ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಗತ್ತಿನಲ್ಲಿ ನಮ್ಮ ದೇಶ ಶಕ್ತಿ ಶಾಲಿಯಾಗಿ ಬೆಳೆಯುತ್ತಿದೆ. ನಮ್ಮ ದೇಶ ಉತ್ತಮವಾಗಿದ್ದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಉತ್ತೇಜಿಸಿ, ಮಕ್ಕಳಿಗೆ ಇದಕ್ಕೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಶಿಶು ಮಂದಿರಗಳು ಸ್ಥಾಪಿತವಾಗಿದೆ. ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು. ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾ ಭವನದಲ್ಲಿ ಗುರುವಾರ ಪಾಲಕರ ಮಿಲನ ಕಾರ್ಯಕ್ರಮ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಕುಟುಂಬ, ಸಮಾಜ, ಗ್ರಾಮ, ರಾಜ್ಯ ಹಾಗೂ ದೇಶದಲ್ಲಿ ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿಗಳು ಗಟ್ಟಿಯಾಗಿ ಬೇರೂರಿ ಬೆಳೆದು ನಿಲ್ಲಲು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಇದಕ್ಕೆ ಪೂರಕವಾದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಶಿಶು ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥರಾದ ಚಂದ್ರಿಕಾ ಧನ್ಯ, ಕಲ್ಪನಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಹಾಗೂ ಗ್ರಾಮೀಣ ಸಂಸ್ಕೃತಿ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಗಮ್ಮತ್ತ್”ಕಾರ್ಯಕ್ರಮವನ್ನು ಅಗಸ್ಟ್ 03ರ ಭಾನುವಾರ ಬೆಳಿಗ್ಗೆ ಗಂಟೆ 09ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಹೇಳಿದರು. ಅವರು ಬೈಂದೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ಕಳೆದೊಂದು ವರ್ಷದಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದರು. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು:ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಕೆಸರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ರಾ. ಹೆ 66ರ ಹೇರಿಕುದ್ರುವಿನ ಮೇಲ್ಪತುವೆಯ ತಿರುವಿನಲ್ಲಿ ಕಾರೊಂದು ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗಿನ ಜಾವ ಸಂಭವಿಸಿದೆ. ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿಯಿಂದ ಮಲ್ಪೆ ಕಡೆಗೆ ಗಂಗೊಳ್ಳಿಯ ನಿವಾಸಿ ಮೊಹಮ್ಮದ್ ಸಾದ್ (31) ಎಂಬುವರು ಚಲಾಯಿಸುತ್ತಿದ್ದ ಕಾರು ಹೇರಿಕುದ್ರುವಿನ ಅಂಡರ್‌ಪಾಸ್ ಬಳಿಯ ಬೊಬ್ಬರ್ಯ ದೈವಸ್ಥಾನದ ಎದುರಿನ ಅಪಾಯಕಾರಿ ತಿರುವನ್ನು ಅರಿಯದ ಕಾರಣ, ಕಾರು ನಿಯಂತ್ರಣ ತಪ್ಪಿ, ಕೆಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಪಲ್ಟಿಯಾಗುತ್ತ ಸರ್ವಿಸ್ ರಸ್ತೆಯೂ ದಾಟಿ ಮರವೊಂದಕ್ಕೆ ತಾಗಿ ನಿಂತಿದೆ. ಇಲ್ಲದಿದ್ದರೆ ಸಮೀಪದಲ್ಲಿಯೇ ಇದ್ದ ವಾರಾಹಿ ನದಿಗೆ ಪಲ್ಟಿಯಾಗಿ ಬೀಳುವ ಅಪಾಯವೂ ಇತ್ತು. ಅದೃಷ್ಟವಶಾತ್ ಕಾರು ಚಾಲಕ ಮೊಹಮ್ಮದ್ ಸಾದ್ ಅವರು ಸಣ್ಣ ಪುಟ್ಟ ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ. ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿ ಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ (ಪ್ರಾಥಮಿಕ ವಿಭಾಗ)ಯಲ್ಲಿ ಪಾಲಕ-ಶಿಕ್ಷಕರ ಭೇಟಿ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ಪಾಲಕರ ಜವಾಬ್ದಾರಿಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಡಾ. ವೈಶಾಲಿ ಮತ್ತು ಅವರ ವೈದ್ಯಕೀಯ ತಂಡದ ಸದಸ್ಯರು ಪಾಲಕರಿಗೆ ಮಕ್ಕಳ ಆರೋಗ್ಯ ಸಂಬಂಧಿತ ಅಮೂಲ್ಯ ಮಾಹಿತಿಯನ್ನು ನೀಡಿದರು. ಅಶ್ವಿನಿ ಪೈ ಅವರು ಮಕ್ಕಳಿಗೆ ನೀಡಬೇಕಾದ ಸಮತೋಲಿತ ಆಹಾರ ಹಾಗೂ ಅಸಾಂಕ್ರಾಮಿಕ ಕಾಯಿಲೆಗಳು ಬಾರದಂತೆ ಹೇಗೆ ತಡೆಗಟ್ಟಬಹುದೆಂಬುದನ್ನು ವಿವರಿಸಿದರು. ಅರುಣ್ ಕುಮಾರ್ ಎಸ್. ಅವರು ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಹಾಗೂ ಅತಿಯಾದ ತೂಕದ ಸಮಸ್ಯೆಗಳ ಕುರಿತು ಹೇಳುತ್ತಾ, ದಿನನಿತ್ಯ ವ್ಯಾಯಾಮದ ಅವಶ್ಯಕತೆ ಮತ್ತು ಅದರ ಪ್ರಯೋಜನಗಳನ್ನು ತಿಳಿಸಿದರು. ಋತುಜಾ ಎಸ್. ರಾವ್ ಅವರು ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಮಕ್ಕಳ ಮೇಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ ರಾಜೇಂದ್ರ ಕೋಡಿ ಅವರು ಪುಸ್ತಕ ಹಾಗೂ ಸಮವಸ್ತ್ರವನ್ನು ಬೈಂದೂರಿನ ಸುಬ್ರಹ್ಮಣ್ಯ ಬಿಜೂರು ಅವರ ಮುಖಾಂತರ ಈ ಕೊಡುಗೆಯನ್ನು ಶಾಲಾ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದ್ದಾರೆ. ತದನಂತರ ಮಾತನಾಡಿ, ವಿದ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮುಂದೆ ಬರಬೇಕು ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಕಲ ಸೌಲಭ್ಯಗಳನ್ನು ನೀಡುವುದರೊಂದಿಗೆ ಸರ್ಕಾರಿ ಶಾಲೆಯಲ್ಲಿ ಕಲಿಯಲು ಉತ್ತೇಜಿಸಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಗಳಿಗೆ ಈ ರೀತಿಯ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ ಎಂದರು. ಉದ್ಯಮಿ ರಾಜೇಂದ್ರ ಕೋಡಿ ಅವರು ಬೆಂಗಳೂರಿನಲ್ಲಿದ್ದುಕೊಂಡು ಸಮಾಜಕ್ಕೆ ಹಾಗೂ ತನ್ನ ಊರಿಗೆ ಏನಾದರೂ ಕೊಡುಗೆಯನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಹಲವಾರು ಈ ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಕೊಂಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಅಕ್ಷಯ್ ತಗ್ಗರ್ಸೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಪೂಜಾರಿ, ಮುಖ್ಯ ಶಿಕ್ಷಕಿ ಮಾಲತಿ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು .ಶಿಕ್ಷಕಿ ಸಾರಿಕ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇದರ ಡಾ. ಹೆಚ್ ಶಾಂತರಾಮ್ ಕಂಪ್ಯೂಟರ್ ಸೈನ್ಸ್ ಬ್ಲಾಕ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಡೇಟಾ ಸೈನ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಪ್ರಯೋಗಲಾಯವನ್ನು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತರಾಮ್ ಪ್ರಭುಗಳು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಮ್. ಗೊಂಡ, ಗಣಕಯಂತ್ರ ವಿಭಾಗ ಮುಖ್ಯಸ್ಥರಾದ ಗಣೇಶ್ ಕೆ., ವಿಭಾಗದ ಎಲ್ಲಾ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಮರ್ಸ್ ಫೆಸ್ಟ್ ಪ್ರಯುಕ್ತ ನಡೆಸಲ್ಪಟ್ಟ ಎಕನೋವನ್ಸಾ ಇಂಟರ್ ಕಾಲೇಜುಗಳ ವಿವಿಧ ಸ್ಪರ್ಧಾವಳಿಗಳಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಚಾಂಪಿಯನ್‌ಶಿಪ್‌ನೊಂದಿಗೆ, ನಗದು ಪುರಸ್ಕಾರವನ್ನು ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳಾದ ಆದ್ಯ ಪಡ್ರೆ, ಚಿರಾಯು, ಸುಜೀತ್, ಶ್ರೇಯಸ್, ಮಂಗಿಲಲ್, ಅನ್ವಿತ್, ಕಿಶನ್, ಚಿನ್ಮಯ್, ಸೃಷ್ಟಿ, ಅರುಷಿ, ಸೋನಿಯಾ, ಸಂಜನಾ, ಪ್ರೇರಣಾ, ಹರ್ಷಿತ, ಅನಿಷಾ,ವೃದ್ಧಿ, ದ್ಯುತಿ, ಪೂರ್ವಿ ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿ ಕಾಲೇಜಿಗೆ ಸಮಗ್ರ ಪ್ರಶಸ್ತಿಯನ್ನು ತಂದು ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ಶ್ರಾವಣ ಮಾಸದಲ್ಲಿ ಜರಗುವ ’ಅಖಂಡ ಭಜನಾ ಸಪ್ತಾಹ’ ಮಹೋತ್ಸವ’ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಬುಧವಾರ ಬೆಳಿಗ್ಗೆ 9.