ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಅರ್ಪಿಸುವ ’ ಅಭಿವ್ಯಕ್ತ’ ಪ್ರೌಢ ಶಾಲಾ ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಪ್ರತೀಕ್ಷಾ, ಜೀವಿಕಾ, ಆರಾಧ್ಯ ಕೆ.ಬಿ. ಹಾಗೂ ಇಂಚರ ಅವರು ಭಾಗವಹಿಸಿರುತ್ತಾರೆ.
ಅವರಲ್ಲಿ ಆರಾಧ್ಯ ಕೆ.ಬಿ ಮತ್ತು ಇಂಚರ ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.










