Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2025-26ನೇ ವರ್ಷದಲ್ಲಿ ದಾಖಲಾತಿ ಪಡೆದುಕೊಂಡು ಅಧ್ಯಯನಕ್ಕೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಶಿಕ್ಷಕ-ಸಹಪಾಠಿಗಳೊಂದಿಗೆ ಹಂಚಿಕೊಳ್ಳಲು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು. ಜೂ.16 ರಂದು ವಸತಿನಿಲಯದ ವಿದ್ಯಾರ್ಥಿಗಳ ಹಾಗೂ ಜೂ.18 ರಂದು ಉಳಿದ ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನ ನಡೆಸಲಾಯಿತು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಲ್ಲಿರುವ ಪ್ರತಿಭೆಯನ್ನು ಅರಿತು ಅವರೊಂದಿಗೆ ಬೆರೆಯಲು ಇದು ಸಹಕಾರಿ. ವೇದಿಕೆಯ ಅಥವಾ ಶಾಲೆಯ ಭಯದಿಂದ ಮಗು ದೂರವಿದ್ದು, ತನ್ನ ಪ್ರತಿಭೆಯನ್ನು ಅನಾವರಣಗೊಳಿಸದಿದ್ದರೆ ಆ ಪ್ರತಿಭೆ ಸುಪ್ತವಾಗುವುದು. ಮಕ್ಕಳನ್ನು ಲವಲವಿಕೆಯಿಂದ ಕೂಡುವಂತೆ ಮಾಡಲು ಈ ಕಾರ್ಯಕ್ರಮ ಬಹಳ ಸಹಕಾರಿಯಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗೀತ, ನೃತ್ಯ, ಶ್ಲೋಕಪಠಣ, ಕರಾಟೆ, ಯೋಗ, ಭಜನೆ, ಏಕಪಾತ್ರಾಭಿನಯ, ಪಿಯೋನವಾದನ, ಸಮೂಹಗಾಯನ, ಕಿರುನಾಟಕ, ಸಮೂಹನೃತ್ಯವೇ ಮೊದಲಾದ ತಮ್ಮ ಆಸಕ್ತಿಯ ಹವ್ಯಾಸಿ ಚಟುವಟಿಕೆಗಳ ಪ್ರದರ್ಶನವನ್ನು ನಡೆಸಿದರು. 8ನೇ ತರಗತಿಯ ಗಿರೀಶ, ಪೂರ್ವೀ, ಶುಭಾಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಬ್ರಹ್ಮಾವರದ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನಿಷ್ಠ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರುವ, 19 ವರ್ಷ ವಯಸ್ಸು ಮೀರದ ಅರ್ಹ ಅಭ್ಯರ್ಥಿಗಳಿಂದ ವೆಬ್‌ಸೈಟ್ www.uahs.edu.in ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 27 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಅಥವಾ ಪ್ರಾಂಶುಪಾಲರು, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮೊ.ನಂ: 9108241342 ಅಥವಾ 9686405090 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೋಟತಟ್ಟು ಗ್ರಾಮ ಪಂಚಾಯತ್‌ನ ಪಡುಕರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಡು ಹೂಳೆತ್ತುವ ಕಾಮಗಾರಿ ನಡೆಯುವ ಸ್ಥಳ ಹಾಗೂ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದರು.. