Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಶ್ರೀ ವೀರರಾಜೇಂದ್ರ ಹೆಗ್ಡೆ ಸಭಾ ಭವನದಲ್ಲಿ ಹೊಸದಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ’ಫ್ರೆಶರ್ಸ್ ಡೇʼ ಕಾರ್ಯಕ್ರಮ ಶುಕ್ರವಾರ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೃಷ್ಟಿ ಇನ್‌ಪೋಟೆಕ್ ಕುಂದಾಪುರ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆದ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, ಹೊಸದಾಗಿ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಆಚರಿಸುವ ಈ ದಿನದಲ್ಲಿ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಎದುರಾಗುವ ಸನ್ನಿವೇಶಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿರಬೇಕು. ಜೊತೆಗೆ ಗುಣಾತ್ಮಕ ಗುಣಗಳನ್ನು ಬೆಳೆಸಿಕೊಂಡು ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಶೆಯಲ್ಲಿಯೇ ಪದವಿ ಹಂತದ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಳ್ಳಬೇಕಾದರೆ ಕೃತಜ್ಞತೆ ಮನೋಭಾವ ಪ್ರಾಮಾಣಿಕತೆ, ಗುರಿ, ಕೌಶಲ್ಯತೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ಪದವಿ ಕಾಲೇಜು ಇದರ ಕಾಮರ್ಸ್ ಮತ್ತು ವ್ಯವಹಾರ ಆಡಳಿತ ಸಂಘದ ಆಶ್ರಯದಲ್ಲಿ 2025-26ನೇ ಸಾಲಿನಲ್ಲಿ ಕಾಲೇಜಿಗೆ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿಯ ಸಿ.ಎ ಮತ್ತು ಸಿ.ಎಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ ಪಾಂಡುರಂಗ ನಾಯಕ್ ಅವರು ಸಿ.ಎ ಮತ್ತು ಸಿ.ಎಸ್ ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿವರಿಸಿ ಮಾತನಾಡಿ, ಸಮಾಜದಲ್ಲಿ ಉತ್ತಮ ಸ್ತರದಲ್ಲಿರುವ ಸಿಎ ಮತ್ತು ಸಿ.ಎಸ್ ಕೋರ್ಸ್ ಅನ್ನು ನಿರಂತರ ಪ್ರಯತ್ನ, ಛಲ ಮತ್ತು ಏಕಾಗ್ರತೆಯಿಂದ ಯಾವ ವಿದ್ಯಾರ್ಥಿಯು ಸಫಲತೆಯನ್ನು ಸಾಧಿಸಬಹುದು ಎಂದರು. ಜಿಲ್ಲೆಯ ನುರಿತ ಸಿ.ಎ, ಸಿ.ಎಸ್ ತರಬೇತುದಾರರಿಂದ ಕಾಲೇಜಿನಲ್ಲಿಯೇ ಕೋಚಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಗಿಸಿದರು. ಕೋರ್ಸ್ ನ ವಿವಿಧ ಹಂತಗಳು, ವಿಷಯ, ಪರೀಕ್ಷಾ ತಯಾರಿ, ಮಾನಸಿಕ ಸಿದ್ಧತೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರು ಹಾಗೂ ಐಕ್ಯೂಎಸಿ ಸಂಯೋಜಕರಾದ ಜಯಶೀಲ್ ಕುಮಾರ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಅಂಗವಾಗಿ ವಾಸ್ತು ತಜ್ಞರ ಕಟ್ಟಿ ಮುಖೇನ ಸಿದ್ದಪಡಿಸಿರುವ ನೀಲ ನಾಕ ನಕಾಶೆಯನ್ನು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಭಿವೃದ್ಧಿ ಸಮಿತಿ ವಿಜ್ಞಾಪನಾ ಪತ್ರವನ್ನು ಅನಾವರಣಗೊಳಿಸಿದರು. ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಅರಬ್ಬಿ ಸಮುದ್ರ ಮತ್ತು ಸೌಪರ್ಣಿಕಾ ನದಿ ಮಧ್ಯದಲ್ಲಿ, ಉದ್ಭವಿಸಿರುವ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿರುವಂತಹ ಜಿಲ್ಲೆಯ ಸುಪ್ರಸಿದ್ದ ದೇವಾಲ ಯವು ಜೀರ್ಣಾವಸ್ಥೆಯಲ್ಲಿದೆ. ದೇವಾಲಯವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದೇವಾಲಯದ ಅಭಿವೃದ್ಧಿ ಸಮಿತಿ ಕೂಡ ರಚಿಸಲಾಗಿದೆ. ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ದೇವಾಲಯವನ್ನು ಆಲೋಚನೆ ಹೊಂದಲಾಗಿದೆ. ಅತಿ ಶೀಘ್ರದಲ್ಲೆ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಲಿದ್ದೇವೆ ಎಂದು ಹೇಳಿದರು. ಮಹಾರಾಜ ಸ್ವಾಮಿ ಶ್ರೀ ವರಾಹ ದೇವಾಲಯ ಇತಿಹಾಸಕಾರರ ಅಭಿಪ್ರಾಯದಂತೆ ದೇವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲ ಅವರನ್ನು ಗುರುವಾರ ಭೇಟಿಯಾದ ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು. ಗಂಗೊಳ್ಳಿ ರಾಜ್ಯದ 2ನೇ ಅತೀದೊಡ್ಡ ಮೀನುಗಾರಿಕ ಬಂದರಾಗಿದ್ದು, 200ಕ್ಕೂ ಹೆಚ್ಚು ದೋಣಿಗಳು ಅವಲಂಬಿತವಾಗಿವೆ. ಮತ್ಯೋದ್ಯಮ, ವ್ಯಾಪಾರ ಹಾಗೂ ಕರಾವಳಿಯ ವಾಣಿಜ್ಯ ವ್ಯವಹಾರಕ್ಕೆ ಗಂಗೊಳ್ಳಿ ಬಂದರು ಪ್ರಮುಖ ಕೇಂದ್ರವಾಗಿದೆ. ಗಂಗೊಳ್ಳಿಯಿಂದ ತಾಲೂಕು ಕೇಂದ್ರ ಕುಂದಾಪುರವು ಕೂಗಳತೆಯ ದೂರದಲ್ಲಿದ್ದರೂ, ಇಲ್ಲಿನ ಜನರು ಪ್ರಸ್ತುತ ರಾ.ಹೆ.-66 ಮೂಲಕ 17-18ಕಿ.ಮೀ. ಸಂಚರಿಸಿ ಕುಂದಾಪುರ ತಲುಪಬೇಕಿದೆ. ಇದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಾಗಾಗಿ ಗಂಗೊಳ್ಳಿ-ಕುಂದಾಪುರ ಸೇತುವೆ ಯೋಜನೆಯನ್ನು ಸಾಗರಮಾಲಾ ಯೋಜನೆಯ ಬಂದರು ಸಂಪರ್ಕ ಘಟಕದಡಿ ಸೇರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ಸಂಸದರು ಒತ್ತಾಯಿಸಿದರು. ಶಿರೂರು ಅಳಿವೆಗದ್ದೆ ಬಂದರಿನಲ್ಲಿ ಮೂಲಸೌಕರ್ಯವನ್ನು ಒದಗಿಸಿ ಮೀನುಗಾರರ ಬದುಕನ್ನು ಬೆಂಬಲಿಸಿ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸಬೇಕು ಎಂದು ಸಂಸದರು ವಿವರಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು  ಸಾವನ್ನಪಿದ ಘಟನೆ ಗುರುವಾರ  ಸಂಭವಿಸಿದೆ. ಕೊಲ್ಲೂರು ನಿವಾಸಿ, ನರಸಿಂಹ ಬಾಳಿಗ ಅವರ ಪುತ್ರರಾಗಿರುವ ನಟೇಶ್ ಬಾಳಿಗ (36) ಮೃತಪಟ್ಟವರು. ಪಶ್ಚಿಮ ಘಟ್ಟ ತಪ್ಪಲುಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿವೆ ನೀರಿನ ಸೆಳೆತವು ಜಾಸ್ತಿಯಾಗಿದೆ. ಗುರುವಾರ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಈ ಘಟನೆ ನಡೆದಿದೆ. ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ವ್ಯಕ್ತಿಯ ಮೃತ ದೇಹವು ಮಾವಿನಕಾರು ಸೇತುವೆ ಸಮೀಪ ನದಿಯಲ್ಲಿ ಪತ್ತೆಯಾಗಿದೆ. ನಟೇಶ್ ಅವರು ದೇವಸ್ಥಾನದ ವಾಹನಗಳ ನಿಲುಗಡೆ ಪರಿಸರದಲ್ಲಿ ತಿಂಡಿ ಅಂಗಡಿ ನಡೆಸುತ್ತಿದ್ದರು. ಅವಿವಾಹಿತರಾಗಿದ್ದ ಅವರು ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಯಾವುದೇ ಸಂದರ್ಭದಲ್ಲಿಯೂ ಕೂಡ ಬ್ಯಾಂಕ್ ಖಾತೆಗೆ ಸಂಬಂಧಪಟ್ಟಂತಹ ತೀರಾ ವೈಯಕ್ತಿಕ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲು ಹೋಗಬಾರದು. ಈ ಬಗ್ಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನಾವು ಅರಿತುಕೊಂಡು ಎಲ್ಲರಿಗೂ ತಿಳಿಸುವ ಪ್ರಯತ್ನಗಳನ್ನು ಕೂಡ  ಮಾಡಬೇಕು ಎಂದು ಗಂಗೊಳ್ಳಿಯ ಕೆನರಾ ಬ್ಯಾಂಕಿನ ಆಫೀಸರ್ ಸಾಗರ್ ಕೆ ಶಿವದಾಸ್ ಅವರು ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಕೆನರಾ ಬ್ಯಾಂಕ್, ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ರಮ ಅಕೌಂಟ್ ಗಳನ್ನು ತಡೆಗಟ್ಟುವ ಕುರಿತು ಮತ್ತು ಸೈಬರ್ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ವಾಸು ದೇವಾಡಿಗ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಎಂ. ಸಿ. ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಸಿಬ್ಬಂದಿ ರಾಜೇಂದ್ರ ಬಿ. ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೇಷ್ಠ ಮೇಸ್ತ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ನಿರ್ವಹಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜೀವನದಲ್ಲಿ ಮೋಕ್ಷ ಸಾಧನೆ ಪಡೆಯುವುದೇ ಪ್ರಧಾನ ಅಂಶವಾಗಿದ್ದು ಮೋಕ್ಷ ಸಾಧನೆಗೆ ಭಗವಂತನ ಸಾಕ್ಷಾತ್ಕಾರ ಆಗಬೇಕಾಗಿದ್ದು ಇದಕ್ಕೆ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ದೇಶವನ್ನು ಸುತ್ತುವುದರೊಂದಿಗೆ ಜೀವನದನುಭವವವು ಮೋಕ್ಷ ಸಾಧಿಸಲು ಸಾಧ್ಯ ಎಂದು ವಿದ್ವಾನ್ ಮಂಜುನಾಥ ಭಟ್ ಹರೆಗೋಡು ಹೇಳಿದರು. ಅವರು ಕಿರಿಮಂಜೇಶ್ವರದ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ರಿ. ಉಪ್ಪುಂದ ವಲಯ ಇದರ ಶ್ರಾವಣ ಸಂದ್ಯಾ ಕಾರ್ಯಕ್ರಮ ಹಾಗೂ ಕಾಶಿ ಸಮಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಹುಟ್ಟಿನಿಂದ ಯಾರು ಬ್ರಾಹ್ಮಣನಾಗಲು ಸಾಧ್ಯವಿಲ್ಲ ಶೋಡಷಕರ್ಮ ನೀಡಿ, ವೇದಗಳ ಅದ್ಯಯನ ಮೂಲಕ ಎಲ್ಲಾ ವಿದ್ಯಗಳನ್ನು ಕಲಿತು ಸಂಸ್ಕಾರಗಳನ್ನು ಪಡೆದಿದ್ದರೆ ಮಾತ್ರ ಬ್ರಾಹ್ಮಣನಾಗುತ್ತಾನೆ ಎಂದರು. ನಿವೃತ್ತ ಉಪನ್ಯಾಸಕ ಕೊಡೇರಿ ವಾಸುದೇವ ಕಾರಂತರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪ್ಪುಂದ ವಲಯಾದ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್ ಕುಂಭಾಶಿ, ತಾಲೂಕು ಉಪಾಧ್ಯಕ್ಷ ಬಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ನಗರದ ಮಣಿಪಾಲದ ಪ್ರಗತಿನಗರದಲ್ಲಿರುವ ಸರಕಾರಿ ಐ.ಟಿ.ಐ ಯಲ್ಲಿ ಉದ್ಯೋಗ ಖಾತರಿಯುಳ್ಳ ಆರ್.ಎ.ಸಿ ಕಂಪ್ಯೂಟರ್, ಫಿಟ್ಟರ್ ಹಾಗೂ ಆಟೋ ಮೊಬೈಲ್ ಕೋರ್ಸುಗಳಲ್ಲಿ ಕೆಲವೇ ಕೆಲವು ಸೀಟುಗಳು ಬಾಕಿ ಉಳಿದಿದ್ದು, ಆಸಕ್ತ ಎಸ್.ಎಸ್.ಎಲ್.