ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಇದರ ಹದಿಮೂರನೇ ವರ್ಷದ ಟ್ರಸ್ಟ್ ದಿನಾಚರಣೆಯು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಮಾರಂಭದ ಉದ್ಘಾಟನೆಯನ್ನು ವಿಶ್ವರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಶಶಿಧರ್ ನಾಯಕ್ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಆಡಳಿತ ಟ್ರಸ್ಟ್ ಗಳಾದ ಬಿ. ರಾಮಕೃಷ್ಣ ಶೇರುಗಾರ್ ವಹಿಸಿದ್ದರು.

ಸಮಾರಂಭದಲ್ಲಿ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು ಸತೀಶ್ ಬಟವಾಡಿ, ಶ್ರೀ ಪದ್ಮನಾಭ ಕೋತ್ವಾಲ್ ವಿಕ್ರಮ ಪ್ರಶಸ್ತಿ ಪುರಸ್ಕೃತರು ಹಾಗೂ ಡಾಕ್ಟರ್ ಬಿ. ಲಕ್ಷ್ಮೀನಾರಾಯಣ ನಾಯಕ್ ಅವರುಗಳ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಬೈಂದೂರು ವ್ಯಾಪ್ತಿಯ ರಾಮ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ ವಿಶೇಷ ಧನಸಹಾಯ ವಿತರಣೆ ಹಾಗೂ ಅಶಕ್ತರಿಗೆ ಮತ್ತು ಅನಾಥ ರಿಗೆ ಸಹಾಯಧನವನ್ನು ಸಮಾರಂಭದ ವೇದಿಕೆಯಲ್ಲಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ತೀರ್ಥಹಳ್ಳಿ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಷಣ್ಮುಖ ತೀರ್ಥಹಳ್ಳಿ, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಲಕ್ಷ್ಮಿನಾರಾಯಣ ಪಿ. ನಾಯಕ್, ನಿವೃತ್ತ ರೈಲ್ವೆ ಅಧಿಕಾರಿಗಳಾದ ರಾಮದಾಸ್ ಗುಡೆಮನೆ, ಕೋಟೇಶ್ವರ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಪಾಲುದಾರರಾದ ಮಹೇಶ್ ಬೆಟ್ಟಿನ್, ಪಡವರಿ ನಿವೃತ್ತ ಅಧ್ಯಾಪಕ ಬಾಲಯ್ಯ, ಬೆಂಗಳೂರು ರಾಮ ಕ್ಷತ್ರಿಯ ಯುವ ಸೇವಾ ಸಂಘದ ಅಧ್ಯಕ್ಷ ಎಸ್. ರಮೇಶ್ ಬಿಜೂರು, ಮುಜರಾಯಿ ಇಲಾಖೆ ನಿವೃತ್ತ ಅಧಿಕಾರಿಗಳಾ ವಾಸುದೇವ. ಕೆ. ಗುಡೆಮನೆ, ಬೆಂಗಳೂರು ರಾಮರಕ್ಷಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಸುರೇಶ್ ಬಿಜೂರು, ಬೈಂದೂರು ರಾಮಕ್ಷತ್ರಿಯ ಸಮಾಜ ಅಧ್ಯಕ್ಷ ರಾಮಕೃಷ್ಣ ಸಿ., ಬೈಂದೂರು ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ರಾಮ ಕೆ. ಉಪಸ್ಥಿತರಿದ್ದರು.

ಪಾರ್ವತಿ ಸುಬ್ರಾಯ ಹೊಸಡು ಮನೆ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ಸೇರ್ಪಡೆಗೊಳಿಸಿಕೊಳ್ಳಲಾಯಿತು. ಶ್ರೀ ವೆಂಕಟರಮಣ ಬಿಜೂರು ಪ್ರಸ್ತಾವನೆ ಗೈದರು. ಸಂಚಾಲಕರಾದ ಆನಂದ ಮದ್ದೋಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಟ್ರಸ್ಟಿಗಳಾದ ಕೃಷ್ಣಯ್ಯ ಮದ್ದೋಡಿ ಸ್ವಾಗತಿಸಿ, ಸಂಚಾಲಕ ಕೇಶವ ನಾಯಕ ಅವರು ಧನ್ಯವಾದ ಸಮರ್ಪಿಸಿದರು.
ಸಮಾರಂಭವು ಎಲ್ಲಾ ಅಧ್ಯಾಪಕರ ಹಾಗೂ ರಾಮಕ್ಷತ್ರಿಯ ಸಮಾಜದ ಸರ್ವರ ಸಹಕಾರದಿಂದ ಸಂಪನ್ನಗೊಂಡಿತು.