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಮಹಿಳೆಯರ ಯೋಗಕ್ಷೇಮ ವಿಚಾರಿಸಿ ಈ ಉತ್ತಮ ಕಾರ್ಯಕ್ಕೆ ತುಂಬು ಹೃದಯದಿಂದ ಶ್ಲಾಘಿಸಿದರು. ಇದೇ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಗೈಯುತ್ತಿರುವ ಮಹಿಳೆಯರು, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯನ್ನು ಪ್ರಸ್ತಾಪಿಸಿದರು, ಸಂಸದರು ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ, ಸದಸ್ಯರಾದ ಅಶ್ವಿನಿ ದಿನೇಶ್, ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ರಾಬರ್ಟ್ ರೋಡ್ರಿಗಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಸಿಬ್ಬಂದಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯುವಬ್ರಿಗೇಡ್ ವತಿಯಿಂದ ಕುಂದಾಪುರದಲ್ಲಿ ಆಯೋಜಿಸಲಾಗಿರುವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೆ ಅವಕಾಶ ನೀಡದಂತೆ ಕುಂದಾಪುರ ಯುವ ಕಾಂಗ್ರೆಸ್ ಹಾಗೂ ಎನ್ಎಸ್‌ಯುಐ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. “ಯುವಬ್ರಿಗೇಡ್”ಎಂಬ ಸಂಸ್ಥೆಯ ವತಿಯಿಂದ ಇದೇ ತಿಂಗಳ ಜೂ. 20, 21 ಮತ್ತು 22 ಒಟ್ಟು ಮೂರು ದಿನಗಳ ಕಾಲ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ಎಂಬ ವಿಚಾರದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯ ಮೊಗವೀರ ಭವನದಲ್ಲಿ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಯು ಉಪನ್ಯಾಸ ನೀಡಲಿದ್ದಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಈ ಕುರಿತಾಗಿ ಪ್ಲೆಕ್ಸ್ಗಳು ಕುಂದಾಪುರ ಪೇಟೆಯಾದ್ಯಂತ ಅಲ್ಲಲ್ಲಿ ಅಳವಡಿಸಲಾಗಿದೆ. ಈ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಯ ಮೇಲೆ “ದ್ವೇಷ ಭಾಷಣ ಮಾಡಿ ಹಿಂದೂ ಮುಸಲ್ಮಾನರ ನಡುವಿನ ಸೌಹಾರ್ಧತೆಯನ್ನು ಕೆಡಿಸಿದ”ಕುರಿತು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಅವರ ಮೇಲೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ,ಜೂ.18: ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ರವರು ಅಪರಾಹ್ನ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಬೆಂಗಳೂರಿನ ಆರ್. ಡಿ. ಪಿ. ಆರ್ ಇ -ಗವರ್ನೆನ್ಸ್ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಟೈಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ಐಐಟಿ ದಿಲ್ಲಿಯಿಂದ ಎಂಟೆಕ್ ಪದವಿ ಪಡೆದಿರುವ ಸ್ವರೂಪ ಅವರು 2025ರ ಫೆಬ್ರವರಿಯಿಂದ ಆರ್‌ಡಿಪಿಆರ್ ಇಲಾಖೆಯಲ್ಲಿ ಇ-ಗವರ್ನೆನ್ಸ್‌ನ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಅದಕ್ಕೆ ಮುನ್ನ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನಲ್ಲಿ ಸಿಇಓ ಹಾಗೂ ನೇಶನಲ್ ರೂರಲ್ ಲೈಲ್ಲಿಹುಡ್ ಮಿಷನ್‌ನ ಸಿಓಓ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಿಜಿಟಲ್ ಸೊಲ್ಯೂಶನ್ ಸಂಸ್ಥೆಯಾದ ಫೋರ್ತ್‌ಫೋಕಸ್‌ ಅನ್ನು ಬಿಸಿನೆಸ್ ಔಟ್‌ಲೈನ್ ಆಯೋಜಿಸಿದ ಬಿಸಿನೆಸ್ ಎಲೈಟ್ ಅವಾರ್ಡ್‌ ಕಾರ್ಯಕ್ರಮದಲ್ಲಿ “2025ರಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ” ಎಂಬ ಪ್ರಶಸ್ತಿಯಿಂದ ಗೌರವಿಸಲಾಗಿದೆ. ಈ ಪ್ರಶಸ್ತಿಯು ಭಾರತದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ನವೀನತೆಗೆ ಪ್ರೋತ್ಸಾಹ ನೀಡುವ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ ಸಂಸ್ಥೆಗಳನ್ನ ಪ್ರತಿವರ್ಷ ಗುರುತಿಸುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಉದ್ಯಮದ ಮೇಲಿನ ಪರಿಣಾಮ, ನಾಯಕತ್ವದ ಗುಣ, ಮತ್ತು ಬೆಳವಣಿಗೆ ಸಾಮರ್ಥ್ಯಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಫೋರ್ತ್‌ಫೋಕಸ್‌ ಅನ್ನು ಈ ವರ್ಷದ ಅವಾರ್ಡ್‌ನ ಭಾಗವಾಗಿ ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ ಸ್ಥಿರ ಸೇವಾ ದಕ್ಷತೆ ಮತ್ತು ಜಾಗತಿಕ ಕ್ಲೈಂಟ್ ನೆಟ್‌ವರ್ಕ್‌ಗೆ ಆದ ಆದರಣೆಯನ್ನು ಈ ಗೌರವ ಪ್ರತಿಬಿಂಬಿಸುತ್ತದೆ. 2015ರಲ್ಲಿ ಒಂದು ವ್ಯಕ್ತಿಯ ಫ್ರೀಲಾನ್ಸ್ ಪ್ರಾರಂಭವಾಗಿ ಬೆಳೆಯುತ್ತಿದ್ದ ಫೋರ್ತ್‌ಫೋಕಸ್‌, ಇಂದು 8+ ದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ. “ನಾವು ಸೃಜನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮನುಯಾಯವಾಗಿ ಬಳಸಿ ವ್ಯವಹಾರ ವೃದ್ಧಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪಶ್ಚಿಮ ವಲಯದ 12 ಪಿಎಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿ ಸೆನ್‌ ಠಾಣೆಯಲ್ಲಿ ಪಿಎಸೈ ಆಗಿ ಕರ್ತವ್ಯದಲ್ಲಿದ್ದ ಪವನ್‌ ನಾಯಕ್‌ ಅವರನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿಯೂ, ಗಂಗೊಳ್ಳಿ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿದ್ದ ಹರೀಶ್‌ ಆರ್‌. ಅವರನ್ನು ಉಡುಪಿ ಸೆನ್‌ ಠಾಣೆಯ ಪಿಎಸೈ ಆಗಿಯೂ ಪರಸ್ಪರ ವರ್ಗಾವಣೆಗೊಳಿಸಲಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಠಾಣೆಗೆ ಅನಿಲ್‌ ಕುಮಾರ್‌ ಡಿ., ಅಜೆಕಾರು ಠಾಣೆಗೆ ಮಹೇಶ್‌ ಟಿ.ಎಂ ಅವನ್ನು ಹೆಬ್ರಿ ಠಾಣೆಗೆ ರವಿ ಬಸಪ್ಪ ಕಾರಗಿ ಅವರನ್ನು ಕಾರ್ಕಳ ಠಾಣೆಗೆ ಮುರಳಿಧರ ನಾಯ್ಕ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪ್ರೌಢ ಶಿಕ್ಷಣ  ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ ಸರಕಾರಿ ಅಥವಾ ಖಾಸಗಿ ವ್ಯವಸ್ಥೆಯಲ್ಲಿರುವ ಶಿಕ್ಷಣ ಸಂಸ್ಥೆಗಳು. ಪ್ರತಿಯೊಂದು ವಿದ್ಯಾರ್ಥಿಗಳ ಕಾಳಜಿ ವಹಿಸುವುದರ ಜೊತೆಗೆ  ಆಯಾ ಸಂಸ್ಥೆಗಳಲ್ಲಿ ಶಿಕ್ಷಣದ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೂ ವಿದ್ಯಾರ್ಥಿಗಳಿಗೆ ಭೌದ್ದಿಕ ಸಾಮರ್ಥ್ಯ ತುಂಬಿ ಅವರುಗಳ ಶೈಕ್ಷಣಿಕ ಗುರಿಯ ದಡ ತಲುಪಿಸುವ ನೈತಿಕತೆಯನ್ನು ಪ್ರದರ್ಶಿಸಲಿ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕರೆ ನೀಡಿದರು. ಅವರು ತಾಲೂಕಿನ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ನಡೆದ ಪ್ರೌಢ ಶಾಲೆಗಳ ಶಾಲಾ ದಾಖಲಾತಿ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರದ ಕೆಲವೊಂದು  ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲೆಗೆ ದಾಖಲು ಮಾಡಿಕೊಂಡ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದಿರುವ ಕಾರಣ ಮುಂದಿಟ್ಟು ಹಾಗೂ ಎಸ್ಎಸ್ಎಲ್‌ಸಿ ಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವ ದೂರಾಲೋಚನೆಯನ್ನಿಟ್ಟುಕೊಂಡು ಅಂತಹ ವಿದ್ಯಾರ್ಥಿಗಳನ್ನು ಹತ್ತನೇ ತರಗತಿಗೆ ಬೇರೆ  ಖಾಸಗಿ ಶಾಲೆಗಳಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಎಂಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ ಒಂದು ದಿನದ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ರಾದ ಡಾ. ಪದ್ಮಚರಣ ಸ್ವೈನ್ ಅವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಉಪ ಪ್ರಾಂಶುಪಾಲರಾದ ಸೌಜನ್ಯ, ಆಡಳಿತಾಧಿಕಾರಿಯಾದ ಪಾರ್ಥಸಾರಥಿ ಇದ್ದರು. ಕಾರ್ಯಕ್ರಮವು ವಿದ್ಯಾರ್ಥಿನಿ ಮಿಸ್ಬಾ ಕೌಸರ್ ಅವರ ಸ್ವಾಗತಿಸಿದರು. ಮುಜ್ಞಾನವರು ವಂದನಾರ್ಪಣೆಗೈದರು. ಸಿಂಧು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ. ರಾಮಕೃಷ್ಣ ಹೆಗಡೆ ಅವರು ಅತ್ಯಂತ ಕ್ರಿಯಾಶೀಲವಾಗಿ ಯಶಸ್ವೀ ಕಾರ್ಯಗಾರವನ್ನು ನಡೆಸಿಕೊಟ್ಟರು. ಬಹಳ ಚಟುವಟಿಕೆಯಿಂದ ಕೂಡಿದ ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸಿದ್ದರು. ಸುಷ್ಮಾ ಉಪಾಧ್ಯಯ ಮತ್ತು ಪವಿತ್ರಾ ಅವರು ಈ ಕಾರ್ಯಕ್ರಮ ಸಂಯೋಜಿಸಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ಸಾಲ ಯೋಜನೆ, ಜೀವ ಜಲ ಯೋಜನೆ, ಕಾಯಕ ಕಿರಣ ಯೋಜನೆ, ಭೋಜನಾಲಯ ಕೇಂದ್ರ, ವಿಭೂತಿ ನಿರ್ಮಾಣ ಘಟಕ, ಸ್ವಾವಲಂಭಿ ಸಾರಥಿ ಯೋಜನೆ ಹಾಗೂ ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಹಾಗೂ ಸ್ವಾತಂತ್ರö್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯ ಸೌಲಭ್ಯ ಪಡೆಯಲು ವೆಬ್‌ಸೈಟ್ https://www.kaushalkar.com/ ನಲ್ಲಿ ಆನ್‌ಲೈನ್ ಮೂಲಕ ಜೂನ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://kvldcl.karnataka.gov.in ಅಥವಾ ನಿಗಮದ ದೂರವಾಣಿ ಸಂಖ್ಯೆ: 080-22865522, 9900012351 ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ.…

Read More