Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಅರ್ಪಿಸುವ ’ ಅಭಿವ್ಯಕ್ತ’ ಪ್ರೌಢ ಶಾಲಾ ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಪ್ರತೀಕ್ಷಾ, ಜೀವಿಕಾ, ಆರಾಧ್ಯ ಕೆ.ಬಿ. ಹಾಗೂ ಇಂಚರ ಅವರು ಭಾಗವಹಿಸಿರುತ್ತಾರೆ. ಅವರಲ್ಲಿ ಆರಾಧ್ಯ ಕೆ.ಬಿ ಮತ್ತು ಇಂಚರ ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಗಣೇಶ ಮೊಗವೀರ ಅವರ ಇದುವರೆಗಿನ ಶೈಕ್ಷಣಿಕ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಟೊಪ್ನೆಟೆಕ್ ಪೌಂಡೇಶನ್ ನವರು ಕೊಡಮಾಡುವ 2025ನೇ ಸಾಲಿನ ರಾಷ್ಟ್ರೀಯ ಮಟ್ಟದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮೆಮೋರಿಯಲ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಗಣೇಶ ಮೊಗವೀರ ಅವರನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿ ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ ವೈಭವದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ರಸ್ತೆ ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕನ ಕರ್ತವ್ಯ. ಅದರಲ್ಲಿಯೂ ಶಾಲಾ ವಾಹನ ಚಲಾಯಿಸುವವರಿಗೆ ಕಾನೂನು ಪಾಲಿಸುವ ಜೊತೆಗೆ ಮಕ್ಕಳ ಜವಾಬ್ದಾರಿ ಇರುತ್ತದೆ. ಪ್ರತಿ ಮಗುವಿನ ಜೀವವೂ ಅಮೂಲ್ಯವಾದದ್ದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯ ಸಿನಿಯರ್‌ ಮೋಟರ್‌ ವೆಹಿಕಲ್‌ ಇನ್ಸಪೆಕ್ಷರ್‌ ಸಂತೋಷ್‌ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್‌ ಬೈಂದೂರು, ಪ್ರಾದೇಶಿಕ ಸಾರಿಗೆ ಕಛೇರಿ ಉಡುಪಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಶನಿವಾರ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಶಾಲಾ ವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಮಕ್ಕಳ ಸುರಕ್ಷತೆಯ ಬಗೆಗಿನ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ವಾಹನ ಚಾಲನೆ ಮಾಡುವುದಷ್ಟೇ ಅಲ್ಲದೇ ಅದರ ಅಗತ್ಯ ದಾಖಲೆಗಳನ್ನು ವಾಹನದಲ್ಲಿ ಇರಿಸಿಕೊಳ್ಳುವುದು, ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಶಾಲಾ ವಾಹನಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾದುದು ಎಂದರು. ಎಲ್ಲಾ ಶಾಲಾ ಮುಖ್ಯಸ್ಥರು ವಾಹನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರಿಯೇಟಿವ್‌ ಪುಸ್ತಕ ಮನೆ ಪ್ರಕಾಶಿಸಿದ, ಶಿಕ್ಷಕ, ಅಂಕಣಗಾರ ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ ಅವರು ಚೊಚ್ಚಲ ಕೃತಿ ‘ಇದೊಳ್ಳೆ ವರಸೆʼ ಅ.13ರಂದು ಕಾರ್ಕಳ ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ. ಸಂದೇಶ್ ನಾಯ್ಕ್ ಅವರು ಕಳೆದ 8 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಪ್ರತಿ ಸೋಮವಾರ ‘ವಾರದ ವರಸೆ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಈ ಅಂಕಣದ ಆಯ್ದ 30 ಲೇಖನಗಳನ್ನು ‘ಇದೊಳ್ಳೆ ವರಸೆʼ ಕೃತಿಗೆ ಆಯ್ದುಕೊಳ್ಳಲಾಗಿದೆ. ಓದುವ & ಖರೀದಿಸುವ ಆಸಕ್ತಿ ಉಳ್ಳವರು 9606474289 ಸಂಖ್ಯೆಯನ್ನು ಸಂಪರ್ಕಿಸಿ ಪುಸ್ತಕ ಕಾಯ್ದಿರಿಸಬಹುದು. 