ಸಿ /ಪಿ.ಯು.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಖುದ್ದಾಗಿ ಸಂಸ್ಥೆಗೆ ಹಾಜರಾಗಿ ಮೂಲ ದಾಖಲೆ ಹಾಗೂ ಪ್ರವೇಶ ಶುಲ್ಕದೊಂದಿಗೆ ಸ್ಥಳದಲ್ಲೇ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪ್ರಗತಿನಗರ, ಮಣಿಪಾಲ ಉಡುಪಿ ಇಲ್ಲಿಗೆ ಖುದ್ದಾಗಿ ಅಥವಾ ದೂ.ಸಂಖ್ಯೆ: 9964247101, 9902001790, 9535270498 ಹಾಗೂ 9738439619 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ  ಕಾಲೇಜಿನ ವಿಕಿಪೀಡಿಯಾ ಕ್ಲಬ್‌ನ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಕ್ಷಿತಾ ಕೀನ್ಯಾದ ನೈರೋಬಿಯಲ್ಲಿ ಆಗಸ್ಟ್ 6ರಿಂದ 9ರವರೆಗೆ ನಡೆಯಲಿರುವ ವಿಕಿಮೇನಿಯಾ 2025 ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ವಿಕಿಮೇಡಿಯಾ ಫೌಂಡೇಶನ್‌ನ ಆಹ್ವಾನಿತರಿಂದ ಯಕ್ಷಿತಾ ಭಾರತ ದೇಶದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಕಿಪೀಡಿಯಾದ ಮೂಲಕ ಮುಕ್ತ ಜ್ಞಾನ ವಿಸ್ತರಣೆಗೆ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ಈ ಆಮಂತ್ರಣವು ಅವರ ಸೇವೆಯ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಆಗಸ್ಟ್ 6ರಿಂದ 9ರವರೆಗೆ ನಡೆಯುವ ಈ ಚರ್ಚಾ ವೇದಿಕೆಯಲ್ಲಿ ಯಕ್ಷಿತಾ ವಿವಿಧ ದೇಶಗಳ ವಿಕಿಪೀಡಿಯನ್‌ಗಳೊಂದಿಗೆ ಜ್ಞಾನ ವಿನಿಮಯದಲ್ಲಿ ತೊಡಗಿಕೊಂಡು ತಮ್ಮ ಅನುಭವ ಹಾಗೂ ಕಲಿಕೆಯನ್ನು ಭಾರತೀಯ ವಿಕಿಪೀಡಿಯಾ ಸಮುದಾಯದ ಪೈಕಿ ಹಂಚಿಕೊಳ್ಳುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಯಕ್ಷಿತಾ ವಿಕಿಪೀಡಿಯಾ ಹಾಗೂ ವಿಕಿಮೀಡಿಯಾ ಪ್ರಾಜೆಕ್ಟ್‌ಗಳಲ್ಲಿ ಹಲವಾರು ತರಬೇತಿ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಸಲುವಾಗಿ 2020ರಲ್ಲಿ ಪ್ರಾಜೆಕ್ಟ್ ಟೈಗರ್ 2.0 ಯೊಜನೆಯಡಿಯಲ್ಲಿ ಎಸರ್ ಲ್ಯಾಪ್‌ಟಾಪ್ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಾರ್ವಜನಿಕರಿಗೆ ಜನನ, ಮರಣ ದಾಖಲೆಗಳು ತಮ್ಮ ಶೈಕ್ಷಣಿಕ ಹಾಗೂ ಆರ್ಥಿಕ ವ್ಯವಹಾರಗಳು ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕ. ಇವುಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ನಾಗರಿಕ ನೋಂದಣಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಕಾನೂನು ಜಾರಿಗೆ ತಂದಿದ್ದು, ಅದರನ್ವಯ ಪ್ರತಿಶತಃ ನೂರರಷ್ಟು ನೋಂದಣಿ ಕಾರ್ಯಗಳು ಆಗುವಂತೆ ಜನನ, ಮರಣ ನೋಂದಣಿ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದರು. ಜನನ, ಮರಣ ಹಾಗೂ ನಿರ್ಜೀವ ಜನನಗಳ ಘಟನೆ ಸಂಭವಿಸಿದ 21 ದಿವಸಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ 21 ರಿಂದ ನಂತರ 30 ದಿನಗಳೊಳಗಾಗಿ ಶುಲ್ಕ 20 ರೂ. ಗಳನ್ನು ನೀಡಿ, ನಂತರ ಒಂದು ವರ್ಷದ…

Read More