇಶಗಳಿಗೆ ಪ್ರವಾಸ ಮಾಡಿ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ವರದಿ ಮಾಡಿದ ಅನುಭವವನ್ನು ಹಂಚಿಕೊಂಡ ಅವರು, ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು ಎಂದು ಹೇಳಿದರು. ಕ್ರೀಡಾ ವರದಿಗಾರರು ಸ್ಥಳೀಯ ಕ್ರೀಡಾ ಪಂದ್ಯಗಳಿಗೆ ಹಾಜರಾಗುವ ಮೂಲಕ ಕ್ರೀಡೆಯ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಸಮಯದ ಪರಿಧಿಯೊಳಗೆ ಕೆಲಸ ನಿರ್ವಹಿಸುವ ಕಲೆಯನ್ನು ಮೊದಲು ಅರಿಯಬೇಕು. ಸರಳ ಹಾಗೂ ಸ್ಪಷ್ಟ ಬರವಣಿಗೆಗೆ ಆದ್ಯತೆ ನೀಡಬೇಕು. ಕ್ರೀಡಾ ವರದಿಗಳು ಜನರಿಗಾಗಿಯೇ ಹೊರತು ಯಾರನ್ನೂ ಮೆಚ್ಚಿಸಲು ಅಲ್ಲ ಎಂದು ತಿಳಿಸಿದರು. ಭಾರತದಲ್ಲಿ ಡೋಪಿಂಗ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪರಿಶುದ್ಧ ಕ್ರೀಡೆಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕು ಕೋಟ ಮಂಡಲ ಇದರ ಆಶ್ರಯದಲ್ಲಿ ಇದೇ ಜ.25ರಂದು ಕೋಟದ ಮಾಂಗಲ್ಯ ಮಂದಿರ ಮುಂಭಾಗ ಅಪರಾಹ್ನ 3.00ಗ ಬೃಹತ್ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ಸಮಾವೇಶ ಆಯೋಜಿಸಿದ್ದು ಈ ಹಿನ್ನಲ್ಲೆಯಲ್ಲಿ ಬುಧವಾರ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಕೋಟ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಜರಗಿತು. ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹಿಂದೂ ಸಂಗಮ ಕೋಟ ಮಂಡಲ ಸಮಿತಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸದಾನಂದ ಗಿಳಿಯಾರು, ಕದ್ರಿ ಮಂಜನಾಥೇಶ್ವರ ದೇಗುಲದ ಮಾಜಿ ಟ್ರಸ್ಟಿ ಕುಸುಮಾ ದೇವಾಡಿಗ, ಹಿಂದೂ ಸಂಗಮ ಆಯೋಜನಾ ಸಮಿತಿಯ ಸಾಲಿಗ್ರಾಮ ತಾಲೂಕು ಸಂಯೋಜಕ ಸುರೇಂದ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿ ಉಪ್ಪುಂದ ಇಲ್ಲಿಗೆ ನಬಾರ್ಡ್‌ನ ಡಿಡಿಎಮ್‌ ಸಂಗೀತಾ ಕರ್ತಾ ಭೇಟಿ ನೀಡಿ ಕೃಷಿ ಸಾಲದ ದಾಖಲೆಗಳನ್ನು ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಗೌರವಿಸಿದರು. ಸಹಕಾರ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಸಂದೀಪ ಶೆಟ್ಟಿ , ಸಂಘದ ಸಿಇಓ ವಿಷ್ಣು ಪೈ, ಮಾರಾಟಾಧಿಕಾರಿ ಚಂದಯ್ಯ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ಸೌಲಭ್ಯಗಳು ಜಿಲ್ಲಾಡಳಿತದ ಸಹಕಾರದೊಂದಿಗೆ ಲೋಕಾರ್ಪಣೆಗೊಂಡಿದೆ. ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಹೊಸ ಕಾಯಕಲ್ಪ ನೀಡಿ ಹೊಸ ಮೆರುಗಿನೊಂದಿಗೆ ಕರಾವಳಿ ಭಾಗದ ಜನರಿಗೆ ಲಭ್ಯವಾಗಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿ ರೈಲು ನಿಲ್ದಾಣ ಪರಿಸರದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. ನಿರ್ಮಿಸಿದ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕರಾವಳಿ ಜಿಲ್ಲೆಗಳ ಎಲ್ಲ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ 100 ಕೋಟಿ ರೂ ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಥಮ ಹಂತದ ಕಾಮಗಾರಿಗಳಲ್ಲಿ ಪ್ಲಾಟ್ ಫಾರ್ಮ್ 2 ಅನ್ನು 2.6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹಿರಿಯ ನಾಗರಿಕರ ಅನುಕೂಲಕ್ಕಾಗಿ 3 ಲಿಫ್ಟ್ಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಿಕ್ಷಕ ವರ್ಗಕ್ಕೆ ಪ್ರಾಥಮಿಕ ಚಿಕಿತ್ಸೆಯ ಅರಿವು ಮೂಡಿಸುವ ಕಾರ್ಯಗಾರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದ ಸಹಯೋಗದಲ್ಲಿ ನಡೆಸಲಾಯಿತು. ಡಾ. ಕಿರ್ತೀ ಮಾತನಾಡಿ, ಪ್ರಥಮ ಚಿಕಿತ್ಸೆಯ ಜ್ಞಾನದ ಅಗತ್ಯತೆಯನ್ನು ತಿಳಿಸುತ್ತಾ ಪ್ರಾಥಮಿಕ ಚಿಕಿತ್ಸೆಯನ್ನು ನಮ್ಮವರಿಗಾಗಿ ನಾವು ತಿಳಿಯಬೇಕಾದದ್ದು ಅತ್ಯಗತ್ಯ. ಕೇವಲ ತಿಳಿದರೆ ಸಾಕಾಗಲ್ಲ ಅದನ್ನು ನಮ್ಮರಿಗೆ ತಿಳಿಸುವ ಹೊಣೆಗಾರಿಕೆಯೂ ನಮ್ಮೆಲ್ಲರ ಮೇಲಿದೆ. ಸಹಾಯವನ್ನು ಬಯಸುವ ಜೀವದ ಸಹಾಯಕ್ಕೆ ಧಾವಿಸಬೇಕಾದರೆ ಮೊಟ್ಟ ಮೊದಲು ನಾವು ಸಹಾಯ ಮಾಡುವ ಯೋಗ್ಯತೆಯನ್ನು ಹೊಂದಿರಬೇಕಾಗುತ್ತದೆ. ನಮ್ಮ ಒಳಗಡೆಯ ಭಯವನ್ನು ದೂರ ಮಾಡಿಕೊಳ್ಳಲು, ನಮ್ಮಿಂದ ನೊಂದ ಜೀವಕ್ಕೆ ಅಪಾಯ ಆಗದಿರಬೇಕಾದರೆ, ನಮ್ಮ ಜೀವ ಸುರಕ್ಷವಾಗಿರಬೇಕಾದರೆ ನಾವು ಪ್ರಾಥಮಿಕ ಚಿಕಿತ್ಸೆಯ ಜ್ಞಾನ ಹೊಂದಿರಲೇ ಬೇಕಾಗುತ್ತದೆ ಎಂದು ತಿಳಿಸುತ್ತಾ ಪ್ರಾತ್ಯಕ್ಷತೆಯ ಮೂಲಕ ಅಗ್ನಿ ಅಪಘಾತ, ಮೂಳೆ ಮುರಿತ, ವಿವಿಧ ಅಂಗಾಂಗಗಳಲ್ಲಿ ಉಂಟಾದ ಗಾಯಗಳ ಪ್ರಥಮ ಚಿಕಿತ್ಸೆಯ ವಿಚಾರಗಳನ್ನು ಮತ್ತು ಸಿಪಿಆರ್ ನಡೆಸುವ ವಿಧಾನಗಳನ್ನು ವಿವರಿಸಿದರು. ಶ್ರೀ ಸಿದ್ಧಿ ಪ್ರತಿಷ್ಠಾನದ…

Read More