150 ಮುಖಬೆಲೆಯ ಪುಸ್ತಕ ಬಿಡುಗಡೆ ಪೂರ್ವದಲ್ಲಿ 120 ರುಪಾಯಿಗೆ ಲಭ್ಯವಿದೆ! ಪ್ರತೀ ವಿಷಯಕ್ಕೂ ಬೇರೆ ಬೇರೆ ಆಯಾಮಗಳಿರುತ್ತವೆ. ಒಂದು ವಿಷಯ ಒಬ್ಬರಿಗೆ ಕಂಡ ರೀತಿಯಲ್ಲಿ ಇನ್ನೊಬ್ಬರಿಗೆ ಕಾಣಬೇಕೆಂದಿಲ್ಲ. ಹಾಗೆ ಅಂಥ ಕೆಲವು ವಿಷಯಗಳನ್ನು ವ್ಯಂಗ್ಯ-ವಿಡಂಬನೆ, ಚುಟುಕ, ಹಾಸ್ಯ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವೇ, ‘ಇದೊಳ್ಳೆ ವರಸೆ’ ಪುಸ್ತಕದ ಬರಹಗಳು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆಧುನಿಕ ಕಾಲಘಟ್ಟದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇದರ ಮಹತ್ವ ಅರಿತು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಹೇಳಿದರು. ಅವರು ಸೋಮವಾರ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಛೇರಿ – ರತ್ತೂಬಾಯಿ ಜನತಾ ಪ್ರೌಢಶಾಲೆ ನೇತೃತ್ವದಲ್ಲಿ ಶಾಲೆಯಲ್ಲಿ ಆಯೋಜಿಸಲಾದ 14 ಮತ್ತು 17ರ ವಯೋಮಾನದ ಬಾಲಕ‌ ಮತ್ತು ಬಾಲಕಿಯರ ಬೈಂದೂರು ವಲಯ ಮಟ್ಟದ ಯೋಗಾಸನ ಸ್ಪರ್ಧೆ 2025-26 ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯದಲ್ಲಿ ಅನುದಾನಿತ ಶಾಲೆಗಳ ಪೈಕಿ ರತ್ತೂಬಾಯಿ‌ ಪ್ರೌಢಶಾಲೆ ಮಾದರಿಯಾಗಿದೆ. ಶೇ.100ಫಲಿತಾಂಶ ದಾಖಲಿಸಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿರುವುದು ಶ್ಲಾಘನಾರ್ಹ ಎಂದರು. ಶ್ರೀ ವಿ.ವಿ.ವಿ ಮಂಡಳಿ ನಿರ್ದೇಶಕ ರಘುರಾಮ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ದಯಾನಂದ ಶೆಟ್ಟಿ, ಗೋಪಾಲ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರತಿನಿಧಿ ರವಿಶಂಕರ ಹೆಗ್ಡೆ, ಬೈಂದೂರು ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವದ ಕುಂದಗನ್ನಡಿಗರನ್ನು ಒಂದುಗೂಡಿಸಿ ಅಂತರ್ಜಾಲದ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಅವರು ನಮ್ಮ ಸಂಸ್ಥೆ ಈ ಹಿಂದೆ ಇಟ್ಟ ಬೇಡಿಕೆಗಳಿಗೆ ಒತ್ತು ನೀಡುವುದರ ಬಗ್ಗೆ ನಿಸ್ವಾರ್ಥ ಹೋರಾಟ ಮಾಡುತ್ತೇನೆ ಎಂದರು ಜೊತೆಗೆ ಕುಂದಾಪ್ರ ಕನ್ನಡ ಅಧ್ಯಾಯನ ಪೀಠದ ಕೆಲಸಗಳಿಗೆ ವೇಗವನ್ನು ನೀಡುದರ ನಮ್ಮ ಭಾಷೆಯ ಯಾವುದೇ ಕೆಲಸಗಳಿಗೆ ನಿಮ್ಮದೊಂದಿಗೆ ಸದಾ ಇರುತ್ತೇನೆ ಎಂದರು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸ್ಥಾಪಕ ಅಧ್ಯಕ್ಷರಾದ ಸದಾಸ್ ದಾಸ್ ಅವರು ಕಾರ್ಯಕ್ರಮದ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಯಿಂದ ಮೊದಲು ಧ್ವನಿ ಎತ್ತಿದ ಬೈಂದೂರು ವಿಮಾನ ನಿಲ್ದಾಣ ಮತ್ತು ಉನ್ನತ ದರ್ಜೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಗ್ಗೆ ಮರು ಧ್ವನಿಯಾಗಿ ಅತಿಥಿಗಳಿಗೆ ಮನವರಿಕೆ ಮಾಡಿದರು. ನಮ್ಮ ಕುಂದಾಪ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಪ್ರಾಯೋಜಿತ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಕ್ಲಬ್‌ನ 2025-26ನೇ ಸಾಲಿನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ ರೋಟರಿ ಒಳಾಂಗಣದಲ್ಲಿ ಶುಕ್ರವಾರ ನಡೆಯಿತು. ಇಂಟರ‍್ಯಾಕ್ಟ್ ಕ್ಲಬ್‌ನ 2025-26ನೇ ಸಾಲಿನ ಅಧ್ಯಕ್ಷೆ ಪ್ರಥ್ವೀ ಚಿತ್ತಾಲ್ ಹಾಗೂ ಪದಾಧಿಕಾರಿಗಳಿಗೆ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ಪದಪ್ರದಾನ ನೆರವೇರಿಸಿ ಶುಭ ಹಾರೈಸಿದರು. ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಕೋ-ಆರ್ಡಿನೇಟರ್ ಲವಿನಾ ಸಿಕ್ವೇರಾ, ಗಂಗೊಳ್ಳಿ ರೋಟರಿ ಕಾರ್ಯದರ್ಶಿ ರಾಮನಾಥ ಚಿತ್ತಾಲ್, ಶಿಕ್ಷಕರು, ರೋಟರಿ ಸದಸ್ಯರು, ಇಂಟರ‍್ಯಾಕ್ಟ್ ಕ್ಲಬ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬೈಂದೂರು ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್‌ ಇದರ ಹದಿಮೂರನೇ ವರ್ಷದ ಟ್ರಸ್ಟ್ ದಿನಾಚರಣೆಯು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ವಿಶ್ವರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಶಶಿಧರ್ ನಾಯಕ್ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಆಡಳಿತ ಟ್ರಸ್ಟ್ ಗಳಾದ ಬಿ. ರಾಮಕೃಷ್ಣ ಶೇರುಗಾರ್ ವಹಿಸಿದ್ದರು. ಸಮಾರಂಭದಲ್ಲಿ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು ಸತೀಶ್ ಬಟವಾಡಿ, ಶ್ರೀ ಪದ್ಮನಾಭ ಕೋತ್ವಾಲ್ ವಿಕ್ರಮ ಪ್ರಶಸ್ತಿ ಪುರಸ್ಕೃತರು ಹಾಗೂ ಡಾಕ್ಟರ್ ಬಿ. ಲಕ್ಷ್ಮೀನಾರಾಯಣ ನಾಯಕ್ ಅವರುಗಳ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಬೈಂದೂರು ವ್ಯಾಪ್ತಿಯ ರಾಮ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ ವಿಶೇಷ ಧನಸಹಾಯ ವಿತರಣೆ ಹಾಗೂ ಅಶಕ್ತರಿಗೆ ಮತ್ತು ಅನಾಥ ರಿಗೆ ಸಹಾಯಧನವನ್ನು ಸಮಾರಂಭದ ವೇದಿಕೆಯಲ್ಲಿ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ತೀರ್ಥಹಳ್ಳಿ  ರಾಮ ಕ್ಷತ್ರಿಯ ಸಂಘದ  ಅಧ್ಯಕ್ಷ ಷಣ್ಮುಖ ತೀರ್ಥಹಳ್ಳಿ, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಲಕ್ಷ್ಮಿನಾರಾಯಣ ಪಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ- ’ಪ್ರೇರಣಾ ದಿವಸ್ 2025ʼ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟದ ದೊಡ್ಡ ಗಣೇಶ ಸಾಕಷ್ಟು ಹಿರಿತನದ ಗಣೇಶೋತ್ಸವವಾಗಿದ್ದು, ಸುವರ್ಣ ಮಹೋತ್ಸವದ ಗಣೇಶೋತ್ಸವವನ್ನು ಅರ್ಥಪೂರ್ಣಗೊಳಿಸಲು ಪ್ರತಿಯೊಬ್ಬರು ಶ್ರಮಿಸುವಂತ್ತಾಗಲಿ ಎಂದು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಕರೆ ನೀಡಿದರು. ಅವರು ಭಾನುವಾರ ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಇದೇ ಬರುವ ಅಗಸ್ಟ್ 27ರಿಂದ ಸೆ.4ರ ತನಕ ಕೋಟದ ಅಮೃತೇಶ್ವರೀ ಸಭಾಂಗಣದಲ್ಲಿ ನಡೆಯಲಿರುವ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಧಾರ್ಮಿಕ ಪ್ರಜ್ಞೆ ಮೂಡಿಸಲು ಪ್ರಸ್ತುತ ಗಣೇಶೋತ್ಸವವು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಗಣೇಶೋತ್ಸವ ವೇದಿಕೆ ಕಲ್ಪಿಸಲಿದೆ ಅಲ್ಲದೆ ಪರಿಸರಸ್ನೇಹಿ ಸುವರ್ಣ ಸಂಭ್ರಮವನ್ನಾಗಿಸಲಿದೆ ಎಂದರು. ಇದೇ ವೇಳೆ ಗಣ್ಯರ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಜೋಗಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಉಪಾಧ್ಯಕ್ಷರಾದ ದೇವೇಂದ್ರ ಗಾಣಿಗ, ಜತೆ ಕಾರ್ಯದರ್ಶಿ…

Read More