೦5ರ ಸಿಂಹ ಲಗ್ನ ಸುಮುಹೂರ್ತದಲ್ಲಿ ದೀಪ ಸ್ಥಾಪನಾಪೂರ್ವಕ ಪ್ರಾರಂಭವಾಯಿತು. ದೇವಳದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಮತ್ತು ಪುರೋಹಿತರಾದ ಜಿ. ವಿಠಲದಾಸ ಭಟ್ ಹಾಗೂ ಜಿ. ಅನಂತಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ದೇವಳದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಮತ್ತು ಆಡಳಿತ ಮಂಡಳಿ ಸದಸ್ಯ ಜಿ. ವೆಂಕಟೇಶ ನಾಯಕ್ ಜಂಟಿಯಾಗಿ ದೀಪ ಪ್ರಜ್ವಲನೆ ಮಾಡಿದರು. ಸಮಾಜದ ಹಿರಿಯರಾದ ಎಂ. ವಿನೋದ ಪೈ, ಜಿ. ನಿತ್ಯಾನಂದ ಶೆಣೈ, ಯು. ನಾರಾಯಣ ಪೈ, ಡಾ. ಕಾಶೀನಾಥ ಪಿ.ಪೈ, ಬಿ. ಕೃಷ್ಟ್ರಾಯ ಪೈ, ಎಂ.ಜಿ. ಮಾಧವ ಪೈ, ಎನ್.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿ ಜೀವನ ಒಂದು ಸುವರ್ಣಾವಕಾಶವಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜು ಟ್ರಸ್ಟ್ ಇದರ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಯನ್ನು ಮಾಡಿಕೊಳ್ಳಲು ಈ ಸಂಸ್ಥೆಯಲ್ಲಿ ಬಹಳ ಅವಕಾಶಗಳಿವೆ. ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಲ್ಲದೆ ಕಲಿತ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಕಾಳಜಿಯನ್ನು ಹೊಂದಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಶೆಟ್ಟಿ ಕಾಲೇಜಿನ ಸೌಲಭ್ಯಗಳ, ಗಣೇಶ್ ಕೆ. ಪದವಿ ಅಧ್ಯಯನ ಪಠ್ಯಕ್ರಮ, ನಿಶಾ ಎಮ್. ವಿದ್ಯಾರ್ಥಿ ವೇತನಗಳ ಮಾಹಿತಿ ಮತ್ತು ಮುಕುಂದ ಭಟ್ ಅವರು ಕಂಪ್ಯೂಟರ್ ಆಧಾರಿತ ಹಾಜರಾತಿ ಮತ್ತು ಯು.ಯು.ಸಿ.ಎಮ್.ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಮತ್ತು ಶಿಕ್ಷಕರ ಸಮಾಲೋಚನ ಸಭೆಯು ನಡೆಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಜೆಕ್ಟ್ ರಿಸರ್ಚ ಸೈಂಟಿಸ್ಟ್‌ಗಳಾದ ಅರುಣ ಕುಮಾರ್ ಎಸ್. ಮತ್ತು ನ್ಯುಟ್ರಿಶಿಯನ್ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್ ಗಳಾದ ಅಶ್ವಿನಿ ಪೈ.ಕೆ ಮತ್ತು ಸೈಕಾಲಜಿ ಪ್ರೊಜೆಕ್ಟ್ ಟೆಕ್ನಿಕಲ್ ಸಪೋರ್ಟ್‌ಗಳಾದ ರುತುಜಾ ಎಸ್. ರಾವ್ ಅವರು ಮಕ್ಕಳ ಆರೋಗ್ಯದ ಕಾಳಜಿಯ ಬಗ್ಗೆ ವಿಚಾರಗಳನ್ನು ಪೋಷಕರಿಗೆ ತಿಳಿಸುತ್ತಾ ಮಕ್ಕಳು ತಿನ್ನುವ ಪದಾರ್ಥಗಳು ಆರೋಗ್ಯಪೂರ್ಣವಾಗಿರುವಂತೆ ಗಮನಿಸುವುದು ಅತ್ಯವಶ್ಯ. ಮಾದಕಪದಾರ್ಥಗಳು ಎಲ್ಲಿಂದ ಹೇಗೆ ಮಕ್ಕಳ ಕೈಗೆಟಕುವುದೆಂದು ಹೇಳಲಸಾಧ್ಯವಾದ್ದರಿಂದ ಹೊರಗಿನ ತಿಂಡಿ, ತಿನಿಸು, ಪಾನೀಯಗಳನ್ನು ನಿರಂತರ ಸೇವಿಸದಂತೆ ಜಾಗ್ರತೆ ವಹಿಸುವುದು ಅತ್ಯಗತ್ಯ. ಮಕ್ಕಳನ್ನು ಖಾಲಿಹೊಟ್ಟೆಯಲ್ಲಿ ಶಾಲೆಗೆ ಕಳುಹಿಸಬಾರದು. ಸದಾ ಮಕ್ಕಳು ಲವಲವಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ನಡೆದ ಘಟನೆಗಳನ್ನು ಮಕ್ಕಳು ತಂದೆತಾಯಿಯರ ಜೊತೆ ಪ್ರತಿನಿತ್ಯ ಹೇಳಿಕೊಳ್ಳುವಂತೆ ಸಮಯ ನೀಡಬೇಕು. ಎಂದು ತಿಳಿಹೇಳಿದರು. ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ…
